ಮಕ್ಕಳ ನಿರೀಕ್ಷೆಯಲ್ಲಿರೋ ಪೋಷಕರಿಗೊಂದು ಕಿವಿ ಮಾತು, ಹೀಗ್ ಪ್ರಿಪೇರ್ ಆದ್ರೆ ಸೇಫ್

Published : Oct 10, 2022, 05:57 PM ISTUpdated : Oct 11, 2022, 05:29 PM IST
ಮಕ್ಕಳ ನಿರೀಕ್ಷೆಯಲ್ಲಿರೋ ಪೋಷಕರಿಗೊಂದು ಕಿವಿ ಮಾತು, ಹೀಗ್ ಪ್ರಿಪೇರ್ ಆದ್ರೆ ಸೇಫ್

ಸಾರಾಂಶ

ಮೊದಲ ಬಾರಿ ಅಮ್ಮನಾಗುವುದು, ಅಪ್ಪನಾಗುವುದು ಖುಷಿಯ ಸಂಗತಿಯೇ ಆದರೂ ಅದು ಬಹುದೊಡ್ಡ ಬದಲಾವಣೆಯ ಸಮಯ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಮಕ್ಕಳಾದ ಬಳಿಕ ದಂಪತಿಯಲ್ಲಿ ಜಗಳವಾಗುವುದು ಹೆಚ್ಚಾಗುತ್ತದೆ. ಆ ಸಮಯವನ್ನು ನಿಭಾಯಿಸುವುದು ಅತಿ ಅಗತ್ಯ.   

ಮೊದಲ ಬಾರಿ ಅಮ್ಮನಾಗುವುದು, ಅಪ್ಪನಾಗುವುದು ಅದೆಷ್ಟೊಂದು ರೋಮಾಂಚಕ ಅನುಭವವೆಂದರೆ ಬಹು ದಿನಗಳ ಕಾಲ ಅದರಿಂದ ಆಚೆ ಬರಲು ಸಾಧ್ಯವಾಗುವುದಿಲ್ಲ. ಆದರೆ, ಮಗುವಾದ ಕೆಲವೇ ಸಮಯದಲ್ಲಿ “ನಮಗೆ ಮಗುವೇ ಬೇಡವಾಗಿತ್ತುʼ ಎಂದು ಅಂದುಕೊಳ್ಳುವವರೂ ಕಡಿಮೆ ಇಲ್ಲ. ಏಕೆಂದರೆ, ಪಾಲಕರಾಗುವುದು ಸುಲಭವಲ್ಲವಲ್ಲ! ಮಕ್ಕಳಾದ ಬಳಿಕ ಬದುಕು ಅನೇಕ ರೀತಿಯಲ್ಲಿ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಅಮ್ಮ-ಅಪ್ಪನೂ ತಮ್ಮ ದಿನಚರಿ, ಬದುಕಿನ ಶೈಲಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ತಂದುಕೊಳ್ಳಬೇಕಾಗುತ್ತದೆ. ಇಂತಹ ಹೊಂದಾಣಿಕೆ ಮಾಡಿಕೊಳ್ಳುವ ಕಿರಿಕಿರಿ ಒಂದೆಡೆಯಾದರೆ, ಮಕ್ಕಳ ಹಠ, ಅವರ ಅಳು, ಅವರಿಗೆ ಬೇಕಾದಂತೆ ಮನೆಯನ್ನು ವ್ಯವಸ್ಥಿತಗೊಳಿಸುವುದು, ಅವರ ಬೇಕು-ಬೇಡಗಳು ಹೈರಾಣಾಗಿಸುತ್ತವೆ. ಆದರೆ, ಇವುಗಳನ್ನೆಲ್ಲ “ಟೇಕ್‌ ಇಟ್‌ ಈಸಿʼ ಥರ ತೆಗೆದುಕೊಂಡು ಹೋಗಬೇಕೇ ವಿನಾ ದೊಡ್ಡ ತಲೆಭಾರದ ಜವಾಬ್ದಾರಿ ಎಂಬಂತೆ ಬಿಹೇವ್‌ ಮಾಡಿದರೆ ಖುಷಿಯಾಗಿರಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ಜಗತ್ತಿನಲ್ಲಿ ನೀವೊಬ್ಬರೇ ಅಲ್ಲ, ಮಕ್ಕಳ ಪಾಲಕರಾಗಿರುವುದು. ಎಲ್ಲ ಪಾಲಕರೂ ಒಂದಿಷ್ಟು ಕಿರಿಕಿರಿ, ರೇಜಿಗೆಗಳನ್ನು ಈ ಸಮಯದಲ್ಲಿ ಅನುಸರಿಸುತ್ತಾರೆ. ಮಕ್ಕಳು ಒಂದು ಹಂತಕ್ಕೆ ದೊಡ್ಡವರಾಗುವವರೆಗೂ ಅತಿಯಾದ ತಾಳ್ಮೆ ಹಾಗೂ ಪ್ರೀತಿ ಬೇಕಾಗುತ್ತದೆ. ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.

