ನಂಬಿಕೆ ಮೇಲೆ ದಾಂಪತ್ಯ ನಿಂತಿರುತ್ತದೆ. ಸಂಗಾತಿ ಮೋಸ ಮಾಡ್ತಿದ್ದಾರೆ ಎಂಬುದು ಗೊತ್ತಾದಾಗ ಅವರ ಜೊತೆ ಜೀವನ ನಡೆಸಲು ಯಾರೂ ಮನಸ್ಸು ಮಾಡೋದಿಲ್ಲ. ಇದೇ ಕಾರಣಕ್ಕೆ ಕೆಲವರು ತಮ್ಮ ಗುಟ್ಟು ಮುಚ್ಚಿಟ್ಟು ಸಂಗಾತಿ ಮುಂದೆ ನಾಟಕವಾಡ್ತಾರೆ.
ಮದುವೆಯಾದ್ಮೇಲೆ ಇಬ್ಬರ ಮಧ್ಯೆ ಹೊಂದಾಣಿಕೆ ಬಹಳ ಮುಖ್ಯ. ಇಬ್ಬರು ಪ್ರಾಮಾಣಿಕವಾಗಿರಬೇಕು. ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆ ಮಾಯವಾಗಿದೆ. ಮದುವೆಯಾಗಿ, ಜೊತೆಗಿರ್ತೇನೆಂದು ಆಣೆ- ಪ್ರಮಾಣ ಮಾಡಿದವರು ಕೂಡ ನಂಬಿಕೆ ದ್ರೋಹ ಮಾಡ್ತಿದ್ದಾರೆ. ಮನೆಯಲ್ಲೊಂದು ಮುದ್ದಾದ ಮಡದಿ ಇದ್ರೂ ಅಥವಾ ಜೀವ ಹಾಗೂ ಜೀವನಕ್ಕೆ ಕಿಂಚಿತ್ತೂ ನಿರಾಸೆ ಮಾಡದ ಪತಿಯಿದ್ರೂ ಕೆಲವರು ದಾಂಪತ್ಯ ದ್ರೋಹ ಮಾಡ್ತಾರೆ. ಹಾಗಾಗಿಯೇ ಈಗಿನ ದಿನಗಳಲ್ಲಿ ವಿಚ್ಛೇದನ ಸಂಖ್ಯೆ ಕೂಡ ಹೆಚ್ಚಾಗಿದೆ.
ಪ್ರೀತಿ (Love) ಸುವ ಸಂಗಾತಿಯನ್ನು ಅತಿಯಾಗಿ ನಂಬುವ ಕೆಲವರು, ಆಕೆ ಅಥವಾ ಆತ ಮಾಡಿದ್ದೆಲ್ಲವನ್ನೂ ನಂಬುತ್ತಾರೆ. ಆದ್ರೆ ಸಂಗಾತಿಯ ಈ ಮುಗ್ದತೆಯನ್ನು ಇನ್ನೊಬ್ಬರು ದುರುಪಯೋಗಪಡಿಸಿಕೊಳ್ಳುತ್ತಾರೆ. ಸಂಗಾತಿಗೆ ಮೋಸ (Cheating) ಮಾಡಿ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸುತ್ತಾರೆ. ಪತಿ ಅಥವಾ ಪತ್ನಿ ಮಾಡುತ್ತಿರುವ ಮೋಸ ಗೊತ್ತಾದ್ರೆ ಜಗತ್ತು ಕುಸಿದ ಅನುಭವವಾಗುತ್ತದೆ. ಅದೂ ಬೇರೆಯವರಿಂದ ತಿಳಿದ್ರೆ ಆಘಾತವಾಗೋದು ಹೆಚ್ಚು. ಕೆಲವರು ತಮ್ಮ ಸಂಗಾತಿ ಮೇಲೆ ಎಷ್ಟು ಭರವಸೆ ಇಟ್ಟಿರುತ್ತಾರೆಂದ್ರೆ ಸಂಗಾತಿ ಸರಿಯಿಲ್ಲವೆಂದು ಹೇಳಿದ ವ್ಯಕ್ತಿಯನ್ನೇ ದೂರವಿಡ್ತಾರೆಯೇ ಹೊರತು, ಸಂಗಾತಿಯನ್ನು ಅನುಮಾನಿಸೋದಿಲ್ಲ. ಇದೇ ಕಾರಣಕ್ಕೆ ಕೆಲ ಆಪ್ತರು, ನಮಗ್ಯಾಕೆ ಎನ್ನುವ ನಿರ್ಧಾರಕ್ಕೆ ಬರ್ತಾರೆ. ಆದ್ರೆ ಈ ಮಹಿಳೆಗೆ ತನ್ನ ಸ್ನೇಹಿತೆ ಮೋಸ ಹೋಗ್ತಿರೋದನ್ನು ನೋಡೋಕೆ ಆಗ್ತಿಲ್ಲ. ಹಾಗಾಗಿಯೇ ಆಕೆ, ವೈಯಕ್ತಿಕ ಜೀವನದ ಬಗ್ಗೆ ಸಲಹೆ ನೀಡುವ, ಬ್ರಿಟನ್‌ನ ಪ್ರಸಿದ್ಧ ಬರಹಗಾರ ಕೊಲೀನ್ ನೋಲನ್ (Coleen Nolan) ಸಲಹೆ ಕೇಳಿದ್ದಾಳೆ.
RELATIONSHIP TIPS : ಕೆಲಸ ಮಾಡೋ ಹುಡುಗಿಗೆ ಓಕೆ ಎನ್ನುವ ಮುನ್ನ ಇದು ಗೊತ್ತಿರಲಿ!
ಮಹಿಳೆ ಕೇಳಿದ ಸಲಹೆ ಏನು? : ಮಹಿಳೆಯೊಬ್ಬಳ ಪ್ರಕಾರ, ಸ್ನೇಹಿತೆ ಪತಿ ಸ್ನೇಹಿತೆಗೆ ಮೋಸ ಮಾಡ್ತಿದ್ದಾನಂತೆ. ಈ ಬಗ್ಗೆ ಸ್ನೇಹಿತೆಗೆ ಹೇಳೋಕೆ ಆಗ್ತಿಲ್ಲ. ಮುಂದೇನು ಮಾಡ್ಲಿ ಎನ್ನುವುದು ಆಕೆ ಪ್ರಶ್ನೆ. ಸ್ನೇಹಿತೆ ಪತಿ, ಸ್ನೇಹಿತೆಗೆ ಮೋಸ ಮಾಡ್ತಿದ್ದಾರೆ ಎಂಬುದು ಗೊತ್ತಿದೆ. ಆದ್ರೆ ಈ ಬಗ್ಗೆ ಆಕೆ ಬಳಿ ಯಾವುದೇ ಸಾಕ್ಷ್ಯವಿಲ್ಲ. ಸ್ನೇಹಿತೆ ಜೀವನದಲ್ಲಿ ಕಷ್ಟ ಅನುಭವಿಸೋದನ್ನು ನನಗೆ ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಆಕೆಗೆ ಇನ್ನೂ ಸತ್ಯವನ್ನು ಹೇಳಿಲ್ಲ. ಪತಿಯನ್ನು ಆಕೆ ಏಕೆ ಮೆಚ್ಚಿಕೊಂಡಿದ್ದಾಳೆ ತಿಳಿದಿಲ್ಲ. ಇಬ್ಬರ ಮಧ್ಯೆ ದೈಹಿಕ ಆಕರ್ಷಣೆಯಿರಬಹುದು. ಸ್ನೇಹಿತೆ ಪತಿ ಸೆಲ್ಫಿಶ್ ಎಂದು ಮಹಿಳೆ ಹೇಳಿದ್ದಾಳೆ. ಪತಿ ಸುಧಾರಿಸುತ್ತಾನೆ ಎಂದುಕೊಂಡಿದ್ದೆ. ಆದ್ರೆ ಯಾಕೋ ಸುಧಾರಿಸಿದಂತೆ ಕಾಣ್ತಿಲ್ಲ ಎನ್ನುತ್ತಾಳೆ ಮಹಿಳೆ.
