#Feelfree: ಇಬ್ಬರ ಜೊತೆ ಲೈಂಗಿಕ ಸಂಬಂಧ, ಮಗು ಯಾರದ್ದು?

By Suvarna NewsFirst Published Feb 12, 2021, 3:00 PM IST
Highlights

ನಾನು ಇಬ್ಬರು ವಿವಾಹಿತರ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದೇನೆ. ಈಗ ಗರ್ಭ ನಿಂತಿದೆ. ಮಗು ಯಾರದು ಅಂತ ಗೊತ್ತಾಗುತ್ತಿಲ್ಲ!

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತು ವರ್ಷ. ಯೂನಿವರ್ಟಿಸಿ ಡಿಗ್ರಿ ಕೊನೆಯ ವರ್ಷದಲ್ಲಿ ಇದ್ದೇನೆ. ಸೆಕ್ಷುಯಲೀ ನಾನು ಆ್ಯಕ್ಟಿವ್ ಇದ್ದೇನೆ. ಅಂದರೆ ನನ್ನ ತರಗತಿಯ ಒಂದಿಬ್ಬರು ಹುಡುಗರು ನನ್ನ ಬಾಯ್‌ಫ್ರೆಂಡ್ ಆಗಿದ್ದರು. ಅವರ ಜೊತೆಗೆ ಆಗೀಗ ಲೈಂಗಿಕ ಸಂಪರ್ಕ ಹೊಂದಿದ್ದುದೂ ಇತ್ತು. ಆದರೆ ಅದು ಈಗ ಇಲ್ಲ. ಡಿಗ್ರಿಯ ಜೊತೆ ನಾನು ಪಾರ್ಟ್‌ಟೈಮ್ ಜಾಬ್‌ ಕೂಡ ಮಾಡುತ್ತಿದ್ದೇನೆ. ಡಿಗ್ರಿಯಲ್ಲಿ ನನ್ನ ಪ್ರೊಫೆಸರ್ ಆಗಿರುವವರ ಒಬ್ಬರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ಹಾಗೇ ನನಗೆ ಕೆಲಸ ನೀಡಿರುವ ಬಾಸ್ ಜೊತೆ ಕೂಡ ಸೆಕ್ಸ್ ಮಾಡುತ್ತೇನೆ. ಅವರಿಬ್ಬರೂ ವಿವಾಹಿತರು. ಅವರ ಹೆಂಡತಿಯರಿಗೆ ತಿಳಿಯದಂತೆ ಕದ್ದು ಮುಚ್ಚಿ ಅಲ್ಲಿ ಇಲ್ಲಿ ಹೋದಾಗ ಸೇರುತ್ತೇವೆ. ಇಬ್ಬರಿಗೂ ನಾನು ಇನ್ನೊಬ್ಬರ ಜೊತೆ ಸಂಬಂಧ ಹೊಂದಿರುವುದು ಗೊತ್ತಿಲ್ಲ. ಆದರೆ ಇತ್ತೀಚೆಗೆ ಒಂದು ಸಮಸ್ಯೆ ಆಗಿದೆ. ನನ್ನ ಪೀರಿಯೆಡ್ಸ್ ನಿಗದಿತ ದಿನ ಕಳೆದು ಹತ್ತು ದಿನ ಆದರೂ ಆಗಿಲ್ಲ. ನಾನು ಗರ್ಭಿಣಿ ಆಗಿರಬಹುದಾ ಎಂಬ ಅನುಮಾನ ಕಾಡುತ್ತಿದೆ. ಅವರಿಬ್ಬರಲ್ಲಿ ಯಾರು ಇದರ ತಂದೆ ಆಗಿರಬಹುದು? ತಿಳಿಯುವುದು ಹೇಗೆ?

