ಪ್ಯಾರಿಸ್‌ ಪ್ರಣಯ; ಲವರ್‌ಗಾಗಿ ಭಾರತಕ್ಕೆ ಬಂದ ಫ್ರಾನ್ಸ್ ಮಹಿಳೆ

By Suvarna NewsFirst Published Jul 30, 2022, 1:22 PM IST
Highlights

ಪ್ರೀತಿಸುವವರು ಒಂದಾಗಲು ಏನು ಮಾಡಲು ಸಹ ಸಿದ್ಧವಿರುತ್ತಾರೆ. ಅದಕ್ಕೆ ಊರು, ಭಾಷೆ, ಸಂಸ್ಕೃತಿ ಯಾವುದೂ ಅಡ್ಡಿಯಾಗುವುದಿಲ್ಲ. ಹಾಗೆಯೇ ಇಲ್ಲೊಬ್ಬಾಕೆ ತಾನು ಪ್ರೀತಿಸಿದವನನ್ನು ಭೇಟಿ ಮಾಡಲು ಪ್ಯಾರಿಸ್‌ನಿಂದ ಪಶ್ಚಿಮಬಂಗಾಳಕ್ಕೆ ಬಂದು ತಲುಪಿದ್ದಾಳೆ.

ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗುವುದು ಅದೃಷ್ಟ. ಪ್ರೀತಿಸದ ವ್ಯಕ್ತಿಗೆ ಬಾಳ ಸಂಗಾತಿಯಾದ್ರೆ ಸ್ವರ್ಗಕ್ಕೆ ಮೂರೇ ಗೇಣು. ಅವರ ಮೊದಲ ಭೇಟಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೊದಲ ಭೇಟಿಯಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಅವರು ನಮ್ಮ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎಂಬುದನ್ನು ಸ್ವಲ್ಪ ಮಟ್ಟಿಗೆ ತಿಳಿಯಬಹುದು. ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಈ ಯುಗದಲ್ಲಿ, ಪ್ರೀತಿ ಮತ್ತು ಸಂಗಾತಿಯ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿದೆ. ಆದರೆ ಇದರ ಮಧ್ಯೆಯೂ ಅನೇಕರು ಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಪ್ರೀತಿ ಎಲ್ಲಿ, ಯಾವಾಗ ಬೇಕಾದ್ರೂ ಹುಟ್ಟಬಹುದು. ಕೆಲವರು ಕಾಲೇಜಿನಲ್ಲಿ ಪ್ರೀತಿ ಮಾಡಿದ್ರೆ ಮತ್ತೆ ಕೆಲವರು ಕಚೇರಿಯಲ್ಲಿ. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿ ಮಾಡ್ತಾರೆ. ಇದು ಅಂಥಹದ್ದೇ ಒಂದು ಪ್ರೀತಿಯ ಕಥೆ. ಪ್ಯಾರಿಸ್‌ನಿಂದ ಪಶ್ಚಿಮಬಂಗಾಳಕ್ಕೆ ಪ್ರೀತಿ ಉಕ್ಕಿ ಹರಿದಿದೆ. 

ಪ್ರಿಯತಮನಿಗಾಗಿ ಪ್ಯಾರಿಸ್‌ನಿಂದ ಬಂದ ನಲ್ಲೆ
ಪ್ಯಾರಿಸ್‌ನಿಂದ ಪಾಂಡುವವರೆಗೆ ಪ್ರೀತಿಯೇ (Love) ಹುಡುಕಿಕೊಂಡು ಬಂದಿದೆ. ಪೆಟ್ರೀಷಿಯಾ ಹಾಗೂ ಕುಂತಲ್ ಬೇರೆ ಬೇರೆ ದೇಶದಲ್ಲಿದ್ದರೂ ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದಾರೆ. ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಪ್ರೀತಿ  ಆರಂಭವಾಗಿದೆ. ಡೇಟಿಂಗ್ ಸೈಟ್‌ನಲ್ಲಿ ಕುಂತಲ್​ ಭಟ್ಟಾಚಾರ್ಯ ಅವರು ಪೆಟ್ರೀಷಿಯಾ ಬರೋಟಾ ಅವರೊಂದಿಗೆ ಮಾತನಾಡಿದ್ದಾರೆ. ನಂತರ ವಿಡಿಯೋ ಚಾಟ್‌ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದಾರೆ. ಅಲ್ಲಿಂದ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ಮಾತನಾಡುವ ಭಾಷೆ ಅಡ್ಡಿಯಾದರೂ ಇಬ್ಬರೂ ಮನಸಾರೆ ಪ್ರೀತಿಸಿದ್ದಾರೆ. ಗೂಗಲ್ ಭಾಷಾಂತರಕಾರ ಇವರ ಪ್ರೇಮಕ್ಕೆ ಸಾಕ್ಷಿಯಾಗಿದ್ದಾನೆ.

ರೊಮ್ಯಾಂಟಿಕ್ ಜೀವನವನ್ನೇ ಹಾಳು ಮಾಡುವ ದೋರಣೆ!

