ಸಾರ್ವಜನಿಕ ಪ್ರದೇಶದಲ್ಲಿ ಕೆಲ ನಿಯಮ ಪಾಲನೆ ಮಾಡ್ಬೇಕು. ಇದು ಮುಂದುವರಿಯುತ್ತಿರುವ ದೇಶವಾದ್ರೂ ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳೋದು ಸುಲಭವಲ್ಲ. ವಯಸ್ಕರಿಗೆ ಪಬ್ಲಿಕ್ ಪ್ಲೇಸ್ ನಲ್ಲಿ ಅಪ್ಪಿ ಮುದ್ದಾಡೋದು ವಿಶೇಷ ಎನ್ನಿಸದೆ ಇರಬಹುದು. ಆದ್ರೆ ಹಿರಿಯರಿಗೆ ಇದು ನಾಚಿಕೆತರುವ ಕೆಲಸ.
ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವ ವಿಷ್ಯವನ್ನು ಬಹುತೇಕ ಭಾರತೀಯರು ಒಪ್ಪಿಕೊಳ್ಳೋದಿಲ್ಲ. ಪಾರ್ಕ್ ನಲ್ಲಿ ಪ್ರೇಮಿಗಳು ಒಟ್ಟಿಗೆ ಕುಳಿತುಕೊಳ್ತಾರೆ ಎನ್ನುವ ಕಾರಣಕ್ಕೆ ಎಷ್ಟೋ ಪಾರ್ಕ್ ಗಳು ಪ್ರೇಮಿಗಳ ಪ್ರವೇಶವನ್ನೇ ನಿಷೇಧಿಸಿವೆ. ಬಸ್ ನಿಲ್ದಾಣ, ಮೆಟ್ರೋ ಸ್ಟೇಷನ್ ಅಥವಾ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಹುಡುಗ – ಹುಡುಗಿ ಒಟ್ಟಿಗೆ ನಿಂತುಕೊಂಡ್ರೆ ಅವರನ್ನು ಅನುಮಾನದಿಂದ ನೋಡ್ತಾರೆ. ಅವರನ್ನು ಎಳೆದೊಯ್ದು ಅವರಿಗೆ ಏಟು ನೀಡಿದ ಅನೇಕ ಘಟನೆಗಳಿವೆ. ಸಾರ್ವಜನಿಕ ಪ್ರದೇಶದಲ್ಲಿ ತಬ್ಬಿಕೊಂಡ ಜೋಡಿಗೆ ಶಿಕ್ಷೆ ನೀಡ್ಬೇಕೆಂದು ಕೆಲವರು ವಾದಿಸುತ್ತಾರೆ.
ಈಗಿನ ಯುವಜನತೆ ಕೂಡ ಮಿತಿಮೀರಿ ವರ್ತಿಸುತ್ತಿದೆ. ಪಾರ್ಕ್ (Park) , ಪಬ್, ರಸ್ತೆ ಬದಿಗಳೆಲ್ಲ ಪ್ರೀತಿ ತೋರ್ಪಡಿಸುವ ಜಾಗವಾಗಿದೆ. ಯಾರಿದ್ದಾರೆ ಎಂಬುದನ್ನು ಲೆಕ್ಕಿಸದೆ ಜೋಡಿ (Pair) ಮುತ್ತಿಟ್ಟುಕೊಳ್ತಾರೆ, ತಬ್ಬಿಕೊಳ್ತಾರೆ. ಇದು ಹಿರಿಯರಿಗೆ ಮುಜುಗರ ನೀಡಿದ್ರೆ, ಮಕ್ಕಳನ್ನು ದಾರಿ ತಪ್ಪಿಸುತ್ತದೆ. ಕೆಲವರ ಕೋಪಕ್ಕೆ ಕಾರಣವಾಗುತ್ತದೆ. ಸಾರ್ವಜನಿಕ (Public) ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವುದು ಎಷ್ಟು ಸರಿ? ಎಷ್ಟು ತಪ್ಪು ಎನ್ನುವ ಪ್ರಶ್ನೆಗೆ ಚರ್ಚೆ ನಡೆಯುತ್ತಲೇ ಇದೆ. ಒಬ್ಬೊಬ್ಬರು ಒಂದೊಂದು ವಾದ ಮಂಡಿಸುತ್ತಾರೆ. ಅದೇನೇ ಇರಲಿ, ಪ್ರೀತಿಯನ್ನು ವಿರೋಧಿಸುವ ಕೆಲ ಸ್ಕ್ವಾಡ್ (Squad) ಗಳ ನಮ್ಮಲ್ಲಿವೆ. ಅವರು ಜೋಡಿಯನ್ನು ಸದಾ ಬೆದರಿಸುತ್ತಲೇ ಇರ್ತಾರೆ. ಪ್ರೇಮಿಗಳ ವಿರೋಧಿ ಸ್ಕ್ವಾಡ್ ಜನರು ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ (Love ) ಪ್ರದರ್ಶನ (ಪಿಡಿಎ)ವನ್ನು ಯಾಕೆ ವಿರೋಧಿಸುತ್ತಾರೆ, ಸಾರ್ವಜನಿಕ ಪ್ರದೇಶದಲ್ಲಿ ಜೋಡಿಯಾಗಿ ನಿಂತು ಮಾತನಾಡೋದನ್ನು ಅವರು ಯಾಕೆ ಇಷ್ಟಪಡೋದಿಲ್ಲ ಎನ್ನುವುದಕ್ಕೆ ಕೆಲ ಕಾರಣ ಸಿಕ್ಕಿದೆ. ಪ್ರೇಮ ವಿರೋಧಿ ಸ್ಕ್ವಾಡ್ ನ ಜನರು ತಮ್ಮ ಅಭಿಪ್ರಾಯ ಹೇಳಿದ್ದಾರೆ.
undefined
CHANAKYA NITI: ಪತಿಯು ಪತ್ನಿಯ ಬಳಿ ಇದನ್ನು ಕೇಳಿದರೆ ಅವಳದನ್ನು ಕೊಡಲು ನಾಚಿಕೆ ಪಡಕೂಡದು!
