ಮದುವೆಗೂ ಮುನ್ನ ಎಲ್ಲವೂ ಸರಿ ಇತ್ತು, ಆದ್ಮೇಲೆ ಹೆಂಡ್ತಿ ಸಿಡುಕುತ್ತಾಳಂತೆ!

Published : Oct 11, 2022, 04:39 PM ISTUpdated : Oct 11, 2022, 04:57 PM IST
ಮದುವೆಗೂ ಮುನ್ನ ಎಲ್ಲವೂ ಸರಿ ಇತ್ತು, ಆದ್ಮೇಲೆ ಹೆಂಡ್ತಿ ಸಿಡುಕುತ್ತಾಳಂತೆ!

ಸಾರಾಂಶ

ಮದುವೆಗೆ ಮುಂಚೆ ಚೆನ್ನಾಗಿದ್ದ ಹೆಂಡತಿ ಈಗ ಮಾತೆತ್ತಿದ್ರೆ ಬೈತಾಳೆ ಗುರು ಅಂತಾ ಅನೇಕರು ಹೇಳಿದ್ದನ್ನು ನೀವು ಕೇಳಿರಬಹುದು. ಮದುವೆಯಾಗ್ತಿದ್ದಂತೆ ಗರ್ಲ್ ಫ್ರೆಂಡ್, ಪತ್ನಿಯಾಗಿರ್ತಾಳೆ. ಸಿಡಿಮಿಡಿ ಅಂತಾ ಮುಖದಲ್ಲಿ ಕೋಪ ತೋರಿಸ್ತಾಳೆ. ಮಹಿಳೆ ಬದಲಾಗೋದಕ್ಕೂ ಕಾರಣ ಇದೆ.   

ಸಂಬಂಧದ ಬಲೆ ತುಂಬಾ ಜಟಿಲವಾಗಿರುತ್ತದೆ. ಅದ್ರಲ್ಲಿ ಯಾವಾಗ, ಹೇಗೆ ಸಿಕ್ಕಿಹಾಕಿಕೊಳ್ಳುವುದು ಎಂಬುದೇ ತಿಳಿಯೋದಿಲ್ಲ. ಸಂಬಂಧದ ವಿಷ್ಯ ಬಂದಾಗ ಅತಿ ಕಠಿಣ ಎನ್ನಿಸೋದು ಗಂಡ – ಹೆಂಡತಿ ಸಂಬಂಧ. ಪ್ರಪಂಚದ ಅತ್ಯಂತ ಸಂಕೀರ್ಣ ಸಂಬಂಧಗಳಲ್ಲಿ ಇದು ಒಂದಾಗಿದೆ. ಎಲ್ಲ ಪತಿ -ಪತ್ನಿ ಒಂದೇ ರೀತಿ ಜೀವನ ನಡೆಸುವುದಿಲ್ಲ. ಇಬ್ಬರು ಸ್ನೇಹಿತರಂತೆ ಬದುಕಬಹುದು ಅಥವಾ  ಸದಾ ಜಗಳವಾಡುತ್ತಾ ಗುನುಗುತ್ತಾ ಜೀವನ ನಡೆಸಬಹುದು. ಅದು ಅವರವರ ವ್ಯಕ್ತಿತ್ವವನ್ನು ಅವಲಂಭಿಸಿದೆ. 