ಪೆಟ್ರೀಷಿಯಾ ತನ್ನ ಪ್ಯಾರಿಸ್​ನಿಂದ ಪಾಂಡುವಾಗೆ ನೇರವಾಗಿ ಬಂದಿದ್ದಾಳೆ. ಇದನ್ನು ಕಂಡು ಕುಂತಲ್ ಆಘಾತಕ್ಕೊಳಗಾಗುವುದರ ಜೊತೆ ಪ್ರೇಮಿಯನ್ನು ಕಂಡು ಸಂತೋಷಗೊಂಡಿದ್ದಾನೆ. ಜುಲೈ 13 ರಂದು ಪೆಟ್ರೀಷಿಯಾ ಭಾರತಕ್ಕೆ ಬಂದಿರುವುದಾಗಿ ಫೋನ್ ನಲ್ಲಿ ಹೇಳಿದ್ದಳಂತೆ. ಮೊದಲು ದೆಹಲಿಯ ಮೂಲಕ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಅವರ ಮನೆಗೆ ತಲುಪಿದ್ದಾರೆ. ಪ್ರಸ್ತುತ, ಈ ಜೋಡಿ ಚುಟಿಯೆಯಲ್ಲಿ ವಾಸಿಸುತ್ತಿದೆ. ಶೀಘ್ರದಲ್ಲೇ ಇವರು ಮದುವೆ (Marriage)ಯಾಗಲಿದ್ದಾರೆ.

ಪ್ರೀತಿಗೆ ಅಡ್ಡಿಯಾಗಲ್ಲಿಲ್ಲ ಭಾಷೆಯ ಸಮಸ್ಯೆ
ಕುಂತಲ್ ಭಟ್ಟಾಚಾರ್ಯ ಅವರು ಹೂಗ್ಲಿಯ ಪಾಂಡುವಾ ಸರದಪಲ್ಲಿ ನಿವಾಸಿ. ಅವರು ವೃತ್ತಿಯಲ್ಲಿ ಉದ್ಯಮಿ. ಪ್ಯಾರಿಸ್ ನಿವಾಸಿ ಪೆಟ್ರೀಷಿಯಾ ಬರೊಟ್ಟಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ (Social media) ಭೇಟಿಯಾದರು. ಅವರು ದೀರ್ಘಕಾಲ ಫೋನ್‌ನಲ್ಲಿ ನಿಯಮಿತವಾಗಿ ಮಾತನಾಡುತ್ತಿದ್ದರು. ಬಳಿಕ ವಿಡಿಯೋ ಕಾಲ್ ಮೂಲಕವೂ ಮಾತನಾಡಿದ್ದಾರೆ. ಆದರೆ ಅವರ ನಡುವಿನ ದೊಡ್ಡ ತಡೆಗೋಡೆ ಭಾಷೆ. ಆದರೆ ಪ್ರೀತಿಗೆ ಭಾಷೆ (Language) ಅಡ್ಡಿಯಾಗುವುದಿಲ್ಲ ಎಂಬುದು ಪತ್ತೆ ಸಾಬೀತಾಗಿದೆ.

ಕೇರಳ ಸಾರಿಗೆ ಬಸ್‌ನಲ್ಲೊಂದು ಸುಂದರ ಪ್ರೇಮಕಥೆ
ಬಸ್ಸಿನಲ್ಲೊಂದು ಸುಂದರ ಪ್ರೇಮಕಥೆ ಹುಟ್ಟಿದರೆ ಹೇಗಿರುತ್ತದೆ. ಅದು ಕೇರಳ ರಾಜ್ಯದ ಆಲಪ್ಪುಳದಲ್ಲಿ ನಿಜವಾಗಿದೆ.  ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಮತ್ತು ಬಸ್ ಡ್ರೈವರ್‌ ಪ್ರೇಮಕಥೆ ಆಲಪ್ಪುಳದ ಸ್ಥಳೀಯರಲ್ಲಿ ಮನೆಮಾತಾಗಿದೆ. ಕೇರಳ ರಾಜ್ಯದಲ್ಲಿ ಮಹಿಳಾ ಕಂಡಕ್ಟರ್‌ಗಳನ್ನು ನೋಡುವುದು ಅಸಾಮಾನ್ಯವೇನಲ್ಲ. ಹಾಗೆಯೇ ಒಂದೇ ಬಸ್‌ನಲ್ಲಿ ಜೊತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಡ್ರೈವರ್ ಮತ್ತು ಮಹಿಳಾ ಕಂಡಕ್ಟರ್ ಮಧ್ಯೆ ಪ್ರೇಮಾಂಕುರವಾಗಿದೆ. ಸದ್ಯ ಇಬ್ಬರೂ ಸೇರಿ ಒಟ್ಟಾಗಿ ಕೇರಳ ಸಾರಿಗೆ ಬಸ್ ಓಡಿಸುತ್ತಿದ್ದು, ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಜೊತೆಯಾಗಿ ಹಿತವಾಗಿ... ವೃದ್ಧ ದಂಪತಿ ಜೊತೆ ಸಾಗುವ ವಿಡಿಯೋ ವೈರಲ್

ಗಿರಿ ಮತ್ತು ತಾರಾ ಅವರು ನಡೆಸುವ ಬಸ್‌ ಪ್ರಯಾಣಿಕರ ಸ್ನೇಹಿಯಾಗಿದೆ. ಬಸ್‌ನಲ್ಲಿ ಸಂಗೀತ ವ್ಯವಸ್ಥೆ (Music), ವರ್ಣರಂಜಿತ ಅಲಂಕಾರ ಮತ್ತು ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಲಪ್ಪುಳ ಜಿಲ್ಲೆಯ ಹರಿಪಾಡ್ ಕೆಎಸ್‌ಆರ್‌ಟಿಸಿ ಡಿಪೋದಿಂದ ಪ್ರಯಾಣಿಕರು ಬಸ್ ಸೇವೆಯನ್ನು ಆನಂದಿಸಬಹುದು, ಪತಿ ಮತ್ತು ಪತ್ನಿ ಇಬ್ಬರೂ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದ ನಂತರ ಈ ಬಸ್ ಸೇವೆ ಪ್ರಾರಂಭವಾಯಿತು. ಡಿದ್ದಾರೆ. 

click me!