ಬಿಗಿ ಅಪ್ಪುಗೆಯೊಂದಿಗೆ 20 ವರ್ಷಗಳ ದ್ವೇಷ ಮರೆತು ಮತ್ತೆ ಒಂದಾದ ಬಾಲಿವುಡ್‌ನ ಹಾಟ್ ಜೋಡಿ

By Anusha Kb  |  First Published Apr 12, 2024, 1:47 PM IST

ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್ ಬಾಲಿವುಡ್‌ನ ಒಂದು ಕಾಲದ ತೆರೆಮೇಲಿನ ಹಾಟೆಸ್ಟ್‌ ಜೋಡಿಗಳು. ಆದರೆ 2004ರಲ್ಲಿ  ಅವರ ನಡುವಿನ ಸಂಬಂಧ ಸಂಪೂರ್ಣ ಹಳಸಿತ್ತು ಎಂದು ವರದಿಯಾಗಿತ್ತು. ಆದರೆ ಈಗ ಇಬ್ಬರೂ ಪರಸ್ಪರ ತಬ್ಬಿಕೊಳ್ಳುವ ಮೂಲಕ ತಮ್ಮ 20 ವರ್ಷದ ಹಳೆಯ ಕೋಪವನ್ನು ಮರೆತಂತೆ ಕಾಣುತ್ತಿದೆ. 


ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್ ಬಾಲಿವುಡ್‌ನ ಒಂದು ಕಾಲದ ತೆರೆಮೇಲಿನ ಹಾಟೆಸ್ಟ್‌ ಜೋಡಿಗಳು.  ಆದರೆ 2004ರಲ್ಲಿ ಅವರಿಬ್ಬರ ನಟನೆಯ ಮರ್ಡರ್ ಸಿನಿಮಾ ಬಿಡುಗಡೆಯ ಹೊತ್ತಿಗೆ ಅವರ ನಡುವಿನ ಸಂಬಂಧ ಸಂಪೂರ್ಣ ಹಳಸಿತ್ತು. ಅವರಿಬ್ಬರ ನಡುವಿನ ಸಂಬಂಧ ಕೆಟ್ಟಿದೆ ಎಂಬಂತೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈಗ ಇಬ್ಬರೂ ಪರಸ್ಪರ ತಬ್ಬಿಕೊಳ್ಳುವ ಮೂಲಕ ತಮ್ಮ 20 ವರ್ಷದ ಹಳೆಯ ಕೋಪವನ್ನು ಮರೆತಂತೆ ಕಾಣುತ್ತಿದೆ. 

ನಿನ್ನೆ ಏಪ್ರಿಲ್ 12 ರಂದು ಮುಂಬೈನಲ್ಲಿ  ನಡೆದ ಚಲನಚಿತ್ರ ನಿರ್ಮಾಪಕ ಆನಂದ್ ಪಂಡಿತ್ ಅವರ ಮಗಳ ಮದುವೆಯ ಆರತಕ್ಷತೆಗೆ ಇಮ್ರಾನ್ ಮತ್ತು ಮಲ್ಲಿಕಾ ಇಬ್ಬರೂ ಹಾಜರಾಗಿದ್ದರು ಇಬ್ಬರು ಮುಖಾಮುಖಿಯಾಗುತ್ತಿದ್ದಂತೆ ಪರಸ್ಪರ ವಿಶ್ ಮಾಡಿ ಹಗ್ ಮಾಡಿದ್ದಾರೆ. ಪರಸ್ಪರ ದ್ವೇಷಿಸುವ ಇವರಿಬ್ಬರು ಮುಖಾಮುಖಿಯಾದರೆ ಹೇಗಿರುತ್ತದೆ ಎಂದು ಕಾಯುತ್ತಿದ್ದ ಪಪಾರಾಜಿಗಳಿಗೂ ಇವರ ನಡೆ ಅಚ್ಚರಿ ನೀಡಿತ್ತು.  ಇಬ್ಬರು ಹಳೆ ದ್ವೇಷ ಮರೆತು ತಬ್ಬಿಕೊಂಡಾಗ ಎಲ್ಲರೂ ಅಚ್ಚರಿಯಿಂದ ನೋಡಿದ್ದಾರೆ. ಈ ವೀಡಿಯೋ ಈಗ ಪಪಾರಾಜಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.