ಮದುವೆ (Marriage) ಯಾಗ್ತಿದ್ದಂತೆ ಹೆಂಡತಿ ಬದಲಾಗ್ತಾಳೆ ಎನ್ನುವ ಮಾತಿದೆ. ಪ್ರೀತಿ (Love) ಸಿ ಮದುವೆಯಾದ ನಿಮ್ಮ ಸ್ನೇಹಿತರ ಬಾಯಿಂದ ಈ ಮಾತನ್ನು ನೀವು ಕೇಳಿರ್ತೀರಿ ಕೂಡ. ಗರ್ಲ್ ಫ್ರೆಂಡ್ (Girlfriend ) ಆಗಿದ್ದಾಗ್ಲೇ ಚೆನ್ನಾಗಿತ್ತು. ಹೆಂಡತಿಯಾದ್ಮೇಲೆ ಯಾಕೋ ತುಂಬಾ ಕಿರಿಕಿರಿ ಶುರು ಮಾಡಿದ್ದಾಳೆ ಅಂತಾ ಅನೇಕರು ಹೇಳ್ತಿರುತ್ತಾರೆ. ಮದುವೆಯಾದ್ಮೇಲೆ ಮಹಿಳೆ ಬದಲಾಗೋದು ಸಹಜ. ಆಕೆ ಮನಸ್ಥಿತಿ ಬದಲಾಗುತ್ತದೆ. ಇದಕ್ಕೆ ಅನೇಕ ಬಾರಿ ಆಕೆ ಕಾರಣವಾಗಿರೋದಿಲ್ಲ. ಪರಿಸ್ಥಿತಿ ಆಕೆಯನ್ನು ಬದಲಿಸುತ್ತೆ ಅಂದ್ರೆ ತಪ್ಪಾಗೋದಿಲ್ಲ.  

ಮದುವೆಯ ನಂತ್ರ ಜಗಳ (Fight) ಇದ್ದಿದ್ದೆ : ಮದುವೆಯಾಗಿ ಆರು ತಿಂಗಳಿಗೇ ಅನೇಕ ದಂಪತಿ ಮಧ್ಯೆ ಜಗಳ ಶುರುವಾಗಿರುತ್ತದೆ. ಆರು ತಿಂಗಳಲ್ಲಿ ಪತಿ – ಪತ್ನಿ ಅತಿ ಹೆಚ್ಚು ಜಗಳವಾಡ್ತಾರೆ ಎಂದು ವಿಜ್ಞಾನವು ನಂಬುತ್ತದೆ. ಮದುವೆಯ ನಂತರದ ಜಗಳಗಳು ಸಹಜ ಎಂದು ಸೈಕಾಲಜಿ ಟುಡೇ ಸಮೀಕ್ಷೆಯ ವರದಿ ಹೇಳುತ್ತದೆ. ಮದುವೆಯ ನಂತರ ಇಬ್ಬರು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.  ಇದೇ ಇಬ್ಬರ ಮಧ್ಯೆ ಜಗಳವಾಗಲು ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.  

ಮದುವೆ ನಂತ್ರ ಹೆಂಡತಿ ಯಾಕಿಂಗೆ ಆಡ್ತಾಳೆ ? : ಹುಡುಗ ಹಾಗೂ ಹುಡುಗಿ ಇಬ್ಬರಿಗೂ ಮದುವೆ ಅನೇಕ ಬದಲಾವಣೆ ತರುತ್ತದೆ. ಇಬ್ಬರೂ ಮದುವೆಗೆ ವಿಭಿನ್ನ ಭಾವನಾತ್ಮಕ ಪ್ರತಿಕ್ರಿಯೆ ನೀಡುತ್ತಾರೆ. ಮದುವೆಯ ನಂತರ ಬರುವ ಪ್ರಮುಖ ಸಮಸ್ಯೆ ಹೊಂದಾಣಿಕೆ.  ಮದುವೆ ನಂತ್ರ ಹೊಂದಾಣಿಕೆ ಮಾಡಿಕೊಳ್ಳುವುದ್ರಲ್ಲಿ ಮಹಿಳೆಯರು ಮೊದಲಿಗರು. ಹೊಂದಾಣಿಕೆ ಅವರ ಕಿರಿಕಿರಿಗೆ ಮೊದಲ ಕಾರಣವೂ ಹೌದು.   

