ನಿಜವಾದ ಪ್ರೀತಿ ಸಿಗೋದು ಬಹಳ ಅಪರೂಪ. ಸಿಕ್ಕ ಪ್ರೀತಿಯನ್ನು ಉಳಿಸಿಕೊಂಡು ಹೋಗೋದು ಈಗ ಸುಲಭವಲ್ಲ. ಹಿಂದೆ 50 ವರ್ಷದ ದಾಂಪತ್ಯಕ್ಕೆ ಈಗಿನ 5 ವರ್ಷದ ದಾಂಪತ್ಯ ಸಮ. ಇಷ್ಟು ದಿನಗಳ ಕಾಲ ಒಂದಾಗಿದ್ದ ಜೋಡಿ ನೆಟ್ಟಿಗರ ಗಮನ ಸೆಳೆದಿದೆ.
ಪ್ರೀತಿಯ ಆರಂಭ ಬಹಳ ಸುಂದರವಾಗಿರುತ್ತದೆ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ದೇಶ ಮರೆತು ಗಾಳಿಯಲ್ಲಿ ತೇಲುತ್ತಿರುತ್ತಾರೆ. ಆದ್ರೆ ಇದೇ ಪ್ರೀತಿ ಜೀವನ ಪರ್ಯಂತ ಮುಂದುವರೆಯೋದು ಬಹಳ ಅಪರೂಪ. ಈಗಿನ ದಿನಗಳಲ್ಲಿ ನಿಜವಾದ ಪ್ರೀತಿಯನ್ನು ಟಾರ್ಚ್ ಹಾಕಿ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಪ್ರೀತಿಸಿ ಮದುವೆಯಾಗಿರಲಿ ಇಲ್ಲ ಮದುವೆ ಆದ್ಮೇಲೆ ಪ್ರೀತಿ ಮಾಡಲಿ ಈ ಪ್ರೀತಿ ಒಂದೋ ಎರಡೋ ವರ್ಷ ನಮ್ಮ ಕಣ್ಣಿಗೆ ಕಾಣುತ್ತದೆ. ದಿನ ಕಳೆದಂತೆ ಒಬ್ಬರನ್ನೊಬ್ಬರು ಹೆಚ್ಚು ಅರಿತಿರುವ ಕಾರಣಕ್ಕೋ ಅಥವಾ ಜವಾಬ್ದಾರಿ, ಮಕ್ಕಳು, ಸಂಸಾರದ ಭಾರ ಹೊಣೆಯಾಗುವ ಕಾರಣಕ್ಕೋ ಜನರು ಪ್ರೀತಿಯನ್ನು ಮೂಲೆಗುಂಪು ಮಾಡಲು ಶುರು ಮಾಡ್ತಾರೆ. ಮದುವೆಯಾಗಿ ಐದಾರು ವರ್ಷವಾದ್ರೂ ಅದೇ ಹೊಸತನ, ಅದೇ ಆಸಕ್ತಿ, ಅದೇ ರೋಮ್ಯಾನ್ಸ್ ಜಾರಿಯಲ್ಲಿದ್ದಲ್ಲಿ ಅವರಂತ ಅದೃಷ್ಟಶಾಲಿ ಜೋಡಿ ಬೇರೊಬ್ಬರಿಲ್ಲ ಎನ್ನಬಹುದು. ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಷ್ಯ ವೈರಲ್ ಆಗ್ತಿರುತ್ತದೆ. ಪ್ರೀತಿ ವಿಷ್ಯಕ್ಕೆ ಬಂದಾಗ ಬಹುತೇಕ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯೆ ನೀಡ್ತಾರೆ. ನಿಜವಾದ ಪ್ರೀತಿಯನ್ನು ಗೌರವಿಸಿ ಅವರಿಗೆ ಆಶೀರ್ವಾದ ಮಾಡೋದಲ್ಲದೆ ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಅವರ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ದಂಪತಿ ಪ್ರೀತಿಯ ವಿಷ್ಯ ಸದ್ದು ಮಾಡ್ತಿದೆ. ಇದಕ್ಕೆ ನೆಟ್ಟಿಗರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಿ ವೈರಲ್ ಆಗಿದೆ ಪೋಸ್ಟ್? : @samxrzaf ಎಂಬ ಟ್ವಿಟ್ಟರ್ ಖಾತೆಯಲ್ಲಿ ಸ್ಕ್ರೀನ್ ಶಾಟ್ (ScreenShot) ಒಂದನ್ನು ಹಂಚಿಕೊಳ್ಳಲಾಗಿದೆ. ತನ್ನ ಗಂಡನ ಐದು ವರ್ಷದ ಹಿಂದಿನ ಮೆಸ್ಸೆಜ್ (Message) ಒಂದರ ಸ್ಕ್ರೀನ್‌ಶಾಟ್ ಅನ್ನು ಪತ್ನಿ ಹಂಚಿಕೊಂಡಿದ್ದಾಳೆ. ಈ ಸ್ಕ್ರೀನ್ ಶಾಟ್ ಹಾಗೂ ಆಕೆಯ ಶೀರ್ಷಿಕೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯ ಬಿರುಗಾಳಿ ಎಬ್ಬಿಸಿದೆ. ಸ್ಕ್ರೀನ್ ಶಾಟ್ ಜೊತೆ ಮಹಿಳೆ ಮದುವೆಯ ಕೆಲವು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾಳೆ.
