ಪತ್ನಿ ಇನ್ನೊಬ್ಬನಿಗೆ ಮುತ್ತಿಟ್ಟರೂ ಪ್ರಶ್ನಿಸದ ಪತಿ

By Suvarna NewsFirst Published Jul 25, 2022, 3:12 PM IST
Highlights

ಸಂಸಾರದ ನೊಗ ಸಾಗ್ಬೇಕೆಂದ್ರೆ ಕೆಲವೊಂದು ಹೊಂದಾಣಿಕೆ ಅನಿವಾರ್ಯ. ತಪ್ಪು ನಮ್ಮಿಂದಾಗಿದೆ ಎಂಬ ಗಿಲ್ಟಿ ಶುರುವಾದಾಗ ಸಂಗಾತಿ ಮಾಡಿದ ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ತೇವೆ. ಈ ವ್ಯಕ್ತಿ ಸ್ಥಿತಿಯೂ ಹಾಗೆ ಆಗಿದೆ. ಕಣ್ಣಾರೆ ನೋಡಿದ್ರೂ ಪತ್ನಿ ಕಣ್ಣಲ್ಲಿ ಕಣ್ಣಿಟ್ಟು ಕೇಳುವ ಶಕ್ತಿ ಈತನಿಗಿಲ್ಲ.
 

ಪ್ರೀತಿಯಲ್ಲಿ ಮೋಸವಾದ್ರೆ ಅದನ್ನು ಸಹಿಸಿಕೊಳ್ಳೋದು ಕಷ್ಟ. ಇದೇ ವಿಚಾರಕ್ಕೆ ಗಲಾಟೆ ಮಾಡಿದ್ರೆ, ಪ್ರೀತಿಸಿದ ವ್ಯಕ್ತಿ ದೂರವಾಗ್ತಾನೆ ಎಂಬ ಭಯವೂ ಅನೇಕರಿಗೆ ಇರುತ್ತದೆ. ಹಾಗಾಗಿ ಸಂಗಾತಿ ಮೋಸ ಮಾಡ್ತಿದ್ದಾರೆ ಎಂಬುದು ಗೊತ್ತಿದ್ದೂ ಅವರ ವಿರುದ್ಧ ಮಾತನಾಡುವುದಿಲ್ಲ. ಇನ್ನು ಕೆಲವರಿಗೆ ಪ್ರೀತಿಗಿಂತ ಅವರ ಸೇವೆಯ ಅಗತ್ಯವಿರುತ್ತದೆ. ಮತ್ತೆ ಕೆಲವರಿಗೆ ಸಂಗಾತಿ ದಾರಿ ತಪ್ಪಲು ನಾನೇ ಕಾರಣ ಎಂಬ ಬೇಸರವಿರುತ್ತದೆ. ಹೀಗೆ ನಾನಾ ಕಾರಣಕ್ಕೆ ಸಂಗಾತಿ ಮೋಸ ಮಾಡಿದ್ರೂ ಅವರ ಜೊತೆಯೇ ಜೀವನ ನಡೆಸುವವರಿದ್ದಾರೆ. ಈ ವ್ಯಕ್ತಿ ಕೂಡ, ಪತ್ನಿಯ ಮೋಸದ ವಿಷ್ಯ ತಿಳಿದಿದ್ದರೂ ಆಕೆಯಿಂದ ದೂರವಾಗಲು ಸಾಧ್ಯವಾಗದೆ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾನೆ. ಕಣ್ಣ ಮುಂದೆಯೇ ಪತ್ನಿ ಪರಪುರುಷನಿಗೆ ಮುತ್ತಿಟ್ಟಿದ್ದಾಳೆ. ಪತ್ನಿಯನ್ನು ಅಪಾರವಾಗಿ ಪ್ರೀತಿಸುವ, ಆಕೆ ಸೇವೆಯನ್ನು ಬಯಸುವ ಹಾಗೇ ಆಕೆ ದಾರಿ ತಪ್ಪಲು ನಾನೇ ಕಾರಣವೆಂದು ಭಾವಿಸಿರುವ ಈ ವ್ಯಕ್ತಿಗೆ ಪತ್ನಿ ವಿರುದ್ಧ ಮಾತನಾಡಲು ಸಾಧ್ಯವಾಗ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆ ಹೇಳಿಕೊಂಡಿರುವ ವ್ಯಕ್ತಿ, ಜೀವನವನ್ನು ಮೋಸ ಮಾಡಿದ ಪತ್ನಿ ಜೊತೆ ಕಳೆಯುವ ನಿರ್ಧಾರಕ್ಕೆ ಬಂದಿದ್ದಾನೆ. 