ಒಂಟಿ ಒಂಟಿಯಾಗಿರೋದು, ಬೋರೋ ಬೋರು ಅನ್ನಬೇಡಿ, ಲಾಭವೂ ಇದೆ

ಹೊಸ ವಾತಾವರಣ ಕಷ್ಟ : ಮದುವೆಯಾದ್ಮೇಲೆ ತಂದೆ ಮನೆಯಿಂದ ಮಹಿಳೆ ಗಂಡನ ಮನೆಗೆ ಬರ್ತಾಳೆ. ಹೊಸ ಮನೆ, ಹೊಸ ಪರಿಸರ, ಹೊಸ ಜನರ ಜೊತೆ ಹೊಂದಿಕೊಳ್ಳಲು ಅವಳಿಗೆ ಕಷ್ಟವಾಗುತ್ತದೆ. ಆಗ ಆಕೆ ಕೆರಳುತ್ತಾಳೆ. ಚಿಕ್ಕ ಚಿಕ್ಕ ವಿಷ್ಯಕ್ಕೆ ಸಿಡಿಮಿಡಿಯಾಗ್ತಾಳೆ. 

ಸ್ವೀಕಾರ : ಮಹಿಳೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕೆಂದ್ರೆ ಆಕೆಗೆ ಆಪ್ತತೆ ಬೇಕು. ಎಲ್ಲರೂ ಆಕೆಯನ್ನು ಸ್ವೀಕರಿಸಬೇಕು. ಆದ್ರೆ ಹೊಸ ಮನೆಯಲ್ಲಿ ಆಕೆಯನ್ನು ಹೊಸಬಳಂತೆ ನೋಡಿದಾಗ, ಆಕೆಯನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳದೆ ಹೋದಾಗ ಆಕೆಗೆ  ಸಮಸ್ಯೆ ಶುರುವಾಗುತ್ತದೆ. ಏನು ಮಾಡಿದ್ರೆ ಸರಿ, ಏನು ಮಾಡಿದ್ರೆ ತಪ್ಪು ಎಂಬುದು ಆಕೆಗೆ ಗೊತ್ತಾಗೋದಿಲ್ಲ. ಗೊಂದಲ ಆಕೆಯ ಮೂಡ್ ಬದಲಿಸುತ್ತದೆ.

ವೈಯಕ್ತಿಕ ಜಾಗ : ಮದುವೆಯ ನಂತರ ಪರ್ಸನಲ್ ಸ್ಪೇಸ್ ತುಂಬಾ ಕಡಿಮೆ ಆಗುತ್ತೆ. ಮಹಿಳೆಯರಿಗೆ ತಮ್ಮ ನೆಚ್ಚಿನ ಕೆಲಸವನ್ನು ಮಾಡಲು ಕಷ್ಟವಾಗುತ್ತದೆ. ಇದ್ರಿಂದ ಅವರು ಸಿಡುಕಲು ಶುರು ಮಾಡ್ತಾರೆ ಎನ್ನುತ್ತಾರೆ ತಜ್ಞರು. 

ಗಂಡನನ್ನು ಗೆಲ್ಲೋದು ಸುಲಭವಲ್ಲ, ಕೆಲವೊಂದು ಟ್ಯಾಕ್ಟಿಕ್ಸ್ ಬಳಸೋದು ಅನಿವಾರ್ಯ

ಆಸೆಗೆ ತಣ್ಣೀರು : ಮದುವೆಯ ನಂತರ  ಕೆಲವು ಆಸೆಗಳನ್ನು ಮಹಿಳೆಯರು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಅನೇಕ ಮಹಿಳೆಯರು ತಮ್ಮ ವೃತ್ತಿ, ಉದ್ಯೋಗ, ನಗರ, ಕೆಲಸ ಇತ್ಯಾದಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ. ಇದು ಕೂಡ ಅವರನ್ನು ಬದಲಿಸುತ್ತದೆ.  ಮದುವೆಯ ನಂತರ ಮಹಿಳೆಯರು ಒಂದೇ ಬಾರಿಗೆ ಸಾಕಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು. ಒಂದೇ ಬಾರಿ ಒತ್ತಡ ಬಿದ್ದಾಗ, ಬದಲಾವಣೆ ಕಷ್ಟವಾದಾಗ ಅವರು ಕಿರಿಕಿರಿಗೊಳಗಾಗ್ತಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು