#Feelfree: ನನ್ನ ಗಂಡನಿಗೆ ಯೋನಿ ಕಂಡರೆ ಭಯ, ಇದ್ಯಾಕೆ?

By Suvarna News  |  First Published Oct 13, 2020, 6:28 PM IST

ಮದುವೆಯಾಗಿ ಮೂರು ತಿಂಗಳಾದರೂ ನನ್ನ ಗಂಡ ನನ್ನ ಯೋನಿ ನೋಡಲು, ಸಂಭೋಗಿಸಲು ಭಯಪಡುತ್ತಾರೆ. ಇದೊಂದು ಮಾನಸಿಕ ಸಮಸ್ಯೆಯೇ, ಇದರಿಂದ ಪಾರಾಗುವುದು ಹೇಗೆ?


ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆಂಟು. ಮದುವೆಯಾಗಿದೆ. ಪತಿಯ ವಯಸ್ಸು ಮೂವತ್ತು. ಮದುವೆಯಾಗಿ ಮೂರು ತಿಂಗಳಾಗಿವೆ. ಗಂಡನಿಗೂ ನನಗೂ ಮದುವೆಗೆ ಮೊದಲು ಸೆಕ್ಸ್ ಅನುಭವ ಇಲ್ಲ. ಮದುವೆಯ ನಂತರ ಈ ಸುಖ ಹೊಂದೋಣ ಎಂದರೆ ಒಂದು ಸಮಸ್ಯೆ ಅಡ್ಡ ಬರುತ್ತಿದೆ. ನನ್ನ ಗಂಡನನ್ನು ಸೆಕ್ಸ್‌ಗೆ ನಾನೇ ಪ್ರಚೋದಿಸಬೇಕು. ಕಷ್ಟಪಟ್ಟು ಪ್ರಚೋದಿಸಿದರೆ, ಮುನ್ನಲಿವಿನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೊನೆಯ ಕ್ಷಣಕ್ಕೆ, ಅಂದರೆ ನನ್ನ ಯೋನಿಯಲ್ಲಿ ಶಿಶ್ನ ಸೇರಿಸಲು ತುಂಬಾ ಭಯಪಡುತ್ತಾರೆ. ನನ್ನ ಗುಪ್ತಾಂಗವನ್ನು ನೋಡಲೂ ಭಯಪಡುತ್ತಾರೆ. ಒಮ್ಮೆ, ಅದರಿಂದ ಪ್ರಯೋಜನವಾದೀತು ಎಂದು ತೋರಿಸಲು ಮುಂದಾಗಿದ್ದೆ. ಆದರೆ ಹೆದರಿ ಬೆವರಿದ್ದರು. ಇದು ಯಾವ ವಿಚಿತ್ರ ಭಯವೋ ಅರ್ಥವಾಗುತ್ತಿಲ್ಲ. ಉಳಿದಂತೆ ಎಲ್ಲ ವಿಚಾರಗಳಲ್ಲೂ ನಾರ್ಮಲ್ ಆಗಿಯೇ ಇದ್ದಾರೆ. ಕೆಲವೊಮ್ಮೆ ನಾನೇ ಅವರಿಗೆ ಹಸ್ತಮೈಥುನ ಮಾಡಿ ಖುಷಿಪಡಿಸಿದ್ದೇನೆ. ಆದರೆ ಸಂಭೋಗದ ಭಯವೇಕೋ ತಿಳಿಯುತ್ತಿಲ್ಲ. ಸಹಾಯ ಮಾಡಿ.

