ಪತಿಯಿಂದ ದುಬಾರಿ ಗಿಫ್ಟ್, ದುಡ್ಡು ಬಂದಿದ್ದೆಲ್ಲಿಂದವೆಂದು ಗೊತ್ತಾದ ಕೂಡ್ಲೇ ರಣಾಂಗಣವಾಯ್ತು ಮನೆ!

By Roopa HegdeFirst Published May 10, 2024, 12:46 PM IST
Highlights

ಯಾವುದೇ ಉಡುಗೊರೆ ಕೈಗೆ ಸಿಕ್ಕಿದ್ರೂ  ಅದೇನೋ ಖುಷಿ. ನಿಮ್ಮ ವಯಸ್ಸು ಎಷ್ಟೇ ಆಗಿರಲಿ, ಗಿಫ್ಟ್ ಸಿಕ್ಕಾಗ  ಸಂತೋಷ ಮುಖದಲ್ಲಿರುತ್ತೆ. ಆದ್ರೆ ನಿಮ್ಮ ಆಪ್ತರು ನಿಮ್ಮ ಮನೆಗೆ ಕನ್ನ ಹಾಕಿ ನಿಮಗೆ ಗಿಫ್ಟ್ ನೀಡಿದ್ದಾರೆ ಎಂಬುದು ಗೊತ್ತಾದ್ರೆ….!

ಸಂಗಾತಿ ನೀಡಿದ ಉಡುಗೊರೆ ಯಾವಾಗ್ಲೂ ಸ್ಪೆಷಲ್ ಆಗಿರುತ್ತೆ. ಚಿಕ್ಕ ಉಡುಗೊರೆಯೇ ಇರಲಿ, ಇಲ್ಲವೇ ದುಬಾರಿ ಗಿಫ್ಟ್ ಇರಲಿ, ಪ್ರೀತಿಸಿದ ಇಲ್ಲವೇ ಮದುವೆಯಾದ ಶುರುವಿನಲ್ಲಿ ಸಂಗಾತಿ ಚಾಕೋಲೇಟ್ ನೀಡಿದ್ರೂ ಅದು ವಿಶೇಷವಾಗಿರುತ್ತದೆ. ಚಾಕೋಲೇಟ್ ರ್ಯಾಪರನ್ನು ಜನರು ಸುರಕ್ಷಿತವಾಗಿಟ್ಟುಕೊಳ್ತಾರೆ. ಉಡುಗೊರೆ ಹಾಗೂ ಮಹಿಳೆಯರು ಒಂದು ನಾಣ್ಯದ ಎರಡು ಮುಖವಿದ್ದಂತೆ. ಗಿಫ್ಟ್ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತದೆ. ಅದ್ರಲ್ಲೂ ಪ್ರೀತಿ ಪಾತ್ರರು ಸಣ್ಣ ವಸ್ತು ನೀಡಿದ್ರೂ ಅದನ್ನು ಖುಷಿಯಿಂದ ಅಪ್ಪಿಕೊಳ್ತಾರೆ ಮಹಿಳೆಯರು. 

ಮದುವೆ (Marriage) ಗೆ ಮುನ್ನ ನಿಶ್ಚಿತಾರ್ಥದ ಸಮಯದಲ್ಲಿ ವರ ನೀಡುವ ಉಂಗುರ (Ring) ಸ್ಪೆಷಲ್. ಅದು ಆತ ನೀಡುವ ಮೊದಲ ಗಿಫ್ಟ್ ಆಗಿರೋ ಕಾರಣ ಹುಡುಗಿಯರು ಅದ್ರ ಮೇಲೆ ಒಂದು ಪಟ್ಟು ಹೆಚ್ಚು ಆಸಕ್ತಿ, ಪ್ರೀತಿ ಹೊಂದಿರುತ್ತಾರೆ. ನಿಶ್ಚಿತಾರ್ಥ (Engagement) ದಲ್ಲಿ ಅಥವಾ ಮದುವೆ ಸಮಯದಲ್ಲಿ ವರ ನೀಡಿದ ಉಂಗುರವನ್ನು ಜೀವನ ಪರ್ಯಂತ ಸುರಕ್ಷಿತವಾಗಿಟ್ಟುಕೊಳ್ತಾರೆ. ಅದ್ರ ಮೇಲೆ ವಿಶೇಷ ಮೋಹವಿರುತ್ತದೆ. ಅದು ಕಳೆದುಹೋದ್ರೆ ಜೀವ ಹೋದಂತೆ ಮಾಡುವವರಿದ್ದಾರೆ. ಅದೇನೇ ಇರಲಿ, ಈ ಉಂಗುರವನ್ನು ಹುಡುಗ, ಹುಡುಗಿ ಬೆರಳಿಗೆ ಹಾಕ್ತಾನೆ ಅಂದ್ರೆ ಖರ್ಚು ಆತನದ್ದು. ತನ್ನ ಖಾತೆಯಲ್ಲಿರುವ ಹಣ ಖಾಲಿ ಮಾಡಿ ಇಲ್ಲವೆ ಸಾಲ ಪಡೆದು ಅದನ್ನು ಖರೀದಿ ಮಾಡ್ಬೇಕು.

ಮದುವೆಯಾಗಿ 12 ದಿನವಾದ್ರೂ ಸಿಗ್ಲಿಲ್ಲ ಆ ಭಾಗ್ಯ…ಕೊನೆಯಲ್ಲಿ ರಿವೀಲ್ ಆಯ್ತು ಕಹಿ ಸತ್ಯ

ಉಡುಗೊರೆ ನೀಡುವ ವ್ಯಕ್ತಿ ಹಣ ಖರ್ಚು ಮಾಡ್ಬೇಕೇ ವಿನಾ ಉಡುಗೊರೆ ಪಡೆದ ಹುಡುಗಿಯಲ್ಲ. ಆದ್ರೆ ಈ ದಂಪತಿ ಮಧ್ಯೆ ಈ ನಿಯಮ ಅದಲು – ಬದಲಾಗಿದೆ. ಮದುವೆ ಉಂಗುರವನ್ನು ಪತಿ, ಪತ್ನಿಗೆ ನೀಡಿದ್ರೂ, ಸಾಲವನ್ನು ಪತ್ನಿ ಪಾವತಿಸುತ್ತಿದ್ದಾಳೆ.

ರೆಡ್ಡಿಟ್ ನಲ್ಲಿ ಮಹಿಳೆಯೊಬ್ಬಳು ತನ್ನ ಸಮಸ್ಯೆ ಹೇಳ್ಕೊಂಡಿದ್ದಾಳೆ. ಆಕೆ ಕೆಲ ದಿನಗಳ ಹಿಂದಷ್ಟೆ ಮದುವೆ ಆಗಿದ್ದಾಳೆ. ಆಕೆ ಪತಿ 8000 ಡಾಲರ್ ಅಂದ್ರೆ ಸುಮಾರು 6 ಲಕ್ಷ ರೂಪಾಯಿ ಖರ್ಚು ಮಾಡಿ ಎರಡು ಡೈಮಂಡ್ ರಿಂಗನ್ನು ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾನೆ. ರಿಂಗ್ ನೋಡಿ ಪತ್ನಿಗೇನೋ ಖುಷಿಯಾಗಿದೆ. ಆದ್ರೆ ಅದ್ರ ಹಿಂದಿನ ಸತ್ಯ ತಿಳಿದು ಬೇಸರವಾಗಿದೆ.