ಜಿಮ್ ಬೇಡ! ಸೆಕ್ಸ್ ಮೂಲಕವೇ ಕಳೆದುಕೊಳ್ಳಬಹುದು ಹೆಚ್ಚಿನ ಮೈತೂಕ!
ಕೋಲಿನ್ ನೋಲನ್ ನೀಡಿದ ಸಲಹೆ ಏನು? : ಇದೊಂದು ಸವಾಲಿನ ಕೆಲಸ ಎನ್ನುತ್ತಾರೆ ಕೋಲಿನ್ ನೋಲನ್. ಈ ವಿಷ್ಯವನ್ನು ನಿಮ್ಮ ಸ್ನೇಹಿತೆಗೆ ಹೇಳಿದ್ರೆ ನಿಮ್ಮಿಬ್ಬರ ಮಧ್ಯೆ ಸಂಬಂಧ ಹಾಳಾಗಬಹುದು. ಹಾಗಂತ ಹೇಳದೆ ಹೋದ್ರೆ ಸ್ನೇಹಿತೆ ಜೀವನ ಹಾಳಾಗಬಹುದು. ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲ ಎನ್ನುತ್ತೀರಿ. ಈ ವೇಳೆ ಸ್ನೇಹಿತೆಗೆ ವಿಷ್ಯ ತಿಳಿಸೋದು ಒಳ್ಳೆಯದಲ್ಲ. ನೀವು ಸ್ನೇಹಿತೆ ಪತಿ ಬಳಿ ಮಾತನಾಡ್ಬೇಕು ಎನ್ನುತ್ತಾರೆ ಕೋಲಿನ್. ನಿಮ್ಮ ಅಫೇರ್ ನನಗೆ ಗೊತ್ತಾಗಿದೆ. ನೀವು ಈ ವಿಷ್ಯವನ್ನು ನಿಮ್ಮ ಪತ್ನಿ ಬಳಿ ಒಪ್ಪಿಕೊಳ್ಳಿ. ಒಂದ್ವೇಳೆ ಆಕೆಗೆ ಬೇರೆಯವರಿಂದ ವಿಷ್ಯ ತಿಳಿದ್ರೆ ನಿಮ್ಮಿಬ್ಬರ ಸಂಬಂಧ ಹಾಳಾಗುತ್ತದೆ ಎಂದು ಪತಿಗೆ ಹೇಳಿ ಎನ್ನುತ್ತಾರೆ ಕೋಲಿನ್. ಆತನಿಗೆ ಸ್ವಲ್ಪ ಸಮಯ ನೀಡಿ. ಆತನೇ ಪತ್ನಿ ಬಳಿ ಹೋಗಿ ಹೇಳ್ತಾನೆ ಎನ್ನುವ ಕೋಲಿನ್, ಒಂದ್ವೇಳೆ ಸ್ನೇಹಿತೆ, ನಿನಗೆ ವಿಷ್ಯ ಗೊತ್ತಿತ್ತಾ ಎಂದು ಪ್ರಶ್ನೆ ಮಾಡಬಹುದು. ಅದಕ್ಕೆ ಹೌದು, ನಿನ್ನ ಪತಿಯ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದೆ. ಸತ್ಯ ಹೇಳುವಂತೆ ಸಲಹೆ ನೀಡಿದ್ದೆ ಎಂದು ನೀವು ಹೇಳ್ಬಹುದು ಎನ್ನುತ್ತಾರೆ ಕೋಲಿನ್.