ಹ್ಯಾಂಡ್ಸಮ್ ಇದ್ದಾರೆ ಅಂತಲ್ಲ…. ಈ ಕಾರಣಕ್ಕಾಗಿ ಹುಡುಗಿಯರಿಗೆ ಇಷ್ಟವಾಗ್ತಾರೆ ಗಡ್ಡ ಇರೋ ಪುರುಷರು

ಗಡ್ಡಧಾರಿ ಪುರುಷರ ಕಡೆಗೆ ಹುಡುಗಿಯರು ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಇದರ ಹಿಂದಿನ ಕಾರಣ ಅವರ ಲುಕ್ ಚೆನ್ನಾಗಿರುತ್ತೆ ಅಂತ ನೀವು ಅಂದುಕೊಂಡಿರಬಹುದು, ಆದರೆ ಇದಕ್ಕಿಂತ ದೊಡ್ಡ ಕಾರಣವಿದೆ. ಅದೇನು ಅನ್ನೋದನ್ನು ನೋಡೋಣ. 
 

Why women attracts towards beard men more than clean shaved men pav

ಈ ಜಗತ್ತಿನಲ್ಲಿ, ಆರಂಭದಲ್ಲಿ ಹೆಚ್ಚಿನ ಪುರುಷರು ಗಡ್ಡ ಬಿಟ್ಟುಕೊಂಡಿದ್ದರು. ಸಮಯ ಬದಲಾದಾಗ, ಪುರುಷರು ಕ್ಲೀನ್ ಶೇವ್ ಲುಕ್ ನಲ್ಲಿ ಕಾಣಿಸಿಕೊಳ್ಳೊದಕ್ಕೆ ಶುರು ಮಾಡಿದ್ದರು. ಈಗ ಮತ್ತೊಮ್ಮೆ ಗಡ್ಡವನ್ನು ಇಟ್ಟುಕೊಳ್ಳುವ (beard man) ಟ್ರೆಂಡ್ ಜನರಲ್ಲಿ ಹೆಚ್ಚಾಗಿದೆ. ಆದರೂ ಹೆಚ್ಚಿನ ಜನರಿಗೆ ತಾವು, ಗಡ್ಡ ಇಟ್ಟುಕೊಳ್ಳಬೇಕೇ ಅಥವಾ ಕ್ಲೀನ್ ಶೇವ್ ಮಾಡಬೇಕೇ ಅನ್ನೋ ಬಗ್ಗೆ ಇನ್ನೂ ಡೌಟ್ ಇದೆ.  ಹಾಲಿವುಡ್ ಅಥವಾ ಬಾಲಿವುಡ್ ಹೀರೋಗಳು ಕ್ಲೀನ್ ಶೇವ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಕೆಜಿಎಫ್ ಸಿನಿಮಾದಲ್ಲಿ ಯಶ್ ನೋಡಿದ ಬಳಿಕ ಗಡ್ಡ ಬಿಡೋ ಕ್ರೇಜ್ ಕೂಡ ಜನರಲ್ಲಿ ಹೆಚ್ಚಾಗಿದೆ.  ಅಂದಹಾಗೆ, ಗಡ್ಡ ಬಿಡೋದ್ರಿಂದ ಹುಡುಗರು ಹ್ಯಾಡ್ಸಮ್ ಆಗಿ ಕಾಣಿಸ್ತಾರೆ, ಅದಕ್ಕಾಗಿಯೇ ಹುಡುಗಿಯರು ಅವರನ್ನು ಇಷ್ಟಪಡುತ್ತಾರೆ ಅಂತ ನೀವು ಅಂದುಕೊಂಡಿದ್ದೀರಾ?. ಬನೀವು ತಿಳಿದುಕೊಂಡಿರೋದು ತಪ್ಪು.  ಏಕೆಂದರೆ ಕ್ಲೀನ್ ಶೇವ್ (clean shave) ಮತ್ತು ಬಿಯರ್ಡ್ ಲುಕ್ ಬಗ್ಗೆ ಸಂಶೋಧನೆಯೊಂದು ಮಾಹಿತಿ ನೀಡಿದೆ. ಅದೇನು ಅನ್ನೋದನ್ನು ನೋಡೋಣ. 

