ನಿಮ್ಮ ಯಾವುದೇ ಸಂಬಂಧದಲ್ಲಿ ನೀವು ಬ್ರೆಡ್- ಕ್ರಂಬ್ ಆಗಿರಬಹುದು ಎಂಬ ಅನುಮಾನ ನಿಮಗಿದೆಯಾ? ಈ ಚಿಹ್ನೆಗಳು ಇವೆಯಾ ಗುರುತಿಸಿ ನೋಡಿ. ಆಮೇಲೆ ಈ ಬಗ್ಗೆ ವಿವೇಕದ ನಿರ್ಧಾರವನ್ನು ತೆಗೆದುಕೊಳ್ಳಿ. ಆ ಎಂಟು ಪ್ರಮುಖ ಚಿಹ್ನೆಗಳು ಇಲ್ಲಿವೆ.
ಬ್ರೆಡ್-ಕ್ರಂಬಿಂಗ್ ಅನ್ನೋದು ನಿಮಗೆ ಹೊಸ ಪದ ಆಗಿರಬಹುದು. ಹಾಗೆಂದರೆ ಗೆಳೆತನ ಅಥವಾ ಸ್ನೇಹದ ನಡುವೆ ಉಂಟಾಗುವ ಒಂದು ಸ್ಥಿತಿ. ಇಂಥ ಸಂಬಂಧಗಳಲ್ಲಿ ನೀವು ಭಾವನಾತ್ಮಕವಾಗಿ ಬರಿದಾಗುತ್ತೀರಿ ಮತ್ತು ಅತೃಪ್ತಿಯನ್ನು ಅನುಭವಿಸುತ್ತೀರಿ. ಸಂಬಂಧದಲ್ಲಿ ನೀವು ಸಂಗಾತಿ ಅಥವಾ ಗೆಳೆಯ/ತಿಗೆ ಪ್ರೀತಿ- ಗಮನ ನೀಡುತ್ತಲೇ ಇರುತ್ತೀರಿ. ಆದರೆ ಅವರು ನಿಮಗೆ ಅದನ್ನು ಮರಳಿಸುವುದಿಲ್ಲ. ಇದೇ ಬ್ರೆಡ್ ಕ್ರಂಬಿಂಗ್. ನಿಮ್ಮ ಯಾವುದೇ ಸಂಬಂಧದಲ್ಲಿ ನೀವು ಬ್ರೆಡ್- ಕ್ರಂಬ್ ಆಗಿರಬಹುದು ಎಂಬ ಅನುಮಾನ ನಿಮಗಿದೆಯಾ? ಈ ಚಿಹ್ನೆಗಳು ಇವೆಯಾ ಗುರುತಿಸಿ ನೋಡಿ. ಆಮೇಲೆ ಈ ಬಗ್ಗೆ ವಿವೇಕದ ನಿರ್ಧಾರವನ್ನು ತೆಗೆದುಕೊಳ್ಳಿ. ಆ ಎಂಟು ಪ್ರಮುಖ ಚಿಹ್ನೆಗಳು ಇಲ್ಲಿವೆ:
1; ಬದ್ಧತೆ (No Committment) ಇಲ್ಲದೆ ಆಸಕ್ತಿ ತೋರಿಸುವುದು
ಯಾರಾದರೂ ನಿಮ್ಮ ಯೋಜನೆಗಳಲ್ಲಿ ಸತತವಾಗಿ ಆಸಕ್ತಿಯನ್ನು ತೋರಿಸುತ್ತಾರೆ, ಆದರೆ ಅದರಲ್ಲಿ ಯಾವುದೇ ಬದ್ಧತೆ ತೋರಿಸಲು ವಿಫಲರಾಗುತ್ತಾರೆ ಎಂದಿದ್ದರೆ ಅದು ನೀವು ಬ್ರೆಡ್ ಕ್ರಂಬ್ಡ್ ಆಗಿರುವ ಸ್ಪಷ್ಟ ಸಂಕೇತ. ಅವರು ಭವಿಷ್ಯದ ಪ್ರವಾಸಗಳು ಅಥವಾ ಚಟುವಟಿಕೆಗಳನ್ನು ಉತ್ಸಾಹದಿಂದ ಚರ್ಚಿಸಬಹುದು. ಆದರೆ ಯಾವುದೇ ಯೋಜನೆಯನ್ನು ಗಟ್ಟಿಗೊಳಿಸುವುದಿಲ್ಲ. ಈ ನಡವಳಿಕೆ ನಿಮಗೆ ಭರವಸೆಯ ಭಾವನೆಯನ್ನು ಹುಟ್ಟಿಸಬಹುದು, ಆದರೆ ಅಂತಿಮವಾಗಿ ನಿಮಗೆ ನಿರಾಶೆ ಉಂಟಾಗುತ್ತದೆ.
2. ಮಿಶ್ರ ಸಂಕೇತಗಳು ಮತ್ತು ಗೊಂದಲ
ಬ್ರೆಡ್ ಕ್ರಂಬಿಂಗ್ ಸಾಮಾನ್ಯವಾಗಿ ಮಿಶ್ರ ಸಂಕೇತಗಳನ್ನು ಕಳುಹಿಸುತ್ತದೆ. ಅದು ಇತರ ವ್ಯಕ್ತಿಯ ನಿಜವಾದ ಉದ್ದೇಶಗಳ ಬಗ್ಗೆ ನಿಮಗೆ ಗೊಂದಲವನ್ನುಂಟು ಮಾಡುತ್ತದೆ. ಅವರ ನಡವಳಿಕೆಯಲ್ಲಿ ನಿಮಗೆ ಪ್ರಾಮಾಣಿಕತೆ ಕಾಣಸಿಗಲಿಕ್ಕಿಲ್ಲ. ಉದಾಸೀನತೆ ಗಮನಿಸಬಹುದು. ಆದರೂ ಕೆಲವೊಮ್ಮೆ ಆಸಕ್ತಿ ಇದೆ ಎಂದು ತೋರಿಸಿಕೊಳ್ಳಬಹುದು. ಇದು ಸಂಬಂಧವನ್ನು ಅರ್ಥಮಾಡಿಕೊಳ್ಳಲು ಕಷ್ಟ ಮಾಡುತ್ತದೆ.
3. ಫಾಲೋ ಅಪ್ ಕೊರತೆ
ಅವರು ಆಸಕ್ತಿಯನ್ನು ಸಣ್ಣದಾಗಿ ಪ್ರದರ್ಶಿಸಬಹುದು. ಅಭಿನಂದನೆ, ಫ್ಲರ್ಟಿಂಗ್ ಸಂದೇಶಗಳು ಅಥವಾ ಪ್ರೀತಿಯ ಸನ್ನೆಗಳನ್ನು ಸುರಿಸುತ್ತಿರಬಹುದು. ಆದರೂ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮುಂದುವರಿಯುವುದಿಲ್ಲ. ಈ ವಿಷಯದಲ್ಲಿ ಅವರು ಸತತವಾಗಿ ಹಿನ್ನಡೆಯುತ್ತಾರೆ.
4. ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸುವುದು
ಅವರು ನಿಮ್ಮ ಸಂದೇಶಗಳು ಅಥವಾ ಕರೆಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನಿರ್ಲಕ್ಷಿಸುವುದು ಅಥವಾ ವಿಳಂಬಗೊಳಿಸುವುದು ಬ್ರೆಡ್‌ಕ್ರಂಬ್ಡ್ ಆಗುವ ಅತ್ಯಂತ ನಿರಾಶಾದಾಯಕ ಚಿಹ್ನೆಗಳಲ್ಲಿ ಒಂದು. ಈ ನಡವಳಿಕೆಯು ನಿಮ್ಮ ಭಾವನೆಗಳಿಗೆ ಪರಿಗಣನೆಯ ಕೊರತೆ ಮತ್ತು ಸಂಬಂಧದಲ್ಲಿ ಹೂಡಿಕೆಯ ಕೊರತೆಯನ್ನು ತೋರಿಸುತ್ತದೆ.
5. ಪ್ರಯತ್ನದ ಕೊರತೆ
ಗಂಭೀರವಾಗಿಲ್ಲದ ವ್ಯಕ್ತಿಗಳು ಸಾಮಾನ್ಯವಾಗಿ ನಿಜವಾದ ಸಂಬಂಧ ನಿರ್ಮಿಸುವಲ್ಲಿ ಪ್ರಯತ್ನ ಮಾಡುವುದಿಲ್ಲ. ಅವರು ತಮ್ಮ ಸ್ವಂತ ಅಗತ್ಯಗಳು ಮತ್ತು ಆಸೆಗಳಿಗೆ ಆದ್ಯತೆ ನೀಡಬಹುದು. ಇದು ನಿಮ್ಮಲ್ಲಿ ಭಾವನಾತ್ಮಕವಾಗಿ ಬರಿದಾದ ಭಾವನೆಯನ್ನು ಸೃಷ್ಟಿಸಬಹುದು.
