ಶಾರೀರಿಕ ಸಂಬಂಧ ಬೆಳೆಸಿದ ನಂತ್ರ, ಬೆಳೆಸುವ ವೇಳೆ ಅಥವಾ ಅದ್ರ ಬಗ್ಗೆ ಆಲೋಚನೆ ಮಾಡಿದ್ರೂ ಕೆಲವರು ಸೀನುತ್ತಿರುತ್ತಾರೆ. ಇದೆಂಥ ಕಿರಿಕಿರಿ, ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ನಿಮ್ಮನ್ನೂ ಕಾಡ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
ನೆಗಡಿಯಾದಾಗ ಸೀನು ಬರೋದು ಸಾಮಾನ್ಯ. ಇನ್ನು ಕೆಲವರಿಗೆ ವಾತಾವರಣ ಬದಲಾದ್ರೆ ಸೀನು ಬರುತ್ತದೆ. ಅಲರ್ಜಿ ಸಮಸ್ಯೆ ಹೊಂದಿರುವ ಜನರು ಬೆಳಿಗ್ಗೆ ಎದ್ದ ನಂತ್ರ ಅಥವಾ ಧೂಳಿನ ಪ್ರದೇಶಕ್ಕೆ ಹೋದಾಗ ಸೀನುವುದಿದೆ. ನಮ್ಮ ದೇಹದಲ್ಲಾಗುವ ಸಹಜ ಕ್ರಿಯೆ ಸೀನು. ಅದನ್ನು ನಾವು ನಿಯಂತ್ರಿಸಬಾರದು. ಸೀನು ಬಂದಾಗ ಸೀನ್ಬೇಕು. ಈ ಸೀನಿಗೂ ಸೆಕ್ಸ್ ಗೂ ಸಂಬಂಧವಿದೆ. ಕೆಲವರು ಶಾರೀರಿಕ ಸಂಬಂಧ ಬೆಳೆಸುವ ವೇಳೆ ಅಥವಾ ಸಂಭೋಗದ ಬಗ್ಗೆ ಆಲೋಚನೆ ಮಾಡುವ ವೇಳೆ ಸೀನುತ್ತಾರೆ. ನಿಮಗೂ ಹೀಗೆ ಆಗ್ತಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.
ಸೆಕ್ಸ್ (Sex) ವೇಳೆ ಸೀನು (Sneezing) ಬರಲು ಕಾರಣವೇನು? :
ಸೆಕ್ಸ್ ಹಾಗೂ ಸೀನಿನ ಬಗ್ಗೆ ಬ್ರಿಟನ್‌ನಲ್ಲಿ ಸಂಶೋಧನೆ (Research) ನಡೆದಿದೆ. ಸಂಶೋಧನೆಯ ಪ್ರಕಾರ, ಸಂಭೋಗದ ಸಮಯದಲ್ಲಿ ಪ್ಯಾರಾಸಿಂಪಥೆಟಿಕ್ ನರಮಂಡಲವು ಸಕ್ರಿಯಗೊಳ್ಳುತ್ತದೆ. ಇದು ಲೈಂಗಿಕತೆಯ ನಂತರ ಅನೇಕ ಬಾರಿ ಹೆಚ್ಚು ಸೀನುವಿಕೆಯನ್ನು ಉಂಟುಮಾಡುತ್ತದೆ. ಮೂಗಿನ ನರಕೋಶಗಳು ಮತ್ತು ರಕ್ತನಾಳಗಳು ಲೈಂಗಿಕತೆಯ ಕಾರಣದಿಂದಾಗಿ ಉತ್ಸುಕಗೊಂಡಾಗ ಸೀನು ಬರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಜರ್ನಲ್ ಆಫ್ ದಿ ರಾಯಲ್ ಸೊಸೈಟಿ ಆಫ್ ಮೆಡಿಸಿನ್ ಕೂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಅದರ ಪ್ರಕಾರ, ಸೀನುವಿಕೆ ಮತ್ತು ಲೈಂಗಿಕ ಚಟುವಟಿಕೆಯು ಒಂದೇ ಸ್ವಯಂ ನಿರೋಧಕ ವ್ಯವಸ್ಥೆಗೆ ಸಂಬಂಧಿಸಿವೆ. ಅದು ಎರಡನ್ನೂ ನಿಯಂತ್ರಿಸುತ್ತದೆ. ಹಾಗಾಗಿ ನೀವು ಸೆಕ್ಸ್ ಮಾಡಿದಾಗ ಅಥವಾ ಅದರ ಬಗ್ಗೆ ಯೋಚಿಸಿದಾಗ ಸೀನು ಬರುವ ಸಾಧ್ಯತೆ ಇರುತ್ತದೆ.
ನಿಮಗೂ ಹೀಗೆಲ್ಲಾ ಆಗ್ತಿದ್ರೆ ಫ್ರೆಂಡ್ ಮೇಲೆ ನಿಮಗೂ ಲವ್ ಆಗಿದೆ ಅಂತಾಯ್ತು!
