
ಪ್ರೀತಿ (Love), ಮದುವೆ (Marriage) ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಇಡೀ ಜೀವನ ಹಾಳಾಗುತ್ತದೆ. ಸಂಗಾತಿ ಆಯ್ಕೆ ಮಾಡಿಕೊಳ್ಳುವ ವೇಳೆ ಸಾವಿರಾರು ಬಾರಿ ಆಲೋಚನೆ ಮಾಡುವ ಅಗತ್ಯವಿರುತ್ತದೆ. ಮಹಿಳೆಯೊಬ್ಬಳು ತನ್ನ ಬಾಸ್ ಮದುವೆಯಾಗಿದ್ದಾಳೆ. 40 ವರ್ಷದ ಬಾಸ್ (Boss) ಕೈ ಹಿಡಿದ ಮಹಿಳೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ.
ಸುಂದರ ಹುಡುಗಿ ಹಿಂದೆ ಹತ್ತಾರು ಮಂದಿ : ಆಕೆ ಸುಂದರ ಹುಡುಗಿ. ಸದಾ ಆಕೆ ಸೌಂದರ್ಯದ ಬಗ್ಗೆಯೇ ಸುತ್ತಮುತ್ತಲಿನ ಜನರು ಮಾತನಾಡ್ತಿದ್ದರು. ಆಕೆ ಹೋದಲ್ಲೆಲ್ಲ ಎಲ್ಲರ ಗಮನ ಆಕೆ ಮೇಲಿರುತ್ತಿತ್ತು. ಇದೇ ಕಾರಣಕ್ಕೆ ಆಕೆಯ ಬಳಿ ಜನರು ಬರ್ತಿದ್ದರು. ಕಾಲೇಜಿನಲ್ಲಿ ಒಬ್ಬ ಹುಡುಗನ ಪ್ರೀತಿಗೆ ಬಿದ್ದವಳಿಗೆ ಆತನ ಅಸಲಿತ್ತು ತಿಳಿಯಿತು. ಸುಂದರ ಹುಡುಗಿ ತನ್ನ ಗರ್ಲ್ ಫ್ರೆಂಡ್ ಎಂಬ ಕಾರಣಕ್ಕೆ ಆತ ಪ್ರೀತಿ ನಾಟಕವಾಡಿದ್ದನಂತೆ. ಇದಾದ್ಮೇಲೆ ಆಕೆ ಯಾರ ಸಹವಾಸಕ್ಕೂ ಹೋಗಿರಲಿಲ್ಲ. ಒಂದು ಶುದ್ಧ ಪ್ರೀತಿಯ ಹುಡುಕಾಟ ನಡೆಸುತ್ತಿದ್ದಳು. ಆಕೆಯ ಸೌಂದರ್ಯ (Beauty) ಹೊಗಳುವ ವ್ಯಕ್ತಿ ಬೇಕಿರಲಿಲ್ಲ. ಆಕೆ ಕೆಲಸ (Work), ಸ್ವಭಾವ (Nature), ಮನಸ್ಸನ್ನು ಅರಿಯುವ ವ್ಯಕ್ತಿ ಬೇಕಿತ್ತು. ಇದೇ ಕಾರಣಕ್ಕೆ ಆಕೆ ಮದುವೆಯಾಗದೆ ಉಳಿದಿದ್ದಳು.
ಕೆಲಸಕ್ಕೆ ಸೇರಿದ ಮೇಲೆ ಸಿಕ್ತು ಪ್ರೀತಿ : ಆಸಕ್ತಿಯಂತೆ ಕಾಲೇಜು ಅಭ್ಯಾಸ (Graduation) ಮುಗಿಸಿ ಫರ್ಮ್ ಸೇರಿದ್ದಳು. ಲಾಯರ್ ಆಗುವ ಮೂಲಕ ವೈಯಕ್ತಿಕ ಸಾಧನೆ ಮಾಡ್ಬೇಕೆಂಬುದು ಆಕೆ ಕನಸಾಗಿತ್ತು. ಕಚೇರಿಯಲ್ಲಿ ಆಕೆಗೆ ಒಳ್ಳೆ ಸಹೋದ್ಯೋಗಿಗಳು ಸಿಕ್ಕಿದ್ದರು. ಆಕೆ ಬಾಸ್ ಕೂಡ ತುಂಬಾ ಶಾಂತ ಸ್ವಭಾವದವರು. ಎಲ್ಲರನ್ನು ಗೌರವಿಸುವ ವ್ಯಕ್ತಿ. ಈಕೆ ಕೆಲಸ ನೋಡಿ ಖುಷಿಯಾಗಿದ್ದ ಅವರು ಸಂಬಳ ಕೂಡ ಜಾಸ್ತಿ ಮಾಡಿದ್ದರು.
