ಭಾರತದ 10 ರಲ್ಲಿ 7 ಮಂದಿ ಮಾಡ್ತಾರೆ ದಾಂಪತ್ಯ ದ್ರೋಹ, ಅಯ್ಯೋ ದೇವ್ರೆ ಎಲ್ಲರೂ ವಂಚಕರೇ ಹಾಗಾದ್ರೆ!

By Suvarna News  |  First Published Sep 25, 2023, 2:34 PM IST

ಪತಿ ಅಥವಾ ಪತ್ನಿ ಸಂಗಾತಿಗೆ ಮಾಡುವ ಮೋಸವನ್ನು ದಾಂಪತ್ಯ ದ್ರೋಹ ಎಂದು ಕರೆಯಲಾಗುತ್ತದೆ. ಈಗಿನ ದಿನಗಳಲ್ಲಿ ಹೆಚ್ಚಾಗಿರುವ ವಿವಾಹೇತರ ಸಂಬಂಧದ ಬಗ್ಗೆ ಸಮೀಕ್ಷೆ ನಡೆದಿದೆ. ಅದ್ರಲ್ಲಿ ಅಚ್ಚರಿ ವಿಷ್ಯ ಹೊರ ಬಿದ್ದಿದೆ.
 


ದಾಂಪತ್ಯ ಮಧುರವಾಗಿದ್ದರೆ ದೀರ್ಘಕಾಲ ಬಾಳಬಲ್ಲದು. ಅದೇ ದಾಂಪತ್ಯದಲ್ಲಿ ಸರಸಕ್ಕಿಂತ ವಿರಸ ಹೆಚ್ಚಾದ್ರೆ ಇದು ಉಸಿರುಗಟ್ಟಿಸುವ ಅನುಭವ ನೀಡುತ್ತದೆ. ಈಗಿನ ದಿನಗಳಲ್ಲಿ ಭಾರತದಂತಹ ದೇಶದಲ್ಲೂ ವಿಚ್ಛೇದನ ಪ್ರಕರಣ ಹೆಚ್ಚಾಗ್ತಿದೆ. ದಂಪತಿ ಮಧ್ಯೆ ಸಂತೋಷಕ್ಕಿಂತ ಸಮಸ್ಯೆ, ಗಲಾಟೆ – ಜಗಳಗಳೇ ಹೆಚ್ಚಾಗ್ತಿವೆ. ಇದೇ ಕಾರಣಕ್ಕೆ ದಂಪತಿ ದೂರವಾಗ್ತಿದ್ದಾರೆ. ಕೆಲವರು ವಿವಾಹೇತರ ಸಂಬಂಧ ಬೆಳೆಸುತ್ತಿದ್ದಾರೆ. ಸಂಗಾತಿಯಲ್ಲಿ ಸಿಗದ ಪ್ರೀತಿಯನ್ನು ಅರಸಿ ಹೋಗುವವರಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರೂ ಸೇರಿದ್ದಾರೆ. ಇನ್ನು ಕೆಲವರು ಥ್ರಿಲ್ ಗಾಗಿ ವಿವಾಹೇತರ ಸಂಬಂಧ ಬೆಳೆಸುವುದಿದೆ. ಆರಂಭದಲ್ಲಿ ಈ ವಿವಾಹೇತರ ಸಂಬಂಧ ಖುಷಿ ನೀಡಿದ್ರೂ ಅಂತ್ಯ ಕೆಟ್ಟದ್ದಾಗಿರುತ್ತದೆ.  ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದಂತೆ ಅನೇಕ ಸಮೀಕ್ಷೆಗಳು ನಡೆದಿವೆ. 

