ಸದಾ ಕುಡ್ಕೊಂಡೇ ಇರೋ ಪತಿ ಜೊತೆ ಬದುಕೋದು ಹೇಗೆ? ಈ ಹೆಣ್ಣಿನ ಸಮಸ್ಯೆಗೆ ನಿಮ್ಮ ಸಲಹೆ ಏನು?

By Suvarna NewsFirst Published Jul 29, 2022, 6:25 PM IST
Highlights

ಪ್ರತಿಯೊಂದು ಇತಿಮಿತಿಯಲ್ಲಿ ಇರಬೇಕು. ಮಿತಿ ಮೀರಿದ್ರೆ ಸಂಸಾರ ಹಳ್ಳ ಹಿಡಿಯುತ್ತದೆ. ಜೂಜಿನಿಂದ ಹಿಡಿದು ಮದ್ಯಪಾನದವರೆಗೆ ಎಲ್ಲವೂ ಆರೋಗ್ಯಕರ ಸಂಸಾರಕ್ಕೆ ಅಡ್ಡಿಯೇ. ದಿನವಿಡಿ ಮದ್ಯಪಾನ ಮಾಡುವ ಪತಿ ಜೊತೆ ಸಂಸಾರ ಹೇಳಿದಷ್ಟು ಸುಲಭವಲ್ಲ.
 

ಸಂಬಂಧ ಹಳಸಲು ವಿವಾಹೇತ ಸಂಬಂಧ ಮಾತ್ರ ಕಾರಣವಾಗ್ಬೇಕೆಂದೇನೂ ಇಲ್ಲ. ದಂಪತಿ ಮಧ್ಯೆ ಅನೇಕ ಕಾರಣಕ್ಕೆ ಬಿರುಕು ಮೂಡುತ್ತದೆ. ಇದ್ರಲ್ಲಿ ಸಂಗಾತಿ ಪ್ರೀತಿಯ ಕೊರತೆ ಸೇರಿದಂತೆ ಅನಾರೋಗ್ಯಕರ ಚಟವೂ ಸೇರಿದೆ. ಹಿಂದಿನ ಕಾಲದಲ್ಲಿ ಕುಡುಕ ಪತಿ ಜೊತೆ ಮಹಿಳೆಯರು ಅನಿವಾರ್ಯವಾಗಿ ಸಂಸಾರ ನಡೆಸುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ವಾವಲಂಬಿಗಳಾಗಿರುವ ಕೆಲ ಮಹಿಳೆಯರು ಪತಿಯ ಚಟಕ್ಕೆ ಬೇಸತ್ತು ವಿಚ್ಛೇದನ ನೀಡ್ತಿದ್ದಾರೆ. ಇನ್ನೂ ಕೆಲವರಿಗೆ ಆರ್ಥಿಕ ಪರಿಸ್ಥಿತಿ, ಸುತ್ತಮುತ್ತಲಿನ ಪರಿಸರ ಹಾಗೂ ಗಂಡನ ಮೇಲಿರುವ ಗೌರವ ಹಾಗೂ ಪ್ರೀತಿಯ ಕಾರಣಕ್ಕೆ ಪತಿಯ ಚಟವನ್ನು ಸಹಿಸಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಮಹಿಳೆಯೊಬ್ಬಳು ತನ್ನ ಪತಿಯ ಚಟಕ್ಕೆ ಬೇಸತ್ತು ತಜ್ಞರಿಂದ ಸಹಾಯ ಕೇಳಿದ್ದಾಳೆ. ಪ್ರತಿ ದಿನ ಮದ್ಯಪಾನ ಮಾಡುವ ಪತಿಯ ಆರೋಗ್ಯದ ಬಗ್ಗೆಯೂ ಚಿಂತೆ ವ್ಯಕ್ತಪಡಿಸುತ್ತಿರುವ ಪತ್ನಿ, ಸಂಸಾರ ಉಳಿಸಿಕೊಳ್ಳಲು ನೆರವು ಕೇಳಿದ್ದಾಳೆ. ಕುಡುಕ ಪತಿ (Husband) ಜೊತೆ  ಸಂಸಾರ : ಮದುವೆ (Marriage) ಯ ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಿದ್ದವು. ಪತಿ – ಪತ್ನಿ ಸುಂದರ, ಸುಖಮಯ ಸಂಸಾರ ನಡೆಸುತ್ತಿದ್ದರು. ಆದ್ರೆ ಈಗ ಮದ್ಯಪಾನ (Alcohol) ಪತಿಗೆ ಹತ್ತಿರವಾಗಿದೆ. ಪತ್ನಿ ಮಾತಿಗಿಂತ ಮದ್ಯಪಾನಕ್ಕೆ ಹೆಚ್ಚು ಮಹತ್ವ ನೀಡ್ತಿರುವ ಪತಿಯ ಜೊತೆ ಮಹಿಳೆ ಸಂಸಾರ ನಡೆಸುತ್ತಿದ್ದಾಳೆ.

