ಆರ್ಥಿಕ ಸಮಸ್ಯೆ ಸರ್ವೆ ಸಾಮಾನ್ಯ. ಕೆಲ ಯುವತಿಯರು ಹಣಕ್ಕಾಗಿ ಡೇಟಿಂಗ್ ಅಪ್ಲಿಕೇಷನ್ ಮೊರೆ ಹೋಗ್ತಾರೆ. ಶುಗರ್ ಡ್ಯಾಡಿ ಡೇಟಿಂಗ್ ಮೂಲಕ ಅಗತ್ಯತೆ ಪೂರೈಸಿಕೊಳ್ತಾರೆ. ಆದ್ರೆ ಇದ್ರಿಂದ ಎಷ್ಟು ನಷ್ಟವಿದೆ ಎಂಬ ಸತ್ಯ ಶುಗರ್ ಬೇಬಿಗೆ ತಿಳಿದಲೇಬೇಕು.
ಪ್ರೀತಿಯೇ ಅಂತಹದ್ದು, ಇಡೀ ದಿನ ಅದು ನಮ್ಮನ್ನ ನಶೆಯಲ್ಲಿರುವಂತೆ ಮಾಡುತ್ತದೆ. ಇದಕ್ಕೆ ವಯಸ್ಸು, ಜಾತಿ, ಊರು, ಭಾಷೆ ಯಾವುದರ ಗಡಿಯೂ ಇರೋದಿಲ್ಲ. 15- 20 ವರ್ಷ ದೊಡ್ಡವರಾದವರನ್ನು ಪ್ರೀತಿಸುವ ಜನರಿದ್ದಾರೆ. ಇಲ್ಲಿ ಪ್ರೀತಿಗೆ ಮಹತ್ವ ಸಿಕ್ಕಿದರೆ ಸಂಬಂಧ ಬೇರೆ ದಾರಿಯಲ್ಲಿ ಸಾಗುತ್ತದೆ. ಒಂದು ವೇಳೆ ಪ್ರೀತಿಗಿಂತ ಲೈಂಗಿಕ ಆಸಕ್ತಿ ಇಲ್ಲಿ ಹೆಚ್ಚಿದ್ದರೆ ಆಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಲೈಂಗಿಕ ಬಯಕೆ ತೀರಿಸಿಕೊಳ್ಳಲು ನಿಮಗೆ ದುಬಾರಿ ಗಿಫ್ಟ್ ನೀಡುವ, ಔತಣಕೂಟ ಏರ್ಪಡಿಸುವ, ಪ್ರವಾಸಕ್ಕೆ ಕರೆದುಕೊಂಡು ಹೋಗುವ ಸಂಗಾತಿ ಜೊತೆ ಸಂಬಂಧ ದೀರ್ಘಕಾಲ ಗಟ್ಟಿಯಾಗಿರುವುದಿಲ್ಲ. ಇದು ನಿಮ್ಮ ವ್ಯಕ್ತಿತ್ವ, ವೃತ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಶುಗರ್ ಡ್ಯಾಡಿ ಡೇಟಿಂಗ್ ಬಗ್ಗೆ ತಜ್ಞರು ಹೇಳೋದೇನು ಎಂಬ ವಿವರ ಇಲ್ಲಿದೆ.
ಶುಗರ್ ಡ್ಯಾಡಿ (Sugar Daddy) ಅಂದ್ರೇನು ಗೊತ್ತಾ? : ಚಿಕ್ಕ ವಯಸ್ಸಿನ ಹುಡುಗಿಯರು ಹಿರಿಯ ವ್ಯಕ್ತಿ ಪ್ರೀತಿ (Love) ಗೆ ಬೀಳುವುದನ್ನೇ ಶುಗರ್ ಡ್ಯಾಡಿ ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರೀತಿಗಿಂತ ಅಗತ್ಯತೆಗೆ ಮಹತ್ವ ನೀಡಲಾಗುತ್ತದೆ. ಹಿರಿಯ ವ್ಯಕ್ತಿಗೆ ಸಂಭೋಗ ಸುಖ ಬೇಕು. ಯುವತಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣ ಬೇಕು. ಹಲವು ಬಾರಿ ಎಲ್ಲ ಗೊತ್ತಿದ್ದೂ ಹುಡುಗಿಯರು ಈ ರೀತಿಯ ಡೇಟಿಂಗ್ ನಲ್ಲಿ ತೊಡಗುತ್ತಾರೆ. ಅಗತ್ಯತೆಗಳು ಮತ್ತು ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿದೆ.
