ಪ್ರೀತಿ ಕುರುಡು ಆದ್ರೆ ಪ್ರೀತಿಯಲ್ಲಿ ಬಿದ್ದವರು ಕುರುಡರಾಗ್ಬಾರದು. ಜೀವನ ಪೂರ್ತಿ ಜೊತೆಗಿರ್ತಾನೆಂದು ಸಂಗಾತಿಯನ್ನು ಸಂಪೂರ್ಣ ನಂಬಿ ಕೈನಲ್ಲಿರೋ ಎಲ್ಲ ಹಣವನ್ನು ಆತನಿಗೆ ಧಾರೆ ಎರೆದ್ರೆ ಕೊನೆಯಲ್ಲಿ ಸಿಗೋದು ಖಾಲಿ ಚೊಂಬು ಆಗಿರ್ಬಹುದು. ಎಚ್ಚರ.
ಪ್ರೀತಿಗೆ ಶ್ರೀಮಂತ – ಬಡವರ ಬೇಧವಿಲ್ಲ. ಅದು ಯಾರ ಮಧ್ಯೆಯಾದ್ರೂ ಜಿಗುರೊಡೆದು ಮರವಾಗಿ ಬೆಳೆಯಬಹುದು. ದಾಂಪತ್ಯ ವೃದ್ಧಾಪ್ಯದವರೆಗೆ ಸಾಗಿ, ಇಹಲೋಕ ತ್ಯಜಿಸಿದ ಮೇಲೂ ಮಕ್ಕಳು, ಮೊಮ್ಮಕ್ಕಳ ರೂಪದಲ್ಲಿ ಅದರ ಕುರುಹಿದ್ದರೆ ಅದ್ರಂತ ಸಂತೋಷ ಮತ್ತೊಂದಿಲ್ಲ. ಆದ್ರೆ ಎಲ್ಲರ ಬಾಳಲ್ಲಿ ಇದು ಸಾಧ್ಯವಿಲ್ಲ. ಪ್ರೀತಿ ಮೊಳಕೆಯೊಡೆದು ಎಲೆ ಚಿಗುರುವ ಮೊದಲೇ ಕೊಳೆತು ನೆಲಸಮವಾಗುತ್ತದೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಅಂತಾ ದೊಡ್ಡವರು ಹೇಳ್ತಾರೆ. ಈಗಿನ ಯಂಗ್ ಜನರೇಷನ್ ಸದಾ ಆತುರದಲ್ಲಿರುತ್ತದೆ. ಎಲ್ಲವೂ ಫಟ್ ಫಟ್ ಆಗ್ಬೇಕು. ನೌಕರಿ, ಪ್ರೀತಿ, ಮದುವೆ ಯಾವುದಕ್ಕೂ ಸಮಯ ಮೀಸಲಿಡಲು ಅವರ ಬಳಿ ತಾಳ್ಮೆ ಇಲ್ಲ. ಪ್ರೀತಿ ವಿಷ್ಯದಲ್ಲೂ ದುಡುಕಿ ನಿರ್ಧಾರ ತೆಗೆದುಕೊಂಡು ನಂತ್ರ ಪಶ್ಚಾತಾಪಪಡುವ ಅನೇಕರಿದ್ದಾರೆ.
ಲವ್ (Love) ಅಟ್ ಫಸ್ಟ್ ಸೈಟ್ ಎನ್ನುವ ಮಾತಿದೆ. ಅದು ಎಲ್ಲರಿಗೂ ಸತ್ಯವಾಗಲು ಸಾಧ್ಯವಿಲ್ಲ. ಒಮ್ಮೊಮ್ಮೆ ಅದು ಬರೀ ಆಕರ್ಷಣೆಯಾಗಿರಬಹುದು. ಅದನ್ನೇ ಪ್ರೀತಿ ಎಂದು ನಂಬಿ ಯಾವುದೇ ಪೂರ್ವಾಪರ ವಿಚಾರಿಸದೆ ಸಂಗಾತಿ (Partner) ಜೊತೆ ಜೀವನ (Life) ನಡೆಸುವ ನಿರ್ಧಾರ ಕೈಗೊಂಡು ನಂತ್ರ ತೊಂದರೆ ಅನುಭವಿಸಿದ ಅದೆಷ್ಟೋ ಜನರು ನಮ್ಮ ಮುಂದಿದ್ದಾರೆ. ಸಂಬಂಧದಲ್ಲಿ ಸಾಕಷ್ಟು ಮೋಸ ನಡೆಯುತ್ತಿರುತ್ತದೆ. ಈ ಹುಡುಗಿ ಕೂಡ ಅಂತದ್ದೇ ಮೋಸಕ್ಕೆ ಒಳಗಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆ ಹೇಳಿಕೊಂಡಿರುವ ಆಕೆಗೆ ಬಳಕೆದಾರರು ಸಾಂತ್ವಾನ ಹೇಳಿದ್ದಾರೆ.
ಸಂಬಂಧದಲ್ಲಿ ನೀವು ಬ್ರೆಡ್- ಕ್ರಂಬ್ ಆಗಿದೀರಾ? ಈ ಎಂಟು ಲಕ್ಷಣಗಳನ್ನು ಗಮನಿಸಿ!
ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಘಟನೆ ನಡೆದಿದೆ. ಆಕೆಯ ಉಪನಾಮ ಲೀ. ಆಕೆ ಮನೆಗೆ ಡ್ರಾಪ್ ಮಾಡಿದ್ದ ಕ್ಯಾಬ್ ಡ್ರೈವರ್ ಪ್ರೀತಿಗೆ ಬಿದ್ದಿದ್ದಾಳೆ. ಶೀಘ್ರದಲ್ಲೇ ಇಬ್ಬರ ಮಧ್ಯೆ ಸಂಬಂಧ ಬೆಳೆದಿದೆ. ಹುಡುಗಿ ಆತನನ್ನು ಎಷ್ಟು ನಂಬಿದ್ದಳು ಅಂದ್ರೆ ಇಬ್ಬರ ಹೆಸರಿನಲ್ಲಿ ಜಂಟಿ ಖಾತೆ ತೆರೆದು ಅಲ್ಲಿಗೆ ತನ್ನೆಲ್ಲ ಸೇವಿಂಗ್ಸ್ ಹಾಕ್ತಿದ್ದಳು. ಆದ್ರೆ ಪ್ರೀತಿ ನಾಟಕವಾಡ್ತಿದ್ದ ಹುಡುಗ ಮಾತ್ರ ಲೀಗೆ ಮೋಸ ಮಾಡಿದ್ದಾನೆ. ಪ್ರೀತಿಯೂ ಇಲ್ಲ ಹಣವೂ ಇಲ್ಲ ಎಂಬ ಸ್ಥಿತಿ ಮಾತ್ರವಲ್ಲ ನೋವು ತಿನ್ನುವ ಪರಿಸ್ಥಿತಿಯನ್ನು ಲೀ ಎದುರಿಸಿದ್ದಾಳೆ.
2೦19ರಲ್ಲಿ ಲೀ, ಕಾರಿನಲ್ಲಿ ತನ್ನ ಮನೆಗೆ ಬಂದಿದ್ದಾಳೆ. ಆ ಸಮಯದಲ್ಲಿ ಕಾರ್ ಡ್ರೈವರ್ ಆಕೆಗೆ ಇಷ್ಟವಾಗಿದ್ದಾನೆ. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದೆ. 2021ರಲ್ಲಿ ಇಬ್ಬರೂ ರಿಲೇಶನ್ಶಿಪ್ ಗೆ ಬಂದಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಎನ್ನುವ ಲೀ, ಒಂದು ದಿನ ಕಣ್ಣನ ಬಣ್ಣ ತಿಳಿದಿದ್ದಾಳೆ. ಬೇರೆ ಮಹಿಳೆ ಜೊತೆ ಪತಿ ಇರುವುದು ಲೀ ಕಣ್ಣಿಗೆ ಬಿದ್ದಿದೆ. ತಕ್ಷಣ ಆಕೆ ಈ ಮೋಸದ ಸಂಬಂಧದಿಂದ ಹೊರಬರುವ ನಿರ್ಧಾರಕ್ಕೆ ಬಂದಿದ್ದಾಳೆ. ಆದ್ರೆ ಆಗ ನಡೆದ ಘಟನೆ ಲೀಗೆ ಮತ್ತಷ್ಟು ನೋವು, ತೊಂದರೆ ನೀಡಿದೆ.
ಬ್ಯಾಚುಲರ್ ಲೈಫ್ ಓಕೆ.. ಇಂತಹ ಹುಡುಗಿಯನ್ನು ಮದುವೆಯಾಗಬೇಡಿ
ಲೀ ಪ್ರೀತಿ ಗುಂಗಿನಲ್ಲಿ ಚಾಲಕನನ್ನು ಅತಿಯಾಗಿ ನಂಬಿದ್ದಳು. ಜಂಟಿ ಖಾತೆ ತೆರೆದು ಹಣವನ್ನು ಅಲ್ಲಿ ಹಾಕಿದ್ದಲ್ಲದೆ ಸಂಗಾತಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾಳೆ. ಸಂಬಂಧ ಮುರಿದು ಬಿದ್ಮೇಲೆ ಹಣ ವಾಪಸ್ ಕೇಳಲು ಹೋಗಿದ್ದಾಳೆ. ಲೀ, ತನ್ನ ಪ್ರೇಮಿಗೆ ನೀಡಿದ್ದು ಕಡಿಮೆ ಹಣ, ಉಡುಗೊರೆಯಲ್ಲಿ. ಬರೋಬ್ಬರಿ 45 ಲಕ್ಷದ್ದು. ಈ ಹಣವನ್ನು ವಾಪಸ್ ನೀಡುವಂತೆ ಲೀ ಕೇಳ್ತಿದ್ದಂತೆ ಕೋಪಗೊಂಡ ಆಕೆ ಬಾಯ್ ಫ್ರೆಂಡ್ ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ. ಇದ್ರಿಂದ ಲೀ ಮೂರ್ಛೆ ಹೋಗಿದ್ದಳು. ಬಾಯ್ ಫ್ರೆಂಡ್ ಮೋಸವನ್ನು ಲೀ ಹಂಚಿಕೊಳ್ತಿದ್ದಂತೆ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. 53 ಲಕ್ಷಕ್ಕೂ ಹೆಚ್ಚು ಬಾರಿ ಈ ಪೋಸ್ಟ್ ವೀಕ್ಷಿಸಲಾಗಿದೆ.