ಮತ್ತೊಂದು ಗಡಿ ದಾಟಿದ ಲವ್ ಸ್ಟೋರಿ, ಶ್ರೀಲಂಕಾದಿಂದ ಬಂದು ಆಂಧ್ರದ ಯುವಕನನ್ನು ವರಿಸಿದ ಯುವತಿ!

By Vinutha Perla  |  First Published Jul 30, 2023, 10:17 AM IST

ದೇಶ-ವಿದೇಶಗಳ ನಡುವಿನ ಲವ್‌ಸ್ಟೋರಿಗಳು ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿವೆ. ಪ್ರೀತಿಸಿದವನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌, ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ಅಂಜು ವಿಚಾರ ಈಗಾಗ್ಲೇ ಸುದ್ದಿಯಾಗಿದೆ. ಇದೆಲ್ಲದರ ಮಧ್ಯೆ, ಸದ್ಯ ಶ್ರೀಲಂಕಾದ ಹುಡುಗಿಯೊಬ್ಬಳು ಆಂಧ್ರ ಪ್ರದೇಶದ ಯುವಕನನ್ನು ವರಿಸಿರುವ ಘಟನೆ ಬೆಳಕಿಗೆ ಬಂದಿದೆ.


ಚಿತ್ತೂರು: ಪ್ರೀತಿಗೆ ಜಾತಿ-ಧರ್ಮ, ವಯಸ್ಸು-ಲಿಂಗ, ರಾಜ್ಯ-ದೇಶ ಯಾವುದೂ ಅಡ್ಡಿಯಾಗಲ್ಲ. ಅದು ಅಕ್ಷರಶಃ ನಿಜ ಎಂಬುದು ಹಲವು ಘಟನೆಗಳಿಂದ ಸಾಬೀತಾಗಿದೆ. ದೇಶ-ವಿದೇಶಗಳ ನಡುವಿನ ಲವ್‌ಸ್ಟೋರಿಗಳು ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿವೆ. ಪ್ರೀತಿಸಿದವನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌, ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ಅಂಜು ವಿಚಾರ ಈಗಾಗ್ಲೇ ಸುದ್ದಿಯಾಗಿದೆ. ಇದೆಲ್ಲದರ ಮಧ್ಯೆ, ಸದ್ಯ ಶ್ರೀಲಂಕಾದ ಹುಡುಗಿಯೊಬ್ಬಳು ಆಂಧ್ರ ಪ್ರದೇಶದ ಯುವಕನನ್ನು ವರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಚಿತ್ತೂರು ಜಿಲ್ಲೆಯ ವಿ.ಕೋಟ ಮಂಡಲದ ಅರಿಮಾಕುಲಪಲ್ಲೆ ಗ್ರಾಮದ ನಿವಾಸಿಯಾಗಿರುವ ಲಕ್ಷ್ಮಣ್ ಎಂಬ ಯುವಕನಿಗೆ ಶ್ರೀಲಂಕಾದ ಬೆಳಂಗುಡು ಪ್ರದೇಶದ ವಿಘ್ನೇಶ್ವರಿಕಿ ಎಂಬ ಯುವತಿಯೊಂದಿಗೆ ಫೇಸ್ ಬುಕ್​​ನಲ್ಲಿ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹವಾಗಿ (Friendship) ಕ್ರಮೇಣ ಇದು ಪ್ರೀತಿಗೆ (Love) ತಿರುಗಿತ್ತು. ಈ ಜೋಡಿಯು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೇ ತಿಂಗಳ 8ರಂದು ವಿಘ್ನೇಶ್ವರಿಯು ಪ್ರವಾಸಿ ವೀಸಾ ಪಡೆದುಕೊಂಡು ಚೆನ್ನೈಗೆ ಆಗಮಿಸಿದ್ದಾಳೆ. ಮೇಸ್ತ್ರಿಯಾಗಿ (Marriage) ಜೀವನ ಸಾಗಿಸುತ್ತಿರುವ ಲಕ್ಷ್ಮಣ್, ಅವಳನ್ನು ಆತ್ಮೀಯವಾಗಿ ಸ್ವಾಗತಿಸಿ ತನ್ನ ಮನೆಗೆ ಕರೆತಂದರು.

Latest Videos

undefined

ಅಮ್ಮನಿಗೆ ಕಾಯುತ್ತಿದ್ದ ಮಕ್ಕಳು ತಬ್ಬಲಿ, ಇಸ್ಲಾಂಗೆ ಮತಾಂತರವಾಗಿ ಪಾಕ್‌ನ ನಾಸ್ರುಲ್ಲಾ ಮದ್ವೆಯಾದ ಅಂಜು!

