ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ 66ರ ಹರೆಯದ ಬ್ಯಾಂಕ್ ಮ್ಯಾನೇಜರ್ ಲವ್ವಿಡವ್ವಿ ಫೋಟೋ, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ. ಹೊಟೆಲ್ ಒಂದರಲ್ಲಿ ಚುಂಬಿಸುತ್ತಿರುವ ದೃಶ್ಯ ಬಹಿರಂಗವಾದ ಬೆನ್ನಲ್ಲೇ ಇದೀಗ ಸಂಬಂಧ ಕುರಿತು ಪ್ರಶ್ನೆಗಳು ಎದ್ದಿದೆ.
ಹಾಂಗ್‌ಕಾಂಗ್(ಜ.29) ವಿವಾಹಿತ 66ರ ಹರೆಯದ ಬ್ಯಾಂಕ್ ಮ್ಯಾನೇಜರ್ ಹಾಗೂ ಯುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಡುವಿನ ಲವ್ವಿ ಡವ್ವಿ ಇದೀಗ ಭಾರಿ ಸದ್ದು ಮಾಡುತ್ತಿದೆ. ರೆಸ್ಟೋರೆಂಟ್ ಒಂದರಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಯುವತಿ ಚುಂಬಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಬಹಿರಂಗವಾಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಈ ಫೋಟೋ ವಿಡಿಯೋಗಳು ಹರಿದಾಡುತ್ತಿದ್ದಂತೆ 34ರ ಹರೆಯದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಜೊತೆ ರಿಲೇಶನ್‌ಶಿಪ್‌ನಲ್ಲಿರುವುದಾಗಿ ಯುವತಿ ಸ್ಪಷ್ಟಪಡಿಸಿದ್ದಾಳೆ.
ಹಾಂಗ್‌ಕಾಂಗ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಾಚೆಲ್ ಝಾಂಗ್, ಎನ್‌ಜಿ ಸಾಕ್ ಅನ್ನೋ ಹೆಸರಿನಿಂದ ಜನಪ್ರಿಯವಾಗಿದ್ದಾರೆ. ಟೈ ಸಾಂಗ್ ಬ್ಯಾಂಕ್‌ನ ಮ್ಯಾನೇಜರ್ 66 ವರ್ಷದ ಪ್ಯಾಟ್ರಿಕ್ ಮಾ ಚಿಂಗ್ ಹಾಂಗ್ ಜೊತೆ ಕಳೆದ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದರು. ಈ ವೇಳೆ ಹಲವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದರು. ಆದರೆ ಚುಂಬನ ಫೋಟೋಗಳು ಬಹಿರಂಗವಾಗುತ್ತಿದ್ದಂತೆ ಇವರ ರಿಲೇಶನ್‌ಶಿಪ್ ಮಾಹಿತಿ ಹೊರಬಿದ್ದಿದೆ.
ಸಿನಿಮಾದಲ್ಲಿ ಒಂದೇ ಒಂದು ಕಿಸ್ ಸೀನ್, ಬಾಲಿವುಡ್ ತಾರೆಗೆ ವೀಸಾ ನಿರಾಕರಿಸಿದ ಪಾಕ್
ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಇವರ ರಿಲೇಶನ್‌ಶಿಪ್ ಮಾಹಿತಿ ಹರಿದಾಡುತ್ತಿದ್ದಂತೆ, ರಾಚೆಲ್ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಕಳದ 9 ವರ್ಷದಿಂದ ಮಾ ಚಿಂಗ್ ಜೊತೆ ರಿಲೇಶನ್‌ಶಿಪ್‌ನಲ್ಲಿರುವುದಾಗಿ ರಾಚೆಲ್ ಸ್ಪಷ್ಟಪಡಿಸಿದ್ದಾರೆ. ರಾಚೆಲ್ 18ನೇ ವಯಸ್ಸಿಗೆ ಮದುವೆಯಾಗಿ ಬಳಿಕ ವಿಚ್ಚೇದನ ಪಡೆದುಕೊಂಡಿದ್ದಾರೆ. ಈ ವಿಚ್ಚೇದನ ಬಳಿಕ ಮಗಳ ಜೊತೆ ಏಕಾಂಗಿಯಾಗಿದ್ದ ರಾಚೆಲ್ ಕಳೆದ ಕೆಲ ವರ್ಷಗಳಿಂದ ಮಾ ಚಿಂಗ್ ಜೊತೆಗಿದ್ದಾರೆ.