ಸಾಮಾನ್ಯ ಡೇಟಿಂಗ್ ನಲ್ಲಿ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಎಂದು ಕರೆದ ರೀತಿಯಲ್ಲೇ ಇಲ್ಲಿ ಶುಗರ್ ಡ್ಯಾಡಿ ಹಾಗೂ ಶುಗರ್ ಬೇಬಿ (Sugar Baby) ಎಂದು ಕರೆಯಲಾಗುತ್ತದೆ. ಅಗತ್ಯತೆಗಳನ್ನು ಪೂರೈಸುವ ಈ ಶುಗರ್ ಡೇಟಿಂಗ್ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
ಆರಂಭದಲ್ಲಿ ಎಲ್ಲವೂ ಚಂದ : ಶುಗರ್ ಡೇಟಿಂಗ್ ಪರಸ್ಪರ ಲಾಭದಾಯಕ ಸಂಬಂಧವಾಗಿದೆ. ನಿಮಗಿಂತ ಹೆಚ್ಚು ವಯಸ್ಸಾದ ವ್ಯಕ್ತಿಯೊಂದಿಗೆ ನೀವು ಡೇಟ್ ಮಾಡುತ್ತೀರಿ. ಅವರು ಅದಕ್ಕೆ ಪ್ರತಿಯಾಗಿ ವಿವಿಧ ಉಡುಗೊರೆಗಳನ್ನು ಮತ್ತು ಹಣವನ್ನು ನೀಡ್ತಾರೆ. ಸಾಮಾನ್ಯವಾಗಿ ಕಡಿಮೆ ಆದಾಯವನ್ನು ಹೊಂದಿರುವ ಮತ್ತು ಹಲವು ರೀತಿಯ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಹುಡುಗಿಯರು ಇದಕ್ಕೆ ಬಲಿಯಾಗ್ತಾರೆ. ಈ ಸಂಬಂಧಕ್ಕೆ ದೀರ್ಘ ಆಯಸ್ಸಿಲ್ಲ. ಕೆಲವೇ ದಿನಗಳಲ್ಲಿ ಸಂಬಂಧ ಹಳಸುತ್ತದೆ. ಲೈಂಗಿಕ ಶೋಷಣೆ ಹೆಸರಿನಲ್ಲಿ ಕೊನೆಗೊಳ್ಳುತ್ತದೆ.
ವಯಸ್ಸಾದ ಪುರುಷರಿಗೆ ಹೆಣ್ಮಕ್ಕಳು ಅಟ್ರಾಕ್ಟ್ ಆಗೋದೇಕೆ? ಇದು ಸಮಸ್ಯೆಯೇ?
