ಗಂಡ ಹೆಂಡತಿ ಜಗಳ ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ. ಆಗಾಗ ಆಗ್ತಿರಬೇಕು. ಪಬ್ಲಿಕ್ ಪ್ಲೇಸ್ ನಲ್ಲಿ ಕಿತ್ತಾಡಿಕೊಂಡ್ರೆ ನೋಡೋರಿಗೆ ಖುಷಿ ಸಿಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಆದ್ರೆ ನೆಟ್ಟಿಗರಿಗೆ ಮನರಂಜನೆ ಸಿಗುತ್ತದೆ.
ಪತಿ – ಪತ್ನಿ ಗಲಾಟೆ ಕಾಮನ್. ಸಂಸಾರ ಸುಖವಾಗಿರಬೇಕೆಂದ್ರೆ ಸಣ್ಣಪುಟ್ಟ ಜಗಳ, ಗಲಾಟೆ ಇರ್ಬೇಕು. ಹಾಗಂತ ಸಾರ್ವಜನಿ0ಕ ಪ್ರದೇಶದಲ್ಲಿ ಕಿತ್ತಾಡಿಕೊಂಡ್ರೆ ಚೆನ್ನಾಗಿರೋದಿಲ್ಲ. ಇದು ಜನರಿಗೆ ಪುಕ್ಕಟೆ ಮನರಂಜನೆ ನೀಡುವ ಜೊತೆಗೆ ನಿಮ್ಮ ಮರ್ಯಾದೆ ಹೋಗುತ್ತೆ. ಪತ್ನಿಯನ್ನು ತೃಪ್ತಿಪಡಿಸಲು ಸಾಧ್ಯವೇ ಇಲ್ಲ ಎಂದು ಗಂಡಸರು ಹೇಳಿದ್ರೆ ಪತಿಯನ್ನು ಸುಧಾರಿಸಲು ಅಸಾಧ್ಯ ಎನ್ನುತ್ತಾರೆ ಮಹಿಳೆಯರು. ಒಟ್ಟಿನಲ್ಲಿ ಮನೆ ಕೆಲಸದಿಂದ ಹಿಡಿದು ಕಾರ್ ವಿಂಡೋ ಓಪನ್ ಮಾಡೋ ವಿಷ್ಯದವರೆಗೆ ಎಲ್ಲದಕ್ಕೂ ಪತಿ – ಪತ್ನಿ ಮಧ್ಯೆ ಗಲಾಟೆ ನಡೆಯುತ್ತಿರುತ್ತದೆ.
ಸಾರ್ವಜನಿಕ (Public) ಪ್ರದೇಶದಲ್ಲಿ ಕಿತ್ತಾಡಿಕೊಂಡ ಗಂಡ – ಹೆಂಡತಿ ವಿಡಿಯೋಗಳು ಆಗಾಗ ವೈರಲ್ (Viral) ಆಗ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮಾಲ್, ಬಸ್ ಅಥವಾ ರಸ್ತೆಯಲ್ಲಲ್ಲ, ಈ ದಂಪತಿ ಫ್ಲೈಟ್ (Flight) ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೀಲ್ಸ್ (Reels) ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಲ್ಲಿ ಹೆಚ್ಚು ವೀವ್ಸ್ ಪಡೆದು ಹೆಸರು ಮಾಡುವ ಜೊತೆಗೆ ಹಣ ಗಳಿಸಲು ಜನರು ನಾನಾ ಕಸರತ್ತು ಮಾಡ್ತಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಚಿತ್ರವಿಚಿತ್ರವಾಗಿ ಆಡಲು ಶುರು ಮಾಡ್ತಾರೆ. ದೆಹಲಿ ಮೆಟ್ರೋ ಇದಕ್ಕೆ ಸದ್ಯ ಪ್ರಸಿದ್ಧಿ ಪಡೆದಿದೆ. ಈಗ ವಿಮಾನದ ಸರದಿ.
ವಿಮಾನದಲ್ಲಿ ಸಣ್ಣಗೆ ಕಿತ್ತಾಡಿಕೊಂಡಿದ್ರೆ ಯಾರೂ ಗಮನ ನೀಡ್ತಿರಲಿಲ್ಲ. ಪತ್ನಿ ಹೊಡೆಯಲು ಬಂದಾಗ ಪತಿ ಗಗನಸಖಿಯರನ್ನು ಸಹಾಯಕ್ಕೆ ಕೂಗಿದ್ದಾನೆ. ಇದು ವೈರಲ್ ಆಗಲು ಕಾರಣವಾಗಿದೆ. ಇದು ಸ್ಕ್ರಿಪ್ಟೆಡ್ ಅಂತಾ ಜನರು ಮಾತನಾಡಿಕೊಳ್ತಿದ್ದಾರೆ.
ಬರೀ ಸಾಂಗತ್ಯಕ್ಕೆ ಮಾತ್ರವಲ್ಲ, ಹುಡುಗ್ರು ಮದ್ವೆಯಾಗೋಕೆ ಬೇರೆ ಬೇರೆ ಕಾರಣಗಳಿವೆಯಂತೆ!
