Feelfree: ಹೆಣ್ಣು ಮೇಲಿದ್ದರೆ ಹೆಚ್ಚು ಸುಖ, ವಾತ್ಸಾಯನನೂ ಹೇಳಿದ್ದಾನೆ ಈ ಭಂಗಿ!

Suvarna News   | Asianet News
Published : Jul 04, 2021, 04:35 PM IST
Feelfree: ಹೆಣ್ಣು ಮೇಲಿದ್ದರೆ ಹೆಚ್ಚು ಸುಖ, ವಾತ್ಸಾಯನನೂ ಹೇಳಿದ್ದಾನೆ ಈ ಭಂಗಿ!

ಸಾರಾಂಶ

ಸಂಭೋಗದಲ್ಲಿ ಹೆಣ್ಣು ಹೆಚ್ಚಾಗಿ ಗಂಡಿನ ಮೇಲಿದ್ದರೆ ಹೆಣ್ಣಿಗೆ ಹೆಚ್ಚು ಸುಖವೇಕೆ? ಇದರಿಂದ ಗಂಡಿಗೆ ನಿರಾಶೆಯಾಗುತ್ತದೆಯೇ? ಉತ್ತರ ಇಲ್ಲಿದೆ.

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತನಾಲ್ಕು, ಮದುವೆಯಾಗಿ ಎರಡು ವರ್ಷವಾಗಿದೆ. ಗಂಡನಿಗೆ ಇಪ್ಪತ್ತಾರು ವರ್ಷ. ನಾವಿಬ್ಬರೂ ಲೈಂಗಿಕವಾಗಿ ಸಕ್ರಿಯರಾಗಿದ್ದೇವೆ. ಹೆಚ್ಚಾಗಿ ಪ್ರತಿದಿನವೂ ಸಂಭೋಗಿಸುತ್ತೇವೆ. ಪ್ರತಿದಿನವೂ ಕೂಡುತ್ತಿದ್ದರೂ, ನಾನು ನನ್ನ ಗಂಡನ ಮೇಲೆ ಬಂದು ಸಂಭೋಗಿಸಿದ ದಿನ ಹೆಚ್ಚು ಸಂತೃಪ್ತಿ ದೊರೆಯುತ್ತದೆ. ಗಂಡ ತುಂಬಾ ಪ್ರೀತಿಯಿಂದ ಸಹಕರಿಸುತ್ತಾರಾದರೂ, ತಾವು ಮೇಲಿರುವ ಭಂಗಿಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ನನಗೆ ಗೊತ್ತಾಗಿದೆ. ಆದರೆ ಯಾವತ್ತೂ ನನ್ನ ಇಚ್ಛೆಗೆ ಅಡ್ಡಿಪಡಿಸಿಲ್ಲ. ನಾನು ಹೆಚ್ಚು ಹೆಚ್ಚು ಮೇಲಿನ ಭಂಗಿ ಅನುಸರಿಸಿದರೆ ಅವರಿಗೆ ನಿರಾಶೆಯಾಗಿ, ಲೈಂಗಿಕ ಕ್ರಿಯೆಯಿಂದ ಅವರು ವಿಮುಖರಾಗಬಹುದೇ? ಈ ಆತಂಕ ಕಾಡುತ್ತಿದೆ. ದಯವಿಟ್ಟು ಉತ್ತರಿಸಿ.