ಆರಂಭದಲ್ಲಿ ಹವ್ಯಾಸವಾಗಿದ್ದು ಈಗ ಚಟವಾಗಿದೆ : ಸ್ನೇಹಿತರ ಜೊತೆ ಪತಿ ಆಗಾಗ ಮದ್ಯಪಾನ ಮಾಡ್ತಿದ್ದನಂತೆ. ಇದು ಮಹಿಳೆಗೆ ವಿಶೇಷವೆನ್ನಿಸಿರಲಿಲ್ಲವಂತೆ. ಪತಿ ತಿಂಗಳಿಗೊಮ್ಮೆ ಆಲ್ಕೋಹಾಲ್ ಸೇವನೆ ಮಾಡಿದ್ರೆ ನನಗೆ ಅಭ್ಯಂತರವಿಲ್ಲ. ಆದ್ರೆ ವಾರದಲ್ಲಿ ಐದು ದಿನ ಮದ್ಯಪಾನ ಮಾಡ್ತಾನೆ ಎನ್ನುತ್ತಾಳೆ ಪತ್ನಿ. ಮೊದಲು ನನ್ನ ಮುಂದೆ ಕುಡಿಯದ ಪತಿ ಈಗ ಮನೆಯಲ್ಲಿಯೇ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾನೆಂದು ಅಳಲು ತೋಡಿಕೊಂಡಿದ್ದಾಳೆ.

ಫಲ ನೀಡ್ತಿಲ್ಲ ಪ್ರಯತ್ನ : ಪತಿಯನ್ನು ಈ ಚಟದಿಂದ ಮುಕ್ತಗೊಳಿಸಲು ಪತ್ನಿ ಸಾಕಷ್ಟು ಪ್ರಯತ್ನ ಮಾಡಿದ್ದಾಳೆ. ಆದ್ರೆ ಮದ್ಯಪಾನ ನನಗೆ ಶಕ್ತಿ ನೀಡುತ್ತದೆ ಎನ್ನುವ ಪತಿ, ಅದನ್ನು ಬಿಡಲು ಸಿದ್ಧನಿಲ್ಲವಂತೆ. ಸುಮ್ಮನೆ ಇದೊಂದು ಕಾರಣ ಇಟ್ಕೊಂಡು ಜಗಳಕ್ಕೆ ಬರಬೇಡ ಎನ್ನುತ್ತಿದ್ದಾನಂತೆ ಪತಿ. ಇದ್ರಿಂದ ಪತಿ ಆರೋಗ್ಯ ಹಾಳಾಗ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾಳೆ.

ಅಬ್ಬಬ್ಬಾ..ಹುಡುಗೀರು ಫಸ್ಟ್‌ ನೈಟ್‌ ಬಗ್ಗೆ ಹೀಗೆಲ್ಲಾ ಯೋಚ್ನೆ ಮಾಡಿರ್ತಾರಂತೆ !

