ಪತಿ – ಮಕ್ಕಳು ಬೇಡ ಎನ್ನುವವರು ಮದುವೆ ಆಗ್ಬಾರದು. ಮದುವೆ ಆಗಿ ಮಕ್ಕಳಾದ್ಮೇಲೆ ಸಂಸಾರ ಕಷ್ಟ ಅಂತ ಓಡಿ ಹೋದ್ರೆ ಕುಟುಂಬಸ್ಥರ ಸ್ಥಿತಿ ಏನಾಗ್ಬೇಡ. ಈ ಮಹಿಳೆ ಕೂಡ ಓಡಿ ಹೋದ ಗಂಡನ ಪತ್ತೆಗೆ ಮುಂದಾಗಿದ್ದಾಳೆ. ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ.
ಆಪ್ತರು ಸಾವನ್ನಪ್ಪಿದ್ರೆ ಅಥವಾ ವಿಚ್ಛೇದನ ನೀಡಿದ್ರೆ ಒಂದು ಕಡೆ ನೆಮ್ಮದಿ. ಅವರ ನೆನಪು ಕಾಡಿದ್ರೂ ನಮ್ಮ ಮುಂದಿನ ಜೀವನವನ್ನು ನಾವು ನೋಡಿಕೊಳ್ಬಹುದು. ಆದ್ರೆ ಹೇಳದೆ ಕೇಳದೆ ಬಿಟ್ಟು ಹೋದವರು, ಇದ್ದಾರಾ? ಸತ್ತಿದ್ದಾರಾ ಎಂಬುದು ತಿಳಿಯದೆ ಹೋದಾಗ ಕಷ್ಟವಾಗುತ್ತದೆ. ಪತಿ – ಪತ್ನಿ ವಿಷ್ಯದಲ್ಲಿ ಇದು ಮತ್ತಷ್ಟು ಸಮಸ್ಯೆ ತರುತ್ತದೆ. ಇನ್ನೊಂದು ಮದುವೆ ಆಗ್ಬೇಕು, ಹೊಸ ಜೀವನ ನಡೆಸಬೇಕು ಅಂದ್ರೆ ದಾಖಲೆ ಬೇಕು. ಪತಿಯ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದಾಗ ಮುಂದೇನು ಎಂಬ ಪ್ರಶ್ನೆ ಹುಟ್ಟುತ್ತದೆ. ಈ ಮಹಿಳೆ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಿಲ್ಲ. ಹಾಗಾಗಿಯೇ ಆಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪತಿಯನ್ನು ಹುಡುಕಿಕೊಡುವಂತೆ ಬಳಕೆದಾರರಿಗೆ ಮನವಿ ಮಾಡಿದ್ದಾಳೆ. ಎರಡು ಮಕ್ಕಳ ತಾಯಿಗೆ ಪತಿ ಎಲ್ಲಿದ್ದಾನೆ ಎಂಬುದೇ ತಿಳಿದಿಲ್ಲ. ಪತಿಗೆ ಸಂಸಾರದಲ್ಲಿ ಆಸಕ್ತಿ ಇಲ್ಲ. ಹಾಗಾಗಿ ಆತ ಬೇರೆ ರಾಜ್ಯದಲ್ಲಿ ವಾಸವಾಗಿದ್ದಾನೆ ಎಂಬ ಅನುಮಾನ ನನಗಿದೆ ಎಂದು ಮಹಿಳೆ ಪೋಸ್ಟ್ ನಲ್ಲಿ ಬರೆದಿದ್ದಾಳೆ.
ಘಟನೆ ನಡೆದಿರೋದು ಅಮೆರಿಕಾದಲ್ಲಿ. ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಆಶ್ಲೇ ಮೆಕ್ಗುರಿ ಹೆಸರಿನ ಫೇಸ್ಬುಕ್ ಖಾತೆಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ನಲ್ಲಿ ಮಹಿಳೆ ಪತಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾಳೆ.
ಈ ರಾಶಿಯವರು ಶ್ರೀಮಂತ ಹುಡುಗಿಯರನ್ನು ಮದುವೆಯಾಗಲು ಬಯಸುತ್ತಾರೆ.. ಆ ಪಟ್ಟಿಯಲ್ಲಿ ನೀವೂ ಇದ್ದೀರಾ..!