ಉತ್ತರ: ನೀವು ಸರಿಯಾದ ಕ್ರಿಯೆಯನ್ನೇ ಮಾಡುತ್ತಿದ್ದೀರಿ. ನಿಮ್ಮ ಮೇಲಿನ ಭಂಗಿ ಅವರಿಗೂ ಸುಖವನ್ನು ನೀಡುತ್ತದೆ. ಪುರುಷ ಮೇಲಿದ್ದರೂ, ಕೆಳಗಿದ್ದರೂ ಆತನಿಗೆ ಅತ್ಯಂತ ಹೆಚ್ಚು ಸುಖ ಸಿಗುವುದು ಯಾವಾಗ ಗೊತ್ತೆ? ಆತನಿಗೆ ಸ್ಖಲನ ಆಗುವ ಸಂದರ್ಭದಲ್ಲಿ. ಈ ಸನ್ನಿವೇಶ ಕೆಳಗಿದ್ದರೂ, ಮೇಲಿದ್ದರೂ ಒಂದೇ ಆಗಿರುತ್ತದೆ. ಇನ್ನು ಹೆಣ್ಣು ಮೇಲಿರುವ ಭಂಗಿ ಪುರುಷನಿಗೆ ಉದ್ರೇಕವನ್ನು ಹೆಚ್ಚು ಮಾಡುತ್ತದೆ ಹಾಗೂ ಮಾನಸಿಕ ಸುಖವನ್ನು ಕೊಡುತ್ತದೆ. ಯಾಕೆ ಗೊತ್ತೆ? ಹೆಣ್ಣು ತನ್ನ ಮೇಲೆ ಕ್ರಿಯೆಯಲ್ಲಿ ನಿರತಳಾಗಿರುವಾಗ ಆಕೆಯ ಎದೆಯ ಭಾಗದ ನೋಟ ಸ್ಪಷ್ಟವಾಗಿ ಆತನಿಗೆ ಲಭ್ಯವಾಗುತ್ತದೆ. ಜೊತೆಗೆ ರತಿಸುಖದ ಪರಾಕಾಷ್ಠೆಯನ್ನು ಹೆಣ್ಣು ತಲುಪುತ್ತಿರುವಾಗ ನೀಡುವ ಪ್ರತಿಕ್ರಿಯೆಗಳು ಆತನಿಗೆ ಕಾಣುತ್ತದೆ. ಇದು ರತಿಕ್ರಿಯೆಯ ಆನಂದವನ್ನು ಇಮ್ಮಡಿಗೊಳಿಸುತ್ತದೆ.

ಗಂಡು ಕೆಳಗಿರುವ, ಹೆಣ್ಣು ಮೇಲಿರುವ ಭಂಗಿ ಹೆಣ್ಣಿಗೆ ಹೆಚ್ಚು ಆನಂದದಾಯಕ ಏಕೆಂದರೆ, ಆಕೆಯಲ್ಲಿ ಕಾಮಕ್ರೀಡೆಯ ಪರಾಕಾಷ್ಠೆ ತಲುಪಲು ಕಾರಣವಾಗಿ ಕ್ಲಿಟೋರಿಸ್ ಅಥವಾ ಭಗಾಂಕುರದ ಭಾಗವು ಗಂಡಿನ ಶಿಶ್ನವನ್ನು ಸರಿಯಾದ ರೀತಿಯಲ್ಲಿ ಘರ್ಷಿಸುತ್ತದೆ. ಹೆಣ್ಣು ಕೆಳಗಿರುವಾಗ ಹೆಚ್ಚಿನ ಸಂದರ್ಭದಲ್ಲಿ ಇದು ಆಗಲಿಕ್ಕಿಲ್ಲ.

#Feelfree: ಫೋರ್ ಪ್ಲೇ ಅಥವಾ ಮುನ್ನಲಿವು ಎಂದರೆ ಏನು? ...

ಇನ್ನು ಇದೇನೂ ಹೊಸದಲ್ಲ. ಪ್ರಾಚೀನ ಭಾರತದ ಕಾಮಸೂತ್ರ ಕೃತಿ ಬರೆದ ವಾತ್ಸಾಯನ ಎಂಬ ಮಹರ್ಷಿ ಕೂಡ, ಈ ಭಂಗಿಯ ಉಲ್ಲೇಖ ಮಾಡಿದ್ದಾನೆ. ಇದನ್ನು ಆ ಕಾಲದಲ್ಲಿ 'ಪುರುಷಾಯತ' ಎಂದು ಕರೆಯುತ್ತಿದ್ದರು. ಇದು ಸರ್ವೇಸಾಮಾನ್ಯವಾಗಿತ್ತು ಎಂಬುದನ್ನು ತಿಳಿಯಲು ನೀವು ಕೆಲವು ಹಳೆಯ ದೇವಾಲಯಗಳ ಗೋಡೆಯ ಮೇಲಿರುವ ಉಬ್ಬುಚಿತ್ರಗಳನ್ನು ನೋಡಬಹುದು. ಖಜುರಾಹೋ ಮೊದಲಾದೆಡೆಗಳಲ್ಲಿ ಇದು ಕಾಣಿಸುತ್ತದೆ. ಆದ್ದರಿಂದ ನಿಮ್ಮ ಆಸಕ್ತಿಯ ಬಗ್ಗೆ ಮುಜುಗರ ಬೇಡ. ಇನ್ನು, ಗಂಡನಿಗೆ ಆಸಕ್ತಿಯ ಭಂಗಿ ಯಾವುದೋ ಅದನ್ನು ಕೂಡ ಅನುಭವಿಸಲು ಬಿಡಿ. ಅವರನ್ನು ಇತರ ರೀತಿಗಳಿಂದ ತೃಪ್ತಿಗೊಳಿಸಲು ಪ್ರಯತ್ನಿಸಿ.