ಉತ್ತರ: ನೀವು ಮಾಡುತ್ತಿರುವುದು ಸರಿಯಲ್ಲ. ನಿಮ್ಮ ವಿದ್ಯಾಭ್ಯಾಸವನ್ನೂ ಹಾಳು ಮಾಡಿಕೊಳ್ಳುತ್ತಿದ್ದೀರಿ, ವಯಸ್ಸನ್ನೂ ಹಾಳು ಮಾಡಿಕೊಳ್ಳುತ್ತಿದ್ದೀರಿ. ಇನ್ನೂ ನಿಮಗೆ ಸರಿಯಾದ ಜವಾಬ್ದಾರಿ ಬಂದಿಲ್ಲ. ಈಗ ನೀವು ತಾಯಿಯಾಗುವ ವಯಸ್ಸಲ್ಲ. ಇದು ವಿದ್ಯಾಭ್ಯಾಸದ ಕಡೆ ಸರಿಯಾಗಿ ಗಮನ ಹರಿಸಿ, ಓದಿ,  ಒಳ್ಳೆಯ ಕೆಲಸ ಪಡೆಯುವ ಸಮಯ. ಈಗ ಇಬ್ಬರಲ್ಲಿ ಯಾರೋ ಒಬ್ಬರಿಂದ ನೀವು ಗರ್ಭಿಣಿಯಾದಿರಿ ಎಂದಿಟ್ಟುಕೊಳ್ಳಿ. ಅದನ್ನು ತಿಳಿದು ಏನು ಮಾಡುತ್ತೀರಿ? ಅವರಿಬ್ಬರೂ ವಿವಾಹಿತರು. ಅವರು ಕದ್ದು ಮುಚ್ಚಿ ನಿಮ್ಮೊಡನೆ ಸರಸ ಆಡುತ್ತಿದ್ದಾರೆ. ನಾಳೆ ನಿಮ್ಮ ಸಂಬಂಧ ಬಹಿರಂಗ ಆಗುವುದನ್ನು ಇಬ್ಬರೂ ಸಹಿಸಲಾರರು. ಅವರ ಪತ್ನಿಯರಿಗೂ ಅವರಿಗೂ ಅದು ಬೇಕಿಲ್ಲ. ನಿಮ್ಮ ಜೊತೆ ಸಂಬಂಧ ಇರಲಿಲ್ಲ ಎಂದು ಸಾಧಿಸುವುದಕ್ಕೇ ಅವರು ಮುಂದಾಗುತ್ತಾರೆ. ಡಿಎನ್‌ಎ ಟೆಸ್ಟ್ ಮಾಡಿಸಿ ಅವರಲ್ಲಿ ಯಾರು ತಂದೆ ಎಂದು ಸಾಧಿಸುತ್ತೀರಿ ಎಂದಿಟಟುಕೊಳ್ಳಿ. ಆಗ ಅವರು ತಮ್ಮ ಹೆಂಡತಿಯನ್ನು ಬಿಟ್ಟು ನಿಮ್ಮ ಜೊತೆ ಸಂಸಾರ ನಡೆಸಲು ಬರುತ್ತಾರೆಯೇ? ಅದು ಪ್ರಾಯೋಗಿಕವೇ? ಇನ್ನೊಬ್ಬರ ಸಂಸಾರವನ್ನೂ ಹಾಳು ಮಾಡುತ್ತೀರಿ. ನೀವು ಕೂಡ ಸಮಾಜದಲ್ಲಿ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ.


ಸದ್ಯ ಇಂಥ ಯೋಚನೆಗಳನ್ನೆಲ್ಲ ಬಿಟ್ಟುಬಿಡಿ. ಇನ್ನೂ ತಡವಾಗಿಲ್ಲ. ಬಹುಶಃ ನಿಮಗೆ ಕನ್ಸೀವ್ ಆಗಿರದೆ ಇರಬಹುದು. ಪೀರಿಯಡ್ಸ್ ಲೇಟ್ ಆಗಿರಬಹುದು. ಯಾವುದಕ್ಕೂ ಗೈನಕಾಲಜಿಸ್ಟ್ ಅನ್ನು ಸಂಪರ್ಕಿಸಿ. ಗರ್ಭ ನಿಂತಿದ್ದರೆ ತೆಗೆಸಿಕೊಳ್ಳುವುದು ಕೂಡ ಈ ಹಂತದಲ್ಲಿ ಒಳ್ಳೆಯ ಆಯ್ಕೆಯೇ. ಯಾಕೆಂದರೆ ಈ ಪ್ರಾಯದಲ್ಲಿ ಓದು ಮತ್ತು ಸಂಪಾದನೆಯೇ ನಿಮ್ಮ ಆದ್ಯತೆ ಆಗಬೇಕೇ ಹೊರತು ಸಂಸಾರವಲ್ಲ. ಇಷ್ಟಿದ್ದರೂ ನೀವು ಸಂಸಾರವೇ ಮುಖ್ಯ ಎಂದುಕೊಂಡರೆ ನಿಮ್ಮ ಪತ್ತೇದಾರಿಕೆಯಲ್ಲಿ ಮುಂದುವರಿಯಬಹುದು. ಆದರೆ ಅದರಿಂದ ಆಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅನಗತ್ಯವಾಗಿ ಪೊಲೀಸ್‌ ಸ್ಟೇಶನ್, ಕೋರ್ಟು ಕಚೇರಿ ಎಂದೆಲ್ಲ ಅಲೆದಾಡಬಹುದು.

#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ? ...