ಇವರಿಬ್ಬರೂ ಜಂಟಿ ಖಾತೆಯನ್ನು ಹೊಂದಿದ್ದಾರೆ. ಪತಿಯಾದವನು ಉಂಗುರವನ್ನು ಸಾಲದ ಮೇಲೆ ಖರೀದಿ ಮಾಡಿದ್ದಾನೆ. ಅಂದ್ರೆ ಪ್ರತಿ ತಿಂಗಳು ಈತ ಇಎಂಐ ಮೂಲಕ ಸಾಲ ಪಾವತಿಸಬೇಕು. ಅದಕ್ಕೆ ಆಕೆ ಪತಿ, ಜಂಟಿ ಖಾತೆಯನ್ನು ಬಳಸಿಕೊಂಡಿದ್ದಾನೆ. ಪತಿ – ಪತ್ನಿ ಇಬ್ಬರೂ ದುಡಿದು ಜಂಟಿ ಖಾತೆಗೆ ಹಾಕಿರುವ ಹಣ, ಉಂಗುರದ ಬಡ್ಡಿಗೆ ಹೋಗ್ತಿದೆ. ಇದು ಮಹಿಳೆಯನ್ನು ಅಸಮಾಧಾನಗೊಳಿಸಿದೆ. ಈ ಬಗ್ಗೆ ಪ್ರಶ್ನೆ ಕೇಳಿದ್ರೆ, ಮದುವೆ ಇಬ್ಬರ ಮಧ್ಯೆ ನಡೆದದ್ದು. ಹಾಗಾಗಿ ಖರ್ಚನ್ನು ಹಂಚಿಕೊಳ್ಳಬೇಕು. ಈಗಿನ ಕಾಲದಲ್ಲಿ ಖರ್ಚಿನ ಹೊಣೆ ಹೊರಲು ನೀನು ಹಿಂದೇಟು ಹಾಕ್ಬಾರದು ಎಂದು ಪತಿ ವಾದಿಸುತ್ತಿದ್ದಾನೆ. ಇದೇ ವಿಷ್ಯಕ್ಕೆ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿದೆ.

ಮಹಿಳೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ತಮ್ಮ ಅಭಿಪ್ರಾಯ ಹೇಳ್ತಿದ್ದಾರೆ. ಜಂಟಿ ಖಾತೆಯಿಂದ ಹಣ ಪಾವತಿಯಾಗುತ್ತೆ ಎಂಬುದು ಗೊತ್ತಾಗಿದ್ರೆ ಮಹಿಳೆ ಉಂಗುರ ಖರೀದಿಗೆ ಒಪ್ಪಿಗೆ ನೀಡ್ತಿರಲಿಲ್ಲ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಜಂಟಿ ಖಾತೆಯಿಂದ ಹಣ ತೆಗೆಯುವಾಗ ಪರಸ್ಪರ ಒಪ್ಪಿಗೆ ಅಗತ್ಯ. ನಿಮ್ಮ ಒಪ್ಪಿಗೆ ಇಲ್ಲದೆ ಅವರು ಹೇಗೆ ಹಣ ಪಡೆದ್ರು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಗಂಡ ಹೆಂಡತಿ ಹೆಚ್ಚು ವಯಸ್ಸಿನ ಅಂತರ ಡಿವೋರ್ಸ್‌ಗೆ ಕಾರಣವಂತೆ ಗೊತ್ತಾ?

ಕಾರು, ಮನೆ ಖರೀದಿ ವೇಳೆ ಜಂಟಿ ಖಾತೆಯಿಂದ ಹಣ ಪಾವತಿಸಿದ್ರೆ ವಿರೋಧವಿಲ್ಲ. ಎಂಗೇಜ್ಮೆಂಟ್ ಉಂಗುರ ಖರೀದಿ ವರನ ಹೊಣೆ. ಅದಕ್ಕೆ ಜಂಟಿ ಖಾತೆ ಬಳಸಬಾರದು ಎಂದು ಅನೇಕರು ಮಹಿಳೆಯನ್ನು ಬೆಂಬಲಿಸಿದ್ದಾರೆ. 

click me!