ಹುಡುಗರು ಯಾರೂ ಇಷ್ಟವಾಗ್ತಿಲ್ವಂತೆ ! ವಿಮಾನಾನೇ ಬಾಯ್‌ಫ್ರೆಂಡ್, ಅದನ್ನೇ ಮದ್ವೆಯಾಗ್ತೀನಿ ಅಂತಾಳೆ !

By Suvarna NewsFirst Published Jun 1, 2022, 12:07 PM IST
Highlights

ಸಮಾಜ (Society)ದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು (Men-women) ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ಹುಡುಗ-ಹುಡುಗಾನೂ, ಹುಡುಗಿ-ಹುಡುಗಿಯೂ ಮದ್ವೆಯಾಗ್ತಾರೆ. ಅಷ್ಟೇ ಅಲ್ಲ, ರೋಬೋಟ್‌ (Robot), ಕನಸಿನಲ್ಲಿ ಬರುವ ಹುಡುಗಿ ಈಗ ವಿಚಿತ್ರ ಭ್ರಮೆಗಳ ಜೊತೆಯೂ ಜನರು ಸಂಬಂಧ (Relationship) ಬೆಳೆಸಿಕೊಳ್ಳುತ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾಕೆ ಎಲ್ಲಾ ಬಿಟ್ಟು ನಾನು ವಿಮಾನ (Plane)ವನ್ನೇ ಮದುವೆ ಆಗ್ತೀನಿ ಅಂತ ಹಠ ಹಿಡಿದು ಕೂತಿದ್ದಾಳೆ.

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ (Relationship) ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು(Men), ಒಬ್ಬ ಹೆಣ್ಣು (Woman) ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ (Sex)ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ.

ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ. 

ಕಾಲ್ಪನಿಕ ಹುಡುಗಿಯನ್ನು ಮದುವೆಯಾದ ವ್ಯಕ್ತಿ..! ಅರೆ ಇದು ಹೇಗೆ ಸಾಧ್ಯ ?

ಆದ್ರೆ ಇಲ್ಲೊಬ್ಬಾಕೆ ಇನ್ನೂ ಒಂಚೂರು ವಿಚಿತ್ರವಾದ ಸಂಬಂಧ ಇಟ್ಟುಕೊಂಡಿದ್ದಾಳೆ. ಈಕೆ ಪ್ರೀತಿಸ್ರಾ ಇರೋದು, ಮದುವೆಯಾಗಲು ಬಯಸ್ತಿರೋದು, ಜೀವನ ಪೂರ್ತಿ ಜೊತೆಯಾಗಿರಬೇಕೂಂತ ಅಂದ್ಕೊಂಡಿರೋದು ವಿಮಾನ (Plane)ವನ್ನು. ಅರೆ ಇದೇನಪ್ಪಾ ವಿಚಿತ್ರ ಅನ್ಬೇಡಿ. ಇದು ನಿಜಾನೇ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಮಾನದೊಂದಿಗೆ ಸಂಬಂಧ ಹೊಂದಿರುವ ಸಾರಾ ರೋಡೋ ಅದನ್ನು ತನ್ನ ಗೆಳೆಯ ಎಂದು ಉಲ್ಲೇಖಿಸುತ್ತಾಳೆ. ಡಿಕ್ಕಿ ಎಂಬ ವಿಮಾನದೊಂದಿಗಿನ ತನ್ನ ವಿಲಕ್ಷಣ ಸಂಬಂಧವನ್ನು ಯುವತಿ ತಿಳಿಸಿದ್ದಾಳೆ. ನಾನು ಈ ವಿಮಾನವನ್ನು ಎಲ್ಲಾ ರೀತಿಯಲ್ಲಿ ಪ್ರೀತಿಸುತ್ತಿರುವುದಾಗಿ ಸಾರಾ ಹೇಳುತ್ತಾಳೆ. ತಾನು ವಿಮಾನದಲ್ಲಿ ಸುರಕ್ಷಿತವಾಗಿರುತ್ತೇನೆ. ಹೀಗಾಗಿ ಅದರ ಜೊತೆ ಸಂಬಂಧ ಬೆಳೆಸಿಕೊಳ್ಳಲು ನನಗೆ ಭರವಸೆಯಿದೆ. ನಾನು ವಿಮಾನದ ಜೊತೆ ಇರುವುದರೊಂದಿಗೆ ತನ್ನ ಎಲ್ಲಾ ಸಮಯವನ್ನು ಅದರ ಜೊತೆಯೇ ಕಳೆಯಲು ಬಯಸುತ್ತೇನೆ ಎಂದಾಕೆ ಹೇಳುತ್ತಾಳೆ. 