ಲೈಂಗಿಕ ಸಮಯದಲ್ಲಿ ಉಸಿರಾಟ ಹೆಚ್ಚು ಶುಷ್ಕವಾಗಿರುತ್ತದೆ ಎಂದು ಸಂಶೋಧನೆ ಹೇಳಿದೆ. ಒಣ ಹವೆಯಿಂದಾಗಿ ಮೂಗಿನಲ್ಲಿ ಶುಷ್ಕತೆಯೂ ಹೆಚ್ಚುತ್ತದೆ. ಇದು ಕಿರಿಕಿರಿ ಮತ್ತು ಸೀನುವಿಕೆಗೆ ಕಾರಣವಾಗುತ್ತದೆ. ಅಧ್ಯಯನದ ಪ್ರಕಾರ, ಸೀನುವಿಕೆಯು ಮೆದುಳಿನ ನರಗಳಿಗೆ ಸಂಬಂಧಿಸಿದೆ, ಅದು ಮೂಗಿನಲ್ಲಿ ಏನಾದರೂ ಸಿಲುಕಿಕೊಂಡಿದೆ ಎಂದು ದೇಹಕ್ಕೆ ಸಂಕೇತಿಸುತ್ತದೆ. ಆಗ ಮೆದುಳು ಸೀನುವಿಕೆಯ ಮೂಲಕ ಕಸವನ್ನು ಹೊರಹಾಕುವ ಪ್ರಯತ್ನ ನಡೆಸುತ್ತದೆ. ವಿವಿಧ ರೀತಿಯ ಸೀನಿನ ಹಿಂದೆ ಮೆದುಳು ನೀಡುವ ವಿವಿಧ ಸಂದೇಶಗಳಿರುತ್ತವೆ.
ಇಷ್ಟೇ ಅಲ್ಲ, ಲೈಂಗಿಕ ಸಮಯದಲ್ಲಿ ಅಥವಾ ಅದರ ಬಗ್ಗೆ ಆಲೋಚನೆ ಮಾಡಿದಾಗ ನಿಮಗೆ ಸೀನು ಬಂದ್ರೆ ಅದನ್ನು ವಾಸೋಮೊಟರ್ ರಿನಿಟಿಸ್ ಕಾರಣ. ಪರಾಕಾಷ್ಠೆ ಮತ್ತು ಲೈಂಗಿಕತೆಯ ನಂತರ ಕಾಣಿಸಿಕೊಳ್ಳುವ ಸೀನು, ಮೂಗು ಸೋರುವಿಕೆಯನ್ನು ಹನಿಮೂನ್ ರಿನಿಟಿಸ್ ಎಂದು ಕರೆಯಲಾಗುತ್ತದೆ.
ಒಂದಲ್ಲ ಎರಡಲ್ಲ ಹತ್ತಾರು ರಾಣಿಯರನ್ನು ತೃಪ್ತಿಪಡಿಸ್ತಿದ್ದ ರಾಜರ ಗುಟ್ಟೇನು?
ಸೆಕ್ಸ್ ವೇಳೆ ಬರುವ ಸೀನಿಗೆ ಪರಿಹಾರವೇನು? : ಸೆಕ್ಸ್ ವೇಳೆ ಅಥವಾ ಸೆಕ್ಸ್ ಬಗ್ಗೆ ಆಲೋಚನೆ ಮಾಡಿದಾಗ ನಿಮಗೂ ಸೀನು ಬರ್ತಿದ್ದರೆ ಅದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಇದಕ್ಕೆ ಯಾವುದೇ ಸೂಕ್ತ ಪರಿಹಾರವಿಲ್ಲ. ನಾಸಲ್ ಡಿಕೊಂಗಸ್ಟೆಂಟ್‌ಗಳನ್ನು ನೀವು ಬಳಕೆ ಮಾಡಬಹುದು. ಆದ್ರೆ ಅದನ್ನು ಬಳಸುವ ವೇಳೆ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗುತ್ತದೆ.
ಸೀನಿನಿಂದಾಗುವ ಪ್ರಯೋಜನಗಳು : ಸೀನು ದೇಹದಿಂದ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯ ಪ್ರಕ್ರಿಯೆಯ ಅತ್ಯಗತ್ಯ ಭಾಗವಾಗಿದೆ. ಆರೋಗ್ಯಕರ ಜೀವನಕ್ಕೆ ಸೀನು ಕೂಡ ಅಗತ್ಯ. ಅಧ್ಯಯನದ ಪ್ರಕಾರ, ಸೀನುವಿಕೆಯ ವೇಗ ಗಂಟೆಗೆ 100 ಮೈಲುಗಳು. ಈ ಕಾರಣದಿಂದಲೇ ಸುಮಾರು ಒಂದು ಲಕ್ಷದಷ್ಟು ದೇಹದ ಸೂಕ್ಷ್ಮಾಣುಗಳು ಸೀನುವುದರೊಂದಿಗೆ ಗಾಳಿಯಲ್ಲಿ ವೇಗವಾಗಿ ಹರಡುತ್ತವೆ. ಸೀನುವಿಕೆಯು ಶೀತದಿಂದ ಮಾತ್ರವಲ್ಲದೆ ಸೂರ್ಯನ ಬೆಳಕಿನಿಂದಲೂ ಬರಬಹುದು. ಕೆಲವು ಅಧ್ಯಯನಗಳಲ್ಲಿ, ಬಲವಾದ ಸೂರ್ಯನ ಬೆಳಕಿನಿಂದ ಸೀನುವಿಕೆಯ ನರಗಳು ಸಕ್ರಿಯವಾಗುತ್ತವೆ ಎಂದು ನಂಬಲಾಗಿದೆ.