
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಸದ್ಯ ತಮ್ಮ ಮುಂಬರುವ ಸಿನಿಮಾ ‘ರಣಬಾಲಿ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಪ್ರಚಾರದ ವೇಳೆ ಅವರು ವಿವಿಧ ಮಾಧ್ಯಮಗಳ ಮುಂದೆ ತಮ್ಮ ಫ್ಯಾಮಿಲಿ ಲೈಫ್ ಅನುಭವ ಹಂಚಿಕೊಳ್ಳುತ್ತಿದ್ದಾರೆ. ತಾವು ಭೇಟಿಯಾದದ್ದು, ಮದುವೆಯಾದ ಮೇಲಿನ ಸಂಬಂಧ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಹೆಚ್ಚು ಗಮನ ಸೆಳೆದದ್ದು, ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದು.
ಇಡೀ ಭಾರತ, ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಷ್ ಎಂದಾಗ ನಿಮಗೆ ಏನು ಎನ್ನಿಸುತ್ತದೆ ಎನ್ನುವ ಪ್ರಶ್ನೆಗೆ ವಿಜಯ್ ದೇವರಕೊಂಡ ಅವರು, ನನಗೆ ತುಂಬಾ ಖುಷಿಯಾಗುತ್ತದೆ. ಜನರು ಇಷ್ಟೊಂದು ಪ್ರೀತಿ ತೋರಿಸ್ತಾ ಇರೀದು ಖುಷಿ ಕೊಡುತ್ತದೆ ಎಂದಿದ್ದಾರೆ. ಅದೇ ವೇಳೆ, ಮದುವೆಯ ನಂತರ ನೀವು ಮೊದಲು ಜಗಳವಾಡಿದಾಗ ರಶ್ಮಿಕಾ ಮಂದಣ್ಣ ಅವರನ್ನು ಕೇಳಿದಾಗ, ನಟಿ, "ನಾವು ಜಗಳವಾಡುವುದಿಲ್ಲ ಏಕೆಂದರೆ ನಾವು ಎಲ್ಲವನ್ನೂ ಒಟ್ಟಿಗೆ ಆನಂದಿಸುತ್ತೇವೆ. ಚಿಕ್ಕಪುಟ್ಟ ಸಮಸ್ಯೆ ಬಂದರೆ ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಇದೇ ವೇಳೆ ರಶ್ಮಿಕಾ ಮಂದಣ್ಣ ಆಡಿದ ಒಂದು ಮಾತು ಎಲ್ಲರ ಗಮನ ಸೆಳೆಯುತ್ತಿದೆ. ತನ್ನ ಹಾಗೂ ವಿಜಯ್ ಮದುವೆ ಸಂದರ್ಭದಲ್ಲಿ ಕುಟುಂಬ ಕೊಟ್ಟ ಸಲಹೆ ಬಗ್ಗೆ ಮಾತನಾಡಿದ್ದಾರೆ. ಮದುವೆ ಮೊದಲು ಎಲ್ಲರೂ ವಿಜಯ್ನ ಚೆನ್ನಾಗಿ ನೋಡಿಕೊಳ್ಳಿ ಎಂದರು. ಮದುವೆ ಸಂದರ್ಭದಲ್ಲಿ ನನ್ನ ಅಪ್ಪ ಅಮ್ಮ ವಿಜಯ್ನ ಚೆನ್ನಾಗಿ ನೋಡಿಕೋ ಎಂದರು. ಮದುವೆ ನಂತರ ಅಭಿಮಾನಿಗಳು ನಮ್ಮ ಅಣ್ಣನ ಚೆನ್ನಾಗಿ ನೋಡ್ಕೊಳ್ಳಿ ಎಂದರು. ಓಕೆ ಬಾಸ್ ಆದರೆ ನನ್ನ ಯಾರು ನೋಡಿಕೊಳ್ತಾರೆ ಎಂದು ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಿದವರ ರೀತಿ ಪ್ರಶ್ನಿಸಿದರು. ಇದನ್ನು ಬಹುತೇಕ ಎಲ್ಲಾ ಹೆಣ್ಣುಮಕ್ಕಳೂ ಅನುಭವಿಸುವುದು ಇದೆ. ಅದೇ ರೀತಿ ರಶ್ಮಿಕಾ ಕೂಡ ಅನುಭವಿಸಿದ್ದಾರೆ.
ತಮ್ಮ ನಟನಾ ವೃತ್ತಿಜೀವನದಲ್ಲಿ ಎದುರಿಸಿದ ಟೀಕೆಗಳ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದಾರೆ. ಕೆಲವರು ತಮ್ಮನ್ನು ಉತ್ತಮ ನಟಿಯಲ್ಲ ಎಂದು ಟೀಕಿಸಿದ್ದಾರೆ ಎಂದು ಹೇಳಿದ ಅವರು, ಒಬ್ಬ ನಟನ ಅಭಿನಯದ ಮೇಲೆ ನಿರ್ದೇಶಕರ ಪಾತ್ರವೂ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ನಟ ಯಾವಾಗಲೂ ನಿರ್ದೇಶಕರ ಮೇಲೆ ಅವಲಂಬಿತರಾಗಿರುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ. ಒಂದು ಪಾತ್ರವನ್ನು ಹೇಗೆ ಬರೆಯಲಾಗಿದೆ ಎಂಬುದೂ ನಟನ ಅಭಿನಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ನಿರ್ದೇಶಕರು ಆ ಪಾತ್ರವನ್ನು ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬುದು ಕೂಡ ಬಹಳ ಮುಖ್ಯ ಎಂದು ಅವರು ವಿವರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.