ದಾಂಪತ್ಯ ದೀರ್ಘ ಕಾಲ ಪ್ರೀತಿಯಲ್ಲಿ ಮುಳಗೇಳ್ಬೇಕು ಅಂದ್ರೆ ಇಬ್ಬರು ಒಬ್ಬರನ್ನೊಬ್ಬರು ಅರಿಯಬೇಕು. ಪರಸ್ಪರ ಒಟ್ಟಿಗೆ ಸಮಯ ಕಳೆದ್ರೆ ಒಬ್ಬರನ್ನೊಬ್ಬರು ಅರಿಯೋದು ಸುಲಭ. ಸಂಗಾತಿಗೆ ಸಮಯ ನೀಡದೆ ಹೋದ್ರೆ ನಿಧಾನವಾಗಿ ದಾಂಪತ್ಯ ಹಳಸಲು ಶುರುವಾಗುತ್ತದೆ.
ಮದುವೆ ನಂತ್ರ ಪರಸ್ಪರ ಸಂಗಾತಿಗಳು ಸಮಯ ನೀಡ್ಬೇಕು. ಇಬ್ಬರನ್ನು ಅರಿಯಲು, ಪ್ರೀತಿ ಹಂಚಿಕೊಳ್ಳಲು ಸಮಯದ ಅವಶ್ಯಕತೆಯಿರುತ್ತದೆ. ಮದುವೆಯಾದ ಒಂದು ವರ್ಷ ಅತಿ ಹತ್ತಿರವಾಗಿರುವ ಜೋಡಿ ದಿನ ಕಳೆದಂತೆ ಜವಾಬ್ದಾರಿ ಹೆಸರಿನಲ್ಲಿ ದೂರವಾಗಲು ಶುರುವಾಗ್ತಾರೆ. ಮದುವೆಯಾದ ವರ್ಷ ವಾರಕ್ಕೆ ಒಮ್ಮೆ ಡೇಟಿಂಗ್ ಹೋಗ್ತಿದ್ದವರು ನಾಲ್ಕೈದು ವರ್ಷಗಳ ನಂತ್ರ ಡೇಟಿಂಗ್ ಮಾಯವಾಗಿರುತ್ತದೆ. ಇದು ಮತ್ತಷ್ಟು ಮುಂದುವರೆದ್ರೆ ಸಂಬಂಧ ಬರೀ ಬಾಯಿ ಮಾತಿಗಾಗಿರುತ್ತದೆ. ಇಬ್ಬರ ಮಧ್ಯೆ ಯಾವುದೇ ಭಾವನಾತ್ಮಕ ಸಂಬಂಧ ಉಳಿದಿರುವುದಿಲ್ಲ. ಕೆಲಸದ ಒತ್ತಡದ ಮಧ್ಯೆಯೂ ಸಂಗಾತಿಗೆ ಸಮಯ ನೀಡುವುದು ಅತ್ಯಗತ್ಯ. ಸಾಮಾನ್ಯವಾಗಿ ಪುರುಷರು, ಸಂಗಾತಿಗೆ ಸಮಯ ನೀಡುವುದಿಲ್ಲ ಎಂಬ ಆರೋಪವನ್ನು ನಾವು ಕೇಳಿರ್ತೇವೆ. ಇದೇ ಕಾರಣಕ್ಕೆ ಗಲಾಟೆ ವಿಚ್ಛೇದನದವರೆಗೂ ಬಂದಿದ್ದಿದೆ. ಆದ್ರೆ ಇಲ್ಲೊಬ್ಬ ಪತಿ, ಪತ್ನಿಯ ವರ್ತನೆಗೆ ಬೇಸತ್ತಿದ್ದಾನೆ. ಕೆಲಸದ ಹೆಸರಿನಲ್ಲಿ ಕಚೇರಿಯಲ್ಲಿರುವ ಪತ್ನಿಗೆ ಪತಿ ಜೊತೆ ಹಾಗೂ ಮನೆಯಲ್ಲಿ ಸಮಯ ಕಳೆಯೋದು ಕಷ್ಟವಂತೆ. ಒಂದಿಲ್ಲೊಂದು ಕಾರಣಕ್ಕೆ ಮನೆಯಿಂದ ಹೊರಗೆ ಇರುವ ಪತ್ನಿ ವರ್ತನೆ ಆತನಿಗೆ ಬೇಸರ ತರಿಸಿದೆ.
