ಪರ್ಫೆಕ್ಟ್ ಫ್ಯಾಮಿಲಿಗೆ ಉತ್ತಮ ನಿದರ್ಶನ ಎಂಬಂತಿದೆ ಈ Viral Video

By Suvarna News  |  First Published Jul 7, 2023, 3:47 PM IST

ಬಡವನಾದರೆ ಏನು ಪ್ರಿಯೇ ಕೈ ತುತ್ತು ಉಣಿಸುವೆ ಅಂತಾ ಹಾಡನ್ನೇನೋ ಹೇಳ್ಬಹುದು. ಆದ್ರೆ ಎಲ್ಲರೂ ವಾಸ್ತವ ಅರಿತು ಬದುಕೋದಿಲ್ಲ. ಹಣಕ್ಕಿಂತ ಗುಣ, ಪ್ರೀತಿ ಮುಖ್ಯ ಅನ್ನೋರು ಬಹಳ ಅಪರೂಪ.
 


ಕೆಲವರು ಭಾವನೆ ಇಲ್ಲದೆ ಬದುಕಿದ್ರೆ ಮತ್ತೆ ಕೆಲವರು ಭಾವಾತಿರೇಕದಲ್ಲಿ ಬದುಕುತ್ತಾರೆ. ಪತಿ ಕುಡುಕನಾಗಿದ್ದು, ಪ್ರತಿ ದಿನ ಬರೆ ಬರುವಂತೆ ಹೊಡೆದ್ರೂ ಪತಿಯಿಂದ ದೂರವಾಗದ ಮಹಿಳೆಯರಿದ್ದಾರೆ. ತಮ್ಮ ದುಡಿಮೆಯಲ್ಲೇ ಸ್ವಲ್ಪ ಹಣವನ್ನು ಪತಿಗೆ ಕುಡಿಯಲು ನೀಡುವ ಮಹಿಳೆಯೂ ನಮ್ಮಲ್ಲಿದ್ದಾರೆ. ಇದ್ರ ಮಧ್ಯೆ ಕಷ್ಟಪಟ್ಟು ದುಡಿಯುವ ಪತಿಗೆ ಹೆಗಲಾಗಿ ನಿಲ್ಲುವ ಪತ್ನಿ ಹಾಗೂ ಅವರ ಮುದ್ದು ಸಂಸಾರಗಳು ನಮ್ಮ ಗಮನ ಸೆಳೆಯುತ್ತವೆ. 

ಶ್ರೀಮಂತನಿರಲಿ ಇಲ್ಲ ಬಡವನಿರಲಿ, ಹೊಟ್ಟೆ, ಬಟ್ಟೆಗಾಗಿ ಆತ ಪ್ರತಿ ದಿನ ಶ್ರಮವಹಿಸ್ಲೇಬೇಕು. ಈ ಶ್ರಮ, ಕಷ್ಟಗಳು ಹೂವಿನಂತೆ ಹಗುರವಾಗ್ಬೇಕು ಅಂದ್ರೆ ಆತನ ಸಂಗಾತಿ (Spouse) ಆಸರೆ ಮುಖ್ಯವಾಗುತ್ತದೆ. ಎಲ್ಲ ಸಮಯದಲ್ಲಿ ನಿನ್ನ ಜೊತೆಗಿರ್ತೇನೆ ಎನ್ನುವ ಸಂಗಾತಿ ಸಿಕ್ಕಲ್ಲಿ ಕೈತುಂಬ ಹಣ (Money) ವಿಲ್ಲದೆ ಹೋದ್ರೂ ನೆಮ್ಮದಿ ಬದುಕನ್ನು ಕಾಣ್ಬಹುದು. 

Tap to resize

Latest Videos

ಹೆಂಡ್ತಿ, ಅತ್ತೆ ಕಾಟ: ಅಮ್ಮನ ದೂರ ಮಾಡಲಾಗದೇ ಸಾವಿಗೆ ಶರಣಾದ ಗಂಡ

ಸಣ್ಣ ಸಣ್ಣ ವಿಷ್ಯಕ್ಕೆ ಕಿತ್ತಾಡಿ ದೂರವಾಗುವ ಕಾಲದಲ್ಲಿ ಪತಿಗೆ ಆಸರೆಯಾಗಿ, ಆತನ ಜೊತೆ ಹೆಜ್ಜೆ ಹಾಕಿದ ಮಹಿಳೆಯೊಬ್ಬಳ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ. ಮಹಿಳೆ ಸೈಕಲ್ ಹಿಡಿದು ಹೋಗ್ತಿದ್ದರೆ, ಪತಿ ಜೊಮಾಟೊ (Zomato) ಟೀ ಶರ್ಟ್ ಧರಿಸಿ, ಪತ್ನಿ ಪಕ್ಕದಲ್ಲಿ ನಡೆಯುತ್ತಿದ್ದಾನೆ.  ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ವೈರಲ್ ಆಗಿದೆ.

