ಆಕೆ ಚಿಕ್ಕ ವಯಸ್ಸಿನಲ್ಲಿ ಒಂದು ಮದುವೆಗೆ ಹೋಗಿದ್ಲು… ದೊಡ್ಡವಳಾದ್ಮೇಲೆ ಅದೇ ವರನ ಮೇಲೆ ಪ್ರೀತಿ ಹುಟ್ಟಿಕೊಂಡ್ತು. ಆತನಿಗೆ ಮೂರನೇ ಹೆಂಡತಿಯಾಗಿ ಹೋದವಳ ಪತಿ ಎಷ್ಟು ದೊಡ್ಡವನು ಗೊತ್ತಾ?
ಅರೆಂಜ್ಡ್ ಮ್ಯಾರೇಜ್ ಸಮಯದಲ್ಲಿ ವಧು – ವರರ ವಯಸ್ಸನ್ನು ಪರಿಗಣಿಸಲಾಗುತ್ತದೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಹತ್ತು ವರ್ಷಕ್ಕಿಂತ ಹೆಚ್ಚಿದ್ದರೆ ಇದ್ರಿಂದ ತೊಂದರೆಯಾಗುತ್ತದೆ ಎಂದು ಜನರು ನಂಬುತ್ತಾರೆ. ಆದ್ರೆ ಕೆಲ ದಂಪತಿ ಮಧ್ಯೆ ವಯಸ್ಸಿನ ಅಂತರ ವಿಪರೀತವಿರುತ್ತದೆ. ಮೂವತ್ತು – ನಲವತ್ತು ವರ್ಷಗಳ ಅಂತರವಿರುವ ಜೋಡಿಯನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗ್ತಿದೆ. ಇಷ್ಟೊಂದು ಅಂತರವಿರುವ ದಂಪತಿ ಜೀವನದಲ್ಲಿ ಕೆಲ ವಿಚಿತ್ರ ಘಟನೆ ನಡೆದಿರುತ್ತದೆ. ಪತಿಯ ಮೊದಲ ಮದುವೆಯಲ್ಲಿ ಆತನ ಎರಡನೇ ಪತ್ನಿ ಅತಿಥಿಯಾಗಿ ಕಾಣಿಸಿಕೊಂಡಿದ್ದಿದೆ. ಇದಕ್ಕೆ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಸಾಕ್ಷ್ಯ. ಸೈಫ್ ಅಲಿ ಖಾನ್ ಮೊದಲ ಮದುವೆಯಲ್ಲಿ ಕರೀನಾ ವಯಸ್ಸು ಕೇವಲ 11 ವರ್ಷವಾಗಿತ್ತು. ಆಗ ಸೈಫ್ ಮದುವೆಯಲ್ಲಿ ಕರೀನಾ ಕಾಣಿಸಿಕೊಂಡಿದ್ದರು. ಅವರು ಸೈಫ್ ಪಕ್ಕದಲ್ಲಿ ಕುಳಿತುಕೊಂಡಿದ್ದ ಫೋಟೋ, ವಿಡಿಯೋಗಳು ಅನೇಕ ಬಾರಿ ವೈರಲ್ ಆಗಿವೆ. ಈಗ ಮತ್ತೊಂದು ಇಂಥ ಜೋಡಿ ಸುದ್ದಿ ಮಾಡಿವೆ.
ಇಂಡೋನೇಷ್ಯಾ (Indonesia) ಜೋಡಿಯೊಂದು ಇದೇ ವಿಷ್ಯಕ್ಕೆ ಚರ್ಚೆಗೆ ಬಂದಿದೆ. ಬಂಕಾ (Banka) ದ್ವೀಪದಲ್ಲಿ ವಾಸಿಸುವ ದಂಪತಿ ಮಧ್ಯೆ 38 ವರ್ಷಗಳ ಅಂತರವಿದೆ. 62 ವರ್ಷದ ವ್ಯಕ್ತಿಯೊಬ್ಬ 24 ವರ್ಷದ ಯುವತಿ ರೆನಾಟಾ ಫಡೆಯಾಳನ್ನು ಮೂರನೇ ಮದುವೆ (Marriage) ಆಗಿದ್ದಾನೆ. 62 ವರ್ಷದ ವ್ಯಕ್ತಿಗೆ ಈಗಾಗಲೇ ಎರಡು ಮದುವೆ ಆಗಿದೆ. ಎರಡನೇ ಮದುವೆಯಲ್ಲಿ ಈತನ ಮೂರನೇ ಪತ್ನಿ ರೆನಾಟಾ ಫಡೆಯಾಳ ಕಾಣಿಸಿಕೊಂಡಿದ್ದಳು. ಮೂರನೇ ಪತ್ನಿ ರೆನಾಟಾ ಫಡೆಯಾಳಗೆ, ಪತಿಯ ಎರಡನೇ ಮದುವೆ ಆಲ್ಬಂ (Album) ನೋಡುತ್ತಿದ್ದ ವೇಳೆ ಅಚ್ಚರಿಯಾಗಿದೆ. ಆಲ್ಬಂನಲ್ಲಿ ರೆನಾಟಾ ಇದ್ದಳು.