ಶುಗರ್ ಡ್ಯಾಡಿಯಿಂದಾಗುವ ನಷ್ಟ :
ವೈಯಕ್ತಿಕ ಜೀವನದ ಮೇಲೆ ಪರಿಣಾಮ : ಶುಗರ್ ಡ್ಯಾಡಿ ಡೇಟಿಂಗ್ ವೆಬ್ ಸೈಟ್ ಗಳು ಸಾಕಷ್ಟಿವೆ. ಇವು ನಿಮಗೆ ಅಗತ್ಯವಾದ ಸಂಗಾತಿಯನ್ನು ಒದಗಿಸುತ್ತವೆ. ಆದ್ರೆ ಕೆಲವೇ ದಿನಗಳಲ್ಲಿ ಈ ಸಂಬಂಧ ಬೋರ್ ಆಗುತ್ತದೆ. ಅಷ್ಟರಲ್ಲಾಗ್ಲೇ ಐಷಾರಾಮಿ ಬದುಕು ರೂಢಿಯಾಗಿರುತ್ತದೆ. ಸಂಗಾತಿಯಿಂದ ಉಡುಗೊರೆ, ಹಣ ಪಡೆದು ಶುಗರ್ ಬೇಬಿ ಎನ್ನಿಸಿಕೊಂಡಿರುವ ಯುವತಿಯರು ಮತ್ತೆ ಹಳೆ ಜೀವನಕ್ಕೆ ಮರಳಲು ಇಷ್ಟಪಡುವುದಿಲ್ಲ. ಇದಯ ವೈಯಕ್ತಿಕ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
ಭಾವನಾತ್ಮಕ ಬಾಂಧವ್ಯ : ಇಲ್ಲಿ ಭಾವನಾತ್ಮಕ ಬಾಂಧವ್ಯ ಇರೋದೇ ಇಲ್ಲ ಎನ್ನಲು ಸಾಧ್ಯವಿಲ್ಲ. ಸಂಗಾತಿ ಜೊತೆ ಸಮಯ ಕಳೆಯುವುದು ಹಾಗೂ ಶಾರೀರಿಕ ಸಂಬಂಧದ ನಂತ್ರ ಇಬ್ಬರ ಮಧ್ಯೆ ಭಾವನಾತ್ಮಕ ಸಂಬಂಧ ಬೆಳೆಯಬಹುದು. ಸಾಮಾನ್ಯವಾಗಿ ತಮಗಿಂತ ದೊಡ್ಡ ವ್ಯಕ್ತಿಗಳ ಜೊತೆ ಯುವತಿಯರು ಸಂಬಂಧ ಬೆಳೆಸಿರುತ್ತಾರೆ. ಹಿರಿಯ ವ್ಯಕ್ತಿಗಳು ಭಾವನಾತ್ಮಕವಾಗಿ ಹೆಚ್ಚು ಬಲ ಹೊಂದಿರುತ್ತಾರೆ. ಆದ್ರೆ ಚಿಕ್ಕ ವಯಸ್ಸಿನವರು ಬೇಗ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ತಾರೆ. ಇದು ಮುಂದೆ ಸಮಸ್ಯೆ ತಂದೊಡ್ಡುತ್ತದೆ.
ಹೆಚ್ಚಾಗುವ ನಿರೀಕ್ಷೆ : ಕಾಲಾಂತರದಲ್ಲಿ ಇಬ್ಬರ ಮಧ್ಯೆ ನಿರೀಕ್ಷೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಇದ್ರಿಂದ ಲೈಂಗಿಕ ದೌರ್ಜನ್ಯ, ಕಿರುಕುಳ ಶುರುವಾಗಬಹುದು.
ಶುಗರ್ ಡ್ಯಾಡಿ, ಗೋಲ್ಡ್ ಡಿಗ್ಗರ್ ಅಂದ್ರೇನು?
ಮಾನಸಿಕ ಒತ್ತಡ : ಶುಗರ್ ಡ್ಯಾಡಿ ಡೇಟಿಂಗ್ ನಲ್ಲಿ ಸಾಮಾನ್ಯವಾಗಿ ಶುಗರ್ ಡ್ಯಾಡಿ ಹೇಳಿದಂತೆ ಕೇಳಬೇಕಾಗುತ್ತದೆ. ಶುಗರ್ ಡ್ಯಾಡಿ ಮಾನಸಿಕ ಸಮಸ್ಯೆ ಬಗೆಹರಿಸಬೇಕು. ಅವರು ಇಷ್ಟಪಟ್ಟಿಲ್ಲವೆಂದ್ರೆ ಲೈಂಗಿಕ ಸುರಕ್ಷತೆ ಬಳಸುವಂತಿಲ್ಲ. ಬೇರೆ ಸ್ನೇಹಿತರ ಆರೋಗ್ಯಕರ ಸಂಬಂಧ, ಶುಗರ್ ಬೇಬಿ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.