ಇತ್ತ ಹಾಂಗ್‌ಕಾಂಗ್‌ನ ಐದು ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಮಾ ಚಿಂಗ್, ಇಡೀ ಕುಟುಂಬ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 30 ವರ್ಷಗಳಿಂದ ಲಿಸಾ ಕುಂಗ್ ಮಾ ಜೊತೆ ದಾಂಪತ್ಯ ಜೀವನದಲ್ಲಿರುವ ಮಾ ಚಿಂಗ್ ಇದೀಗ ಯೂ ಟರ್ನ್ ತೆಗೆದಕೊಂಡಿದ್ದಾರೆ. ಲಿಸಾ ಕುಂಗ್ ಮಾ ಜೊತೆ ವೈವಾಹಿಕ ಜೀವನದಲ್ಲಿರುವಾಗಲೇ ರಾಚೆಲ್ ಜೊತೆ ಮಾ ಚಿಂಗ್ ಸಂಬಂಧ ಬೆಳೆಸಿದ್ದಾರೆ. ಮಾ ಚಿಂಗ್ ಹಾಗೂ ಲಿಸಾ ದಂಪತಿಗಳಿಗೆ ಒಬ್ಬಳು ಮಗಳಿದ್ದಾಳೆ. ಇದೀಗ ತಂದೆಯ ಸಂಬಂಧದಿಂದ ಮಗಳು ಆಘಾತಗೊಂಡಿದ್ದಾರೆ.
ಹೈ ಸೊಸೈಟಿ ಕಾರ್ಯಕ್ರಮದಲ್ಲಿ ಮ್ಯಾನೇಜರ್ ಪ್ಯಾಟ್ರಿಕ್ ಮಾ ಚಿಂಗ್ ಹಾಗೂ ರಾಚೆಲ್ ಇಬ್ಬರು ಭೇಟಿಯಾಗಿದ್ದರು. ಈ ಭೇಟಿಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಆದರ ಕೆಲವೇ ದಿನಗಳಲ್ಲಿ ಈ ಪರಿಚಯ ಸ್ನೇಹವಾಗಿ ತಿರುಗಿತ್ತು. ಬಳಿಕ ಪ್ರೀತಿಯಾಗಿತ್ತು. ಕಳೆದ 9 ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ. ಇವರಿಬ್ಬರು ಗೌಪ್ಯವಾಗಿ ತಮ್ಮ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಇಬ್ಬರು, ಚುಂಬಿಸುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಈ ಮೂಲಕ ಇವರಿಬ್ಬರ ಸಂಬಂಧ ಖಚಿತಗೊಂಡಿತ್ತು.
ರಾಚೆಲ್‌ಗೆ ಈಗಾಗಲೇ ಪ್ಯಾಟ್ರಿಕ್ ಮಾ ಚಿಂಗ್ ದುಬಾರಿ ಗಿಫ್ಟ್ ನೀಡಿದ್ದಾರೆ. ಬರೋಬ್ಬರಿ 11 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮನೆಯನ್ನು ರಾಚೆಲ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ಜೊತೆಗೆ ಐಷಾರಾಮಿ ಕಾರು, ಆಭರಣ ಸೇರಿದಂತೆ ಹಲವು ಉಡುಗೊರೆ ನೀಡಿದ್ದಾರೆ. ಇದೀಗ ಮ್ಯಾನೇಜರ್ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಪ್ಯಾಟ್ರಿಕ್ ಮಾ ಚಿಂಗ್ ಹೆಸರಿನ ಆಸ್ತಿಗಳೂ ಕೂಡ ರಾಚೆಲ್ ಪಾಲಾಗಿರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಇವರ ಸಂಬಂಧ ಹಾಂಕ್‌ಕಾಂಗ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ದೇಶದ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಪ್ಯಾಟ್ರಿಕ್ ಸಂಬಂಧ ಹಲವರಿಗೆ ಆಘಾತ ತಂದಿದೆ.
ದುಬೈ ಕಾರ್ ರೇಸ್‌ನಲ್ಲಿ ನಟ ಅಜಿತ್ ಗೆಲುವು: ಪತ್ನಿ ಶಾಲಿನಿಗೆ ಮುತ್ತು ಕೊಟ್ಟ ಫೋಟೋ ವೈರಲ್!