•    ವ್ಯವಸ್ಥಿತ ದಿನಚರಿ (Organized Schedule) ಇಲ್ಲದಿರುವುದು
ಮಕ್ಕಳಾದ ಬಳಿಕ ಅತ್ಯಂತ ಶಿಸ್ತುಬದ್ಧ (Neat) ಹಾಗೂ ವ್ಯವಸ್ಥಿತ ದಿನಚರಿ ಇರುವುದಿಲ್ಲ. ಹಿಂದಿನಂತೆಯೇ ವ್ಯವಸ್ಥಿತ ದಿನಚರಿ ಅನುಸರಿಸಲು ಹೋದರೆ ಒಂದೋ ಮಕ್ಕಳಿಗೆ (Children) ಸಮಸ್ಯೆಯಾಗುತ್ತದೆ, ಇಲ್ಲವೇ ಅದು ಸಾಧ್ಯವಿಲ್ಲದೆ ನಿಮಗೆ ಕಿರಿಕಿರಿ (Irritation) ಹೆಚ್ಚಾಗುತ್ತದೆ. ಪುರುಷರಿಗೆ (Male) ಈ ಸಮಸ್ಯೆ ಹೆಚ್ಚು. ಹೀಗಾಗಿ, ಏರುಪೇರಾಗುವ ದಿನಚರಿಗೆ ಹೊಂದಾಣಿಕೆ ಮಾಡಿಕೊಳ್ಳಿ. ಸಾಧ್ಯವಾದಷ್ಟೂ ಮಕ್ಕಳ ಲಾಲನೆ-ಪಾಲನೆಗೆ ನಿಮ್ಮಾಕೆಗೆ ಸಹಾಯ ಮಾಡಿ. ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ. ಮಹಿಳೆಯರೂ (Mother) ಅಷ್ಟೆ, ಒಂದು ದಿನ ಯಾವುದೋ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬೇಸರ ಮಾಡಿಕೊಳ್ಳಲು ಹೋಗಬೇಡಿ. ಉದ್ಯೋಗಸ್ಥ ಮಹಿಳೆಯಾಗಿದ್ದರೆ ಮಗುವಿನ ದೇಖರೇಕೆ ನೋಡಿಕೊಳ್ಳಲು ಹೆಚ್ಚು ಸಮಯ (Time) ಕೊಡಿ. ಮನೆಯ  ಕೆಲಸಗಳಲ್ಲಿ ಮಗುವನ್ನು ನಿರ್ಲಕ್ಷ್ಯ ಮಾಡಬೇಡಿ. ಮಕ್ಕಳು ನೋಡುತ್ತ ನೋಡುತ್ತ ಬೆಳೆದುಬಿಡುತ್ತಾರೆ, ಆ ಬಳಿಕ ನಿಮಗೆ ಪಶ್ಚಾತ್ತಾಪವಾಗಬಾರದು.

ಸೂಪರ್ ಪೇರೆಂಟ್‌ ಆಗೋಕೆ ಸೂಪರ್ ಟಿಪ್ಸ್‌!

