ನಿಮ್ಮ ಸಂಗಾತಿಗೆ ಎಂದಿಗೂ ಈ ಏಳು ಶಬ್ದಗಳು ಹೇಳಬೇಡಿ..! ಸುಖ ಸಂಸಾರಕ್ಕೆ ನಿಷಿದ್ಧ ಪದಗಳಿವು...

By Suchethana D  |  First Published Oct 29, 2024, 5:39 PM IST

ಬದುಕಿನ ಬಂಡಿ ಸುಗಮವಾಗಿ, ನೆಮ್ಮದಿಯಿಂದ ನಡೆದುಕೊಂಡು ಹೋಗಬೇಕು ಎಂದರೆ, ದಾಂಪತ್ಯ ಜೀವನದಲ್ಲಿ ಈ ಏಳು ಶಬ್ದಗಳು ಎಂದಿಗೂ ಬಾರದಿರಲಿ. ಯಾವವು? 
 


ದಾಂಪತ್ಯ ಎನ್ನುವುದು ವಾಹನದ ಎರಡು ಚಕ್ರಗಳು ಇದ್ದಂತೆ. ಒಂದು ಚಕ್ರದಲ್ಲಿ ತೊಂದರೆಯಾದರೂ, ಒಂದು ಚಕ್ರ ತೊಂದರೆ ಕೊಟ್ಟರೂ ಗಾಡಿ ಚಲಿಸಲ್ಲ. ರಸ್ತೆಯ ಮೇಲೆ ಹೀಗೆ ಆದರೆ ಆಗ ಅಪಘಾತ ಸಂಭವಿಸುತ್ತದೆ ಎನ್ನುವ ಮಾತಿದೆ. ದಂಪತಿಗಳ ನಡುವೆ ಜಗಳ, ಮನಸ್ತಾಪಗಳು ಬರುವುದು ಸರ್ವೇ ಸಾಮಾನ್ಯ. ಆದರೆ ಇದು ಹೆಚ್ಚಾಗಲು ಕಾರಣ,  ಪ್ರೀತಿಗಿಂತ ಜಾಸ್ತಿ ಅಹಂ ಬಂದಾಗ. ಗಂಡ ಅಥವಾ ಹೆಂಡತಿಗೆ ಅಹಂ ಹೆಚ್ಚಾದಾಗ ಪ್ರೀತಿಯ ಜಾಗವನ್ನು ಕ್ರಮೇಣವಾಗಿ ಕ್ರೋಧ, ಹಿಂಸೆ ಹಾಗೂ ಸ್ವಯಂ ಪ್ರತಿಷ್ಠೆಗಳು ಆವರಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ, ಆರೋಗ್ಯಕರ ವೈವಾಹಿಕ ಸಂಬಂಧವು ನಂಬಿಕೆ ಮತ್ತು ಪಾರದರ್ಶಕತೆಯ ಸೂಕ್ಷ್ಮ ದಾರದ ಮೇಲೆ ನಿಂತಿರುತ್ತದೆ.  ಕೆಲವೊಮ್ಮೆ ತಮಾಷೆ ಮಾಡಲು ಹೋಗಿ ಅದು ಇನ್ನೊಬ್ಬರನ್ನು ಅಪಹಾಸ್ಯ ಮಾಡಿದಂತೆ ಆಗಬಹುದು. ಆದ್ದರಿಂದ ಆರೋಗ್ಯಕರ ಹಾಸ್ಯ ಮತ್ತು ಅಸಭ್ಯ ಕಮೆಂಟ್‌ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವು ಹಾನಿಕಾರಕ ಶಬ್ದಗಳನ್ನು ತಪ್ಪಿಸುವ ಮೂಲಕ ಮತ್ತು ರಚನಾತ್ಮಕ ಟೀಕೆ ಮಾಡುವ ಮೂಲಕ  ಉತ್ತಮ ಬಂಧ ಬೆಳೆಯುತ್ತದೆ.
 
ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗಬೇಕು ಎಂದರೆ ಈ ಏಳು ಶಬ್ದಗಳು ದಂಪತಿ ನಡುವೆ ಬರಲೇಬಾರದು. ಸಾಂಸಾರಿಕ ಜೀವನವನ್ನು ಹಾಳು ಮಾಡುವ ಆ ಏಳು ಶಬ್ದಗಳು ಯಾವುವು ಎಂದು ಇಲ್ಲಿ ತಿಳಿಸಲಾಗಿದೆ. 
1. ಐ ಡೋಂಟ್​ ಕೇರ್​
"ಐ ಡೋಂಟ್ ಕೇರ್" ಎಂದು ಹೇಳುವುದು ಸರ್ವೇ ಸಾಮಾನ್ಯ. ಆದರೆ ಈ ಶಬ್ದ ಹಲವು ಸಂದರ್ಭಗಳಲ್ಲಿ ಪರಸ್ಪರ  ಅಗೌರವದಂತೆ ಕಾಣಬಹುದು. ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಒಪ್ಪದಿದ್ದರೂ, ಕೆಲವೊಮ್ಮೆ ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಪ್ರಸಂಗ ಬರಬಹುದು. ಆಗ ಐ ಡೋಂಟ್​ ಕೇರ್​ ಎನ್ನುವ ಬದಲು ಅದನ್ನೇ ಬೇರೆಯ ರೀತಿಯಲ್ಲಿ,  'ಇದು ನಿಮಗೆ ಮುಖ್ಯವಾಗಿದೆ ಎನಿಸುತ್ತದೆ. ನಾನೂ ನಿಮ್ಮ  ದೃಷ್ಟಿಕೋನದಲ್ಲಿಯೇ ಅರ್ಥ ಮಾಡಿಕೊಳ್ಳಲು ಬಯಸುತ್ತೇನೆ...' ಹೀಗೆ ಹೇಳುವ ಮೂಲಕ ನಿಮಗೆ ಅದು ಇಷ್ಟವಿಲ್ಲವೆಂದೂ, ನೀವು ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಿರುವಿರಿ ಎಂದೂ ತಿಳಿಸುತ್ತದೆ. 

ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್​- ತರುಣ್​ ಹೇಳಿದ್ದೇನು ಕೇಳಿ...

Tap to resize

Latest Videos

undefined

2. ಇದು ನಿಮ್ಮ ತಪ್ಪು, ಯಾವಾಗಲೂ ನಿಮ್ಮದೇ ತಪ್ಪು

ಕೆಲವೊಮ್ಮೆ ಪತಿ-ಪತ್ನಿ ನಡುವೆ ಜಗಳ ಬಂದಾಗ ಅಥವಾ ಏನೋ ಒಂದು ವಿಷಯದಲ್ಲಿ, ಮಾಡಿಕೊಂಡ ಆಯ್ಕೆಗಳಲ್ಲಿ ತಪ್ಪು ಸಂಭವಿಸಿದಾಗ ನಿನ್ನದೇ ತಪ್ಪು ಎಂದು ಒಬ್ಬರ ಮೇಲೆ ಒಬ್ಬರು ಬೊಟ್ಟು ಮಾಡಿ ತೋರಿಸುವುದು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಇದು ನಡೆಯದೇ ಹೋಗಿರಬಹುದು, ಅಥವಾ ಯಾರಿಗೋ ಒಳ್ಳೆಯದ್ದನ್ನು ಮಾಡಲು ಹೋಗಿ ಘಟಿಸಿರಬಹುದು. ಆದ್ದರಿಂದ  ದೂಷಿಸುವುದು ಯಾವಾಗಲೂ ಸಹಾಯ ಮಾಡುವುದಿಲ್ಲ.  ಆರೋಗ್ಯಕರ ಸಂಬಂಧದಲ್ಲಿ ಅನಗತ್ಯ ತಡೆಗೋಡೆಯನ್ನು ಈ ಪದಗಳು ಸೃಷ್ಟಿಸುತ್ತವೆ. 

3. ನಾನು ನಿಮಗೆ ಮೊದಲೇ ಹೇಳಿದ್ದೆ...
ಈ ಶಬ್ದಗಳು ಬರುವುದು ಸಾಮಾನ್ಯವಾಗಿ ಮಾಡಿದ ಕೆಲಸದಲ್ಲಿ ಎಡವಟ್ಟು ಆದಾಗ. ಒಬ್ಬರು ಎಚ್ಚರಿಸಿದ್ದರೂ, ಅವರು ಯಾವುದೋ ಕಾರಣಕ್ಕೆ ಅದನ್ನೇ ಮಾಡಿ ಸೋತಾಗ ಈ ಮಾತು ಆಡುವುದುದ ಸಾಮಾನ್ಯ. ಆದರೆ ಏನೋ ಎಡವಟ್ಟು ಆದಾಗ, ಸಂಗಾತಿ ಬೇಸರದಲ್ಲಿ ಇದ್ದಾಗ ಬೆಂಕಿಗೆ ತುಪ್ಪ ಸುರಿದಂತೆ ಈ ಮಾತು ಆಡುವುದು ಸರಿಯಲ್ಲ.  ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅದನ್ನು ಸರಿಯಾಗಿ ಚರ್ಚಿಸೋಣ ಎನ್ನುವಂಥ ಮಾತು ಇಬ್ಬರ ನಡುವೆ ಪ್ರೀತಿ ಹೆಚ್ಚಿಸುತ್ತದೆ. 

