Relationship Tips : ಸಮಯ ನೀಡದ ಗಂಡ, ಮಾಜಿ ಲವರ್‌ ಜೊತೆ ಒಂದಾದ ಹೆಂಡತಿ

By Suvarna News  |  First Published Apr 27, 2022, 12:55 PM IST

Extramarital Affair News: ದಾಂಪತ್ಯದಲ್ಲಿ ಪ್ರೀತಿ,ಗೌರವ,ವಿಶ್ವಾಸ,ನಂಬಿಕೆ ಎಲ್ಲವೂ ಮುಖ್ಯ. ಜೊತೆಗೆ ಇಬ್ಬರು ಪರಸ್ಪರ ಸಮಯ ನೀಡಬೇಕು. ಒಬ್ಬರಿಗೊಬ್ಬರು ಸಮಯ ನೀಡದೆ ಹೋದಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇಬ್ಬರ ಮಧ್ಯೆ ಸಮಸ್ಯೆಯೂ ಜಾಸ್ತಿಯಾಗುತ್ತದೆ.
 


ದಾಂಪತ್ಯ (Marriage) ಮುರಿದು ಬೀಳಲು ಅನೇಕ ಕಾರಣಗಳಿರುತ್ತವೆ. ಸಮಯ (Time) ದ ಅಭಾವ ಕೂಡ ಇದಕ್ಕೆ ಒಂದು ಮುಖ್ಯ ಕಾರಣ. ಕೆಲಸ (Work) ದ ಒತ್ತಡದಲ್ಲಿ ದಂಪತಿ ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಒಬ್ಬರು ಸಮಯ ನೀಡಿ ಇನ್ನೊಬ್ಬರು ಸಮಯ ನೀಡದೆ ಹೋದಾಗ ಇಬ್ಬರ ಮಧ್ಯೆ ಬಿರುಕು ಮೂಡಲು ಶುರುವಾಗುತ್ತದೆ. ಆರಂಭದಲ್ಲಿ ಏನಿಲ್ಲವೆಂದ್ರೂ ಸಮಯ ಕಳೆದಂತೆ ಇಬ್ಬರ ಮಧ್ಯೆ ಅಂತರ ಹೆಚ್ಚಾಗಿ ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ಮಹಿಳೆಯೊಬ್ಬಳು ಪತಿಯ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ. ಕೆಲಸದಲ್ಲಿ ಸದಾ ಬ್ಯುಸಿಯಿರುವ ಪತಿ ಆಕೆಗೆ ಸಮಯ ನೀಡ್ತಿಲ್ಲವಂತೆ. ಇದ್ರಿಂದ ಬೇಸರಗೊಂಡಿರುವ ಮಹಿಳೆ ಬೇರೆ ದಾರಿ ನೋಡಿಕೊಂಡಿದ್ದಾಳೆ. ಇಷ್ಟಕ್ಕೂ ಆಕೆ ಹಿಡಿದ ದಾರಿ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

ಪತಿ ನೀಡ್ತಿಲ್ಲ ಸಮಯ : ಮಹಿಳೆ ಮದುವೆಯಾಗಿ ಕೆಲವೇ ತಿಂಗಳು ಕಳೆದಿದೆ. ಪತಿಯನ್ನು ಪ್ರೀತಿ ಮಾಡುವ ಮಹಿಳೆಗೆ ಪತಿ ಮೇಲೆ ಒಂದು ವಿಷ್ಯಕ್ಕೆ ಬೇಸರವಿದೆ. ಸದಾ ಕೆಲಸ, ಕೆಲಸ ಎನ್ನುವ ಪತಿ ಇಡೀ ದಿನ ಕೆಲಸ ಮಾಡ್ತಿರುತ್ತಾನಂತೆ. ಇದೇ ಕಾರಣಕ್ಕೆ ಆತ, ಪತ್ನಿಗೆ ಸಮಯ ನೀಡ್ತಿಲ್ಲವಂತೆ. ಎಲ್ಲ ಕೆಲಸವನ್ನು ಏಕಾಂಗಿಯಾಗಿ ಮಾಡುವ ಮಹಿಳೆ, ಪತಿ ಜೊತೆ ಒಂದಿಷ್ಟು ಒಳ್ಳೆ ಸಮಯ ಕಳೆಯಲು ಸಾಧ್ಯವಾಗ್ತಿಲ್ಲವಂತೆ.

Tap to resize

Latest Videos

LAZY PARTNER: ಸೋಮಾರಿ ಸಂಗಾತಿ ಜೊತೆ ಜಗಳವಾಡಿದ್ರೆ ಸಮಸ್ಯೆ ಸರಿಹೋಗೋದಿಲ್ಲ

ಮಾಜಿ ಮೇಲೆ ಮತ್ತೆ ಗಮನ : ಪತಿ ಸಮಯ ನೀಡ್ತಿಲ್ಲ ಎಂಬ ಬೇಸರದ ಮಧ್ಯೆ ಮತ್ತೆ ಸಿಕ್ಕಿದ್ದು ಮಾಜಿ. ಆತ ಈಗ್ಲೂ ಮಹಿಳೆಯನ್ನು ಕೇರ್ ಮಾಡ್ತಾನಂತೆ. ಮಾಜಿಯ ಎಲ್ಲ ಕೆಲಸಕ್ಕೆ ನೆರವಾಗ್ತಾನಂತೆ. ಆತನ ಜೊತೆ ಅಮೂಲ್ಯ ಸಮಯವನ್ನು ಮಹಿಳೆ ಕಳೆಯುತ್ತಿದ್ದಾಳೆ. ಆತ ಇಷ್ಟವಾಗುವುದಲ್ಲದೆ ಆತನ ಜೊತೆ ಇದ್ದಾಗ ಸಮಯ ಕಳೆದಿದ್ದು ತಿಳಿಯೋದಿಲ್ಲ ಎನ್ನುತ್ತಾಳೆ ಮಹಿಳೆ.