6. ಹಲವು ಆಯ್ಕೆಗಳ ನಾಜೂಕಯ್ಯ
ಬ್ರೆಡ್ ಕ್ರಂಬ್ ಮಾಡುವವರು ಅನೇಕ ಜನರೊಂದಿಗೆ ಏಕಕಾಲದಲ್ಲಿ ಸಂಪರ್ಕವನ್ನು ನಿರ್ವಹಿಸುತ್ತಾರೆ. ಆದರೆ ಯಾರಿಗೂ ಪೂರ್ಣವಾಗಿ ಕಮಿಟ್ ಆಗುವುದಿಲ್ಲ. ಹಾಗೆ ಮಾಡುವ ಮೂಲಕ, ಅವರು ಯಾವಾಗ ಎಲ್ಲಿಗೆ ಬೇಕಾದರೂ ಜಿಗಿಯಲು ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳುತ್ತಾರೆ. ಯಾವುದೇ ಒಬ್ಬ ವ್ಯಕ್ತಿಗೆ ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದಿಲ್ಲ. ಈ ನಡವಳಿಕೆಯು ಆಳವಾದ ಸಂಪರ್ಕದ ಬೆಳವಣಿಗೆಯನ್ನು ತಡೆಯುತ್ತದೆ.
ಬ್ಯಾಚುಲರ್ ಲೈಫ್ ಓಕೆ.. ಇಂತಹ ಹುಡುಗಿಯನ್ನು ಮದುವೆಯಾಗಬೇಡಿ
7. ಸಂಬಂಧವನ್ನು ವ್ಯಾಖ್ಯಾನಿಸಲು ಇಷ್ಟವಿಲ್ಲದಿರುವುದು
ಬ್ರೆಡ್ ಕ್ರಂಬ್ಸ್ ಮಾಡುವವರು ನಿಮ್ಮ ನಡುವಿನ ಸಂಬಂಧವನ್ನು ವ್ಯಾಖ್ಯಾನಿಸುವುದನ್ನು ಅಥವಾ ಚರ್ಚಿಸುವುದನ್ನು ತಪ್ಪಿಸುತ್ತಾರೆ. ಅವರು ಬದ್ಧತೆಯ ಬಗ್ಗೆ ಸಂಭಾಷಣೆಗಳಿಂದ ದೂರ ಸರಿಯಬಹುದು. ನಿಮ್ಮನ್ನು ಅನಿಶ್ಚಿತತೆ ಮತ್ತು ಗೊಂದಲದ ಸ್ಥಿತಿಯಲ್ಲಿ ಬಿಡಬಹುದು.
8. ಕಾಳಜಿ ಮತ್ತು ಆಸಕ್ತಿಯ ಭ್ರಮೆ
ಅವರು ತಮ್ಮ ಮಾತುಗಳು ಮತ್ತು ಕ್ರಿಯೆಗಳ ಮೂಲಕ ಕಾಳಜಿ ಮತ್ತು ಆಸಕ್ತಿಯ ಭ್ರಮೆಯನ್ನು ಹುಟ್ಟಿಸುವಲ್ಲಿ ಮಾಸ್ಟರ್ಸ್ ಆಗಿರುತ್ತಾರೆ. ಮುಖ್ಯವಾದ ಸಂಭಾಷಣೆಗಳಿಗೆ ಅಥವಾ ಆಳವಾದ ಭಾವನಾತ್ಮಕ ಅಗತ್ಯಗಳನ್ನು ತಿಳಿಸುವ ಅಗತ್ಯ ಬಂದಾಗ, ಅವರು ಯಾವುದೇ ಅರ್ಥಪೂರ್ಣ ಚರ್ಚೆಯನ್ನು ತಪ್ಪಿಸಿ ಬಾಹ್ಯ ಉತ್ತರಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ.
ಹಾಗಿದ್ದರೆ ಇದಕ್ಕೆ ಪರಿಹಾರವೇನು? ಇಂಥ ಸಂಬಂಧಗಳಲ್ಲಿ ಬದ್ಧತೆಯನ್ನು ಪೂರ್ಣವಾಗಿ ನೀವು ಇಂಥವರ ಮೇಲೆ ಬಿಡಬಾರದು. ಮುಖ್ಯವಾದ ಕೆಲಸಗಳಿಗೆ ಪೂರ್ತಿಯಾಗಿ ಇವರನ್ನು ನೆಚ್ಚಲೂಬಾರದು. ನಿಜವಾದ ಕಾಳಜಿ ಮತ್ತು ಬದ್ಧತೆಯನ್ನು ನೀಡುವ ಸಂಬಂಧಗಳನ್ನು ನೀವು ಹುಡುಕಬಹುದು.
ಫಿನ್ಲೆಂಡಿನ ಜನ ಅಷ್ಟೊಂದು ಸಂತೋಷವಾಗಿರೋಕೆ ಇಲ್ಲಿದೆ 5 ಕಾರಣ, ನೀವೂ ಹಾಗಿರಬಹುದು!