ಈಗ ಗ್ಲೀಡೆನ್ (Gleeden) ಆಪ್ ಭಾರತದಲ್ಲಿ ವಿವಾಹಿತ ಮಹಿಳೆಯರ ಮೇಲೆ ಸಮೀಕ್ಷೆ ನಡೆಸಿದೆ. ಗ್ಲೀಡೆನ್ ಆಪ್ 5 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಮಹಿಳೆಯರು ಏಕೆ ವಿವಾಹೇತರ ಸಂಬಂಧ ಬಳಸ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಪ್ರಯತ್ನ ಸಮೀಕ್ಷೆ (Survey) ಯಲ್ಲಿ ನಡೆದಿದೆ. ಗ್ಲೀಡರ್ ಅಪ್ಲಿಕೇಷನ್ (Application) ಸಮೀಕ್ಷೆಯಿಂದ ಬಂದ ಉತ್ತರ ಅಚ್ಚರಿ ಮೂಡಿಸುವಂತಿದೆ. ಸಮೀಕ್ಷೆಯಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಹೈದ್ರಾಬಾದ್, ಪುಣೆ ಸೇರಿದಂತೆ ಅನೇಕ ನಗರದ ಮಹಿಳೆಯರು ಪಾಲ್ಗೊಂಡಿದ್ದರು. 

Tap to resize

Latest Videos

ವಿಶ್ವದ ಅತ್ಯಂತ ದುಬಾರಿ ಮದ್ವೆಯಿದು; ಖರ್ಚಾಗಿದ್ರು ಭರ್ತಿ 914 ಕೋಟಿ ರೂ, ಆದರೆ ಅಂಬಾನಿ ಮಕ್ಕಳ ಮದ್ವೆಯಲ್ಲ!

ಈ ಕಾರಣಕ್ಕೆ ಪತಿಗೆ ಮೋಸ ಮಾಡ್ತಾರೆ ಮಹಿಳೆಯರು : ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಯಾವ ಕಾರಣಕ್ಕೆ ತಾವು ವಿವಾಹೇತರ ಸಂಬಂಧ ಹೊಂದಿದ್ದೇವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 
ಭಾರತ ಪುರುಷ ಪ್ರಧಾನ ರಾಷ್ಟ್ರ. ಈಗ್ಲೂ ಇಲ್ಲಿನ ಪದ್ಧತಿ ಬದಲಾಗಿಲ್ಲ. ಮಹಿಳೆ ಮನೆಯಲ್ಲಿ ಕೆಲಸ ಮಾಡ್ಬೇಕು, ಪತಿ ಹೊರಗೆ ದುಡಿಯಬೇಕೆಂಬ ನೀತಿಯೇ ಜಾರಿಯಲ್ಲಿದೆ. ದಿನವಿಡಿ ಕೆಲಸ ಮಾಡುವ ಮಹಿಳೆಗೆ ಬಿಡುವಿಲ್ಲ. ಕಚೇರಿ ಕೆಲಸ ಮುಗಿಸಿದ ಮೇಲೆ ಸಂಪೂರ್ಣ ವಿಶ್ರಾಂತಿ ಪಡೆಯುವ ಪತಿ, ಪತ್ನಿ ಸಮಸ್ಯೆಗಳಿಗೆ ಸ್ಪಂದಿಸೋದಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 10 ರಲ್ಲಿ 7 ಮಂದಿ ಮಹಿಳೆಯರು, ಪತಿ ಮನೆ ಕೆಲಸದಲ್ಲಿ ನೆರವಾಗೋದಿಲ್ಲ ಎನ್ನುವ ಆರೋಪ ಮಾಡಿದ್ದಾರೆ. ಅಲ್ಲದೆ ಇದೇ ವಿವಾಹೇತರ ಸಂಬಂಧಕ್ಕೆ ಕಾರಣ ಎಂದಿದ್ದಾರೆ. ಇನ್ನು ಕೆಲ ಮಹಿಳೆಯರು ದಾಂಪತ್ಯ ವಿರಸವೇ ವಿವಾಹೇತರ ಸಂಬಂಧಕ್ಕೆ ಕಾರಣ ಎಂದಿದ್ದಾರೆ. ಸದಾ ದಂಪತಿ ಮಧ್ಯೆ ನಡೆಯುವ ಗಲಾಟೆಯಿಂದ ಬೇಸತ್ತ ಮಹಿಳೆಯರು ನೆಮ್ಮದಿಗಾಗಿ ವಿವಾಹೇತರ ಸಂಬಂಧ ಬೆಳೆಸಿದ್ದು, ಪತಿಗೆ ಮೋಸ ಮಾಡ್ತಿರೋದಾಗಿ ಒಪ್ಪಿಕೊಂಡಿದ್ದಾರೆ. 

ರಣವೀರ್​ಗೂ ಮೊದ್ಲು ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!

ವಿವಾಹೇತರ ಸಂಬಂಧದಿಂದ ಲಾಭವಿದೆ ಎಂದ ಮಹಿಳೆಯರು : ಸಮೀಕ್ಷೆಯಲ್ಲಿ ವಿವಾಹೇತರ ಸಂಬಂಧ ಬೆಳೆಸುವುದ್ರಿಂದ ತಮಗೇನು ಲಾಭವಾಗಿದೆ ಎಂಬುದನ್ನು ಕೂಡ ಮಹಿಳೆಯರು ಹೇಳಿದ್ದಾರೆ. ಹೊಸದನ್ನು ಪ್ರಯತ್ನಿಸಲು ಶೇಕಡಾ 37ರಷ್ಟು ಮಹಿಳೆಯರು ದಾಂಪತ್ಯ ದ್ರೋಹ ಮಾಡ್ತಾರಂತೆ. ಈಗಿರುವ ಸಂಬಂಧವನ್ನು ಇನ್ನಷ್ಟು ಸುಧಾರಿಸಬೇಕೆಂದ್ರೆ ವಿವಾಹೇತರ ಸಂಬಂಧ ಅನಿವಾರ್ಯ ಎನ್ನುತ್ತಾರೆ ಮಹಿಳೆಯರು. ಅವರ ಪ್ರಕಾರ, ವಿವಾಹೇತರ ಸಂಬಂಧವು ದಾಂಪತ್ಯವನ್ನು ಹಾಳು ಮಾಡುವ ಬದಲು ದಾಂಪತ್ಯ ಉಳಿಸಲು ಸಹಾಯ ಮಾಡಿದೆಯಂತೆ.

ದಾಂಪತ್ಯ ದ್ರೋಹಕ್ಕೆ ಇವು ಕಾರಣ : ಮಹಿಳೆ ಪತಿಗೆ ಮೋಸ ಮಾಡಲು ಅನೇಕ ಕಾಣವಿದೆ. ಅದ್ರಲ್ಲಿ ಮುಖ್ಯವಾಗಿ ಪತಿ ಮೇಲೆ ಕಡಿಮೆಯಾಗುವ ಅಥವಾ ಶೂನ್ಯವಾದ ಪ್ರೀತಿ. ದಾಂಪತ್ಯದಲ್ಲಿ ಗೌರವ, ವಿಶ್ವಾಸದ ಜೊತೆ ಪ್ರೀತಿ ಮುಖ್ಯ. ಪತಿ ಮೇಲೆ ಪ್ರೀತಿ ಇಲ್ಲದ ಮಹಿಳೆಯರು ಪ್ರೀತಿ ಅರಸಿ ಹೋಗ್ತಾರೆ. ಮದುವೆಯಾದ್ಮೇಲೆ ಸಂಸಾರ, ಮಕ್ಕಳು ಎಂದು ಬ್ಯುಸಿಯಾಗುವ ಮಹಿಳೆ ಯಾಂತ್ರಿಕಳಾಗ್ತಾಳೆ. ಆಕೆಯ ಕೆಲಸ ಮೆಚ್ಚಿವು, ಆಕೆಯ ಸೌಂದರ್ಯ ಹೊಗಳುವ ಆಸಕ್ತಿಯನ್ನು ಪತಿ ತೋರುವುದಿಲ್ಲ. ನೀರಸ ದಾಂಪತ್ಯ, ಸಂತೋಷವಿಲ್ಲದ ಜೀವನದಿಂದ ಹೊರಗೆ ಬರಲೂ ಮಹಿಳೆ ವಿವಾಹೇತರ ಸಂಬಂಧಕ್ಕೆ ಮೊರೆ ಹೋಗ್ತಾಳೆ.  
 

click me!