ಆತನಿಗೆ ಮದುವೆ (Marriage) ಯಾಗಿ ಮೂರು ವರ್ಷ ಕಳೆದಿದೆ. ಪತ್ನಿ (Wife) ಕೂಡ ಕೆಲಸ (Work) ಕ್ಕೆ ಹೋಗ್ತಾಳೆ. ಕೆಲಸದ ಹೆಸರಿನಲ್ಲಿ ಪತ್ನಿ ಕಚೇರಿಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಾಳಂತೆ. ಬೇಗ ಕೆಲಸ ಮುಗಿದ್ರೆ ಸಿನಿಮಾಕ್ಕೆ ಹೋಗ್ತಾಳಂತೆ. ಮನೆಯಲ್ಲಿ ಕೆಲಸಕ್ಕೆ ಜನರಿದ್ದಾರೆ. ಇಬ್ಬರ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಆದ್ರೆ ಮಕ್ಕಳ ಪ್ಲಾನ್ ಇನ್ನೂ ಮಾಡಿಲ್ಲ ಎನ್ನುತ್ತಾನೆ ಪತಿ.
ಪ್ರತಿ ದಿನ 10 ಗಂಟೆ ರಾತ್ರಿ ಮನೆಗೆ ಬರುವ ಪತ್ನಿ, ಹೆಚ್ಚು ಅಂದರೆ 15 ನಿಮಿಷ ಗಂಡನ ಜೊತೆ ಮಾತನಾಡ್ತಾಳಂತೆ. ನಂತ್ರ ಹೋಗಿ ಮಲಗ್ತಾಳಂತೆ. ಮನೆಯಲ್ಲಿ ಇರೋದು ಆಕೆಗೆ ಇಷ್ಟವಿಲ್ಲ ಸರಿ. ಆದ್ರೆ ನನ್ನ ಜೊತೆಯೂ ಆಕೆಗೆ ಸಮಯ ಕಳೆಯಲು ಇಷ್ಟವಿಲ್ಲ ಎಂಬುದೇ ಚಿಂತೆ ವಿಷ್ಯ ಎನ್ನುತ್ತಾನೆ ಪತಿ. ಪತ್ನಿಯನ್ನು ತುಂಬಾ ಪ್ರೀತಿಸುವ ಪತಿಗೆ ಆಕೆ ವರ್ತನೆ ಸಹಿಸೋದು ಕಷ್ಟವಾಗ್ತಿದೆಯಂತೆ. ವೀಕೆಂಡ್ ನಲ್ಲಿ ಕೂಡ ಸ್ನೇಹಿತರ ಜೊತೆ ಹೊರಗೆ ಹೋಗುವ ಪತ್ನಿಗೆ ಬುದ್ದಿ ಹೇಳೋದು ಹೇಗೆ ಎನ್ನುತ್ತಾನೆ ಪತಿ. ಈ ಬಗ್ಗೆ ಒಂದು ಬಾರಿ ಗಲಾಟೆಯಾಗಿದೆ. ಮದುವೆಯಾಗಿ ಮೂರು ವರ್ಷವಾಯ್ತು, ಇನ್ನೇನು ಎನ್ನುವ ಪತ್ನಿ, ತನಗೆ ಜೀವನದಲ್ಲಿ ಎಂಜಾಯ್ಮೆಂಟ್ ಮುಖ್ಯ ಎಂದಿದ್ದಾಳಂತೆ. ಪತ್ನಿಯನ್ನು ಹೇಗೆ ದಾರಿಗೆ ತರೋದು ಗೊತ್ತಾಗ್ತಿಲ್ಲ ಎಂಬುದು ಪತಿಯ ಅಳಲಾಗಿದೆ.
ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ತಜ್ಞರ ಸಲಹೆ : ಮದುವೆ ಒಂದೆರಡು ದಿನದ ಮಾತಲ್ಲ. ಜೀವನ ಪೂರ್ತಿ ಒಟ್ಟಿಗೆ ಇರ್ಬೇಕು. ಸಮಯಕ್ಕೆ ತಕ್ಕಂತೆ ಅನೇಕ ವಿಷ್ಯಗಳು ಬದಲಾಗ್ತವೆ. ಅದನ್ನು ಒಟ್ಟಿಗೆ ಎದುರಿಸಬೇಕು. ರೋಮ್ಯಾಂಟಿಕ್ ಸಮಯ ಮುಗಿದಿದೆ, ಮದುವೆಯಾಗಿ ಮೂರು ವರ್ಷ ಕಳೆದಿದೆ ಅಂತಾ ಪತ್ನಿ ಹೇಳ್ತಿದ್ದಾಳೆ ಅಂದ್ರೆ ಮೊದಲು ನಿಮ್ಮಿಂದ ಏನಾದ್ರೂ ತಪ್ಪಾಗಿದೆಯಾ ಎಂಬುದನ್ನು ಪರೀಕ್ಷಿಸಿ. ಆಕೆಗೆ ಯಾವುದಾದ್ರೂ ರೀತಿಯಲ್ಲಿ ಹಿಂಸೆ ನೀಡ್ತಿದ್ದೀರಾ ಎಂಬುದನ್ನು ನೀವು ಕಂಡುಕೊಳ್ಳಿ ಎನ್ನುತ್ತಾರೆ ತಜ್ಞರು. ಮನೆಯಲ್ಲಿರೋಕೆ ಆಕೆ ಏಕೆ ಇಷ್ಟಪಡ್ತಿಲ್ಲ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ವೀಕೆಂಡ್ ನಲ್ಲೂ ಮನೆಯಲ್ಲಿ ಇರೋದಿಲ್ಲ ಅಂದ್ರೆ ಅದಕ್ಕೆ ನೀವೂ ಕಾರಣವಾಗಿರಬಹುದು. ಮೊದಲು ಇದನ್ನು ಪತ್ತೆ ಮಾಡಿ, ಪರಿಹರಿಸಿಕೊಳ್ಳಿ ಎನ್ನುತ್ತಾರೆ ತ್ಞಜರು. ಯಾಕೆ ಆಕೆ ಮನೆಗೆ ಬರೋದಿಲ್ಲ ಎಂಬುದನ್ನು ಅರಿಯಲು ಪ್ರಯತ್ನ ಮಾಡಿ ಎನ್ನುತ್ತಾರೆ ತಜ್ಞರು.
HAPPY LIFE: ಸುಖಕರ ಜೀವನಕ್ಕೆ ನಿಮಗೆ ನೀವೇ ಕೊಡಬಹುದು ಈ ಉಡುಗೊ
ಅವರಿಗಿಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಿ. ಹಾಗೆ ನೀವು ಅವರನ್ನು ಎಷ್ಟು ಪ್ರೀತಿ ಮಾಡ್ತಿದ್ದೀರಿ ಎಂಬುದನ್ನು ತಿಳಿಸಿ. ಆಕೆ ಸ್ವಾತಂತ್ರ್ಯದ ಬಗ್ಗೆ ಯಾವುದೇ ಸಮಸ್ಯೆ ನಿಮಗಿಲ್ಲ ಎಂಬುದನ್ನೂ ಆಕೆಗೆ ಹೇಳ್ಬೇಕು ಎನ್ನುತ್ತಾರೆ ತಜ್ಞರು.