Cheating Husband: ಪತಿ ಕಾರಿನಲ್ಲಿದ್ದ ಕಾಂಡೋಮ್ ನೋಡಿ ಸೇಡು ತೀರಿಸಿಕೊಂಡ ಪತ್ನಿ..!

By Suvarna News  |  First Published Jan 14, 2022, 3:27 PM IST

ತನ್ನ ಪತಿ ಜೊತೆ ಇನ್ನೊಬ್ಬಳನ್ನು ನೋಡಲು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಮೋಸಕ್ಕೆ ಕಣ್ಣೀರಿಡುವ ಕಾಲ ಈಗಿಲ್ಲ. ಮನೆ ಹೊರಗೆ ಸಂಬಂಧ ಇಟ್ಟುಕೊಂಡಿದ್ದ ಪತಿ ಮತ್ತು ಆತನ ಪ್ರೇಯಸಿಗೆ ಪತ್ನಿ ಸರಿಯಾಗಿ ಬುದ್ದಿ ಕಲಿಸಿದ್ದಾಳೆ. 
 


ನಂಬಿದವರು ಮೋಸ(Cheating )ಮಾಡಿದಾಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಅದ್ರಲ್ಲೂ ಅತಿಯಾಗಿ ಪ್ರೀತಿ(Love)ಸಿದ ವ್ಯಕ್ತಿ ಮೋಸ ಮಾಡಿದ್ರೆ ಅದ್ರಿಂದ ಹೊರ ಬರಲು ಸಾಕಷ್ಟು ಸಮಯಬೇಕಾಗುತ್ತದೆ. ಕೆಲವರು ಕಣ್ಣೀರಿನಲ್ಲಿ ಕೈತೊಳೆಯುತ್ತ ಜೀವನ ನಡೆಸುತ್ತಾರೆ. ಮತ್ತೆ ಕೆಲವರು ಪ್ರತಿಕಾರಕ್ಕೆ ಮುಂದಾಗ್ತಾರೆ. ಇನ್ನೂ ಕೆಲವರು ಬುದ್ಧಿವಂತಿಕೆಯಿಂದ ಕೆಲಸ (Work) ಮಾಡ್ತಾರೆ. ಗಂಡ (Husband)ನಿಂದ ಪ್ರೀತಿಯ ಮೋಸವಾಗಿದೆ ಎಂಬುದು ತಿಳಿದಾಗ ಹೆಂಡತಿ ಗಾಯಗೊಂಡ ಸಿಂಹಿಣಿ ಆಗುವುದಂತೂ ಸತ್ಯ. ತನ್ನ ಕೋಟೆಗೆ ಬಂದವರನ್ನು ಆಕೆ ಎಂದಿಗೂ ಬಿಡುವುದಿಲ್ಲ. ಇದಕ್ಕೆ ಅನೇಕ ಉದಾಹರಣೆಗಳಿವೆ.

ಈಗ ಇನ್ನೊಬ್ಬ ಮಹಿಳೆಯ ಕಥೆ ಬಹಿರಂಗವಾಗಿದೆ. ಗಂಡ ಮೋಸ ಮಾಡಿದ ಎಂದು ಮೌನವಾಗಿ ಕುಳಿತುಕೊಳ್ಳದೆ ಆತ ಯಾರ ಜೊತೆ ಲಲ್ಲೆ ಹೊಡೆದಿದ್ದಾನೆ ಎಂಬುದನ್ನು ಪತ್ತೆ ಮಾಡಿದ್ದಾಳೆ. ಆದ್ರೆ ಆಗ ಆಕೆಗೆ ಸಿಕ್ಕಿದ್ದು ಮತ್ತೊಂದಿಷ್ಟು ಶಾಕ್. ಬಲವಾಗಿ ನಂಬಿದ್ದ ಇಬ್ಬರೇ ಆಕೆ ಕತ್ತು ಕೊಯ್ದಿದ್ದಾರೆ. ಪತಿಯ ಮೋಸಕ್ಕೆ ಮಹಿಳೆ ಕ್ರೂರವಾಗಿಯೇ ಪ್ರತಿಕಾರ ತೀರಿಸಿಕೊಂಡಿದ್ದಾಳೆ. ತಾನು ಮಾಡಿದ ಪ್ಲಾನ್ ಏನು? ಜೀವನದಲ್ಲಿ ನಡೆದಿದ್ದೇನು ಎಂಬುದನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಮಹಿಳೆ ಫೇಸ್ಬುಕ್ ಹಾಗೂ ರೆಡ್ಡಿಟ್ ನಲ್ಲಿ ತನ್ನ ಕಥೆ ಬರೆದಿದ್ದಾಳೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬುದು ಇಲ್ಲಿದೆ. 