ನಿರ್ಜೀವ ವಸ್ತುಗಳಿಗೆ ಲೈಂಗಿಕವಾಗಿ ಆಕರ್ಷಿತರಾಗಿರುವ 23 ವರ್ಷದ ಸಾರಾ ರೋಡೋ ಅವರು ಬೋಯಿಂಗ್ 737ನ್ನು  ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ. ಅದನ್ನು ಅವರು ತಮ್ಮ ಗೆಳೆಯ ಎಂದು ಕರೆಯುತ್ತಾಳೆ. ಜರ್ಮನಿಯ ಡಾರ್ಟ್‌ಮಂಡ್‌ನ ಸಾರಾ, ಈ ಹಿಂದೆ ಮನುಷ್ಯರೊಂದಿಗೆ ಡೇಟಿಂಗ್ ಮಾಡಿದ್ದಾಳೆ. ಆದರೆ ವಿಮಾನ ಡಿಕ್ಕಿಯೇ ಆಕೆಗೆ ಸಂಗಾತಿಯೆಂಬ ಭಾವನೆಯನ್ನು ಮೂಡಿಸಿದೆಯಂತೆ. 

ಮದುವೆಯಾದ್ಮೇಲೆ ಗೊತ್ತಾಯ್ತು ಹೆಂಡತಿಯ ಮಾಜಿ ಬಾಯ್‌ಫ್ರೆಂಡ್‌ ಜತೆ ಲೈಂಗಿಕ ಸಂಬಂಧ

ತನ್ನ ತಾಯಿ ಸೇರಿದಂತೆ ತನ್ನ ಎಲ್ಲಾ 152 ಸಹ-ಪ್ರಯಾಣಿಕರನ್ನು ವಿಮಾನ ಅಪಘಾತದಲ್ಲಿ ಮೃತಪಟ್ಟರು. ಆದರೆ ನಾನು ಮಾತ್ರ ಬದುಕುಳಿದೆ. ಹೀಗಾಗಿ ಈ ವಿಮಾನ ನನ್ನ ಪಾಲಿಗೆ ಲಕ್ಕಿ ಎಂದು ಆಕೆ ತಿಳಿಸುತ್ತಾಳೆ. ಅಲ್ಲದೆ ಸಾರಾ, ಹದಿಹರೆಯದಿಂದಲು ವಸ್ತುಗಳ ಜೊತೆ ಸಂಬಂಧ ಇಟ್ಟುಕೊಳ್ಳಲು ಹೇಗೆ ಉತ್ಸುಕರಾಗಿದ್ದರು ಎಂಬುದನ್ನು ತಿಳಿಸಿದ್ದಾಳೆ. 'ನಾನು ಹದಿಹರೆಯದವಳಾಗಿದ್ದಾನಿಂದಲೂ ವಸ್ತುಗಳತ್ತ ಆಕರ್ಷಿತನಾಗಿದ್ದೆ. ನಾನು ಅದನ್ನು ಮೊದಲು ಗಮನಿಸಿದ್ದು 14 ವರ್ಷ ವಯಸ್ಸಿದ್ದಾಗ. ಹೀಗೆ ಕ್ರಮೇಣವಾಗಿ ನನಗೆ ವಸ್ತುಗಳ ಮೇಲೆ ಪ್ರೀತಿ ಬಂದು ವಿಮಾನದ ಮೇಲೆ ಪ್ರೀತಿ ಮೂಡಿತು ಎಂದು ಆಕೆ ತಿಳಿಸಿದ್ದಾಳೆ. 

ನಾನು ಇಬ್ಬರು ಪುರುಷರೊಮದಿಗೆ ಸಂಬಂಧ ಹೊಂದಿದ್ದೆ. ಯಾಕೆಂದರೆ ನನಗೆ ನಿಜವಾದ ಲೈಂಗಿಕತೆಯೆಂದರೆ ಏನೆಂಬುದನ್ನು ತಿಳಿದುಕೊಳ್ಳಬೇಕಿತ್ತು. ಆದರೆ ನನ್ನ ಆಸಕ್ತಿಯೇ ಬೇರೆ. ಜನರಿಂದ ಲೈಂಗಿಕ ವಿಷಯಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ನಾನು ಬೇಗನೇ ತಿಳಿದುಕೊಂದೆ. ವಸ್ತುಗಳ ಮೇಲಿನ ಲೈಂಗಿಕತೆಯು ಆಬ್ಜೆಕ್ಟೋಫಿಲಿಯಾ ಎಂದು ನನಗೆ ತಿಳಿದಿದೆ ಎಂದು ಆಕೆ ಹೇಳುತ್ತಾಳೆ.

ನನ್ನ ಪಾಲಿಗೆ ವಿಮಾನವೇ ಬಾಯ್‌ಫ್ರೆಂಡ್ ಆಗಿದೆ. ನಾನು ಅವನ ಜೊತೆಯೇ ಮಲಗಿ ಖುಷಿ ಪಡುತ್ತೇನೆ. ಅವನ ಬಗ್ಗೆ ಎಲ್ಲವನ್ನೂ ಪ್ರೀತಿಸುತ್ತೇನೆ, ಆದರೆ ವಿಶೇಷವಾಗಿ ಅವನ ಮುಖ, ರೆಕ್ಕೆಗಳು ಮತ್ತು ಎಂಜಿನ್ ನನಗೆ ತುಂಬಾ ಮಾದಕವೆನಿಸುತ್ತವೆ ಎಂದು ಸಾರಾ ಹೇಳುತ್ತಾಳೆ. ಸಾರಾ ತನ್ನ ತೋಳಿನ ಎರಡು ಹಚ್ಚೆಗಳನ್ನು ಸಹ ತನ್ನ ಬಾಯ್‌ಫ್ರೆಂಡ್ ವಿಮಾನಕ್ಕಾಗಿ ಮೀಸಲಿಟ್ಟಿದ್ದಾಳೆ. 

ನಾನು ತಕ್ಷಣ ಪ್ರೀತಿಯನ್ನು ಅನುಭವಿಸಿದೆ ಮತ್ತು ಸಾರ್ವಕಾಲಿಕ ಅವನೊಂದಿಗೆ ಇರಲು ಬಯಸುತ್ತೇನೆ - ಅವನು ನನ್ನನ್ನು ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿ ಮಾಡುತ್ತಾನೆ. ನಾನು ಸಹ ಆಗಾಗ್ಗೆ ಹಾರುತ್ತೇನೆ ಆದ್ದರಿಂದ ನಾನು ಅವನನ್ನು ಅನುಭವಿಸಲು ಮತ್ತು ಕೇಳಲು ಸಾಧ್ಯವಾಗುತ್ತದೆ ಎಂದು ಸಾರಾ ಹೇಳುತ್ತಾಳೆ. ಅದೇನೆ ಇರ್ಲಿ ಯುವತಿಯ ವಿಮಾನ ಪ್ರೀತಿ ಎಲ್ಲರ ಹುಬ್ಬೇರುವಂತೆ ಮಾಡ್ತಿರೋದಂತೂ ನಿಜ. 

click me!