#Feelfree: ಅರವತ್ತರ ಅಂಕಲ್, ಇಪ್ಪತ್ತೈದರ ಯುವಕ, ಯಾರು ಹಿತವರು ನನಗೆ? ...

ಪ್ರಶ್ನೆ: ನನ್ನ ವಯಸ್ಸು ಹದಿನೆಂಟು. ನನ್ನ ಶಿಶ್ನ ನಿಮಿರಿದಾಗ ನಾಲ್ಕು ಇಂಚು ದೊಡ್ಡದಾಗುತ್ತದೆ. ಹೆಣ್ಣನ್ನು ತೃಪ್ತಿಪಡಿಸಲು ಇದು ಸಾಕೇ? ನನ್ನ ಗೆಳೆಯರಲ್ಲಿ ಕೆಲವರಿಗೆ ಐದಿಂಚು, ಆರಿಂಚಿನ ಶಿಶ್ನ ಇರುವುದು ನನಗೆ ಗೊತ್ತಿದೆ. ಕೀಳರಿಮೆ ಕಾಡುತ್ತಿದೆ.

ಉತ್ತರ: ನೀವು ಯಾವಾಗಲೂ ಇಂಚುಪಟ್ಟಿ ಹಿಡಿದುಕೊಂಡೇ ಓಡಾಡುತ್ತೀರೋ ಹೇಗೆ? ಶಿಶ್ನ ಎಷ್ಟೇ ದೊಡ್ಡದಾಗಿರಬಹುದು, ಅದರಿಂದ ಕಾಮಕಲೆಯಲ್ಲಿ ಏನೂ ಪ್ರಯೋಜನವಿಲ್ಲ. ಕಾಮಲೋಕದ ಸಂತೃಪ್ತಿಯ ಮೂಲಬೇರುಗಳು ಇರುವುದು ತೊಡೆಯಲ್ಲಿ ಅಲ್ಲ, ತಲೆಯಲ್ಲಿ. ನೀವು ಸಂಭೋಗದ, ಹೆಣ್ಣನ್ನು ತೃಪ್ತಿಪಡಿಸುವ ನಾನಾ ಕೌಶಲ್ಯಗಳನ್ನು ಕಲಿತಷ್ಟೂ ನಿಮಗೆ ಆನಂದ ಹೆಚ್ಚು.

FeelFree: ಪಕ್ಕದ ಮನೆಯವಳ ಒಳ ಉಡುಪು ನೋಡಿದರೆ ಗಂಡನಿಗೆ ಉದ್ರೇಕ! ...

ಹಾಗೇ, ಕಾಮಕ್ಕೂ ಮುನ್ನ ಪ್ರೇಮವೇ ಹೆಚ್ಚು ಪರಿಣಾಮ ಬೀರುವುದು. ಫೋರ್‌ಪ್ಲೇ ಅಥವಾ ಮುನ್ನಲಿವನ್ನು ಚೆನ್ನಾಗಿ ರೂಢಿಸಿಕೊಳ್ಳುವುದು ಹೆಚ್ಚು ಸುಖದಾಯಕ. ನಾಲ್ಕಿಂಚಿನಿಂದಲೇ ಜಗತ್ತನ್ನು ಆಳಬಹುದು, ಹೆದರಬೇಡಿ. ಹೆಣ್ಣಿನ ಯೋನಿಯ ಆಳದ ಪ್ರಮಾಣ ನೋಡಿದರೆ, ಅದರಲ್ಲಿ ಮೇಲಿನ ಮೂರನೇ ಒಂದು ಭಾಗ ಮಾತ್ರವೇ ಸಂಭೋಗದ ಆನಂದವನ್ನು ಅನುಭವಿಸುವಂತೆ ರೂಪುಗೊಂಡಿದೆ. ಅಂದರೆ ಉಳಿದ ಭಾಗವೆಲ್ಲಾ ಗರ್ಭಧಾರಣೆ ಇತ್ಯಾದಿ ಕ್ರಿಯೆಗಳಿಗೆ ಮೀಸಲು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