First Night ನಲ್ಲಿ ಏನಾಯ್ತು? ಗಂಡನ ಮನೆಯೇ ಬಿಟ್ಟ ವಧು!

Published : May 25, 2022, 05:29 PM IST
First Night ನಲ್ಲಿ ಏನಾಯ್ತು? ಗಂಡನ ಮನೆಯೇ ಬಿಟ್ಟ ವಧು!

ಸಾರಾಂಶ

ಅನೇಕ ಸಂಬಂಧಗಳು ಶುರುವಾಗುವ ಮೊದಲೇ ಅಂತ್ಯವಾಗಿರುತ್ತದೆ. ಮದುವೆ ಹೊಸ್ತಿಲಿಗೆ ಬಂದ ಎಷ್ಟೋ ಸಂಬಂಧಗಳು ಮುರಿದು ಬಿದ್ದಿವೆ. ಮೊದಲ ರಾತ್ರಿ ಎರಡು ಜೀವಗಳು ಒಂದಾಗುವ ಬದಲು ಬೇರೆಯಾದ ಅನೇಕ ಘಟನೆಗಳಿವೆ. ಈಗ ಇಂಥಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.   

ಮದುವೆ (Wedding) ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಘಟ್ಟ. ವಿವಾಹದ ನಂತ್ರ ಪತಿ (Husband) – ಪತ್ನಿ (Wife) ಜೀವನ ಪರ್ಯಂತ ಒಂದಾಗಿರುವ ಕನಸು (Dream) ಕಾಣ್ತಾರೆ. ಒಂದಾಗಿ ಬಾಳ್ವೆ ಮಾಡ್ತೇವೆಂದು ಪ್ರಮಾಣ ಮಾಡ್ತಾರೆ. ಆದ್ರೆ ಅನೇಕರ ಬಾಳಲ್ಲಿ ಮದುವೆಯೇ ಮುಳುವಾಗುತ್ತದೆ. ಕೆಲ ತಿಂಗಳ ನಂತ್ರ ದಾಂಪತ್ಯ ಮುರಿದು ಬೀಳುವುದಿದೆ. ಮತ್ತೆ ಕೆಲವರು ವರ್ಷದಲ್ಲಿ ದೂರವಾಗ್ತಾರೆ. ಇನ್ನೂ ಕೆಲವರು 7 – 8 ವರ್ಷ ಬಾಳ್ವೆ ಮಾಡಿ ದೂರವಾಗ್ತಾರೆ. ಅತೀ ಅಪರೂಪ ಎನ್ನುವಂತಹ ಜೋಡಿ, ಮೊದಲ ರಾತ್ರಿಯೇ ದೂರವಾಗ್ತಾರೆ. ಈಗ ಇಂಥಹದ್ದೇ ಘಟನೆಯೊಂದು ನಡೆದಿದೆ. ಮೊದಲ ರಾತ್ರಿ ಕಳೆದು ಬೆಳಗಾಗುವುದ್ರೊಳಗೆ ವಧು ಮನೆಯವರಿಗೆ ಕರೆ ಮಾಡಿದ್ದಾಳೆ. ಈ ಹುಡುಗ ನನಗೆ ಬೇಡ ಎಂದಾಕೆ ಮನೆಯವರ ಜೊತೆ ತವರು ಸೇರಿದ್ದಾಳೆ. ಈ ವಿಷ್ಯ ಊರೆಲ್ಲ ಗುಲ್ಲಾಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದು ಸರಿಯಾಗಿ ಯಾರಿಗೂ ತಿಳಿದಿಲ್ಲ. 

ಘಟನೆ ನಡೆದಿದ್ದು ಎಲ್ಲಿ ? : ಕಾನ್ಪುರದ (Kanpura) ಹಮೀರ್ಪುರ ಜಿಲ್ಲೆಯಲ್ಲಿ ನಡೆದ ಮದುವೆಯೊಂದು ಸದ್ಯ ಚರ್ಚೆಯಲ್ಲಿದೆ. ಒಬ್ಬರು ಒಂದೊಂದು ಕಥೆ ಹೇಳ್ತಿದ್ದಾರೆ. ಸರ್ಕಾರಿ ಉದ್ಯೋಗಿಯೊಬ್ಬರ ಮಗನ ಮದುವೆ ಮೇ 20ರಂದು ಅದ್ಧೂರಿಯಾಗಿ ನಡೆದಿದೆ. ಇಡೀ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮನೆಗೆ ಸೊಸೆ ಬರ್ತಾಳೆಂಬ ಖುಷಿ ಎಲ್ಲರಲ್ಲಿ ಕಾಣ್ತಿತ್ತು. ಕಾನ್ಪುರದಲ್ಲಿಯೇ ಮದುವೆ ನೆರವೇರಿತ್ತು. ಇಬ್ಬರು ಹಸೆಮಣೆ ಏರಿದ್ದರು. ಮೇ 20ರಂದು ಮದುವೆ ನಡೆದ್ರೆ ಮೇ 21ರಂದು ವಧು ತನ್ನ ಗಂಡನ ಮನೆಗೆ ಬಂದಿದ್ದಳು. ಮೇ 22ರಂದು ಹೊಟೇಲ್ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಕರು, ಸ್ನೇಹಿತರು ಬಂದಿದ್ದರು.