ನಿವೇದಿತಾ ಗೌಡ ಅಮ್ಮನೂ ಇಷ್ಟು ಕ್ಯೂಟಾ? ಫೋಟೋ ನೋಡಿ ಸಂತೂರ್ ಮಮ್ಮಿ ಎಂದ ಫ್ಯಾನ್ಸ್
ಸ್ಕ್ರೀನ್ ಶಾಟ್ ನಲ್ಲಿ ಏನಿದೆ? : ಅಷ್ಟಕ್ಕೂ ಮಹಿಳೆ ಹಂಚಿಕೊಂಡ ಸ್ಕ್ರೀನ್ ಶಾಟ್ ನಲ್ಲಿ ಏನಿದೆ ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ. ಮಹಿಳೆ ಪತಿ, ನಾನು ನಿನ್ನನ್ನು ಇಷ್ಟಪಡುತ್ತೇನೆ ಎಂಬುದನ್ನು ಹೇಳಲು ಬಯಸುತ್ತೇನೆ. ನಾನು ನಿಜವಾಗಿಯೂ ನಿನ್ನನ್ನು ಇಷ್ಟಪಡುತ್ತೇನೆ ಎಂದು ಬರೆದಿದ್ದಾರೆ. ಓ ದೇವರೇ. ನೀವು ಅದನ್ನು ಮಾಡಲು ಸಾಧ್ಯವಿಲ್ಲ, ನನ್ನನ್ನು ನಂಬು ಎಂದು ಪತಿಯ ಸಂದೇಶಕ್ಕೆ ಪತ್ನಿ ಉತ್ತರ ನೀಡಿದ್ದಾಳೆ. ಈ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಮಹಿಳೆ, 5 ವರ್ಷಗಳ ನಂತರ ಫಾಸ್ಟ್ ಫಾರ್ವರ್ಡ್. ಅವರು ನಿಜವಾಗಿಯೂ ನನ್ನನ್ನು ಇಷ್ಟಪಟ್ಟಿದ್ದಾರೆ ಎಂದು ಬರೆದಿದ್ದಾರೆ.
ವೈರಲ್ ಪೋಸ್ಟ್ ಗೆ ಸಿಕ್ಕಿದೆ ಇಷ್ಟೊಂದು ಕಮೆಂಟ್ : ಈವರೆಗೆ ನಾಲ್ಕು ಲಕ್ಷದ 93 ಸಾವಿರಕ್ಕಿಂತ ಹೆಚ್ಚು ಬಾರಿ ಈ ಪೋಸ್ಟನ್ನು ವೀಕ್ಷಣೆ ಮಾಡಲಾಗಿದೆ. 6 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಪ್ರತಿಕ್ರಿಯೆ ಇದಕ್ಕೆ ಸಿಕ್ಕಿದೆ.
ಕೆಲವು ಹುಡುಗರು ಕೇವಲ ಸುಳ್ಳು ಹೇಳುತ್ತಾರೆ. ಮತ್ತೆ ಕೆಲವರು ನಾನು ನಿನ್ನನ್ನು ಇಷ್ಟಪಡುತ್ತೇನೆ ಎಂಬುದರ ಅರ್ಥವನ್ನು ತಿಳಿದಿರತ್ತಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುತ್ತಾರೆ. ನೀವು ಅದೃಷ್ಟ ದಂಪತಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬಹುತೇಕ ನೆಟ್ಟಿಗರು ಈ ಜೋಡಿಯ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ತಮಾಷೆಯಾಗಿಯೂ ಕಮೆಂಟ್ ಮಾಡಿದ್ದಾರೆ. ನಾನು ನನ್ನ ಸರದಿಗೆ ಕಾಯುತ್ತೇನೆ ಎಂದು ಒಬ್ಬರು ಹೇಳಿದ್ರೆ ಮತ್ತೊಬ್ಬರು ನನ್ನ ಡಿಎಂ ಕೂಡ ಚೆಕ್ ಮಾಡ್ಬೇಕು ಎಂದಿದ್ದಾರೆ. ಪತ್ನಿ ನೀಡಿದ ಪ್ರತಿಕ್ರಿಯೆಗೆ ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ.
fast forward 5 years later and turns out he really REALLY did like me pic.twitter.com/3EWaxR4woK
— sam (@samxrzraf)