ಇಪ್ಪತ್ತು ಎಂಬುದು ಲೈಂಗಿಕವಾಗಿ ಆಕ್ಟಿವ್ ಇರುವ ಪ್ರಾಯವೇ, ಇದನ್ನು ನಾನು ಒಪ್ಪುತ್ತೇನೆ. ಆಗೀಗೊಮ್ಮೆ ನಿಮ್ಮ ಸಮ ಪ್ರಾಯದ ಗಂಡುಮಕ್ಕಳೋ, ಬಾಯ್‌ಫ್ರೆಂಡ್‌ಗಳ ಜೊತೆಗೋ ಸೆಕ್ಸ್ ಸುಖ ಹೊಂದಿದರೆ ತಪ್ಪಲ್ಲ. ಇಂದು ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ.೨೫ ಮಂದಿ ಸೆಕ್ಸ್ ಅನುಭವ ಹೊಂದಿರುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಇದು ಸರಿ ಅಥವಾ ತಪ್ಪಿನ ಪ್ರಶ್ನೆಯಲ್ಲ. ಇದು ಭಾರತೀಯ ಸಂಸ್ಕಾರ ಅಲ್ಲ ಎಂದೂ ಎಷ್ಟೇ ಹೇಳಿದರೂ, ಕಾಲ ಆಧುನಿಕವಾಗಿದೆ. ಅದು ಓಡುವುದನ್ನು ಹಾಗೂ ನೂತನ ಟ್ರೆಂಡ್‌ಗಳು ಯುವಜನರನ್ನು ಆಕ್ರಮಿಸುವುದನ್ನು ಯಾರೂ ತಡೆಯಲು ಆಗುವುದಿಲ್ಲ. ಹಾಗೆಂದು ಮುಕ್ತ ಸೆಕ್ಸ್‌ಗೆ ಇದು ಸಮ್ಮತಿ ಎಂದು ತಿಳಿಯಬೇಡಿ.  ಮದುವೆಯ ನಂತರ ಯಾವುದೇ ಭಯವಿಲ್ಲದೆ ಪಡೆಯುವ ಸೆಕ್ಸ್‌ ಸುಖಕ್ಕೂ ಕದ್ದುಮುಚ್ಚಿ ಪಡೆಯುವ ನಿಷೇಧಿತ ಸೆಕ್ಸ್ ಸುಖಕ್ಕೂ ವ್ಯತ್ಯಾಸವಿದೆ. ಯಾವುದನ್ನೂ ಅರಿತು, ವಿವೇಕದಿಂದ ಮುಂದಿನ ಹೆಜ್ಜೆಯನ್ನಿಡಿ. 

#Feelfree: ಹಳೆ ಬಾಯ್‌ಫ್ರೆಂಡ್ ಜತೆ ಸೆಕ್ಸ್: ಪತಿಗೆ ಹೇಳಲೇ, ಬಿಡಲೇ? ...

ಪ್ರಶ್ನೆ: ನನ್ನ ಶಿಶ್ನದ ಮುಂದೊಗಲು ಸರಿಯಾಗಿ ಹಿಂದಕ್ಕೆ ಮಡಚಿಕೊಳ್ಳುತ್ತಿಲ್ಲ. ಹಸ್ತಮೈಥುನ ಮಾಡಲು ಹೋದರೆ ನೋವಾಗುತ್ತದೆ. ಏನನು ಮಾಡಲಿ?

ಉತ್ತರ: ನಿಮ್ಮ  ವಯಸ್ಸು ಎಷ್ಟು ಎಂದು ನೀವು ತಿಳಿಸಿಲ್ಲ. ಇನ್ನೂ ಹದಿನೈದರ ಒಳಗಿನ ಪ್ರಾಯದವರಾದರೆ, ಸೂಕ್ತ ಜೆಲ್ಲಿ ಅಥವಾ ಲ್ಯೂಬ್ರಿಕೆಂಟ್ ಮೂಲಕ ಅದನ್ನು ಹಿಂದಕ್ಕೆ ಸರಿಸಲು ಯತ್ನಿಸಬಹುದು. ಇಷ್ಟಕ್ಕೂ ಅದು ಹಿಂದೆ ಸರಿಯುತ್ತಿಲ್ಲ ಎಂದಾದರೆ, ಲೈಂಗಿಕ ತಜ್ಞರನ್ನು ಕಾಣುವುದು ವಿಹಿತ. ಅವರು ಒಂದು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಸರಿಪಡಿಸುತ್ತಾರೆ.  

#Feelfree: ಕದ್ದು ನೋಡಿದರೇ ನನ್ನ ಗಂಡನಿಗೆ ಮಜಾ! ಯಾಕ್ಹಿಂಗಾಡ್ತಾರೆ? ...
 

click me!