ಪ್ರೇಮ (Love) ವಿವಾಹ : 2021ರಲ್ಲಿ ಆತ ತನ್ನಿಷ್ಟದಂತೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದ. ಐದು ವರ್ಷಗಳ ಕಾಲ ಪ್ರೀತಿಸಿ (Love), ಪರಸ್ಪರ ಅರ್ಥ ಮಾಡಿಕೊಂಡವರು ನಂತ್ರ ಮದುವೆ ಬಂಧನಕ್ಕೆ (Wedding Lock) ಒಳಗಾಗಿದ್ದರು. ಮನೆಯವರ ಒಪ್ಪಿಗೆ ಇವರಿಗೆ ಸಿಕ್ಕಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಅದ್ಧೂರಿಯಾಗಿ ಮದುವೆ ನಡೆದಿತ್ತು. ಪ್ರೀತಿಯ ಪತ್ನಿ ಜೊತೆ ಸುಂದರ ಸಂಸಾರ ಆತನದಾಗಿತ್ತು.

ಮನೆಯವರ ಮನಸ್ಸು ಗೆದ್ದ ಮಡದಿ : ಕೇವಲ ಪತಿ (Husband) ಗೆ ಮಾತ್ರವಲ್ಲ ಕುಟುಂಬದ ಎಲ್ಲ ಸದಸ್ಯರಿಗೆ ಪತ್ನಿ ಹತ್ತಿರವಾಗಿದ್ದಳು. ತಂದೆ, ತಾಯಿ, ಸಂಬಂಧಿಕರನ್ನು ಪ್ರೀತಿಸುತ್ತಿದ್ದ ಪತ್ನಿ, ಕುಟುಂಬದ ಎಲ್ಲ ಜವಾಬ್ದಾರಿ ಮೈಮೇಲೆ ಎಳೆದುಕೊಂಡಿದ್ದಳು. ಪತಿಗೆ ಸಮಸ್ಯೆಯಾಗದಂತೆ ಎಲ್ಲವನ್ನೂ ನಿಭಾಯಿಸುತ್ತಿದ್ದಳು. ಆಕೆಯ ಕೆಲಸ, ಚಟುವಟಿಕೆ, ವ್ಯಕ್ತಿತ್ವ, ನಗು ( Smile), ಪ್ರೋತ್ಸಾಹಕ್ಕೆ ಮನೆಯವರೆಲ್ಲ ಮನಸೋತಿದ್ದರು. ಅಚ್ಚುಮೆಚ್ಚಿನ ಸೊಸೆಯಾಗಿದ್ದ ಪತ್ನಿ ಮೇಲೆ ಈತನ ಪ್ರೀತಿ ಡಬಲ್ ಆಗಿತ್ತು. 

ಕೆಲಸದ ಒತ್ತಡ (Work Pressure): ಮದುವೆಯಾದ ಎರಡು ವರ್ಷಗಳ ಕಾಲ ಈತ ಕೆಲಸಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದ. ಪತ್ನಿ ಬೆಂಬಲ ಸದಾ ಇದ್ದ ಕಾರಣ ಕೊನೆಗೂ ಒಂದೊಳ್ಳೆ ಕೆಲಸ ಸಿಕ್ಕಿತ್ತು. ಕೆಲಸ ಸಿಗ್ತಿದ್ದಂತೆ ಈತನ ಜವಾಬ್ದಾರಿ ಬದಲಾಗಿತ್ತು. ಮೊದಲು ವಾರಕ್ಕೊಮ್ಮೆ ಔಟಿಂಗ್ ಹೋಗ್ತಿದ್ದವನು ವರ್ಷವಾದ್ರೂ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗ್ತಿರಲಿಲ್ಲ. ಸದಾ ಬ್ಯುಸಿಯಾಗಿರುತ್ತಿದ್ದ ಪತಿಗೆ ಮೊದ ಮೊದಲು ಬೆಂಬಲ ನೀಡ್ತಿದ್ದ ಪತ್ನಿ ಬರ್ತಾ ಬರ್ತಾ ಬದಲಾದಳು.