ಸಂಶೋಧನೆ ಏನು ಹೇಳುತ್ತದೆ?
ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗಡ್ಡಧಾರಿ ಪುರುಷರು ಹೊಸ ಸಂಗಾತಿಗಳನ್ನು ಹುಡುಕೋದಕ್ಕೆ ಇಷ್ಟಪಡಲ್ಲ. ತಮ್ಮನ್ನು ಪ್ರೀತಿಸುವ, ತಮ್ಮ ಜೊತೆಗೆ ಇರುವಂತಹ ಸಂಗಾತಿ ಜೊತೆ ಜೀವನ ಕಳೆಯೋಕೆ ಇಷ್ಟ ಪಡ್ತಾರೆ.  ಅದೇ ಕ್ಲೀನ್ ಶೇವ್ ಮಾಡಿದ ಪುರುಷರು ಹೊಸ ಸಂಗಾತಿಯನ್ನು ಹುಡುಕೋದಕ್ಕೆ ಇಷ್ಟ ಪಡ್ತರಂತೆ. ಅದಕ್ಕಾಗಿಯೇ ಹುಡುಗಿಯರು ಕ್ಲೀನ್ ಶೇವ್ ಗಳ ಬದಲು ಬಿಯರ್ಡ್ ಲುಕ್ ಹೊಂದಿರುವ ಪುರುಷರಲ್ಲಿ ಹೆಚ್ಚು ನಂಬಿಕೆ ಹೊಂದಿದ್ದಾರೆ.

Latest Videos

ಎಷ್ಟು ಜನರನ್ನು ಅಧ್ಯಯನ ಮಾಡಲಾಯಿತು?
ಈ ಅಧ್ಯಯನವು 18 ರಿಂದ 40 ವರ್ಷದೊಳಗಿನ 414 ಪುರುಷರನ್ನು ಒಳಗೊಂಡಿತ್ತು ಮತ್ತು ಅವರ "ಮುಖದ ಕೂದಲು ಬೆಳವಣಿಗೆಯ ಸ್ಫೂರ್ತಿ" ಯನ್ನು ಕಂಡುಹಿಡಿಯಲು ಪ್ರಯತ್ನಿಸಿತು. ಮುಖದ ಮೇಲೆ ಹೆಚ್ಚು ಕೂದಲು ಹೊಂದಿರುವ ಪುರುಷರು ರೊಮ್ಯಾನ್ಸ್ ಮತ್ತು ಫ್ಯಾಮಿಲ್ ಎರಡೂ ಕಡೆ ತಮ್ಮನ್ನು ತೊಡಗಿಸಿಕೊಳ್ಳೊದನ್ನು ಇಷ್ಟ ಪಡ್ತಾರೆ. ತಮ್ಮ ಕುಟುಂಬವನ್ನು ನೋಡಿಕೊಳ್ಳುವುದು ತಮ್ಮ ಜವಾಬ್ಧಾರಿ ಎಂದುಕೊಳ್ಳುತ್ತಾರೆ ಈ ಬಿಯರ್ಡ್ ಪುರುಷರು.  ಇದಿಷ್ಟೇ ಅಲ್ಲದೇ ಮುಖದ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಮೆಂಟೇನ್ ಮಾಡಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಪ್ರತಿದಿನ ಮುಖದ ಕೂದಲಿನ ಆರೈಕೆಗೆ ಸಮಯ, ಪ್ರಯತ್ನ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ಅದಕ್ಕೆಲ್ಲಾ ಸಮಯ ಕೊಡುತ್ತಾರೆ ಅಂದ್ರೆ, ಅವರಿಗೆ ಜವಾಬ್ಧಾರಿ ಬಗ್ಗೆಯೂ ಹೆಚ್ಚಿನ ಅರಿವು ಇರುತ್ತೆ. ಹಾಗಾಗಿಯೇ ಬಿಯರ್ಡ್ ಮೆನ್ ತುಂಬಾನೆ ಸ್ಪೆಷಲ್. 

vuukle one pixel image
click me!
vuukle one pixel image vuukle one pixel image