ಪತ್ನಿ ಆತ್ಮಹತ್ಯೆ ಮಾಡ್ಕೊಂಡಾಗ ಈತ ಕಂಗಾಲಾಗಿದ್ದ. ಪತ್ನಿ ಸಾವಿಗೆ ತಾನು ಕಾರಣವಾ ಎನ್ನುವ ನೂರಾರು ಪ್ರಶ್ನೆ ಆತನಲ್ಲಿತ್ತು. ಅದೇ ನೋವಿನಲ್ಲಿರುವಾಗ ಫೋನ್ ಪರಿಶೀಲಿಸುವ ಅನಿವಾರ್ಯತೆ ಎದುರಾಯ್ತು. ಪತ್ನಿ ಫೋನ್ ಎಲ್ಲವನ್ನೂ ಬಿಚ್ಚಿಡ್ತು.
ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದ್ರಲ್ಲೂ ಪ್ರೀತಿಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ್ರೆ ಆಗ ನೋವಿನ ಜೊತೆ ಆಘಾತವಾಗುತ್ತದೆ. ನಮ್ಮಿಂದ ಏನು ತಪ್ಪಾಗಿದೆ ಎಂಬ ಪ್ರಶ್ನೆ ಮೂಡಲು ಶುರುವಾಗುತ್ತದೆ. 44 ವರ್ಷದ ಬ್ಲೇಕ್ ಬಟ್ಲರ್ ಗೂ ಅದೇ ಆಗಿದೆ. ಅತಿಯಾಗಿ ಪ್ರೀತಿಸುತ್ತಿದ್ದ ಪತ್ನಿ ಆತ್ಮಹತ್ಯೆ ಮಾಡಿಕೊಂಡಾಗ ಆತನಿಗೆ ಜಗತ್ತು ಕುಸಿದಂತೆ ಭಾಸವಾಗಿತ್ತು. ಪತ್ನಿ ನೆನಪಿನಲ್ಲೇ ಪುಸ್ತಕ ಬರೆಯಲು ಮುಂದಾದಾಗ ಒಂದೊಂದೇ ಸತ್ಯ ತೆರೆದುಕೊಳ್ತಾ ಹೋಯ್ತು. ಅದನ್ನು ನೋಡಿ ಬ್ಲೇಕ್ ಬಟ್ಲರ್ ಕಂಗಾಲಾದ. ಪತ್ನಿಯ ಸಾವು ನನ್ನಿಂದ ಆಗ್ಲಿಲ್ಲ ಎನ್ನುವ ನೆಮ್ಮದಿ ಕೂಡ ಆತನಿಗೆ ಸಿಕ್ತು.
ಘಟನೆ ನಡೆದಿರೋದು ಅಮೆರಿಕಾ (America) ಅಟ್ಲಾಂಟಾದಲ್ಲಿ. ಬ್ಲೇಕ್ ಬಟ್ಲರ್ ಪತ್ನಿ ಹೆಸರು ಮೌಲಿ ಬ್ರೋಡೆಕ್. ತುಂಬಾ ಸುಂದರವಾಗಿದ್ದ ಮೌಲಿ, ವೃತ್ತಿಯಲ್ಲಿ ಲೇಖಕಿ ಹಾಗೂ ವಿಶ್ವವಿದ್ಯಾನಿಲಯ (University) ದ ಶಿಕ್ಷಕಿ. ತನ್ನ 39 ವರ್ಷದಲ್ಲಿ, 2020ರ ಮಾರ್ಚ್ ತಿಂಗಳಲ್ಲಿ ಮೌಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಮೌಲಿ ಸಾವು ಪತಿ ಬ್ಲೇಕ್ ಬಟ್ಲರ್ ಗೆ ಆಘಾತವನ್ನುಂಟು ಮಾಡಿತ್ತು. ಆಕೆ ಆತ್ಮಹತ್ಯೆ (Suicide) ಗೆ ಕಾರಣವೇನು ಎಂಬುದೇ ತಿಳಿಯುತ್ತಿರಲಿಲ್ಲ. ಇಬ್ಬರು ಅನ್ಯೂನ್ಯವಾಗಿದ್ದ ಕಾರಣ ಪೊಲೀಸರು ಕೂಡ ಬ್ಲೇಕ್ ಬಟ್ಲರ್ ಮೇಲೆ ಅನುಮಾನಪಡಲು ಸಾಧ್ಯವಿರಲಿಲ್ಲ.
ಮದುಮಗಳಿಗೆ ಕೈತುಂಬ ಬಳೆ ಹಾಕೋದ್ಯಾಕೆ? ಅತಿ ಸೂಕ್ಷ್ಮ ವಿಚಾರವನ್ನು ಹಂಚಿಕೊಂಡ ಮಹಿಳೆಯರು!
