ಮನೆಯಲ್ಲಿ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ರೆ ಜೀವನ ಸಾರ್ಥಕ ಎನ್ನುವ ಜನರೇ ಹೆಚ್ಚು. ಒಂದೇ ಮಕ್ಕಳು ಸಾಕು ಎನ್ನುವವರಿಗೆ ಗಂಡಾಗ್ಲಿ, ಹೆಣ್ಣಾಗ್ಲಿ ಸುಧಾರಿಸಿಕೊಳ್ತಾರೆ. ಆದ್ರೆ ಈ ಮಹಿಳೆಗೆ ಆರು ಮಕ್ಕಳಾಗಿವೆ. ಆದ್ರೂ ಏನೋ ಮಿಸ್ ಆಗ್ತಿದೆ ಅಂತಾ 8 ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಭಾರತದಲ್ಲಿ ಗಂಡು ಮಕ್ಕಳ ಮೇಲೆ ಜನರಿಗೆ ಮೋಹ ಹೆಚ್ಚು. ವಂಶೋದ್ಧಾರಕ ಬೇಕು ಎನ್ನುವ ಕಾರಣಕ್ಕೆ ಒಂದಾದ್ಮೇಲೆ ಒಂದು ಮಕ್ಕಳನ್ನು ಮಾಡಿಕೊಳ್ತಿದ್ದ ಜನರು ಐದಾರು ಹೆಣ್ಣು ಮಕ್ಕಳಾದ್ರೂ ಗಂಡು ಮಗುವಿನ ಆಸೆ ಬಿಡ್ತಿರಲಿಲ್ಲ. ಇದೇ ಕಾರಣಕ್ಕೆ ಹಿಂದೆ ಭಾರತೀಯ ಕುಟುಂಬದಲ್ಲಿ ಕಡಿಮೆ ಎಂದ್ರೂ ನಾಲ್ಕು ಮಕ್ಕಳಂತೂ ಇದ್ದೇ ಇರ್ತಿದ್ದವು. ಈಗ ಭಾರತೀಯರ ಆಲೋಚನೆ ಸ್ವಲ್ಪಮಟ್ಟಿಗೆ ಬದಲಾಗಿದೆ. ಹೆಣ್ಣು – ಗಂಡು ಎನ್ನುವ ಬೇಧ ಕಡಿಮೆ ಆಗ್ತಿದೆ. ಇಷ್ಟಾದ್ರೂ ಒಂದು ಗಂಡು ಮಗು ಇರಲಿ ಎನ್ನುವ ಕಾರಣಕ್ಕೆ ಮೊದಲು ಹೆಣ್ಣು ಹೆತ್ತ ಪಾಲಕರು ಇನ್ನೊಂದು ಪ್ರಯತ್ನ ಮಾಡ್ತಾರೆ. ಹೆಣ್ಣು ಹಾಗೂ ಗಂಡು ಮಗು ಬೇಕು ಎಂದಾಗ ಅದೇ ಮಗು ಜನಿಸೋದಿಲ್ಲ. ಅದು ನಮ್ಮ ಕೈನಲ್ಲಿಲ್ಲ. ಬರೀ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ಲಿಂಗ ಪ್ರೀತಿಯನ್ನು ನೀವು ನೋಡ್ಬಹುದು. ಮಹಿಳೆಯೊಬ್ಬಳಿಗೆ ಆರು ಮಕ್ಕಳು ಜನಿಸಿದ್ರೂ ತೃಪ್ತಿ ಆಗ್ಲಿಲ್ಲ. ತಾನು ಬಯಸಿದ ಮಗು ಹುಟ್ಟಲಿಲ್ಲ ಎನ್ನುವ ಕಾರಣಕ್ಕೆ ಮತ್ತೆರಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಗ ಕುಟುಂಬ ಪರ್ಫೆಕ್ಟ್ ಆಯ್ತು ಎನ್ನುತ್ತಾಳೆ ಮಹಿಳೆ.