•    ವಾಗ್ವಾದ, ಜಗಳ (Arguments and Fights) ಸಾಮಾನ್ಯ
ಮಕ್ಕಳ ಕಾರಣಕ್ಕಾಗಿ ಪಾಲಕರು (Parents) ಕಿತ್ತಾಡುವುದು ಹೆಚ್ಚು. ಜಗಳ ಮಾಡುತ್ತಿದ್ದರೆ ಮನೆಯಲ್ಲಿ ಒತ್ತಡ (Stress) ಹೆಚ್ಚಾಗುತ್ತದೆಯೇ ಹೊರತು, ಮತ್ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೆ, ಇದರಿಂದ ಮಕ್ಕಳ ಮೇಲೆ ಭಾರೀ ಕೆಟ್ಟ ಪರಿಣಾಮ (Bad Effect) ಉಂಟಾಗುತ್ತದೆ. ಹೀಗಾಗಿ, ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದನ್ನು ಕಲಿತುಕೊಳ್ಳಿ. ಮಕ್ಕಳೆದುರು ಕಿತ್ತಾಡಬೇಡಿ. ಅವರ ಹೆಸರನ್ನು ಎಳೆದುತಂದು ಜೋರಾಗಿ ಮಾತನಾಡಬೇಡಿ. ಮಕ್ಕಳಿಗೆ ನಿಮ್ಮ ಭಾವನೆಗಳು (Feelings) ಗೊತ್ತಾಗುತ್ತವೆ. ಸಾಮಾನ್ಯವಾಗಿ ಮಕ್ಕಳಿಗೆ ಶಿಸ್ತು ಕಲಿಸುವುದು, ಪಾಲಕರ ದುರಭ್ಯಾಸಗಳು, ಮಕ್ಕಳ ಹೋಂವರ್ಕ್, ಶಾಲೆಯಲ್ಲಾಗುವ ಏನೋ ಕಿರಿಕಿರಿ ಇತ್ಯಾದಿ ಕಾರಣದಿಂದ ಮನೆಯಲ್ಲೂ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ. ಕೇವಲ ನಿಮ್ಮ ಕೆಲಸದ ಮೇಲೊಂದೇ ಗಮನ ಕೇಂದ್ರೀಕರಿಸದೆ ಮಕ್ಕಳೊಂದಿಗೆ ಬೆರೆಯುವುದು ಉತ್ತಮ ಪರಿಹಾರ. ಅಪ್ಪನೂ ಅಮ್ಮನೂ ಜತೆಯಾಗಿ ಮಕ್ಕಳ ಜತೆ ಬೆರೆಯುವುದು ಅತ್ಯಂತ ಅಗತ್ಯ. ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆಯೂ ಕಿತ್ತಾಟ ಉಂಟಾಗುವುದು ಸಾಮಾನ್ಯ. ಅದನ್ನು ಸಹ ಪಾಲಕರು ಕುಳಿತು ತಾಳ್ಮೆಯಿಂದ ಮಾತನಾಡಿ ನಿಮ್ಮ ಜವಾಬ್ದಾರಿಯನ್ನು (Responsibility) ಹಂಚಿಕೊಳ್ಳಿ. ಅದನ್ನು ಅನುಸರಿಸಿ. 

ಪಾಲಕರು ಮಕ್ಕಳಿಗಿಂತ ಮೊದ್ಲು ಈ ಅಭ್ಯಾಸ ಕಲಿತುಕೊಂಡಿರಬೇಕು

•    ಹಿರಿಯರ ಕಾರಣಕ್ಕಾಗಿ ವೈಮನಸ್ಸು
ಮನೆಯಲ್ಲಿ ಹಿರಿಯರಿದ್ದರೆ (Old Aged) ಮಕ್ಕಳೊಂದಿಗೆ ಅವರ ಬಾಂಧವ್ಯ ಇರುವುದು ಸಹಜ. ಹಿರಿಯರು ಅವರದ್ದೇ ಪದ್ಧತಿಯಲ್ಲಿ ಮಕ್ಕಳನ್ನು ಬೆಳೆಸಲು ನೋಡಬಹುದು. ಅವರಿಗೆ ಏನಾದರೂ ಹೇಳಿಕೊಡಲು ಯತ್ನಿಸಬಹುದು. ಅದಕ್ಕೆ ತಡೆಯೊಡ್ಡಬೇಡಿ. ಹಲವು ವಿಚಾರಗಳಲ್ಲಿ ಹಿರಿಯರ ಮಾರ್ಗದರ್ಶನ (Guidance) ಮಕ್ಕಳಿಗೆ ಅಗತ್ಯ. ನಿಮಗೆ ಅವರೊಂದಿಗೆ ತಿಕ್ಕಾಟವಿದ್ದರೂ ಮಕ್ಕಳೆದುರು ಅದರ ಪ್ರದರ್ಶನ ಮಾಡಬೇಡಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಕ್ಯಾಂಡಿನೇವಿಯನ್ ವಿಧಾನ: ಸಂಗಾತಿಗಳು ಒಟ್ಟಿಗೆ ಉತ್ತಮವಾಗಿ ನಿದ್ರಿಸಲು ಸೂಕ್ತ!
ಚಳಿಗಾಲದಲ್ಲಿ ಹೆಂಡ್ತಿ ಕಾಲು ಕೋಲ್ಡ್​ ಆಗಿದ್ರೆ ಗಂಡನ ಕಾಲು ಬೆಚ್ಚಗಿರೋದು ಯಾಕೆ? ಕಾರಣ ಇಲ್ಲಿದೆ