Tap to resize

Latest Videos

ಕಾರಿನಲ್ಲಿತ್ತು ಕಾಂಡೋಮ್ : ಮಹಿಳೆ ತನಗೆ ಮದುವೆಯಾಗಿ ಎಷ್ಟು ವರ್ಷವಾಗಿತ್ತು ಎಂಬ ವಿಷ್ಯವನ್ನು ಇಲ್ಲಿ ಹೇಳಿಲ್ಲ. ಆಕೆ ತನ್ನ ಗಂಡನ ಕಾರಿನಲ್ಲಿ ಕಾಂಡೋಮ್ ಪ್ಯಾಕೆಟ್ ನೋಡಿದ್ದಾಳೆ. ಇದು ಆಕೆಯಲ್ಲಿ ಅನುಮಾನ ಮೂಡಿಸಿದೆ. ಬರೀ ಅನುಮಾನಿಸುತ್ತ ಕುಳಿತುಕೊಳ್ಳದೆ ಸತ್ಯ ಹೊರತೆಗೆಯಲು ಮುಂದಾಗಿದ್ದಾಳೆ. ಪತಿಯ ಮುಂದೆ ಪ್ರಶ್ನೆ ಕೇಳಿ ಪ್ರಯೋಜನವಿಲ್ಲ ಎಂಬುದನ್ನು ಅರಿತಿದ್ದ ಮಹಿಳೆ ಸೂಪರ್ ಪ್ಲಾನ್ ಮಾಡಿದ್ದಾಳೆ.

ಕಾಂಡೋಮ್ ಗೆ ಮೆಣಸಿನಪುಡಿ : ಪತಿ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಕಾರಿನಲ್ಲಿದ್ದ ಕಾಂಡೋಮ್ ಪ್ಯಾಕೆಟ್ ಮನೆಗೆ ತಂದಿದ್ದಾಳೆ. ಕಾಂಡೋಮ್ ಗಳಿಗೆ ಸಣ್ಣ ರಂದ್ರ ಮಾಡಿದ್ದಾಳೆ. ನಂತ್ರ ಕಾಂಡೋಮ್  ತೆಗೆದು ಮೆಣಸಿನ ದ್ರವದಲ್ಲಿ ನೆನೆಸಿದ್ದಾಳೆ. ಮತ್ತೆ ಇವುಗಳನ್ನು ತೊಳೆದು,ಒಣಗಿಸಿ,ಪ್ಯಾಕ್ ನಲ್ಲಿ ಹೊಸದರಂತೆ ಇಟ್ಟಿದ್ದಾಳೆ. ಪತಿ ನಿದ್ರೆಯಿಂದ ಏಳುವ ಮೊದಲೇ ಮಹಿಳೆ ಈ ಎಲ್ಲ ಕೆಲಸ ಮಾಡಿದ್ದಾಳೆ. ನಿದ್ರೆಯಿಂದ ಎದ್ದ ಪತಿ,ಅಮ್ಮನನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾನೆ.

Sperm Count Increase: ವೀರ್ಯ ಸಂಖ್ಯೆ ಹೆಚ್ಚಲು ಬಳಸಿ ಈ ಪುಟಾಣಿ ಲವಂಗ

ಮಹಿಳೆಗೆ ಶಾಕ್ : ಪತಿ ಮನೆಯಿಂದ ಹೊರಗೆ ಹೋದ ಮೂರ್ನಾಲ್ಕು ಗಂಟೆಗಳ ನಂತ್ರ ಆಕೆ ಫೋನ್ ಗೆ ಕರೆಯೊಂದು ಬಂದಿದೆ. ಈ ಕರೆಯನ್ನು ಸ್ವೀಕರಿಸಿದ ಮಹಿಳೆಗೆ ದೊಡ್ಡ ಶಾಕ್ ಆಗಿದೆ. ಆ ಕಡೆ ಮಾತನಾಡಿದ್ದು ಬೇರೆ ಯಾರೂ ಅಲ್ಲ ಆಕೆಯ ಆಪ್ತ ಸ್ನೇಹಿತೆ. ನನಗೊಂದು ದೊಡ್ಡ ಸಮಸ್ಯೆಯಾಗಿದೆ. ಇಂದು ಬಾಯ್ ಫ್ರೆಂಡ್ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದೆ. ಅದಾದ್ಮೇಲೆ ನನ್ನ ಖಾಸಗಿ ಅಂಗ ವಿಪರೀತ ಉರಿಯಾಗ್ತಿದೆ. ಏನು ಮಾಡ್ಬೇಕು? ಸ್ವಲ್ಪ ಸಹಾಯ ಮಾಡು ಎಂದು ಸ್ನೇಹಿತೆ ಮಹಿಳೆಯನ್ನು ಕೇಳಿದ್ದಾಳಂತೆ. 

ಸಂಬಂಧ ಕುರಿತ Anxiety ಬಗ್ಗೆ ನಿರ್ಲಕ್ಷ್ಯ ಬೇಡ; ದಾಂಪತ್ಯಕ್ಕೆ ಮುಳ್ಳಾಗ್ಬಹುದು ಈ ಖಾಯಿಲೆ

ಮನೆಗೆ ಬಂದ ಪತಿ ಹೇಳಿದ್ದೇನು ? : ಇದಾದ ಸ್ವಲ್ಪ ಸಮಯದಲ್ಲಿ ಪತಿ ಮನೆಗೆ ಬಂದಿದ್ದಾನೆ. ತನ್ನ ಖಾಸಗಿ ಅಂಗದಲ್ಲಿ ಉರಿಯಾಗ್ತಿದೆ ಎನ್ನುತ್ತ ಐಸ್ ಬ್ಯಾಗ್ ತೆಗೆದು ಖಾಸಗಿ ಅಂಗಕ್ಕೆ ಮಸಾಜ್ ಮಾಡಿಕೊಂಡಿದ್ದಾನೆ. ಆಗ ಮಹಿಳೆಗೆ ಎಲ್ಲವೂ ಸ್ಪಷ್ಟವಾಗಿದೆ. ಪತಿ ಜೊತೆ ಸಂಬಂಧ ಬೆಳೆಸಿ ತನಗೆ ಮೋಸ ಮಾಡಿದ್ದು ತನ್ನ ಸ್ನೇಹಿತೆ ಎಂಬ ಸತ್ಯ ಗೊತ್ತಾಗಿದೆ. ಪ್ರೀತಿ ಪಾತ್ರರೇ ಮೋಸ ಮಾಡಿದ್ದು ಆಕೆಗೆ ನುಂಗಲಾರದ ತುಪ್ಪವಾಗಿದೆ. ಒಂದೇ ಬಾರಿ ಮಹಿಳೆ ಪತಿ ಹಾಗೂ ಸ್ನೇಹಿತೆ ಇಬ್ಬರನ್ನೂ ಕಳೆದುಕೊಂಡಿದ್ದಾಳೆ. 

click me!