ತಾತ್ಕಾಲಿಕ ಸುಖ ನೀಡುವ ಶುಗರ್ ಡ್ಯಾಡಿ ವೆರಿ ಡೇಂಜರಸ್

ಇಬ್ಬರ ಮಧ್ಯೆ ಶುರುವಾಗಿತ್ತು ಜಗಳ : ಕೆಲಸದಲ್ಲಿ ಸದಾ ಬ್ಯುಸಿಯಿರುವ ಪತಿ ಬಗ್ಗೆ ಪತ್ನಿ ಪ್ರಶ್ನೆ ಶುರು ಮಾಡಿದ್ದಳು. ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಒಂದು ದಿನ ಜಗಳ ತಾರಕಕ್ಕೇರಿತ್ತು. ಪತ್ನಿಗೆ ಸಮಯ ನೀಡಲಾಗ್ತಿಲ್ಲ ಎಂಬ ಬೇಸರ ನನಗೂ ಇತ್ತು. ನನ್ನಿಂದ ತಪ್ಪಾಗ್ತಿದೆ ಎಂಬ ಅರಿವು ನನಗೆ ಆಗಿತ್ತು ಎನ್ನುತ್ತಾನೆ ವ್ಯಕ್ತಿ.

ಇಲ್ಲಿ ವಿಜೃಂಭಣೆಯಿಂದ ನಡೆಯುತ್ತೆ ಮಂಗಳಮುಖಿಯರ ಮದುವೆ, ಮರುದಿನವೇ ವಿಧವೆ!

ಕಾಫಿ ಕೆಫೆಯಲ್ಲಿ ಪತ್ನಿ: ಈ ಎಲ್ಲದರ ಮಧ್ಯೆ ಒಂದು ದಿನ ಸ್ನೇಹಿತ ಕರೆ ಮಾಡಿದ್ದನಂತೆ. ಪತ್ನಿಯನ್ನು ಪ್ರತಿ ದಿನ ಪರ ಪುರುಷನ ಜೊತೆ ಕಾಫಿ ಕೆಫೆಯಲ್ಲಿ ನೋಡ್ತಿರುವುದಾಗಿ ಹೇಳಿದ್ದನಂತೆ. ಪತ್ನಿ ತನ್ನನ್ನು ಅಪಾರವಾಗಿ ಪ್ರೀತಿಸ್ತಾಳೆ ಎಂದು ನಂಬಿದ್ದ ವ್ಯಕ್ತಿಗೆ ಇದು ಶಾಕ್ ನೀಡಿತ್ತು. ಒಂದು ದಿನ ಕೆಲಸಕ್ಕೆ ರಜೆ ಹಾಕಿ ಪತ್ನಿಯನ್ನು ಹಿಂಬಾಲಿಸಿದ್ದ. ಪತ್ನಿ ವ್ಯಕ್ತಿಯೊಬ್ಬನ ಜೊತೆ ಆಪ್ತವಾಗಿ ಕುಳಿತಿದ್ದಲ್ಲದೆ ಆತನಿಗೆ ಮುತ್ತಿಟ್ಟಿದ್ದನ್ನು ನೋಡಿದ್ದ. ಕೋಪದಿಂದ ಕುದಿಯುತ್ತಿದ್ದ ಪತಿ, ಮನೆಗೆ ಬಂದು ಗಲಾಟೆ ಮಾಡಲು ಸಿದ್ಧನಾಗಿದ್ದ. ಆದ್ರೆ ಮನೆಗೆ ಬರ್ತಿದ್ದಂತೆ ಪತ್ನಿ ಮಾಡ್ತಿದ್ದ ಕೆಲಸ ನೋಡಿ ದಂಗಾಗಿದ್ದ. ಪತ್ನಿ, ತನ್ನ ಮಾವನ ಕಾಲಿಗೆ ಮಸಾಜ್ ಮಾಡ್ತಿದ್ದಳು. ಕುಟುಂಬದ ಎಲ್ಲ ಸದಸ್ಯರ ಸಮಸ್ಯೆಗೆ ಸ್ಪಂದಿಸುತ್ತಿದ್ದ, ಎಲ್ಲರನ್ನೂ ಪ್ರೀತಿಯಿಂದ ನೋಡ್ತಿದ್ದ ಪತ್ನಿ ಸ್ವಭಾವ ಆತನ ಕೋಪ ಇಳಿಸಿತ್ತು. ಪತ್ನಿ ತನ್ನನ್ನು ಪ್ರೀತಿಸುತ್ತಿಲ್ಲ ಎಂಬ ಸತ್ಯ ಗೊತ್ತಾಗಿದೆ. ಆದ್ರೆ ಆಕೆಯನ್ನು ನನ್ನಿಂದ ದೂರ ಮಾಡಲು ಸಾಧ್ಯವಾಗ್ತಿಲ್ಲ ಎಂದಿದ್ದಾನೆ ವ್ಯಕ್ತಿ.

click me!