ಸಿಂಗಲ್ ಇದ್ದವರಿಗೆ ಮಿಂಗಲ್ ಅವಕಾಶ, ಸರ್ಕಾರದಿಂದಲೇ ಡೇಟಿಂಗ್ ಆ್ಯಪ್ ಲಾಂಚ್!

By Chethan KumarFirst Published Jun 7, 2024, 2:09 PM IST
Highlights

ಒಂಟಿಯಾಗಿರುವುದು ಬೋರೋ ಬೋರೋ ಅನ್ನೋದು ಹಾಡು ಮಾತ್ರವಲ್ಲ, ಸಿಂಗಲ್ ಆಗಿರುವವರ ಕಷ್ಟ ಹೇಳತೀರದು. ಇದೀಗ ಸರ್ಕಾರವೇ ಸಿಂಗಲ್ ಆಗಿರುವವರು ಸಂಗಾತಿ ಹುಡುಕಿ ಡೇಟಿಂಗ್ ಮಾಡಲು, ಮದುವೆಯಾಗಲು ಆ್ಯಪ್ ಲಾಂಚ್ ಮಾಡಿದೆ. ಈ ಭರ್ಜರಿ ಆಫರ್ ಭಾರಿ ಸಂಚಲನ ಸೃಷ್ಟಿಸಿದೆ.
 

ಟೊಕಿಯೋ(ಜೂ.07) ಕೈ ಕೈ ಹಿಡಿದು ಪಾರ್ಕ್, ಮಾಲ್, ಸಿನಿಮಾ, ಸುತ್ತಾಡಲು ಯಾರು ಇಲ್ಲವೇ? ಸಿಂಗಲ್ ಆಗಿ ಎಷ್ಟು ದಿನ ಕಳೆಯಲಿ ಅನ್ನೋ ಚಿಂತೆಯಾ? ಸಿಂಗಲ್‌ನಿಂದ ಮಿಂಗಲ್ ಆಗಿ ಡೇಟಿಂಗ್ ಮಾಡಲು ಇದೀಗ ಸರ್ಕಾರವೇ ಸುವರ್ಣ ಅವಕಾಶ ತಂದಿಟ್ಟಿದೆ. ಹೌದು, ಸಿಂಗಲ್ ಆಗಿರುವವರಿಗೆ ಡೇಟಿಂಗ್ ಮಾಡಿ ಮದುವೆಯಾಗಲು ಆ್ಯಪ್ ಲಾಂಚ್ ಮಾಡಲಾಗಿದೆ. ಆದರೆ ಈ ಆ್ಯಪ್ ಲಾಂಚ್ ಮಾಡಿರುವುದು ಜಪಾನ್ ಸರ್ಕಾರ. ಜಪಾನ್‌ನಲ್ಲಿ ಸರ್ಕಾರವೇ ಡೇಟಿಂಗ್ ಆ್ಯಪ್ ಲಾಂಚ್ ಮಾಡಿ ಸಿಂಗಲ್ ಆಗಿದ್ದು ಬೋರಾಗಿರುವ ಬದುಕಿನಲ್ಲಿ ಉತ್ಸಾಹ ಇಮ್ಮಡಿಗೊಳಿಸುವ ಸಾಹಸಕ್ಕೆ ಕೈ ಹಾಕಿದೆ.

ಸರ್ಕಾರವೇ ಡೇಟಿಂಗ್ ಹಾಗೂ ಲೈಂಗಿಕತೆಗೆ ಉತ್ತೇಜನ ನೀಡುತ್ತಿದೆಯಾ ಅನ್ನೋ ಗಂಭೀರ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಈ ಪ್ರಶ್ನೆಗೆ ನೇರ ಉತ್ತರ ಹೌದು. ಆದರೆ ಡೇಟಿಂಗ್ ಆ್ಯಪ್‌ಗೆ ಕೆಲ ಪ್ರಮುಖ ಕಾರಣಗಳೂ ಇವೆ. ಜಪಾನ್‌ನಲ್ಲಿ ಜನನ ಪ್ರಮಾಣದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಹುತೇಕರು ಸಿಂಗಲ್ ಆಗಿದ್ದುಕೊಂಡು ಕಾಳ ಕಳೆಯುತ್ತಿದ್ದಾರೆ. ಇದರಿಂದ ಪೋಷಕರಾಗುತ್ತಿಲ್ಲ, ಜನನ ಪ್ರಮಾಣದಲ್ಲಿನ ಭಾರಿ ಇಳಿಕೆ ತಪ್ಪಿಸಲು ಸರ್ಕಾರ ಮಹತ್ವದ ಡೇಟಿಂಗ್ ಆ್ಯಪ್ ಯೋಜನೆ ಜಾರಿ ಮಾಡಿದೆ.

Latest Videos

23 ವರ್ಷದ ಹುಡುಗನಿಗೆ 50 ವರ್ಷದ ಮಹಿಳೆ ಮೇಲೆ ಲವ್.. ಇಬ್ಬರ ಬಾಂಡಿಂಗ್ ಹೇಗಿದೆ ಗೊತ್ತಾ?

ಟೊಕಿಯೋ ಫ್ಯುಟರಿ ಸ್ಟೋರಿ ಅನ್ನೋ ಡೇಟಿಂಗ್ ಆ್ಯಪ್ ಲಾಂಚ್ ಮಾಡಲಾಗಿದೆ. ಜೊತೆಗೆ ಭಾರಿ ಪ್ರಮಾಣದಲ್ಲಿ ಜಾಹೀರಾತುಗಳನ್ನು ನೀಡಲಾಗಿದೆ. ಪ್ರೀತಿಯ ಬೆಸುಗೆಯ ಸವಿ ಆನಂದಿಸಿ, ಮದುವೆಯಾಗಿ, ಪೋಷಕರಾಗಿ ನೆಮ್ಮದಿಯ ಜೀವನ ಬದುಕಿ ಎಂದು ಜಪಾನ್ ಸರ್ಕಾರ ಜಾಹೀರಾತು ನೀಡಿದೆ.

ಜಪಾನ್ ರಾಷ್ಟ್ರೀಯ ಜನನ ಪ್ರಮಾಣದಲ್ಲಿನ ಕುಸಿತ ಹಾಗೂ ಎದುರಾಗಬಹುದಾದ ಸಮಸ್ಯೆಗಳನ್ನು ಮನಗಂಡು ಜಪಾನ್ ಸರ್ಕಾರ ಈ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದೆ. ಈ ಆ್ಯಪ್‌ನಲ್ಲಿ ಡೇಟಿಂಗ್ ಮಾಡಿ ಎಸ್ಕೇಪ್ ಆಗುವ ಆಯ್ಕೆಯಿಲ್ಲ. ಸಂಗಾತಿಯನ್ನು ಹುಡುಕಲು, ಪ್ರೀತಿಸಲು, ಡೇಟಿಂಗ್ ಬಳಿಕ ಮದುವೆ. ಡೇಟಿಂಗ್ ಮಾಡಿ ಅರ್ಧಕ್ಕೆ ಕೈಬಿಟ್ಟರೆ ಆ್ಯಪ್ ಡೇಟಾ ಆಧರಿಸಿ ಪ್ರಕರಣ ದಾಖಲಾಗಲಿದೆ. ಹೀಗಾಗಿ ಆ್ಯಪ್ ಇದೆ ಎಂದು ಸುಖಾಸುಮ್ಮನೆ ಡೇಟಿಂಗ್ ಮಾಡಿ ಹಾಯಾಗಿರುವ ಪ್ಲಾನ್ ಸಾಧ್ಯವಿಲ್ಲ. 

ನಿಮಗಿಷ್ಟವಾದವರನ್ನು ಹುಡುಕಿ ಪ್ರೀತಿಸಬಹುದು. ಇಬ್ಬರ ಗ್ರೀನ್ ಸಿಗ್ನಲ್ ಬಳಿಕ ಡೇಟಿಂಗ್, ಡೇಟಿಂಗ್ ಬಳಿಕ ಮದುವೆ. ಹೀಗಾಗಿ ಜಪಾನ್ ಡೇಟಿಂಗ್ ಆ್ಯಪ್‌ನಲ್ಲಿ ಕೆಲ ಎಚ್ಚರಿಕೆಯನ್ನು ತೆಗೆದುಕೊಂಡಿದೆ. ಜಪಾನ್‌ನಲ್ಲಿ 50 ವರ್ಷದೊಳಗಿನ ಪುರುಷರಲ್ಲಿ ಶೇಕಡಾ 32 ರಷ್ಟು ಮದುವೆಯಾಗದೇ ಸಿಂಗಲ್ ಆಗಿದ್ದಾರೆ. ಇನ್ನು ಶೇಕಡಾ 24ರಷ್ಟು ಮಹಿಳೆಯರು ಸಿಂಗಲ್ ಆಗಿದ್ದಾರೆ. 

ಚಾಟ್‌ಜಿಪಿಟಿ ನೆರವಿನಿಂದ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗಿ ಪಟಾಯಿಸಿ ಮದುವೆಯಾದ ಟೆಕ್ಕಿ!
 

click me!