ಆಕೆಗೆ ಇಬ್ಬರು ಮಕ್ಕಳು. ಎರಡನೇ ಮಗು ಗರ್ಭದಲ್ಲಿರುವಾಗ್ಲೇ ಪತಿ (Husband) ಚಾರ್ಲ್ಸ್ ವಿದರ್ಸ್ ಮನೆ ಬಿಟ್ಟಿದ್ದಾನೆ. ಪತ್ನಿ, ಮಕ್ಕಳನ್ನು ಸಾಕೋದು ನನ್ನ ಕೆಲಸವಲ್ಲ ಎಂದು ಹೇಳಿ ಹೋದವನು ವಾಪಸ್ ಬರಲಿಲ್ಲ. ಎಲ್ಲಿ ಹೋಗಿದ್ದಾನೆ ಎಂಬ ಸುಳಿವು ಕೂಡ ಇಲ್ಲ. ಮಹಿಳೆ ಅಮೆರಿಕಾ (America)ದ ಮ್ಯಾಸಚೂಸೆಟ್ಸ್ ನಲ್ಲಿ ವಾಸವಾಗಿದ್ದಾಳೆ. ಒಂದು ಮಗುವಿನ ಮುಖವನ್ನು ಒಂದು ವರ್ಷವಾದ್ರೂ ಪತಿ ನೋಡಿಲ್ಲ. ಇನ್ನೊಂದು ಮಗು ಹುಟ್ಟಿದ ಮೇಲೆ ಆಕೆ ಮುಖವನ್ನು ಪತಿ ನೋಡೇ ಇಲ್ಲ. ಆತನಿಗೆ ಸಂಸಾರದ ಮೇಲೆ ಆಸಕ್ತಿ ಇಲ್ಲ. ಡೇಟಿಂಗ್ (Dating) ಅಪ್ಲಿಕೇಷನ್ ಮೂಲಕ ಡೇಟ್ ಮಾಡುವ ಬಯಕೆಯನ್ನು ಆತ ಹೊಂದಿದ್ದ. ಪತಿ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಖಾತೆ ತೆರೆದಿರಬಹುದು ಎಂಬ ಅನುಮಾನ ನನಗಿದೆ. ಪಕ್ಕದ ರಾಜ್ಯದಲ್ಲಿಯೇ ಪತಿ ಇರುವ ಅನುಮಾನವಿದೆ. ಆತ ಪ್ರಸಿದ್ಧ ಬಾಣಸಿಗ (Chef). ನನಗೆ ಕೆಲ ದಾಖಲೆ ಮೇಲೆ ಆತನ ಸಹಿ ಬೇಕಾಗಿದೆ. ಆತನಿಂದ ದೂರವಾಗಿ ನನ್ನದೇ ಹೊಸ ಜೀವನ ಶುರು ಮಾಡಲು ನಾನು ನಿರ್ಧರಿಸಿದ್ದೇನೆ. ಈತ ನಿಮ್ಮ ಸಹೋದ್ಯೋಗಿ ಆಗಿದ್ದಲ್ಲಿ, ನಿಮ್ಮ ಸ್ನೇಹಿತ ಆಗಿದ್ದಲ್ಲಿ, ನಿಮ್ಮ ಮನೆ ಪಕ್ಕದಲ್ಲಿದ್ದರೆ ಅಥವಾ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಕಾಣಿಸಿದ್ರೆ ನನಗೆ ದಯವಿಟ್ಟು ಹೇಳಿ ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ಮಹಿಳೆ ಬರೆದಿದ್ದಾಳೆ.
Viral Video: ಕಳೆದುಹೋಗಿದ್ದ ಹಸ್ಕಿ ನಾಯಿ ಡ್ರೋನ್ ನಲ್ಲಿ ಕಂಡ್ತು; ಜತೆಗೆ ಇನ್ನೊಂದು ವಿಚಿತ್ರವೂ ಕಾದಿತ್ತು!
ಮಹಿಳೆ ಈ ಪೋಸ್ಟ್ ಗೆ ಸಾಕಷ್ಟು ಉತ್ತರ ಬಂದಿದೆ. ಅನೇಕ ಮಹಿಳೆಯರು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಚಾರ್ಲ್ಸ್ ವಿದರ್ಸ್ ಖಾತೆ ನೋಡಿರೋದಾಗಿ ಹೇಳಿದ್ದಾರೆ. ಮತ್ತೆ ಕೆಲವರು ಆತನ ಮನೆ ನೋಡಿರುವುದಾಗಿ ತಿಳಿಸಿದ್ದಾರೆ. ಕಮೆಂಟ್ಸ್ ಪ್ರಕಾರ ಚಾರ್ಲ್ಸ್ ವಿದರ್ಸ್, ಟೆಕ್ಸಾಸ್ ಮನೆಯಲ್ಲಿದ್ದಾನೆ ಎಂಬುದು ಗೊತ್ತಾಗಿದೆ. ಮಹಿಳೆ ಪೋಸ್ಟ್ ಹಾಕಿ 24 ಗಂಟೆಯಲ್ಲೇ ಸಾಕಷ್ಟು ಮಾಹಿತಿ ಮಹಿಳೆಗೆ ಸಿಕ್ಕಿದೆ. ಆ ನಂತ್ರ ಇನ್ನೊಂದು ಪೋಸ್ಟ್ ಹಾಕಿರುವ ಮಹಿಳೆ, ಎಲ್ಲರಿಗೂ ಧನ್ಯವಾದ ಹೇಳಿದ್ದಾಳೆ. ವಾರ್ಲ್ಸ್ ವಿದರ್ಸ್ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ದಯವಿಟ್ಟು ಆತನಿಗೆ ತೊಂದರೆ ನೀಡಬೇಡಿ, ಆತನ ಮನೆಗೆ ಹೋಗಬೇಡಿ ಎಂದೂ ಪತ್ನಿ, ಬಳಕೆದಾರರಲ್ಲಿ ವಿನಂತಿ ಮಾಡಿದ್ದಾಳೆ.