ಪತ್ನಿ ನೆನಪಿನಲ್ಲೇ ಇದ್ದ ಬಟ್ಲರ್ ಆಕೆಯ ಬಗ್ಗೆ ಒಂದು ಪುಸ್ತಕ ಬರೆಯುವ ನಿರ್ಧಾರಕ್ಕೆ ಬಂದ. ಪುಸ್ತಕ ಬರೆಯಲು ಶುರು ಮಾಡಿದಾಗ, ಬ್ಲೇಕ್ ಗೆ ತನ್ನ ಪತ್ನಿ ಮೌಲಿ ಬಗ್ಗೆ ತಾನು ಸರಿಯಾಗಿ ತಿಳಿದಿಲ್ಲ ಎಂಬುದು ಗೊತ್ತಾಯ್ತು. ಆಕೆ ಡಿಪ್ರೆಶನ್ (Depression) ನಲ್ಲಿದ್ದಳು ಎಂಬುದನ್ನು ಬಿಟ್ಟು, ಆಕೆ ಚೆನ್ನಾಗಿ ಹಾಡ್ತಾಳೆ ಎಂಬುದು ಮಾತ್ರ ಬ್ಲೇಕ್ ಗೆ ಗೊತ್ತಿತ್ತೇ ವಿನಃ ಆಕೆಯ ಆಸಕ್ತಿಯನ್ನು ಬ್ಲೇಕ್ ತಿಳಿದಿರಲಿಲ್ಲ. ಹಾಗಾಗಿ ಆಕೆ ಮೊಬೈಲ್ (Mobile) ಮತ್ತು ಇಮೇಲ್ (e-Mail) ಚೆಕ್ ಮಾಡುವ ಕೆಲಸ ಶುರು ಮಾಡಿದ. ಆಗ ಬ್ಲೇಕ್ ದಂಗಾಗುವ ವಿಷ್ಯಗಳು ಅಲ್ಲಿ ಸಿಕ್ಕವು.
ಬಾಲ್ಯದಲ್ಲಿಯೇ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾಗಿ ಮೌಲಿ ಹೇಳಿದ್ದಳು. ಆಕೆ ತಾಯಿ ಮಗಳಿಗೆ ಪ್ರೀತಿ ತೋರಿಸಿರಲಿಲ್ಲ. ತಂದೆ ಬ್ಯಾಂಕ್ ಲೂಟಿ ಮಾಡಿ ಜೈಲಿಗೆ ಹೋಗಿದ್ದ. ಸ್ನೇಹಿತರಿಂದ ವಾಹನ ಖರೀದಿ ಮಾಡಿ, ಅದ್ರ ಕಂಡಿಷನ್ ಸರಿ ಇಲ್ಲ ಎನ್ನುವ ಕಾರಣಕ್ಕೆ ಮೌಲಿ ಜೈಲಿಗೆ ಹೋಗಿ ಬಂದಿದ್ದಳು. ಆಕೆ ಅಂಗಡಿಯಲ್ಲಿ ಕಳ್ಳತನ ಕೂಡ ಮಾಡಿದ್ದಳು. ಬಟ್ಲರ್ ಪ್ರೀತಿಯಲ್ಲಿ ಬಿದ್ಮೇಲೂ ಆಕೆ ಸುಧಾರಿಸಲಿಲ್ಲ. ಮದುವೆಯಾದ್ಮೇಲೂ ಮೌಲಿ ತನ್ನದೇ ಒಂದು ರಹಸ್ಯ ಜೀವನ ನಡೆಸುತ್ತಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಕಾಲೇಜು ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ದಳು. ವಿಶ್ವವಿದ್ಯಾನಿಲಯದಲ್ಲಿ ಅನೇಕ ಪುರುಷರ ಜೊತೆ ಆಕೆ ಸಂಬಂಧ ಹೊಂದಿದ್ದಳು. ಆಕೆ ಫೋನ್ ನಲ್ಲಿ ಅನೇಕ ಅಶ್ಲೀಲ ವಿಡಿಯೋಗಳು, ಫೋಟೋಗಳು ಸಿಕ್ಕಿದ್ವು. ಇಮೇಲ್ ಚೆಕ್ ಮಾಡಿದಾಗ, ಮೌಲಿ, ತನ್ನ ಕಾಲೇಜಿನ ಅನೇಕ ಹುಡುಗರಿಗೆ ಅಶ್ಲೀಲ ವಿಡಿಯೋ ಕಳಿಸಿರುವುದು ಬಟ್ಲರ್ ಗೆ ತಿಳಿಯಿತು.
ಅಭಿಷೇಕ್ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್ ವೈರಲ್!
ಒಬ್ಬ ಪುರುಷನ ಜೊತೆ ಶಾರೀರಿಕ ಸಂಬಂಧ (Physical Relationship) ಬೆಳೆಸಿದ್ದ ಮೌಲಿ, ಆತನಿಂದ ಹಣ ಕೂಡ ಪಡೆದಿದ್ದಳು. ಈ ವಿಷ್ಯ ತಿಳಿದ ಬಟ್ಲರ್ ನಿಟ್ಟುಸಿರುಬಿಟ್ಟಿದ್ದ. ನನ್ನಿಂದ ಪತ್ನಿ ಸಾವಾಗಿಲ್ಲ ಎನ್ನುವ ನೆಮ್ಮದಿ ನನಗೆ ಸಿಕ್ಕಿತ್ತು ಎನ್ನುವ ಬಟ್ಲರ್, ಪತ್ನಿ ಬಗ್ಗೆ ಒಂದು ಪುಸ್ತಕ ಬರೆದಿದ್ದಾನೆ. ಮೌಲಿ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಗೆ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗ್ತಿರಲಿಲ್ಲ ಎನ್ನುವ ನಿರ್ಧಾರಕ್ಕೆ ಬಂದ ಬಟ್ಲರ್, ಈಗ ಮತ್ತೊಂದು ಮದುವೆಯಾಗಿ ನೆಮ್ಮದಿಯಾಗಿದ್ದಾನೆ.