ತಜ್ಞರ ಸಲಹೆ : ದೇಶದಲ್ಲಿ ಸಾವಿರಾರು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನತ್ತಾರೆ ತಜ್ಞರು. ಈ ಚಟ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಲ್ಲದೆ ವಿವಾಹದ ಸಂಬಂಧಕ್ಕೆ ಅಡ್ಡಿಯಾಗ್ತಿದೆ ಎನ್ನುತ್ತಾರೆ ಅವರು. ಮೊದಲನೇಯದಾಗಿ ಪದೇ ಪದೇ ಪತಿ ಹತ್ತಿರ ಮದ್ಯಪಾನದ ವಿಷ್ಯವನ್ನು ಮಾತನಾಡಬೇಡಿ. ಇದು ಆತನಿಗೆ ಕಿರಿಕಿರಿ ಆಗುತ್ತದೆ. ನಿಮ್ಮಿಂದ ಆತ ವಿಷ್ಯವನ್ನು ಮುಚ್ಚಿಡಬಹುದು. ಕದ್ದುಮುಚ್ಚಿ ಮದ್ಯಪಾನ ಮಾಡಬಹುದು ಎನ್ನುತ್ತಾರೆ ತಜ್ಞರು.

ಹಾಗೆಯೇ ಆತನ ಮದ್ಯಪಾನಕ್ಕೆ ಕಾರಣವೇನು ಎಂಬುದನ್ನು ಮೊದಲು ತಿಳಿಯಿರಿ ಎನ್ನುತ್ತಾರೆ ತಜ್ಞರು. ಮೊದಲು ಸ್ನೇಹಿತರ ಜೊತೆ ಕುಡಿಯುತ್ತಿದ್ದ ವ್ಯಕ್ತಿ ಈಗ ಮನೆಯಲ್ಲಿ ಒಬ್ಬಂಟಿಯಾಗಿ ಡ್ರಿಂಕ್ ಮಾಡ್ತಿದ್ದಾನೆ ಅಂದ್ರೆ ಕಾರಣವಿರಬಹುದು. ಹಾಗಾಗಿ ಅವರಿಗೆ ಸಪೋರ್ಟ್ ಸಿಸ್ಟಂ ಆಗಿ ನಿಲ್ಲಿ ಎನ್ನುತ್ತಾರೆ ತಜ್ಞರು. ಪತಿಯನ್ನು ಮೊದಲು ಪ್ರೀತಿ ಮಾಡಿ. ಅವರ ಜೊತೆ ಮಾತುಕತೆ ನಡೆಸಿ. ಅವರ ಈ ಚಟದಿಂದ ನಿಮ್ಮಿಬ್ಬರ ಸಂಬಂಧ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಸಿ ಹೇಳಿ.

ಪತಿ ಗರ್ಲ್ ಫ್ರೆಂಡನ್ನು ಮನೆಗೆ ಕರೆದದ್ದೇ ತಪ್ಪಾಯ್ತು

ಬಹುತೇಕ ಪ್ರಕರಣಗಳಲ್ಲಿ ಮದ್ಯಪಾನಕ್ಕೆ ಒತ್ತಡ ಕಾರಣವಾಗಿದೆ. ಒತ್ತಡದಿಂದ ಹಾಗೂ ಆತಂಕದಿಂದ ಬಳಲುವ ಪುರುಷರು ಮದ್ಯಪಾನಕ್ಕೆ ದಾಸರಾಗ್ತಿದ್ದಾರೆ. ಹಾಗಾಗಿ ಅವರ ಹೃದಯದಲ್ಲಿ ಮತ್ತೆ ಜಾಗ ಪಡೆದ್ರೆ ನೀವು ಅವರ ಸಮಸ್ಯೆ ಅರಿಯಬಹುದು. ನಿಮ್ಮ ಬಳಿ ಮುಚ್ಚಿಟ್ಟಿದ್ದ ಸಮಸ್ಯೆಯನ್ನು ಹೊರಗೆ ತೆಗೆದು ಅದನ್ನು ಬಗೆಹರಿಸಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು.
 

click me!