ಕುಟುಂಬ ಹೇಳೋದು ಇದಕ್ಕೇ ಅಲ್ವಾ? : (@shayari_in_) ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈಕೆ ಮಹಿಳೆ ಸರ್.. ಮನಸ್ಸು ಮಾಡಿದ್ರೆ ಚರಂಡಿಯಲ್ಲಿ ಬೀಳುವ ಕುಡುಕ ಪತಿ ಜೊತೆ ಕೂಡ ಸಂಸಾರ ಮಾಡ್ತಾಳೆ. ಅದೇ ಬಿಡುವ ವಿಷ್ಯ ಬಂದ್ರೆ ಬೀಲ್ ಗೆಟ್ಸ್ ರನ್ನೂ ಬಿಟ್ಟುಬಿಡ್ತಾಳೆ ಎಂದು ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. 15 ನಿಮಿಷದ ಸಣ್ಣ ವಿಡಿಯೋ ಇದಾಗಿದ್ದು, ಇದನ್ನು ನೋಡಿದ ಬಳಕೆದಾರರು ಸಂತೋಷ ವ್ಯಕ್ತಪಡಿಸಿದ್ದಾರೆ.  ವಿಡಿಯೋದಲ್ಲಿ ಜೊಮಾಟೊ ಡೆಲಿವರಿ ಬಾಯ್, ಆತನ ಪತ್ನಿ ಹಾಗೂ ಮಗುವನ್ನು ನೀವು ನೋಡ್ಬಹುದು. ಜೊಮಾಟೊ ಡೆಲಿವರಿ ಬಾಯ್ ಸೈಕಲನ್ನು ಪತ್ನಿ ಹಿಡಿದುಕೊಂಡು ಹೋಗ್ತಿದ್ದಾಳೆ. ಪತ್ನಿ ಪಕ್ಕದಲ್ಲಿ ಪತಿ ಹೆಜ್ಜೆ ಹಾಕ್ತಿದ್ದಾನೆ. ಆತನ ಕೈನಲ್ಲಿ ಮುದ್ದು ಮಗುವಿದೆ. ಈ ವಿಡಿಯೋ ನೋಡಿದ್ರೆ ಸಂಗಾತಿ ಚೆನ್ನಾಗಿದ್ದರೆ ಕಷ್ಟಕಾಲವನ್ನೂ ಸುಲಭವಾಗಿ ಎದುರಿಸಬಹುದು ಎಂಬುದು ಅರಿವಿಗೆ ಬರುತ್ತದೆ. 

ಅತ್ತೆಯನ್ನು ಇಂಪ್ರೆಸ್ ಮಾಡೋದು ಹೇಗೆ? ಮೊನ್ನೆ ಮೊನ್ನೆ ಮದ್ವೆಯಾದ ಕಿಯಾರಾ ಆಡ್ವಾಣಿ ಹೇಳ್ತಾರೆ!

ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈವರೆಗೂ 30 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 700 ಬಾರಿ ಇದು ರೀಟ್ವೀಟ್ ಆಗಿದೆ. ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ ಅಂತಾ ಒಬ್ಬರು ಹೇಳಿದ್ರೆ, ಇದೊಂದು ವಿಶೇಷ ಕುಟುಂಬ. ಇಲ್ಲಿ ಮಹಿಳೆ, ಪುರುಷ ಎನ್ನುವ ವರ್ಗೀಕರಣ ಬೇಡ. ಆಕೆ ಕೂಡ ಕಷ್ಟಪಡ್ತಿರೋದು ಕಾಣ್ತಿದೆ. ಇಬ್ಬರೂ ಪ್ರಯತ್ನಪಡ್ತಿರುವ ಕಾರಣ ಇದು ಪರಿಪೂರ್ಣ ಕುಟುಂಬ ಎಂದು ಇನ್ನೊಬ್ಬರು ಬರೆದಿದ್ದಾರೆ. ಇಂಥ ಪತ್ನಿ ಸಿಕ್ಕಿದ್ದು ಆತನ ಅದೃಷ್ಟ ಅಂತಾ ಕೆಲವರು ಕಮೆಂಟ್ ಮಾಡಿದ್ದಾರೆ. ಈಗಿನ ದಿನಗಳಲ್ಲಿ ಜೊಮಾಟೊ ಡೆಲಿವರಿ ಬಾಯ್ಸ್ ಸಾಕಷ್ಟು ಸುದ್ದಿಗೆ ಬರ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ವಿಡಿಯೋಗಳನ್ನು ನಾವು ನೋಡ್ಬಹುದು. 

ಜೊಮಾಟೊ ಡೆಲಿವರಿ ಬಾಯ್ಸ್ ಸಂಬಳ ಎಷ್ಟು ಗೊತ್ತಾ? : ಜೊಮಾಟೊ ಬೇರೆ ಬೇರೆ ಪ್ರದೇಶದ ಡೆಲಿವರಿ ಬಾಯ್ಸ್ ಗೆ ಬೇರೆ ಬೇರೆ ಸಂಬಳ ನೀಡುತ್ತದೆ. ಬೆಂಗಳೂರಿನಲ್ಲಿ 16 ಸಾವಿರ ರೂಪಾಯಿ ತಿಂಗಳ ಸಂಬಳವನ್ನು ಡೆಲಿವರಿ ಬಾಯ್ಸ್ ಪಡೆಯುತ್ತಾರೆ. ಅವರ ಅನುಭವದ ಆಧಾರದ ಮೇಲೆ ಸಂಬಳ ನಿಗದಿಯಾಗುವ ಕಾರಣ ತಿಂಗಳಿಗೆ 30 ಸಾವಿರ ರೂಪಾಯಿ ದುಡಿಯುವ ಡೆಲಿವರಿ ಬಾಯ್ಸ್ ಕೂಡ ಜೊಮಾಟೊದಲ್ಲಿದ್ದಾರೆ. 

ये 'औरत' है जनाब! निभाने पर आए तो नाली में पडे़ “शराबी पति” के साथ पूरी ज़िन्दगी गुजार दे,
वरना छोड़ने पर आए तो “बिल गेट्स” को छोड़ दे. pic.twitter.com/xse8PnhXng

— मृदुल눈 (@shayari_in_)
click me!