ದಂಪತಿ ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದರೆ ಗೋಡೆ ಬಣ್ಣ ಹೀಗಿರಲಿ
ಅನೇಕ ಪ್ರಕರಣಗಳಲ್ಲಿ ಜಯ ಸಾಧಿಸಿದ್ದ ಇವರ ತಂಡಕ್ಕೆ ಮನ್ನಣೆ ಸಿಗ್ತಿತ್ತು. ಈ ಮಧ್ಯೆ ಒಂದು ದಿನ ಎಲ್ಲರೂ ಡಿನ್ನರ್ ಪ್ಲಾನ್ ಮಾಡಿದ್ದರು. ಈ ಸಂದರ್ಭದಲ್ಲಿ ವೈಯಕ್ತಿಕ ವಿಷ್ಯಗಳನ್ನು ಮಾತನಾಡಿದ್ದಾರೆ. ಆಗ ಸಹೋದ್ಯೋಗಿಯೊಬ್ಬರು, ನೀನ್ಯಾಕೆ ಮದುವೆಯಾಗಿಲ್ಲವೆಂದು ಈಕೆಯನ್ನು ಕೇಳಿದ್ದಾರೆ. ಇದ್ರಿಂದ ಬೇಸರಗೊಂಡವಳಿಗೆ ಬಾಸ್ ಮಾತು ಹಿತವೆನಿಸಿದೆ. ಬಾಸ್ ಕೂಡ ತಾನಿನ್ನು ಮದುವೆಯಾಗಿಲ್ಲ. ನನಗೆ ಸೂಕ್ತ ಸಂಗಾತಿ ಸಿಕ್ಕಿಲ್ಲ ಎಂದಿದ್ದಾರೆ. 40 ವರ್ಷವಾದ್ರೂ ಮದುವೆಯಾಗದ ಬಾಸ್ ಆಕೆಗೆ ವಿಚಿತ್ರವಾಗಿ ಕಂಡಿದ್ದಾನೆ.
ಡಿನ್ನರ್ ಗೆ ಕರೆದ ಬಾಸ್ : ಇದಾದ ಕೆಲ ದಿನಗಳ ನಂತ್ರ ಬಾಸ್ ಈಕೆಯನ್ನು ಮಾತ್ರ ಡಿನ್ನರ್ ಗೆ ಕರೆದಿದ್ದಾರೆ. ಅಲ್ಲಿಗೆ ಹೋದ ಈಕೆಗೆ ಮದುವೆ ಪ್ರಪೋಸ್ ಮಾಡಿದ್ದಾರೆ. ಆದ್ರೆ ಏಕಾಏಕಿ ಕೋಪಗೊಂಡ ಈಕೆ ಅಲ್ಲಿಂದ ಎದ್ದು ಬಂದಿದ್ದಾಳೆ. ಕೆಲವೇ ಸಮಯದಲ್ಲಿ ತಪ್ಪಿನ ಅರಿವಾಗಿದೆ. ಮತ್ತೆ ಹೋಗಿ ಕ್ಷಮೆ ಕೇಳಿದ್ದಾಳೆ. ಮುಂದೇನು ಮಾಡ್ತಿಯಾ ಎಂಬುದು ನಿನ್ನ ನಿರ್ಧಾರ. ಆದ್ರೆ ನಾನು ಹೇಳುವ ಮಾತು ಕೇಳು ಎಂದು ಬಾಸ್ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಕೋಚ್ ಪ್ರೀತಿಯಲ್ಲಿ ಬಿದ್ದ 2 ಮಕ್ಕಳ ತಾಯಿ
ಮೊದಲನೇ ದಿನದಿಂದಲೇ ನನಗೆ ನಿನ್ನ ಕೆಲಸ ಇಷ್ಟವಾಗಿತ್ತು. ನಿನ್ನ ಸ್ವಭಾವ ನನಗೆ ಇಷ್ಟವಾಗಿದೆ. ನಾವಿಬ್ಬರೂ ಮದುವೆಯಾಗಿಲ್ಲ. ಇಬ್ಬರ ಆಸೆ, ಆಕಾಂಕ್ಷೆ ಒಂದೇ ರೀತಿಯಿದೆ. ಹಾಗಾಗಿ ನಾವಿಬ್ಬರು ಮದುವೆಯಾದ್ರೆ ಜೀವನ ಸುಖಮಯವಾಗಿರುತ್ತದೆ ಎಂದು ಬಾಸ್ ಹೇಳಿದ್ದಾರೆ. ಬಾಸ್ ಈ ಮಾತು ಕೇಳಿ ಖುಷಿಗೊಂಡ ಈಕೆ ಮದುವೆಗೆ ಒಪ್ಪಿಗೆ ನೀಡಿದ್ದಾಳೆ. ಮನೆಯವರನ್ನು ಒಪ್ಪಿಸಿ 40 ವರ್ಷದ ಬಾಸ್ ಮದುವೆಯಾಗಿ 3 ವರ್ಷ ಕಳೆದಿದೆ. 2019ರಲ್ಲಿ ಬಾಸ್ ಕೈ ಹಿಡಿದು ಒಳ್ಳೆಯ ಕೆಲಸ ಮಾಡಿದ್ದೇನೆ. ನಮ್ಮಿಬ್ಬರ ಜೀವನ ಸಂತೋಷದಿಂದ ಕೂಡಿದೆ. ಸೌಂದರ್ಯಕ್ಕಿಂತ ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ನನಗೆ ಸಿಕ್ಕಿದ್ದಾರೆ ಎಂಬ ಖುಷಿಯಿದೆ. ಬೇರೆಯವರ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾಳೆ ಮಹಿಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.