ನಿದ್ರೆಯಲ್ಲಿ ನಾವು ಏನು ಮಾತಾಡಿರ್ತೇವೆ ನಮಗೆ ಗೊತ್ತಿರೋದಿಲ್ಲ. ಕೆಲವೊಮ್ಮೆ ನಮ್ಮ ಈ ಮಾತೇ ನಮಗೆ ಮುಳುವಾಗುತ್ತದೆ. ಗುಟ್ಟು ಹೊರಗೆ ಬರೋದಲ್ಲದೆ ಜೈಲು ಸೇರುವ ಸ್ಥಿತಿಯೂ ನಿರ್ಮಾಣ ಆಗ್ಬಹುದು.
ದಾಂಪತ್ಯ ಪ್ರೀತಿ – ವಿಶ್ವಾಸದ ಮೇಲೆ ನಿಂತಿರುತ್ತದೆ. ಮದುವೆಯಾದ್ಮೇಲೆ ಇಬ್ಬರ ಮಧ್ಯೆ ಯಾವುದೇ ಗುಟ್ಟು ಇರಬಾರದು. ಇಬ್ಬರು ಮುಕ್ತ ಮನಸ್ಸಿನಿಂದ ಜೀವನ ನಡೆಸುತ್ತಿದ್ದರೆ ಯಾವುದೇ ಗಲಾಟೆ, ಜಗಳಕ್ಕೆ ಅವಕಾಶ ಇರೋದಿಲ್ಲ. ಆದ್ರೆ ಎಲ್ಲರ ಜೀವನದಲ್ಲೂ ಇದು ಸಾಧ್ಯವಿಲ್ಲ. ಅನೇಕರು ತಮ್ಮ ಜೀವನವನ್ನು ಗುಟ್ಟಾಗಿಟ್ಟುಕೊಂಡಿರುತ್ತಾರೆ. ಅನೇಕಾನೇಕ ಸಂಗತಿಯನ್ನು ತಮ್ಮ ಸಂಗಾತಿ ಜೊತೆ ಹಂಚಿಕೊಳ್ಳೋದಿಲ್ಲ. ಯಾರಿಂದಲೋ ಸಂಗಾತಿಯ ಗುಟ್ಟು ರಟ್ಟಾದಾಗ ಅಥವಾ ಸಂಗಾತಿಯೇ ಬಾಯ್ಬಿಟ್ಟಾಗ ದಾಂಪತ್ಯದಲ್ಲಿ ಬಿರುಗಾಳಿ ಏಳುತ್ತದೆ. ಸಂಗಾತಿ ಮೋಸ ಮಾಡಿದ್ದಾರೆ ಎಂಬ ಭಾವನೆ ಮೂಡುತ್ತದೆ. ಕೆಲವೊಮ್ಮೆ ಸಂಗಾತಿ ನಿಮಗೆ ಮೋಸ ಮಾಡದೆ ಬೇರೆಯವರಿಗೆ ಮೋಸ ಮಾಡಿದ್ರೂ ಅದನ್ನು ಸಹಿಸಲು ಸಾಧ್ಯವಾಗೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥ ಕಥೆಗಳು ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ಸುದ್ದಿ ಚರ್ಚೆಯಲ್ಲಿದೆ.
ರಾತ್ರಿ (Night) ನಿದ್ರೆ ಮಾಡುವಾಗ ಮಾತನಾಡುವ, ನಡೆದಾಡುವ ಜನರಿದ್ದಾರೆ. ಅವರು ತಮ್ಮ ಜೀವನದಲ್ಲಿ ನಡೆಯುವ ಅನೇಕ ವಿಷ್ಯಗಳನ್ನು ರಾತ್ರಿ ನಿದ್ರೆ (night) ಯಲ್ಲಿ ಬಾಯ್ಬಿಡುತ್ತಾರೆ. ಈ ಮಹಿಳೆಗೂ ಇದೇ ದೊಡ್ಡ ಶಾಪವಾಗಿದೆ. ರಾತ್ರಿ ನಿದ್ರೆಯಲ್ಲಿ ಪತ್ನಿ ಹೇಳಿದ ಮಾತು ಕೇಳಿ ದಂಗಾದ ಪತಿ ಆಕೆಯನ್ನು ಜೈಲಿಗೆ ನೂಕಿದ್ದಾನೆ.
undefined
ನಂಬಿದ ಪತ್ನಿಯಿಂದ ಮೋಸ (Cheating) : ಆಂಟೊಯಿನ್ ಮತ್ತು ರುತ್ ಫೋರ್ಟೆ ದಂಪತಿ ಮಧ್ಯೆ ಗಲಾಟೆ ನಡೆದಿದೆ. ಇಬ್ಬರು 2010ರಲ್ಲಿ ಮದುವೆಯಾಗಿದ್ದರು. ಆಂಟೊಯಿನ್ ಗೆ 61 ವರ್ಷ. ರುತ್ ಪೋರ್ಟೆಗೆ 47 ವರ್ಷ. ಮದುವೆಯಾದ್ಮೇಲೆ ಇಬ್ಬರೂ ಬಹಳ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಅವರ ವೈವಾಹಿಕ ಜೀವನ ತುಂಬಾ ಚೆನ್ನಾಗಿ ಸಾಗಿತ್ತು. ಇಬ್ಬರ ಮಧ್ಯೆ ಯಾವುದೇ ಗುಟ್ಟಿರಲಿಲ್ಲ. ಆದರೆ ಒಂದು ರಾತ್ರಿ ಇದ್ದಕ್ಕಿದ್ದಂತೆ ಆಂಟೊಯಿನ್ ತನ್ನ ಹೆಂಡತಿ ರುತ್ ಫೋರ್ಟೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಆಂಟೊಯಿನ್ ಮತ್ತು ರುತ್ ಫೋರ್ಟೆ ಮಧ್ಯೆ ಆ ರಾತ್ರಿ ಯಾವುದೇ ಜಗಳ ನಡೆದಿರಲಿಲ್ಲ. ಯಾವುದೇ ವಿಷ್ಯಕ್ಕೆ ಇಬ್ಬರ ಮಧ್ಯೆ ಮನಸ್ತಾಪವಾಗಿರಲಿಲ್ಲ. ಆದ್ರೆ ರುತ್ ಫೋರ್ಟೆ ನಿದ್ರೆಯಲ್ಲಿ ಆಡಿದ ಮಾತೇ ಆಕೆಯನ್ನು ಸಂಕಷ್ಟಕ್ಕೆ ನೂಕಿದೆ. ಆಂಟೊಯಿಲ್ ಕಂಗಾಲ್ ಆಗಿದ್ದಲ್ಲದೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾನೆ. ಮನೆಗೆ ಬಂದ ಪೊಲೀಸರು ರುತ್ ಫೊರ್ಟೆಯನ್ನು ಬಂಧಿಸಿ, ಜೈಲಿಗೆ ಹಾಕಿದ್ದಾರೆ.
ನಡು ವಯಸ್ಸಿನ ಹೆಣ್ಣು ಬೇರೊಬ್ಬನೊಂದಿಗೆ ಹೋಗೋದು ಲೈಂಗಿಕ ಆಸೆಗೋಸ್ಕರನಾ?
ರುತ್ ಫೊರ್ಟೆ ನಿದ್ರೆಯಲ್ಲಿ ಹೇಳಿದ್ದೇನು? : ರುತ್ ಹಾಗೂ ಆಂಟೊಯಿಲ್ ಇಬ್ಬರು ಆ ದಿನ ರಾತ್ರಿ ಸುಖ ನಿದ್ರೆಯಲ್ಲಿದ್ದರು. ಈ ವೇಳೆ ರುತ್ ಫೊರ್ಟೆ ಮಾತನಾಡಲು ಶುರು ಮಾಡಿದ್ದಾಳೆ. ಕುರುಡ ಮಹಿಳೆಯ ಎಟಿಎಂ ಅನ್ನು ರುತ್ ಫೊರ್ಟೆ ಕದ್ದಿರೋದಾಗಿ ನಿದ್ರೆಯಲ್ಲಿ ಹೇಳಿದ್ದಾಳೆ. ದಿವ್ಯಾಂಗ ಮಹಿಳೆ ಎಟಿಎಂ ಕದ್ದಿದ್ದಲ್ಲದೆ ಆಕೆ ಹಣದಿಂದ ತನ್ನಿಷ್ಟದ ವಸ್ತುಗಳನ್ನು ಖರೀದಿ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಇದನ್ನು ಕೇಳಿದ ಪತಿ ಆಘಾತಕ್ಕೊಳಗಾಗಿದ್ದಾನೆ. ಪತ್ನಿ ರುತ್ ತನ್ನಿಂದ ಏನನ್ನೂ ಮುಚ್ಚಿಡೋದಿಲ್ಲವೆಂದು ಆಂಟೊಯಿಲ್ ಭಾವಿಸಿದ್ದ. ಆದ್ರೆ ಅದು ತಪ್ಪಾಗಿತ್ತು. ಅಲ್ಲದೆ ರುತ್ ಒಬ್ಬ ಅಸಹಾಯಕ ಮಹಿಳೆಗೆ ಮೋಸ ಮಾಡಿರುವುದು ಆಂಟೊಯಿಲ್ ಗೆ ಇಷ್ಟವಾಗ್ಲಿಲ್ಲ. ತಾನು ಪ್ರೀತಿಸಿದ್ದ ಮಹಿಳೆ ಇತರರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎನ್ನುವ ಆಂಟೊಯಿಲ್, ಮೋಸ ಮಾಡಿದ ಮಹಿಳೆಗೆ ತಕ್ಕ ಶಿಕ್ಷೆ ಆಗ್ಬೇಕು ಎನ್ನುತ್ತಾನೆ. ಹಾಗಾಗಿಯೇ ಆತ ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ರಿತ್ ಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ರುತ್ ತಪ್ಪು ಮಾಡಿದ್ದಾಳೆ ಎಂಬುದು ಕೋರ್ಟ್ ನಲ್ಲಿ ಸಾಭೀತಾಗಿದೆ. ಹಾಗಾಗಿ ಕೋರ್ಟ್ ಆಕೆಗೆ 16 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.