Tehelkaprank ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಗಂಡನಿಗೆ ಬಂತು ಕೋಪ,ಅಬ್ ಲೆ ಪಂಗೆ ಎಂದು ಶೀರ್ಷಿಕೆ ಹಾಕಲಾಗಿದೆ.
ವೈರಲ್ ಆಗುರುವ ವಿಡಿಯೋದಲ್ಲಿ ವಿವಾಹಿತ ದಂಪತಿ ವಿಮಾನದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪತಿ-ಪತ್ನಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಇಬ್ಬರ ಮಧ್ಯೆ ಚರ್ಚೆ ತಾರಕಕ್ಕೇರಿದೆ. ಕೋಪಗೊಂಡ ಪತ್ನಿ ಗಂಡನಿಗೆ ಕಪಾಳಮೋಕ್ಷ ಮಾಡಲು ಕೈ ಎತ್ತಿದ್ದಾಳೆ. ಆದ್ರೆ ಹೊಡೆದಿಲ್ಲ. ಇದರಿಂದ ಕುಪಿತಗೊಂಡ ಪತಿ ತಕ್ಷಣ ಗಗನಸಖಿಯನ್ನು ಸಹಾಯಕ್ಕೆ ಕರೆದಿದ್ದಾನೆ.
ಗಗನಸಖಿಗೆ ಪತಿ ಹೇಳಿದ್ದೇನು? : ನನ್ನ ಹೆಂಡತಿ ಹೊಡೆಯುತ್ತಿದ್ದಾಳೆ, ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ಪತಿ ಕೂಗಿಕೊಂಡಿದ್ದಾನೆ. ಏಕಾಏಕಿ ಪತಿ ರಿಯಾಕ್ಷನ್ ನೋಡಿ ಪತ್ನಿ ದಂಗಾಗಿದ್ದಾಳೆ. ತನ್ನ ತಲೆ ಕೆಳಗೆ ಹಾಕಿ, ಮುಖ ಮುಚ್ಚಿಕೊಂಡಿದ್ದಾಳೆ. ಇತ್ತ ಫ್ಲೈಟ್‌ನಲ್ಲಿ ಕುಳಿತವರು ಏನಾಯ್ತು ಎಂದು ಇವರತ್ತ ಬಗ್ಗಿ ನೋಡಿದ್ದಾರೆ. ಕೆಲವರು ನಗೋದನ್ನು ನೀವು ನೋಡ್ಬಹುದು. ನಂತ್ರ ಕೈ ತೆಗೆದು ಮುಸಿ ಮುಸಿ ನಗುವ ಪತ್ನಿ ಮತ್ತೆ ಪತಿಗೆ ಹೊಡೆಯುವ ಯತ್ನ ನಡೆಸುತ್ತಾಳೆ. ಇದನ್ನು ನೋಡಿದ ಪ್ರಯಾಣಿಕರು ನಗ್ತಿರೋದನ್ನು ನೀವು ಕಾಣ್ಬಹುದು. ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ಇವರ ವಿಡಿಯೋ ಮಾಡಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾನೆ.
ಟೈಗರ್ ಶ್ರಾಫ್ಗೆ ಶಾಕ್ ನೀಡಿದ ದಿಶಾ ಪಟಾನಿ: ಹೊಸ ಬಾಯ್ಫ್ರೆಂಡ್ ಪರಿಚಯಿಸಿದ ನಟಿ!
ವೈರಲ್ ವಿಡಿಯೋಕ್ಕೆ ಜನರ ಕಮೆಂಟ್ : ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋಕ್ಕೆ ಅನೇಕ ಲೈಕ್ಸ್ ಬಂದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ವಿಮಾನದಲ್ಲಿ ಇಂತಹ ಕೃತ್ಯ ಎಸಗಿದ ದಂಪತಿಯನ್ನು ಕೆಲವರು ನಿಂದಿಸಿದ್ದಾರೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ಪೂರ್ವ ಯೋಜಿತ ಎಂದು ಕರೆದಿದ್ದಾರೆ. ಇದು ಬಹಳ ಕೆಟ್ಟದ್ದಾಗಿದೆ ಎಂದು ಒಬ್ಬ ಕಮೆಂಟ್ ಮಾಡಿದ್ದಾನೆ. ಮಹಿಳೆ ತನ್ನ ಗಂಡನಿಗೆ ಹೊಡೆಯುತ್ತಿದ್ದಾಳೆ. ಇದು ತಮಾಷೆಯಲ್ಲ ಎಂದು ಬರೆದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಮುಖ ಮುಚ್ಚಿಕೊಳ್ಳೋದು ಎಷ್ಟು ಕಷ್ಟವಾಗುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಜನರು ವಿಡಿಯೋಕ್ಕಾಗಿ ಏನೇನೆಲ್ಲ ಮಾಡ್ತಾರೆ ಎಂದು ಮತ್ತೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.