ಯಪ್ಪಾ..ಹೀಗೂ ಇರ್ತಾರ, ಗಂಡನಿಗೆ ಇನ್ನೊಬ್ಬಳ ಜೊತೆ ಅಫೇರ್ ಇರ್ಲಿ ಅನ್ನೋದೆ ಈಕೆಯ ಆಸೆಯಂತೆ!

By Vinutha Perla  |  First Published Mar 2, 2023, 11:53 AM IST

ದಾಂಪತ್ಯವೆಂದರೆ ಹಾಗೇನೆ..ಅಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಹೆಚ್ಚಿನವರ ವೈವಾಹಿಕ ಸಂಬಂಧದಲ್ಲಿ ಅನೈತಿಕೆ ಸಂಬಂಧ ದಾಂಪತ್ಯಕ್ಕೆ ಮುಳುವಾಗುತ್ತದೆ. ಆದರೆ ಈಕೆ ಮಾತ್ರ ಗಂಡನಿಗೆ ಇನ್ನೊಬ್ಬಳ ಜೊತೆ ಸಂಬಂಧ ಇಲ್ಲ ಅನ್ನೋದೆ ದೊಡ್ಡ ತಲೆನೋವಾಗಿದ್ಯಂತೆ. ಅರೆ. ಇದೇನ್ ವಿಚಿತ್ರ ಅನ್ಬೇಡಿ. ಮುಂದೆ ಓದಿ.


ಮದುವೆಯೆಂದರೆ ಅಂದುಕೊಂಡಷ್ಟು ಸರಳ ಸಂಬಂಧವಲ್ಲ. ಅಪರಿಚಿತರಿಬ್ಬರು ಒಂದು ಬಂಧನದಡಿ ಒಂದುಗೂಡುವ ಬಾಂಧವ್ಯ. ಆದರೆ ಇದು ಎಷ್ಟೋ ಮಂದಿಯ ಜೀವನದಲ್ಲಿ ಸಕ್ಸಸ್‌ ಆಗುವುದಿಲ್ಲ. ನಾನಾ ಕಾರಣಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದಾಂಪತ್ಯ ಜೀವನ ಮುರಿದುಬೀಳುತ್ತದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರೂ ನಂತರದ ದಿನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಕಾಣಿಸಿಕೊಳ್ಳಲು ಆರಂಭವಾಗುತ್ತದೆ.  ವರದಕ್ಷಿಣೆ, ಮನೆಕೆಲಸ, ಉದ್ಯೋಗ, ಅನೈತಿಕ ಸಂಬಂಧ ಹೀಗೆ ನಾನಾ ಕಾರಣಗಳು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.

ಇತ್ತೀಚಿನ ಕೆಲ ವರ್ಷಗಳಿಂದ ಸಂಸಾರ ಹಾಳಾಗೋಕೆ ಮುಖ್ಯವಾಗಿ ಕಾರಣವಾಗ್ತಿರೋದು ಅನೈತಿಕ ಸಂಬಂಧ (Extra marital affair). ಗಂಡನಿಗೆ ಇನ್ನೊಬ್ಬಳ ಜೊತೆಯಿರುವ ಸಂಬಂಧ (Relationship) ಅಥವಾ ಹೆಂಡತಿಗೆ ಇನ್ನೊಬ್ಬನ ಜೊತೆ ಸಂಬಂಧ ಇರೋದು ಇಬ್ಬರ ನಡುವಿನ ಸಾಮರಸ್ಯ ಹಾಳಾಗಲು ಕಾರಣವಾಗುತ್ತದೆ. ಗಂಡ-ಹೆಂಡತಿ ಪರಸ್ಪರ ಜೊತೆಗೆ ಸಮಯ ಕಳೆಯಲು ಸಾಧ್ಯವಾಗದ ಕಾರಣ ಕಚೇರಿ, ಫ್ರೆಂಡ್ಸ್ ಸರ್ಕಲ್‌ನಲ್ಲಿ ಅಫೇರ್ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಎಷ್ಟೋ ಮಂದಿ ಇದರಿಂದ ರೋಸಿ ಹೋಗಿ ಡಿವೋರ್ಸ್ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಾಕೆ ಇದೆಲ್ಲಕ್ಕಿಂತಲೂ ವಿಚಿತ್ರ. ಈಕೆಗೆ ಗಂಡ (Husband) ಇನ್ನೊಬ್ಬಳ ಜೊತೆ ಅಫೇರ್ ಇಟ್ಕೊಳ್ಳಿ ಅನ್ನೋ ಆಸೆಯಂತೆ. ಆ ವಿಚಾರವನ್ನು ತನ್ನ ಮಾತಿನಲ್ಲೇ ತಿಳಿಸಿದ್ದಾಳೆ.