ಅಮೆರಿಕಾದ ಟೆನಿಸಿಯಲ್ಲಿ ವಾಸವಾಗಿರುವ ಏರಿಯಲ್ ಟಾಯ್ಸನ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram)ನಲ್ಲಿ ತನ್ನ ಕುಟುಂಬದ ವಿಡಿಯೋ (Family Video) ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಏರಿಯಲ್ ಟಾಯ್ಸನ್ ಜೊತೆ ಆಕೆ ಪತಿ ಮೈಕಲ್ ಟಾಯ್ಸನ್ ಹಾಗೂ ಮಕ್ಕಳು ಕಾಣಿಸಿಕೊಂಡಿದ್ದಾರೆ. ಏರಿಯಲ್ ಟಾಯ್ಸನ್ ಆರು ಮಕ್ಕಳಿಗೆ ಜನ್ಮ ನೀಡಿದ್ರೂ ಸಂತೋಷವಾಗದಿರಲು ಕಾರಣವೊಂದಿದೆ.
undefined
ಎಂಟು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ : ಏರಿಯಲ್ ಟಾಯ್ಸನ್ ಗೆ ಹೆಣ್ಣು ಮಕ್ಕಳ ಮೇಲೆ ವಿಶೇಷ ಪ್ರೀತಿ. ಆದ್ರೆ ಆಕೆಗೆ ಒಂದರ ನಂತ್ರ ಒಂದರಂತೆ ಆರು ಗಂಡು ಮಕ್ಕಳು ಜನಿಸಿದವು. ಹೆಣ್ಣು ಮಕ್ಕಳ ಆಸೆಯಿಂದ ಏರಿಯಲ್ ಟಾಯ್ಸನ್ ಮತ್ತೆ ಗರ್ಭ ಧರಿಸಲು ನಿರ್ಧರಿಸಿದಳು. ಏರಿಯಲ್ ಟಾಯ್ಸನ್ ಆಸೆಯಂತೆಯೆ ಆಕೆಗೆ ಈಗ ಇಬ್ಬರು ಹೆಣ್ಣು ಮಕ್ಕಳು ಜನಿಸಿವೆ. ಏರಿಯಲ್ ಟಾಯ್ಸನ್ ಗೆ ಈಗ ಆರು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿವೆ.
ಇನ್ಸ್ಟಾಗ್ರಾಮ್ ನಲ್ಲಿ ಏರಿಯಲ್ ಟಾಯ್ಸನ್ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಆಗಾಗ ಏರಿಯಲ್ ಟಾಯ್ಸನ್ ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಳ್ತಿರುತ್ತಾಳೆ. ಆಕೆ ಈ ವಿಡಿಯೋ ಎರಡು ಕೋಟಿ 41 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 3 ಲಕ್ಷ 67 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. 5 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಕೆಲವರು ಏರಿಯಲ್ ಟಾಯ್ಸನ್ ಕೆಲಸವನ್ನು ಮೆಚ್ಚಿದ್ರೆ ಮತ್ತೆ ಕೆಲವರು ಕಾಲೆಳೆಯುವ ಕೆಲಸ ಮಾಡಿದ್ದಾರೆ.
ವ್ಯಕ್ತಿ ತನ್ನದೇ ಟೀಂ ಮಾಡ್ತಿದ್ದಾನೆ ಎಂದು ಟಾಯ್ಸನ್ ಕಾಲೆಳೆದಿದ್ದಾನೆ. ಇನ್ನೊಬ್ಬ ಬಳಕೆದಾರ, ಎಂಟು ಮಕ್ಕಳನ್ನು ನೋಡಿಕೊಳ್ಳುವ ಸಾಮರ್ಥ್ಯ ಪಾಲಕರಿಗಿದ್ದರೆ, ಅವರ ಎಲ್ಲ ಅಗತ್ಯಗಳನ್ನು ಪೂರೈಸುವಷ್ಟು ಆರ್ಥಿಕ ಸ್ಥಿತಿ ಬಲವಾಗಿದ್ದರೆ ಅವರ ಈ ಕ್ರಮವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಮಕ್ಕಳನ್ನು ಪಡೆಯೋದು ಅವರವರ ಇಷ್ಟ ಎಂದು ಕಮೆಂಟ್ ಮಾಡಿದ್ದಾನೆ. ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗ್ಲೂ ಜನರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಇನ್ನೊಬ್ಬರು ಕೋಪ ವ್ಯಕ್ತಪಡಿಸಿದ್ದಾರೆ. ಕೆಲವರು ತಮಗೆ ಮಕ್ಕಳು ಬೇಡ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಆರು – ಎಂಟು ಮಕ್ಕಳಿಗೆ ಜನ್ಮ ನೀಡ್ತಿದ್ದಾರೆ. ಇವರಿಂದ ಜನಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.