ವಿಚ್ಛೇದನ ಇಷ್ಟವಿಲ್ಲ : ಮಾಜಿ ಜೊತೆ ಸಮಯ ಕಳೆಯುತ್ತಿದ್ದರೂ ಮಹಿಳೆಗೆ ಪತಿಯನ್ನು ಬಿಡಲು ಇಷ್ಟವಿಲ್ಲ. ಪತಿ ನನಗೆ ಸಮಯ ನೀಡ್ತಿಲ್ಲ ನಿಜ. ಆದ್ರೆ ಆತನನ್ನು ನಾನು ಈಗ್ಲೂ ಪ್ರೀತಿ ಮಾಡ್ತೇನೆ. ಸಮಯ ನೀಡುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಆತನಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಹಾಗೆ ಮಾಜಿ ನನ್ನ ಜೊತೆಗಿದ್ದಾನೆ, ಆದ್ರೆ ಯಾಕೆ ನನ್ನ ಬಳಿ ವಾಪಸ್ ಬಂದಿದ್ದಾನೆ ಎಂಬುದು ನನಗೆ ತಿಳಿದಿಲ್ಲ ಎನ್ನುತ್ತಾಳೆ ಮಹಿಳೆ.

Relationship Tips: ಹುಡುಗಿಯರಿಗೆ ಇಷ್ಟವೇ ಆಗದ ಐದು ವಿಚಾರಗಳು

ತಜ್ಞರ ಸಲಹೆ : ಮಹಿಳೆ ಸಮಸ್ಯೆಯನ್ನು ಆಲಿಸಿದ ತಜ್ಞರು ಅಮೂಲ್ಯ ಸಲಹೆ ನೀಡಿದ್ದಾರೆ. ಪತಿ ಹಾಗೂ ಪತ್ನಿ ಮಧ್ಯೆ ಏನಾಗಿದೆ ಎಂಬುದು ನನಗೆ ತಿಳಿಯುತ್ತಿದೆ ಎನ್ನುವ ತಜ್ಞರು, ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದಾರೆ.

ಪತಿಯ ಮುಂದೆ ಹೇಳಿ ನಿಮ್ಮ ಸಮಸ್ಯೆ : ಪತ್ನಿ ಮನಸ್ಸಿನಲ್ಲಿ ಏನಿದೆ ಎಂಬುದು ಪತಿಗೆ ತಿಳಿದಿಲ್ಲದೆ ಇರಬಹುದು. ತನ್ನ ಸ್ವಭಾವಕ್ಕೆ ಆಕೆ ಹೊಂದಿಕೊಂಡಿದ್ದಾಳೆಂದು ಆತ ಭಾವಿಸಿರಬಹುದು. ಆದ್ರೆ ಪತ್ನಿಯಾದವಳು ತನ್ನ ಸಮಸ್ಯೆ ಹೇಳುವುದು ಮುಖ್ಯ ಎನ್ನುತ್ತಾರೆ ತಜ್ಞರು. ಮೊದಲು ಪತಿಗೆ ಸಮಯ ನೀಡುವಂತೆ ಹೇಳಿ. ಸಮಯ ನೀಡದ ಕಾರಣ ಯಾವ ತೊಳಲಾಟದಲ್ಲಿದ್ದೇನೆ ಎಂಬುದನ್ನು ಹೇಳಿ ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ ಮಾಜಿಗೆ ಕೂಡ ನಿಮ್ಮ ಭಾವನೆಯನ್ನು ಹೇಳಿ. ಪತಿಗೆ ವಿಚ್ಛೇದನ ನೀಡಲು ಮನಸ್ಸಿಲ್ಲ. ಆತನನ್ನು ನಾನಿನ್ನೂ ಪ್ರೀತಿಸುತ್ತಿದ್ದೇನೆ ಎಂಬುದನ್ನು ಹೇಳಿ. ಮಾಜಿ ಯಾಕೆ ನಿಮ್ಮ ಜೊತೆಗಿದ್ದಾನೆ ಎಂಬುದನ್ನು ಪತ್ತೆ ಮಾಡಿ. ಬರೀ ಸ್ನೇಹವಾಗಿದ್ದರೆ ಓಕೆ. ಆತನ ಉದ್ದೇಶ ಬೇರೆಯಾಗಿದ್ದರೆ ನೀವು ಈ ಸಂಬಂಧದಿಂದ ದೂರಬರುವುದು ಲೇಸು ಎಂದಿದ್ದಾರೆ ತಜ್ಞರು. ಪತಿ –ಪತ್ನಿ ಸಂಬಂಧ ಮುಖ್ಯವಾದದ್ದು. ಒಂದ್ವೇಲೆ ನೀವು ಹೇಳಿದ ಮೇಲೂ ಪತಿ ಸ್ವಭಾವ ಬದಲಿಸಿಕೊಳ್ಳದೆ ಹೋದ್ರೆ ತಜ್ಞರ ಸಲಹೆ ಪಡೆಯಿರಿ.

click me!