undefined
ಮದುವೆಯಾಗಿದ್ದು ಬಿಟ್ಟಿರಲು ಅಲ್ಲ, ನಿಕ್ ಜತೆಗಿರದೇ ರಾತ್ರಿ ಕಳೆಯಲಾರೆ; ಪ್ರಿಯಾಂಕಾ ಚೋಪ್ರಾ
2009ರಲ್ಲಿ ರೆನಾಟಾ ಫಡೆಯಾಳ ಪತಿಗೆ ಎರಡನೇ ಮದುವೆ ಆಗಿತ್ತು. ಈ ಸಮಯದಲ್ಲಿ ರೆನಾಟಾ ಫಡೆಯಾಳ ವಯಸ್ಸು 9 ವರ್ಷ. ರೆನಾಟಾ, ದೂರದ ಸಂಬಂಧಿ ಮದುವೆಗೆ ಬಂದಿದ್ದಳು. ಆ ದೂರದ ಸಂಬಂಧಿಯೇ ಮುಂದೆ ಪತಿಯಾಗ್ತಾನೆ ಎಂಬುದು ಆಕೆಗೆ ತಿಳಿದಿರಲಿಲ್ಲ. ಮದುವೆ ಮುಗಿಸಿ ರೆನಾಟಾ ತನ್ನೂರಿಗೆ ವಾಪಸ್ ಹೋಗಿದ್ದಳು. 2019 ರಲ್ಲಿ ಮತ್ತೊಮ್ಮೆ ಇಬ್ಬರು ಭೇಟಿಯಾಗಿದ್ದರು. ರೆನಾಟಾ ಪ್ರಕಾರ, ಆಕೆ ಪತಿ, ಆಕೆಯ ಚಿಕ್ಕಮ್ಮನ ಸೋದರಳಿಯ. ಅದು ರೆನಾಟಾಗೆ ತಿಳಿದಿರಲಿಲ್ಲ.
ರೆನಾಟಾ ಹಾಗೂ ಆಕೆ ಪತಿ ಮಧ್ಯೆ ವಯಸ್ಸಿನ ಅಂತರವಿದ್ರೂ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. 2019ರಲ್ಲಿ ಭೇಟಿಯಾದ ಇವರು, 2020ರಲ್ಲಿ ಮದುವೆ ಆದ್ರು. ಈಗ ಇಬ್ಬರಿಗೆ ಮುದ್ದಾದ ಮಗುವೊಂದಿದೆ. ರೆನಾಟಾ ಪತಿಗೆ ಮೊದಲ ಪತ್ನಿಯಿಂದ ಒಂದು ಮಗುವಿದೆ. ಎರಡನೇ ಪತ್ನಿಗೆ ಮಕ್ಕಳಿಲ್ಲ. ಈಗ ರೆನಾಟಾ ತನ್ನ ಪತಿ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾಳೆ.
11 ವರ್ಷದ ಬಾಲಕ ತಂದೆ ಆಗಬಹುದೇ? ಯಾವ ವಯಸ್ಸಿನಲ್ಲಿ ವೀರ್ಯ ಉತ್ಪಾದನೆ ಆರಂಭ ಆಗುತ್ತೆ?
ಇಂಡೋನೇಷ್ಯಾದಲ್ಲಿ ಚಿಕ್ಕ ವಯಸ್ಸಿನ ಹುಡುಗಿಯರು, ತಮಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ಹುಡುಗಿ ಜೊತೆ ಮದುವೆ ಆಗೋದು ಸಾಮಾನ್ಯವಾಗಿದೆ. ಇಂಡೋನೇಷ್ಯಾದಲ್ಲಿ ಶೇಕಡಾ 14ರಷ್ಟು ಹುಡುಗಿಯರು ತಮ್ಮ 18ನೇ ಹುಟ್ಟುಹಬ್ಬದ ಮೊದಲೇ ಮದುವೆ ಆಗ್ತಾರೆ. ಶೇಕಡಾ ಒಂದರಷ್ಟು ಹುಡುಗಿಯರು 15 ವರ್ಷ ವಯಸ್ಸಾಗುವ ಮೊದಲು ಮದುವೆಯಾಗ್ತಾರೆ. ಇದೇ ಕಾರಣಕ್ಕೆ ಅಲ್ಲಿನ ಸರ್ಕಾರ, ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸಿದೆ. ಇಂಡೋನೇಷ್ಯಾ ಸಂಸತ್ತು ದೇಶದಲ್ಲಿ ಬಾಲ್ಯವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 19ಕ್ಕೆ ಏರಿಸಿದೆ. ಇಂಡೋನೇಷಿಯಾದ ಹಿಂದಿನ ಕಾನೂನಿನ ಪ್ರಕಾರ, ಹುಡುಗಿಯರು 16 ನೇ ವಯಸ್ಸಿನಲ್ಲಿ ಮದುವೆಯಾಗಲು ಅವಕಾಶವಿತ್ತು.