Latest Videos

undefined

ಮನೇಲಿ ಚೆಂದದ ಹೆಂಡತಿಯಿದ್ರೂ ಪುರುಷರು ಮತ್ತೊಬ್ಬಳ ಪ್ರೀತೀಲಿ ಬೀಳೋದ್ಯಾಕೆ ?

ಗಂಡ ಹೇಳಿದ ಮಾತನ್ನೆಲ್ಲಾ ಕೇಳ್ತಾನೆ, ಯಾರ ಜೊತೆ ಸಂಬಂಧ ಇಲ್ಲ ಅನ್ನೋದೆ ಚಿಂತೆ
'ನಾನು ಮತ್ತು ನನ್ನ ಪತಿ ಪರಸ್ಪರ ಸಂಪೂರ್ಣವಾಗಿ ಭಿನ್ನರು. ನಮ್ಮಿಬ್ಬರ ನಡುವೆ ಯಾವುದೇ ಸಾಮ್ಯತೆ ಇಲ್ಲ. ಆದರೆ ಇದರ ನಂತರವೂ ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತಿದ್ದೆವು. ಅವರ ಸೂಕ್ಷ್ಮ ಮತ್ತು ಭಾವನಾತ್ಮಕ ವ್ಯಕ್ತಿತ್ವಕ್ಕಾಗಿ ನಾನು ಅವನನ್ನು ಆರಾಧಿಸಿದೆ. ಅವರು ನನ್ನೆಲ್ಲಾ ಕನಸುಗಳಿಗೆ (Dream) ಪ್ರೋತ್ಸಾಹ ನೀಡುತ್ತಿದ್ದಾರೆ. ನಮ್ಮಿಬ್ಬರದು ಆರೇಂಜ್ ಮ್ಯಾರೇಜ್ ಆಗಿದ್ದರೂ ಇಬ್ಬರ ನಡುವೆ ಪ್ರೀತಿ (Love)ಗೇನೋ ಕೊರತೆಯಿರಲ್ಲಿಲ್ಲ' ಎಂದು ಮಹಿಳೆ ಹೇಳುತ್ತಾರೆ. 

'ನಮ್ಮ ಮದುವೆಯ ಮೊದಲ ವರ್ಷವು ಒಂದು ಸುಂದರ ಹಂತವಾಗಿತ್ತು. ಪ್ರತಿ ಹಂತದಲ್ಲೂ ನನಗೆ ನನ್ನ ಗಂಡನ ಬೆಂಬಲವಿತ್ತು. ಅವನು ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸಿದ್ದೆ. ಮನೆಯನ್ನು ನೋಡಿಕೊಳ್ಳುವುದರ ಜೊತೆಗೆ ನನ್ನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸಹ ನಾನು ಪೂರೈಸಿಕೊಳ್ಳುತ್ತಿದ್ದೆ. ಇಷ್ಟು ಮಾತ್ರವಲ್ಲದೆ, ಅವನೊಂದಿಗೆ ವಾಸಿಸುತ್ತಿದ್ದಾಗ ನನಗೆ ಉತ್ತಮ ಹುದ್ದೆ ಮತ್ತು ಸಂಬಳದ ಕೆಲಸ ಸಿಕ್ಕಿತು. ನನ್ನ ಜೀವನ ಹೀಗೆ ಸಾಗುತ್ತಿರುವುದನ್ನು ನೋಡಿ ನನಗೆ ತುಂಬಾ ಉತ್ಸುಕವಾಯಿತು. ಆದ್ರೆ, ಸಮಯ ಕಳೆದಂತೆ ನಾನು ನನ್ನ ಕೆಲಸದಲ್ಲಿ ಹೆಚ್ಚು ನಿರತಳಾದೆ. ಕೆಲಸದ ಕಾರಣ, ನಾನು ಮನೆಯಲ್ಲಿ ಮತ್ತು ನನ್ನ ಗಂಡನೊಂದಿಗೆ ಸಮಯ ಕಳೆಯಲು ಕಷ್ಟವಾಯಿತು. ಆದರೆ ಪತಿ ಎಂದಿಗೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ' ಎನ್ನುತ್ತಾರೆ.

Extramarital Affairs: ಪತಿಯ ಪ್ರೀತಿ ಮೋಸ ತಿಳಿದ್ರೂ ಪತ್ನಿ ಮಾಡಿದ್ದೇನು?

