ಪತ್ನಿಯ ಶೀಲ ಶಂಕಿಸಿ ಗಂಡ ಆಕೆಯ ಕೊಲೆ ಮಾಡುವ ಘಟನೆಗಳು ಇತ್ತೀಚಿಗೆ ಸಾಮಾನ್ಯವಾಗುತ್ತಿದೆ. ಆದ್ರೆ ಇಲ್ಲೊಂದೆಡೆ ಪತ್ನಿ ಇನ್ನೊಬ್ಬನ ಜೊತೆ ಸಂಬಂಧ ಇಟ್ಟುಕೊಳ್ಳಬಹುದು ಎಂಬ ಭಯದಲ್ಲಿ ಪತಿ ಆಕೆಯ ಜನನಾಂಗಕ್ಕೆ ಬೀಗ ಹಾಕಿದ್ದಾನೆ.
ಪತ್ನಿಯ ಶೀಲ ಶಂಕಿಸಿ ಗಂಡ ಆಕೆಯ ಕೊಲೆ ಮಾಡುವ ಘಟನೆಗಳು ಇತ್ತೀಚಿಗೆ ಸಾಮಾನ್ಯವಾಗುತ್ತಿದೆ. ಆದ್ರೆ ಇಲ್ಲೊಂದೆಡೆ ಪತ್ನಿ ಇನ್ನೊಬ್ಬನ ಜೊತೆ ಸಂಬಂಧ ಇಟ್ಟುಕೊಳ್ಳಬಹುದು ಎಂಬ ಭಯದಲ್ಲಿ ಪತಿ ಆಕೆಯ ಜನನಾಂಗಕ್ಕೆ ಬೀಗ ಹಾಕಿದ್ದಾನೆ. ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತನ್ನ ಪತ್ನಿಯ ಚಾರಿತ್ರ್ಯದ ಮೇಲೆ ಸಂಶಯ ವ್ಯಕ್ತಪಡಿಸಿ ನಂತರ ಆಕೆಯ ಗುಪ್ತಾಂಗವನ್ನು ಕೊರೆದು ಅದರ ಮೇಲೆ ಬೀಗ ಹಾಕಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡ ಪತ್ನಿ ವಕಾಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಮೇ 16ರಂದು ಎಫ್‌ಐಆರ್ ದಾಖಲಿಸಲಾಗಿದೆ. ಮೇ 11ರಂದು ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ನಿವೃತ್ತಿ ಕೊಲ್ಹಟ್ಕರ್ ಹೇಳಿದ್ದಾರೆ.
ಹೆಂಡ್ತಿ ನೋಡೋಕೆ ತುಂಬಾ ಸುಂದರವಾಗಿದ್ರೆ ಗಂಡನಿಗೆ ಡೌಟ್ ಜಾಸ್ತೀನಾ?
ನೇಪಾಳ ಮೂಲದ ದಂಪತಿಗಳು ಪ್ರಸ್ತುತ ವಕಾಡ್ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯ ಚಾರಿತ್ರ್ಯದ ಬಗ್ಗೆ ನಂಬಿಕೆಯಿಲ್ಲದ ಪತಿ ಕೋಪದಿಂದ ಆಕೆಯ ಖಾಸಗಿ ಅಂಗಗಳಿಗೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಕಬ್ಬಿಣದ ಮೊಳೆಗಳಿಂದ ಆಕೆಯ ಜನನಾಂಗವನ್ನು ವಿರೂಪಗೊಳಿಸಿ ಅದರ ಮೇಲೆ ಬೀಗ ಹಾಕಿದ್ದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
'ನಾವು ಮಹಿಳೆಯ ಪತಿಯನ್ನು ಬಂಧಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ' ಎಂದು ಹಿರಿಯ ಇನ್ಸ್‌ಪೆಕ್ಟರ್ ಕೊಲ್ಹಟ್ಕರ್ ಹೇಳಿದರು. ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 324 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳ ಬಳಕೆಯಿಂದ ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಗಳ ಡಿಎನ್‌ಎ ಟೆಸ್ಟ್ ಮಾಡಿಸಿದ ದಂಪತಿ, ರಿಪೋರ್ಟ್ ನೋಡಿದ್ರೆ ಇಬ್ಬರಿಗೂ ಮ್ಯಾಚ್ ಆಗ್ತಿಲ್ಲ!