4. ನೀವು ಯಾವಾಗಲೂ ಈಡಿಯಟ್ಟೇ
ಸಂಗಾತಿ ಮಾಡಿದ ಕೆಲಸಗಳು ಪದೇ ಪದೇ ಎಡವಟ್ಟು ಆಗುತ್ತಿದ್ದರೆ ಈಡಿಯಟ್​ ಎನ್ನುವ ಮೂಲಕ ಅವರನ್ನು ಅಪಮಾನಿಸುವುದು ಸರಿಯಲ್ಲ. ನಾಳೆ ನಿಮಗೂ ಇದೇ ರೀತಿ ಆಗಬಹುದು. ಆದ್ದರಿಂದ ಏನಾದರೂ ತಪ್ಪಾದ ಸಮಯದಲ್ಲಿ ಕಟುವಾದ ಮಾತುಗಳು ದ್ವೇಷವಾಗಿ ಪರಿವರ್ತನೆಗೊಳ್ಳುತ್ತದೆ.
 
5. ಡಿವೋರ್ಸ್​ ಕೊಡ್ತೇನೆ

ಡಿವೋರ್ಸ್​ ಶಬ್ದವನ್ನು ಪದೇ  ಪದೇ ಹೇಳುವ ಮೂಲಕ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಇಬ್ಬರ ನಡುವೆ ಏನಾದರೂ ಎಡವಟ್ಟು ಆದಾಗ, ಜಗಳ ಪದೇ ಪದೇ ಆದಾಗ ವಿಚ್ಛೇದನ ಪಡೆದುಕೊಳ್ಳುವ ಮಾತು ಬರುವುದು ಸರಿಯಲ್ಲ. ಅದರ ಬದಲು ಸಮಸ್ಯೆ ಹೇಗೆ ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ಯೋಚಿಸಬೇಕು.
 
6. ಮಾಜಿ ಪ್ರೇಮಿಗಳನ್ನು ಹೋಲಿಸುವುದು
ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸುವುದು ಎಷ್ಟು ತಪ್ಪೋ, ಸಂಗಾತಿಯನ್ನು ನಿಮ್ಮ ಮಾಜಿ ಪ್ರೇಮಿಗಳಿಗೆ ಅಥವಾ ಅಕ್ಕ-ಪಕ್ಕದ ಮನೆಯವರ ಜೊತೆ ಹೋಲಿಕೆ ಮಾಡುವುದು ಸಂಬಂಧ ಮುರಿದುಕೊಂಡಂತೆ, ಇದು ದಾಂಪತ್ಯ ಜೀವನದ ವಿನಾಶಕ್ಕೆ ಮುಕ್ತ ಆಹ್ವಾನ ನೀಡಿದಂತೆ. ಆದ್ದರಿಂದ ಮಾತು ಆಡಿದ ಮೇಲೆ ಮುಗಿಯಿತು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.  

7. ನಾನು ನಿನ್ನನ್ನು ಎಂದಿಗೂ ಪ್ರೀತಿಸಲಿಲ್ಲ
ಲವರ್ಸ್​ ಆಗಿದ್ದಾರೆ ಅದೆಷ್ಟು ಬಾರಿ ‘ಐ ಲವ್ ಯೂ’ ಹೇಳಿರುತ್ತಾರೋ ಗೊತ್ತಿಲ್ಲ.  ಆದರೆ ಮದುವೆಯಾದ ಮೇಲೆ ಪತಿ-ಪತ್ನಿ ಈ ಶಬ್ದ ಬಳಸುವುದು ಅತಿ ವಿರಳ. ಆದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಆಗಬೇಕು ಎಂದರೆ ಈ ಶಬ್ದ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದು  ಧೈರ್ಯ ಮತ್ತು ಸಮಾಧಾನವನ್ನು ನೀಡುತ್ತದೆ. ಏನೋ ಜಗಳವಾದಾಗ, ಅಕಸ್ಮಾತ್ತಾಗಿ 'ನಾನು ನಿನ್ನನ್ನು ಎಂದಿಗೂ ಪ್ರೀತಿಸಲಿಲ್ಲ' ಎಂದು ನುಡಿದು ಬಿಟ್ಟರೆ,  ಸಮಸ್ಯೆಗಳು ಅಲ್ಲಿಂದಲೇ ಶುರುವಾಗುತ್ತದೆ. 

ಅಮೃತಧಾರೆ ಗೌತಮ್​ ದಿವಾನ್​ ರಿಯಲ್​ ಮನೆ 'ಮ Na' ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ...

click me!