ಲಕ್ಷ್ಮಣ್‌-ವಿಘ್ನೇಶ್ವರಿಕಿ ಜುಲೈ 20ರಂದು ವೆಂಕಟಗಿರಿಕೋಟಾದ ಸಾಯಿಬಾಬಾ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಜಿಲ್ಲಾಧಿಕಾರಿಗಳು ಮೂರು ದಿನಗಳ ಹಿಂದೆ ದಂಪತಿ (Couple)ಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಮಾತ್ರವಲ್ಲ, ಪೊಲೀಸ್ ವರಿಷ್ಠಾಧಿಕಾರಿ ವೈ.ರಿಶಾಂತ್ ರೆಡ್ಡಿ, ಈ ದಂಪತಿಯನ್ನು ಭೇಟಿಯಾಗಿ (Meet) ಆಕೆಗೆ ಪ್ರವಾಸಿ ವೀಸಾ ಅವಧಿ ಮುಗಿಯುವ ಆಗಸ್ಟ್ 6ರೊಳಗೆ ಶ್ರೀಲಂಕಾಕ್ಕೆ ಮರಳಬೇಕು ಎಂದು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಸೀಮಾ ಹೈದರ್​ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಅದರಂತೆ ಭಾರತ ಮೂಲದ ಅಂಜು ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ನಸ್ರುಲ್ಲಾ ಎಂಬ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತೆರಳಿ ಮತಾಂತರಗೊಂಡು ಮದುವೆಯಾಗಿದ್ದರು.

ಶಿವಲಿಂಗವನ್ನೇ ವರಿಸಿದ ಯುವತಿ, ಶಾಸ್ತ್ರಬದ್ಧವಾಗಿ ನಡೀತು ಅದ್ಧೂರಿ ವಿವಾಹ

ಫಾತಿಮಾ ಆಗಿ ಮತಾಂತರಗೊಂಡ ಭಾರತೀಯ ಮೂಲದ ಅಂಜು
ಫೇಸ್‌ಬುಕ್‌ ಗೆಳೆಯನ ಸಲುವಾಗಿ ಪತಿಯನ್ನು ತೊರೆದು ಪಾಕಿಸ್ತಾನ ಸೇರಿರುವ ಭಾರತೀಯ ಮೂಲದ ಅಂಜು ಈಗ ಫಾತಿಮಾ ಆಗಿ ಮತಾಂತರಗೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಪಾಕಿಸ್ತಾನಿ ಗೆಳೆಯ ನಸ್ರುಲ್ಲಾನನ್ನು ಭೇಟಿಯಾಗುವ ಸಲುವಾಗಿ ಭಾರತೀಯ ಮಹಿಳೆ ಅಂಜು ತನ್ನ ಪತಿಯನ್ನು ರಾಜಸ್ಥಾನದ ಅಲ್ವಾರ್‌ನಲ್ಲಿಯೇ ಬಿಟ್ಟು ತೆರಳಿದ್ದರು. ಪಾಕಿಸ್ತಾನಕ್ಕೆ ತೆರಳಿದ್ದ ಆಕೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಟುತ್ತಿರುವಂತೆಯೇ ಇತ್ತೀಚೆಗೆ ಇನ್ನೊಂದು ವಿಡಿಯೋ ವೈರಲ್‌ ಆಗಿದೆ.

ಪಾಕಿಸ್ತಾನಕ್ಕೆ ಬಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿರುವ ಅಂಜುಗೆ  ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50 ಸಾವಿರ ರೂಪಾಯಿಯ ಪಾಕಿಸ್ತಾನಿ ಚೆಕ್‌ ಹಾಗೂ ಇತರ ಕೆಲ ಉಡುಗೊರೆಯನ್ನು ನೀಡಿದ್ದಾರೆ. ಈ ಉಡುಗೊರೆಯನ್ನು ಪಡೆದ ಅಂಜುವಿಗೆ ಪಾಕಿಸ್ತಾನದಲ್ಲಿಯೇ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಅವರು ಹೇಳಿರುವ ವಿಡಿಯೋ ವೈರಲ್‌ ಆಗಿದೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವೀಡಿಯೊ ವೈರಲ್ ಆಗುತ್ತಿದೆ.

'ಅಂಜು ಭಾರತದಿಂದ ಇಲ್ಲಿಗೆ ಬಂದು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆದ್ದರಿಂದ ಈ ಉಡುಗೊರೆಗಳು ಅವಳನ್ನು ಸ್ವಾಗತಿಸುವ ಸಲುವಾಗಿ ನೀಡುತ್ತಿದ್ದೇವೆ. ನಾವು ಅಪಾರವಾಗಿ ಸಂತೋಷವಾಗಿರುವುದರಿಂದ ಅವಳನ್ನು ಅಭಿನಂದಿಸಿದ್ದೇವೆ. ಇದು ಅವಳನ್ನು ಪ್ರಶಂಸಿಸಲು ಒಂದು ಸಣ್ಣ ಪ್ರಯತ್ನವಾಗಿದೆ" ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.

click me!