ಪತಿ ಸಿಕ್ಕಾಪಟ್ಟೆ ಒಳ್ಳೆಯವನು, ರೋಸಿ ಹೋದ್ಲು ಹೆಂಡ್ತಿ
'ನನ್ನ ಪತಿ ಸಂಪೂರ್ಣವಾಗಿ ಒಳ್ಳೆಯವನು. ಆದರೆ ಅವನು ಅವನ ಬಗ್ಗೆ ಮತ್ತು ಅವನ ಪುಸ್ತಕಗಳ ಬಗ್ಗೆ ಮಾತ್ರ ಯೋಚಿಸುತ್ತಾನೆ. ಅವನು ತುಂಬಾ ಮೃದು ಮತ್ತು ಭಾವನಾತ್ಮಕ. ಆದರೆ ಬಲವಾದ ಪುರುಷ ಮತ್ತು ಜವಾಬ್ದಾರಿಯುತ ವ್ಯಕ್ತಿಯನ್ನು ಇಷ್ಟಪಡುತ್ತೇನೆ. ನಾನು ಮಹತ್ವಾಕಾಂಕ್ಷೆ-ಆತ್ಮವಿಶ್ವಾಸ ಮತ್ತು ಸಮತೋಲಿತ ಜನರೊಂದಿಗೆ ಇರಲು ಇಷ್ಟಪಡುತ್ತೇನೆ. ನನ್ನ ಪತಿ ಇದಕ್ಕೆಲ್ಲ ತದ್ವಿರುದ್ಧ. ಕ್ರಮೇಣ ನನಗೆ ಅವನ ಬಗ್ಗೆ ಸಿಟ್ಟು ಬರಲು ಇದೂ ಒಂದು ಕಾರಣ. ಅವನ ಮೇಲಿದ್ದ ಪ್ರೀತಿ ಮಾಯವಾಗತೊಡಗಿತು.' ಎಂದು ಮಹಿಳೆ ತಿಳಿಸುತ್ತಾರೆ.

'ನಾನು ನನ್ನ ಗಂಡನ ಬಗ್ಗೆ ಹೆಚ್ಚು ಯೋಚಿಸಿದಾಗಲ್ಲೆಲ್ಲಾ ಇತರ ಪುರುಷರೊಂದಿಗೆ ಹೆಚ್ಚು ಮಾತನಾಡಬೇಕೆಂದು ಅನಿಸುತ್ತದೆ. ಬಹುಶಃ ನನ್ನ ಸಹೋದ್ಯೋಗಿಗಳು ತುಂಬಾ ಆತ್ಮವಿಶ್ವಾಸ ಮತ್ತು ಪುರುಷಾರ್ಥವುಳ್ಳವರಾಗಿರುವ ಕಾರಣವೂ ಆಗಿರಬಹುದು. ನಾನು ನನ್ನ ಪತಿಗೆ ಮೋಸ ಮಾಡಲು ಬಯಸುವುದಿಲ್ಲ, ಆದರೆ ನಾನು ಖಂಡಿತವಾಗಿಯೂ ಬೇರೆ ಏನನ್ನೋ ಬಯಸುತ್ತೇನೆ ಎಂಬುದು ಸ್ಪಷ್ಟವಾಗಿದೆ. ನನ್ನ ಮದುವೆಯಲ್ಲಿ ಎಲ್ಲವೂ ತುಂಬಾ ಏಕತಾನತೆಯಿಂದ ಕೂಡಿದೆ. ನಿಜ ಹೇಳಬೇಕೆಂದರೆ, ನನ್ನ ಪತಿ ನನ್ನಿಂದ ತನ್ನ ಗಮನವನ್ನು ದೂರವಿಡುವಂತಹ ಏನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ. ಅವನು ಮನೆಯಿಂದ ಹೊರಬರಲು ಅವನು ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಬೇಕೆಂದು ನಾನು ಬಯಸುತ್ತೇನೆ' ಎಂದು ಮಹಿಳೆ ಸ್ಪಷ್ಟವಾಗಿ ಹೇಳಿದ್ದಾರೆ.

'ಕೆಲವೊಮ್ಮೆ, ಹಾಗೆ ಯೋಚಿಸುವುದು ತುಂಬಾ ಸ್ವಾರ್ಥ ಎಂದು ನಾನು ಭಾವಿಸುತ್ತೇನೆ. ಆದರೆ ನನಗೆ ಯಾವುದೇ ಆಯ್ಕೆಯಿಲ್ಲ. ನನ್ನ ಗಂಡ ಇಷ್ಟು ವಿನಯವಂತನಾಗಿರುತ್ತಾನೆ ಅಂತ ಗೊತ್ತಿರಲಿಲ್ಲ' ಎಂದು ಮಹಿಳೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ.

click me!