ಮದುವೆಯಾಗಿ 12 ದಿನವಾದ್ರೂ ಸಿಗ್ಲಿಲ್ಲ ಆ ಭಾಗ್ಯ…ಕೊನೆಯಲ್ಲಿ ರಿವೀಲ್ ಆಯ್ತು ಕಹಿ ಸತ್ಯ

By Roopa Hegde  |  First Published May 10, 2024, 11:06 AM IST

ಪ್ರೀತಿಸಿದ ಹುಡುಗಿಯೇ ಸಂಗಾತಿಯಾದ್ರೆ ಹುಡುಗರು ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಳ್ತಾರೆ. ಅದ್ಧೂರಿಯಾಗಿ ಮದುವೆ ಆಗಿ, ಇಡೀ ಜೀವನವನ್ನು ಸುಖವಾಗಿ ಕಳೆಯಲು ಬಯಸ್ತಾರೆ. ಈತ ಕೂಡ ಅದೇ ಆಸೆಯಲ್ಲಿ ಹಾರ ಬದಲಿಸಿದ್ದ. ಆದ್ರೆ ಆಗಿದ್ದೇ ಬೇರೆ. 
 


ಮದುವೆ ಆಗ್ಬೇಕಾಗಿದ್ದು ಒಬ್ಬಳನ್ನಾದ್ರೆ ಮದುವೆ ಆಗೋದು ಇನ್ನೊಬ್ಬಳನ್ನು. ಮದುವೆ ಮಂಟಪದಲ್ಲಿ ಮುಖ ಮುಚ್ಚಿಕೊಳ್ಳುವ ಹುಡುಗಿ ವರನಿಗೆ ಹಾಗೂ ಆತನ ಸಂಬಂಧಿಕರಿಗೆ ಮೋಸ ಮಾಡ್ತಾಳೆ. ಅಕ್ಕನ ಬದಲು ತಂಗಿ ಮದುವೆ ನಡೆದಿರುತ್ತದೆ. ಇಂಥ ಕಥೆ ಈಗ ಧಾರಾವಾಹಿಗಳಲ್ಲಿ ಮಾಮೂಲಿ ಎನ್ನುವಂತಾಗಿದೆ.  ಪ್ರತಿಯೊಂದೂ ಧಾರಾವಾಹಿಯಲ್ಲೂ ನೀವು ಇಂಥ ಕಥೆಯನ್ನು ನೋಡ್ಬಹುದು. ಟಿವಿ ಮುಂದೆ ಕುಳಿತ ನಾವೆಲ್ಲ ಇಂಥ ಘಟನೆ ಬರೀ ಧಾರವಾಹಿ, ಸಿನಿಮಾದಲ್ಲಿ ಮಾತ್ರ ಎಂದುಕೊಳ್ತೇವೆ. ಆದ್ರೆ ನಿಜ ಜೀವನದಲ್ಲೂ ಅಪರೂಪಕ್ಕೆ ಈ ಘಟನೆಗಳು ನಡೆಯುತ್ತಿರುತ್ತವೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣವನ್ನೆಲ್ಲ ದೋಚಿ ಹೋದ ಹುಡುಗಿಯರೂ ಕಡಿಮೆ ಇಲ್ಲ. ಮತ್ತೆ ಕೆಲವರು ತಮ್ಮ ಕೆಲಸ, ಆಸ್ತಿ ಸೇರಿ ಅನೇಕ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಯನೀಡಿ ಮದುವೆ ಮಾಡಿಕೊಂಡಿರುತ್ತಾರೆ. ಈಗ ಉದ್ಯಮಿಯೊಬ್ಬನ ಬಾಳಲ್ಲೂ ಮದುವೆ ಎಂಬ ಬಿರುಗಾಳಿ ಬೀಸಿದೆ. ನಂಬಿ ಮದುವೆ ಆದವನು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. 

ಸಾಮಾಜಿಕ ಜಾಲತಾಣ (Social Media) ದಲ್ಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಆನ್ಲೈನ್ (Online) ನಲ್ಲಿಯೇ ಹುಡುಗಿ ಭೇಟಿಯಾಗಿ ಅಲ್ಲಿಯೇ ಆಕೆಯ ಜೊತೆ ಪ್ರೀತಿ (love) ಮಾತುಕತೆಯಾಡಿ ಮದುವೆ (Marriage) ಆಗುವ ಜನರ ಸಂಖ್ಯೆ ಹೆಚ್ಚಾಗಿದೆ. ಈ ವ್ಯಕ್ತಿಯೂ ಇಂಟರ್ನೆಟ್‌ನಲ್ಲಿ ಪರಿಚಯವಾದ ಹುಡುಗಿಯ ಕೈ ಹಿಡಿದಿದ್ದಾನೆ. ಆದ್ರೆ ಮದುವೆಯಾದ 12 ದಿನಗಳ ನಂತ್ರ ಭಯಾನಕ ಸತ್ಯವೊಂದು ಆತನಿಗೆ ಗೊತ್ತಾಗಿದೆ. ತಾನು ಮೋಸ ಹೋಗಿದ್ದೇನೆ ಎಂಬುದು ಅರಿವಾಗ್ತಿದ್ದಂತೆ ಆತ ಪೊಲೀಸರಿಗೆ ದೂರು ನೀಡಿದ್ದಾನೆ. 

