ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಿಂದ ಜನಪ್ರಿಯತೆ ಗಳಿಸಿದ ನಟಿ ಮಾನ್ವಿತಾ ಹರೀಶ್ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ.
ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಿಂದ ಜನಪ್ರಿಯತೆ ಗಳಿಸಿದ ನಟಿ ಮಾನ್ವಿತಾ ಹರೀಶ್ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. ಸಂಗೀತಾ ನಿರ್ಮಾಪಕ ಅರುಣ್ ಕುಮಾರ್ ಅವರನ್ನು ನಟಿ ಮನ್ವಿತಾ ಕೈ ಹಿಡಿಯಲಿದ್ದು, ಮೇ 1 ರಂದು ಗೌಡ ಸಾರಸ್ವತ ಬ್ರಾಹ್ಮಣ( ಕೊಂಕಣಿ) ಶೈಲಿಯಲ್ಲಿ ಅವರ ಮದುವೆ ನಡೆಯಲಿದೆ.
ಏಪ್ರಿಲ್ 30 ರಂದು ಅರಶಿನ ಶಾಸ್ತ್ರ ಇರಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಾನ್ವಿತಾ ಅವರು ಟಗರು ಪುಟ್ಟಿ ಎಂದೇ ಫೇಮಸ್ ಆಗಿದ್ದಾರೆ. ಕೆಲ ತಿಂಗಳ ಹಿಂದೆ ಮಾನ್ವಿತಾ ಅವರಿಗೆ ಮಾತೃ ವಿಯೋಗ ಆಗಿತ್ತು. ಆದರೆ ತೀರಿಕೊಳ್ಳುವ ಮೊದಲೇ ಅಮ್ಮ ಮಗಳ ಮದ್ವೆಗಾಗಿ ಜಾತಕವನ್ನು ಆತ್ಮೀಯರಲ್ಲಿ ಹಂಚಿಕೊಂಡಿದ್ದರು. ಅದೀಗ ಮಾನ್ವಿತಾಗೆ ಮದುವೆ ನಿಶ್ಚಯವಾಗುವಂತೆ ಮಾಡಿದೆ.
ಆರ್‌ಜೆ ಆಗಿದ್ದ ಮಾನ್ವಿತಾ ಸ್ಯಾಂಡಲ್‌ವುಡ್‌ನಲ್ಲಿ 'ಕೆಂಡಸಂಪಿಗೆ, ಕನಕ, ಟಗರು, ರಿಲ್ಯಾಕ್ಸ್ ಸತ್ಯ, ಶಿವ 143 ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಟಗರು ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು.
ಯಾರ ಸಿಂಪತಿನೂ ಬೇಡ, ಜೋಪಡಿಯಲ್ಲಿ ಜೀವನ ಮಾಡೋಕೆ ರೆಡಿ: ಮಾನ್ವಿತಾ ಕಾಮತ್ ಭಾವುಕ
ಅಬ್ಬಬ್ಬಾ! ಟಗರು ಪುಟ್ಟಿ ಎಷ್ಟು ಚೇಂಜ್ ಆಗಿದ್ದಾರೆ ನೋಡಿ; ನಟಿ ಮಾನ್ವಿತಾ ಹೊಸ ಅವತಾರ ವೈರಲ್!