ಯಾಕೆ ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸೋದು ಇಷ್ಟವಾಗಲ್ಲ ಗೊತ್ತಾ?
ನಾಚಿಕೆಗೇಡಿನ ಸಂಗತಿ : ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವುದು ಅತಿರೇಕದ ಸಂಗತಿ. ಇಂಥ ದೃಶ್ಯ ನೋಡಿದ ನಂತ್ರ ನಾವು ಸಹಜವಾಗಿರಲು ಸಾಧ್ಯವಿಲ್ಲ. ವಯಸ್ಸಾದ ವ್ಯಕ್ತಿಗಳ ಮುಂದೆ ಹೀಗೆಲ್ಲ ಮಾಡೋದು ನಾಚಿಕೆಗೇಡು. ಆದ್ರೆ ಈಗಿನ ವಯಸ್ಕ (Adult) ರಿಗೆ ಇದ್ರ ಪರಿವೆಯಿಲ್ಲ, ಹಿರಿಯರು ಏನು ಆಲೋಚನೆ ಮಾಡ್ತಾರೆ ಎಂಬುದನ್ನು ಕೂಡ ಅವರು ಲೆಕ್ಕಿಸೋದಿಲ್ಲ ಎನ್ನುತ್ತಾರೆ ಈ ವ್ಯಕ್ತಿ.
ಇದೊಂದು ಮನರಂಜನೆ (Entertainment) : ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ಮಾಡೋದನ್ನು ನಾನು ವಿರೋಧಿಸೋದಿಲ್ಲ. ನನಗೆ ಅದ್ರ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಯಾರು, ಎಲ್ಲಿ, ಏನು ಮಾಡ್ತಾರೆ ಎನ್ನುವ ಬಗ್ಗೆ ನಾನು ಹೆಚ್ಚು ಗಮನ ನೀಡೋದಿಲ್ಲ. ನನಗೆ ಇದು ಮನರಂಜನೆ ನೀಡುತ್ತದೆ ಎನ್ನುತ್ತಾರೆ ಈ ವ್ಯಕ್ತಿ.
ಪ್ರೀತಿ ಪ್ರದರ್ಶನ ಇಷ್ಟವಾಗೋದಿಲ್ಲ : ಪ್ರೀತಿ ಯಾವಾಗ್ಲೂ ಇಬ್ಬರ ಮಧ್ಯೆ ಇರಬೇಕು. ರೋಮ್ಯಾನ್ಸ್ ಮುಚ್ಚಿದ ಕೋಣೆಯಲ್ಲಿ ನಡೆಯಬೇಕು. ಸಾರ್ವಜನಿಕ ಪ್ರದೇಶದಲ್ಲಿ ಕೈ ಹಿಡಿದು ನಡೆಯುವುದು, ತಬ್ಬಿಕೊಳ್ಳುವುದು, ಮುತ್ತಿಡುವುದು ಅನಾವಶ್ಯಕ. ನಿಮ್ಮ ಪ್ರೀತಿಯನ್ನು ಅಪರಿಚಿತರ ಮುಂದೆ, ಸಾರ್ವಜನಿಕರ ಮುಂದೆ ಪ್ರದರ್ಶಿಸುವ ಅಗತ್ಯವಿಲ್ಲ. ಅಪರಿಚಿತರಿಗೆ ನಿಮ್ಮ ಪ್ರೀತಿ ತೋರಿಸುವುದ ಏಕೆ?. ಎಲ್ಲದಕ್ಕೂ ಒಂದು ಮಿತಿ ಇದೆ. ಅದನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎನ್ನುತ್ತಾರೆ ಇವರು.
ಕತ್ತರಿಯಲ್ಲಿ ಸುಮ್ ಸುಮ್ಮನೆ ಆಡಿದ್ರೆ ಮನೆಯಲ್ಲಿ ಜಗಳ ಹೆಚ್ಚುತ್ತಾ?
ನನ್ನ ಪತಿ ಎಂದೂ ಹೀಗೆ ಮಾಡಿರಲಿಲ್ಲ : ಸಾರ್ವಜನಿಕ ಪ್ರದೇಶದಲ್ಲಿ ಪ್ರೀತಿ ವ್ಯಕ್ತಪಡಿಸುವುದನ್ನು ನಾನು ಮೊದಲು ಇಷ್ಟಪಡ್ತಿದ್ದೆ. ಆದ್ರೆ ಮದುವೆಯಾದ್ಮೇಲೆ ನನಗೆ ಇದು ಕಷ್ಟವಾಗ್ತಿದೆ. ನನ್ನ ಪತಿ ನನ್ನ ಜೊತೆ ಎಂದೂ ಹೀಗೆ ನಡೆದುಕೊಂಡಿಲ್ಲ. ಜೋಡಿಗಳು ಚುಂಬಿಸುವುದನ್ನು ಅಥವಾ ಕೈ ಹಿಡಿದು ನಡೆಯುವುದನ್ನು ನೋಡಿದ್ರೆ ನನಗೆ ಅಸೂಯೆಯಾಗುತ್ತದೆ. ನಾನು ಈ ಜೋಡಿಗಳನ್ನು ದ್ವೇಷಿಸ್ತೇನೆ ಎನ್ನುತ್ತಾಳೆ ಈ ಆಂಟಿ.