Tap to resize

Latest Videos

ಆರು ಮಕ್ಕಳಿದ್ರೂ ಈಕೆ ಆಸೆ ಈಡೇರಿಲ್ಲ, ಎಂಟಾದ ಮೇಲೆ ತೃಪ್ತಳಾದ ಮಹಿಳೆ, ಏನಿದು ಕಥೆ?

ಇಂಡೋನೇಷ್ಯಾದ ಉದ್ಯಮಿಯೊಬ್ಬ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದ. 26 ವರ್ಷದ ವ್ಯಕ್ತಿಗೆ ಇಂಟರ್ನೆಟ್‌ನಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಆಕೆಯನ್ನು ಹುಡುಗ ಭೇಟಿಯಾಗಿ ಮಾತುಕತೆ ನಡೆಸಿದ್ದ. ಹುಡುಗಿ ಸದಾ ಬುರ್ಕಾ ಹಾಕಿಕೊಳ್ತಿದ್ದಳು. ನಾಚಿಕೆಯಿಂದ ಹುಡುಗಿ ಹಾಗೆ  ಮಾಡ್ತಿದ್ದಾಳೆ ಎಂದು ಆತ ಭಾವಿಸಿದ್ದ. 

ಹುಡುಗಿ ಇಷ್ಟವಾದ ಕಾರಣ ಮದುವೆಯಾಗಲು ನಿರ್ಧರಿಸಿದ್ದು. ತನ್ನಿಚ್ಛೆಯಂತೆ ಮದುವೆ ಕೂಡ ನಡೆಯಿತು. ಉದ್ಯಮಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಮನೆಗೆ ಬಂದಿದ್ದಾನೆ. ನೆಚ್ಚಿನ ಹುಡುಗಿ ಜೊತೆ ಸುಖ ಸಂಸಾರ ಮಾಡುವ ಕನಸು ಕಂಡಿದ್ದಾನೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ.

ಮದುವೆಯಾದ 12 ದಿನದ ನಂತ್ರ ಬಣ್ಣ ಬಯಲು : ಉದ್ಯಮಿ ಮದುವೆಯಾಗಿ ಮನೆಗೆ ಬಂದ್ಮೇಲೂ ಪತ್ನಿ ಮುಖ ತೋರಿಸಲು ನಿರಾಕರಿಸಿದ್ದಾಳೆ. ಇಡೀ ದಿನ ಬುರ್ಖಾ ಹಾಕಿಕೊಂಡು ಇರ್ತಿದ್ದಳು. ಬುರ್ಕಾ ತೆಗೆದು ಮುಖ ತೋರಿಸುವಂತೆ ಕೇಳಿದ್ರೆ  ಅದನ್ನು ನಿರಾಕರಿಸುತ್ತಿದ್ದಳು. ಅಷ್ಟೇ ಅಲ್ಲ ಪದೇ ಪದೇ ಊರಿಗೆ ಹೋಗಿ ಬರೋದಾಗಿ ಹೇಳ್ತಿದ್ದಳು. ಪತ್ನಿಯ ಈ ವರ್ತನೆ ಉದ್ಯಮಿಗೆ ಅನುಮಾನ ತರಿಸಿತ್ತು. 

ಪತ್ನಿ ವರ್ತನೆಯಿಂದ ಬೇಸರಗೊಂಡಿದ್ದ ಪತಿ, ಹಾಗಾದರೂ ಸರಿ ಮಡದಿಯ ಮುಸಡಿ ನೋಡಲು ನಿರ್ಧಾರಕ್ಕೆ ಬಂದಿದ್ದ. ಸಂಚು ಹಾಕಿ ಆಕೆ ಮುಖ ನೋಡಿದ್ದ. ಆ ಕ್ಷಣವೇ ಆತನಿಗೆ ಪ್ರಳಯವಾದ ಅನುಭವವಾಯ್ತು. ಆತ ಹುಡುಗಿ ಎಂದು ನಂಬಿ ಮದುವೆಯಾಗಿದ್ದ ಪತ್ನಿ ವಾಸ್ತವದಲ್ಲಿ ಹುಡುಗಿಯೇ ಆಗಿರಲಿಲ್ಲ. ಹುಡುಗನೊಬ್ಬ ಬುರ್ಕಾ ಧರಿಸಿ ಉದ್ಯಮಿಗೆ ಮೋಸ ಮಾಡಿದ್ದ. ಹುಡುಗಿ ಎಂದು ನಂಬಿಸಿ ಮದುವೆ ಆಗಿದ್ದಲ್ಲದೆ ಕಲೆದ 12 ದಿನಗಳಿಂದ ಆತನ ಮನೆಯಲ್ಲಿದ್ದ. 

ತಮ್ಮನಿಗೆ ಪಿರಿಯಡ್ಸ್ ಪಾಠ ಹೇಳಿದ ಅಣ್ಣನ ವೀಡಿಯೋ ವೈರಲ್, ಮಗಳಿಗೆ ಮಾತ್ರವಲ್ಲ, ಮಗಂಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಉದ್ಯಮಿ ಪತ್ನಿ ಎಂದು ಬಂದಿದ್ದ ಹುಡುಗನನ್ನು ಬಂಧಿಸಿದ್ದಾರೆ. ಆತನ ವಿಚಾರಣೆ ನಡೆಯುತ್ತಿದೆ. ಆರೋಪ ಸಾಬೀತಾದ್ರೆ ಆತನಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ. 

click me!