ಮೊದಲ ರಾತ್ರಿಗೆ (First Night) ತಯಾರಿ : ಹೊಟೇಲ್ ನಲ್ಲಿಯೇ ಮೊದಲ ರಾತ್ರಿಗೆ ತಯಾರಿ ಮಾಡಲಾಗಿತ್ತು. ಇಬ್ಬರೂ ಮೊದಲ ರಾತ್ರಿಯಂದು ಕೋಣೆಗೆ ಹೋಗಿದ್ದು ಸತ್ಯ. ಆದ್ರೆ ಅಲ್ಲಿ ಏನಾಯ್ತು ಎಂಬುದು ಯಾರಿಗೂ ತಿಳಿದಿಲ್ಲ. ಬೆಳಿಗ್ಗೆ ಅಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿತ್ತು.

Extra Marital Affair: ಸ್ನೇಹಿತನ ಜೊತೆ ಒಮ್ಮೆ ಸೆಕ್ಸ್, ಗರ್ಭ ಧರಿಸಿದ ನಾರಿಗೆ ಗೊಂದಲ

ಬೆಳಿಗ್ಗೆ ವಧು ಮಾಡಿದ್ದೇನು ? : ಮೊದಲ ರಾತ್ರಿ ಪತಿ ಜೊತೆ ಕಳೆದ ವಧುವಿಗೆ ಏನಾಯ್ತೋ ತಿಳಿದಿಲ್ಲ. ಪತಿ – ಪತ್ನಿ ಮಧ್ಯೆ ಯಾವ ವಿಷ್ಯಕ್ಕೆ ಗಲಾಟೆಯಾಗಿದೆ ಎಂಬುದು ಪತ್ತೆಯಾಗಿಲ್ಲ. ಆದ್ರೆ ಬೆಳಗಾಗ್ತಿದ್ದಂತೆ ವಧು ತನ್ನ ಕುಟುಂಬಸ್ಥರಿಗೆ ಕರೆ ಮಾಡಿದ್ದಾಳೆ. ಈತನ ಜೊತೆ ಇರಲು ನನಗೆ ಸಾಧ್ಯವಿಲ್ಲ. ಹಾಗಾಗಿ ನಾನು ತವರಿಗೆ ವಾಪಸ್ ಬರ್ತಿದ್ದೇನೆ ಎಂದಿದ್ದಾಳೆ. ಆಕೆ ಕರೆ ಬರ್ತಿದ್ದಂತೆ ಕುಟುಂಬಸ್ಥರು ಹೊಟೇಲ್ ಗೆ ಬಂದಿದ್ದಾರೆ. ವಧುವನ್ನು ಕರೆದುಕೊಂಡು ವಾಪಸ್ ಆಗಿದ್ದಾರೆ. 

ಕೊತ್ವಾಲಿ ಠಾಣೆ ತಲುಪಿದ ವಿಷ್ಯ : ಮಗಳನ್ನು ತವರಿಗೆ ಕರೆದುಕೊಂಡು ಹೋಗುವ ವೇಳೆ ಕುಟುಂಬಸ್ಥರು ಕೊತ್ವಾಲಿ ಪೊಲೀಸ್ ಠಾಣೆಗೆ (Police Station) ತೆರಳಿದ್ದಾರೆ. ಅಲ್ಲಿ ಯಾರ ಮೇಲೂ ದೂರು ನೀಡಿಲ್ಲ. ಬದಲಾಗಿ ವಿವಾಹವಾದ ಮಗಳನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಮಾಹಿತಿ ನೀಡಿದ್ದಾರೆ. ಮಗಳನ್ನು ಕರೆದುಕೊಂಡು ಠಾಣೆಗೆ ಬಂದಿದ್ದರು, ಆದ್ರೆ ಯಾವುದೇ ದೂರನ್ನು ಯಾರ ಮೇಲೂ ನೀಡಿಲ್ಲವೆಂದು ಪೊಲೀಸ್ ಠಾಣೆ ಸಿಬ್ಬಂದಿ ಹೇಳಿದ್ದಾರೆ.

Relationship Tips : ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ರೂ ಮಾಜಿ ಮರೆಯೋಕಾಗ್ತಿಲ್ಲ

ಊರವರ ಬಾಯಿಗೆ ಆಹಾರ : ಮನೆಗೆ ಹಾಕಿದ್ದ ತೋರಣವನ್ನು ತೆಗೆಯುವ ಮೊದಲೇ ಮನೆಗೆ ಬಂದ ಸೊಸೆ ವಾಪಸ್ ಆಗಿದ್ದಾಳೆ. ಮದುವೆ ಸಂತೋಷದಲ್ಲಿರಬೇಕಾಗಿದ್ದ ವರನ ಮನೆ ಬಿಕೋ ಎನ್ನುತ್ತಿದೆ. ಹಾಗೆ ಊರವರ ಬಾಯಿಗೆ ಇದು ಆಹಾರವಾಗಿದೆ. ವಧು ಯಾಕೆ ಹೀಗೆ ಮಾಡಿದ್ದಾಳೆಂಬುದು ಸರಿಯಾಗಿ ತಿಳಿದಿಲ್ಲದ ಕಾರಣ ಒಬ್ಬೊಬ್ಬರು ಒಂದೊಂದು ಕಥೆ ಹೆಣೆದು ಹೇಳ್ತಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?