Tap to resize

Latest Videos

undefined

IAS​ ಅಧಿಕಾರಿಯಾಗ್ಬೇಕಿದ್ದ ಮಲ್ಲಿಕಾ ಮನೆಬಿಟ್ಟು ಓಡಿ ಬಿಚ್ಚೋಲೆ ಗಂಗಮ್ಮ ಆಗಿದ್ದೇ ರೋಚಕ!

ಇಮ್ರಾನ್ ಮತ್ತು ಮಲ್ಲಿಕಾ ಇಬ್ಬರೂ ಒಬ್ಬರನ್ನೊಬ್ಬರು ಬಹಳ ಖುಷಿಯಿಂದಲೇ ಭೇಟಿಯಾಗಿದ್ದು, ಕೆಲ ನಿಮಿಷಗಳ ಕಾಲ ಹರಟೆಯಲ್ಲಿ ತೊಡಗಿದ್ದರು. ಅಷ್ಟೇ ಅಲ್ಲ ಪಾಪರಾಜಿಗಳ ಕೋರಿಕೆಯಂತೆ ಇಬ್ಬರೂ ಒಟ್ಟಿಗೆ ಫೋಟೋಗಳಿಗೆ ಫೋಸ್ ನೀಡಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರಿಬ್ಬರನ್ನು ಜೊತೆಯಾಗಿ ನೋಡಲು ಬಯಸಿದ್ದ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. 

ಪಪಾರಾಜಿಗಳತ್ತ ಯಾವತ್ತೂ ನಗುಬೀರದ ಇಮ್ರಾನ್ ಇಂದು ಚೆನ್ನಾಗಿ ನಗುತ್ತಿದ್ದಾರೆ. ಇವರಿಬ್ಬರು ಐತಿಹಾಸಿಕ ಜೋಡಿಗಳು, ಇವರನ್ನು ಯಾರು ಕೂಡ ಎಂದು ಮರೆಯಲಾರರು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಾವು ಸಾಕಷ್ಟು ಸಮಯದಿಂದ ಕಾಯುತ್ತಿದ್ದ ಪುನರ್ಮಿಲನ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮೀಡಿಯಾದವರ ಜೊತೆ ಇಷ್ಟು ಖುಷಿಯಿಂದ ಇಮ್ರಾನ್ ಮಾತನಾಡಿದ್ದನ್ನು ಯಾವತ್ತೂ ನೋಡಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇಮ್ರಾನ್ ಹಶ್ಮಿ ಜೀವನದಲ್ಲೇ ಈ ನಟಿಯ ಜೊತೆ ಅತ್ಯಂತ ಕೆಟ್ಟ ಕಿಸ್ಸಿಂಗ್ ಅನುಭವಂತೆ

2004ರಲ್ಲಿ ಇವರಿಬ್ಬರ ನಟನೆಯ ಮರ್ಡರ್ ಸಿನಿಮಾದ ಪ್ರಚಾರದ ವೇಳೆ ಇವರ ನಡುವೆ ಸಂಬಂಧ ಹಳಸಿರುವ ಬಗ್ಗೆ ವರದಿ ಆಗಿತ್ತು. ಅಲ್ಲದೇ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋದಲ್ಲಿ ಇಮ್ರಾನ್‌ ಹಶ್ಮಿ ಭಾಗವಹಿಸಿದಾಗ ಈ ವಿಚಾರಗಳು ಖಚಿತವಾಗಿದ್ದವು. ಶೋದಲ್ಲಿ ಇಮ್ರಾನ್ ಹಶ್ಮಿ ಮಲ್ಲಿಕಾ ಶೆರಾವತ್‌ನನ್ನು ಬ್ಯಾಡ್‌  ಕಿಸ್ಸರ್ ಎಂದಿದ್ದರು. ಜೊತೆಗೆ ನೀವು ನಟಿಯರ ಬೆಡ್‌ರೂಮ್‌ನಲ್ಲಿ ಕಾಣಬಹುದಾದ ಒಂದು ವಸ್ತು ಯಾವುದು ಎಂದು ಕರಣ್ ಜೋಹರ್ ಕೇಳಿದಾಗ, ಹಾಲಿವುಡ್‌ನಲ್ಲಿ ಸಕ್ಸಸ್‌ ಆಗುವುದು ಹೇಗೆ ಎಂಬ ಒಂದು ಈಡಿಯಟ್ ಗೈಡ್‌ ಎಂದು ಪ್ರತಿಕ್ರಿಯಿಸಿದ್ದರು. 

click me!