ಉತ್ತರ: ನಿಮ್ಮ ತಾಳ್ಮೆ ಹಾಗೂ ಪ್ರೀತಿಯಿಂದ ಸಮಸ್ಯೆಯನ್ನು ಗೆಲ್ಲುವ ವಿವೇಕ ಇಷ್ಟವಾಯಿತು. ನಿಮ್ಮ ಗಂಡನಿಗೆ ಯೂರೋಟೋಫೋಬಿಯಾ ಎಂಬ ಸಮಸ್ಯೆ ಇರುವಂತಿದೆ. ಯೂರೋಟೋಫೋಬಿಯಾ ಎಂಬುದು ಗಂಡಸರಲ್ಲೂ ಇರಬಹುದು, ಹೆಂಗಸರಲ್ಲೂ ಇರಬಹುದು. ಈ ಸಮಸ್ಯೆ ಇದ್ದವರಿಗೆ, ಹೆಣ್ಣಿನ ಗುಪ್ತಾಂಗವನ್ನು ಕಂಡರೆ ಹೇಳತೀರದ ಭಯ ಇರುತ್ತದೆ. ಕೆಲವರು ಅದನ್ನು ನೋಡುವುದು ಬಿಡಿ, ಮನಸ್ಸಿನಲ್ಲಿ ಊಹಿಸಿಕೊಳ್ಳಲೂ ಆತಂಕಪಡುತ್ತಾರೆ. ಇಂಥವರಿಂದ ಸಂಭೋಗ ನಿರೀಕ್ಷಿಸುವುದು ಅಸಾಧ್ಯ. ನಿಮ್ಮ ಗಂಡನಲ್ಲಿರುವ ಲಕ್ಷಣಗಳನ್ನು ಇನ್ನಷ್ಟು ಪರೀಕ್ಷಿಸಿ ಇದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಅದಕ್ಕೆ ನೀವು ಲೈಂಗಿಕ ತಜ್ಞರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯೂರೋಟೋಫೋಬಿಯಾ ಎಂಬುದು ಹೆಣ್ಣಿನಲ್ಲೂ ಇರಬಹುದು. ಆಗ ಹೆಣ್ಣು ತನ್ನ ಮರ್ಮಾಂಗದ ಬಗ್ಗೆ ತಾನೇ ಜಿಗುಪ್ಸೆ, ಅಸಹ್ಯ ಭಾವನೆ ಮತ್ತು ಭಯ ಹೊಂದಿರುತ್ತಾಳೆ. ಇದಕ್ಕೆ ವಿರುದ್ಧವಾದ ಸ್ಥಿತಿಯೊಂದಿದೆ. ಅದು ಗಂಡು ಗುಪ್ತಾಂಗದ ಬಗ್ಗೆ ಇರುವ ಭಯ. ಇದು ಸಾಮಾನ್ಯವಾಗಿ ಹೆಣ್ಣಿನಲ್ಲಿರುತ್ತದೆ. ಗಂಡಿನಲ್ಲೂ ಇರಬಹುದು. ಇದನ್ನು ಫಾಲೋಫೋಬಿಯಾ ಅನ್ನುತ್ತಾರೆ. ಇವೆರಡಕ್ಕೂ ವಿಸ್ತೃತವಾದ ಚಿಕಿತ್ಸೆ ಅಗತ್ಯ. ಇದು ಮುಂದುವರಿದರೆ ಖಿನ್ನತೆಗೂ ಕಾರಣವಾಗಬಹುದು. ಆದ್ದರಿಂದ ಇದಕ್ಕೆ ಚಿಕಿತ್ಸೆ ಕೊಡಿಸುವ ಮುನ್ನವೇ ಸೆಕ್ಸ್‌ಗಾಗಿ ಅವರನ್ನು ಒತ್ತಾಯಿಸಲು ಹೋಗಬೇಡಿ.

Tap to resize

Latest Videos

undefined

ಸಡಿಲಗೊಂಡ ಯೋನಿ, ಸೆಕ್ಸ್‌ನಲ್ಲಿ ಖುಷಿಯಿಲ್ಲ ಅಂತಾನೆ ಗಂಡು! 
ಇಂಥ ಫೋಬಿಯಾ ಯಾಕೆ ಉಂಟಾಗುತ್ತದೆ? ಇದಕ್ಕೆ ಹಲವು ಕಾರಣಗಳಿರಬಹುದು. ಚಿಕ್ಕಂದಿನಲ್ಲಿ ಮನೆಯ ಹಿರಿಯರು ಯೋನಿ ಎಂದರೆ ಭಯಭೀತವಾಗುವ, ಅಥವಾ ಜಿಗುಪ್ಸೆಯುಂಟುಮಾಡುವ ಭಾವನೆಗಳನ್ನು ಅವರಲ್ಲಿ ಬಿತ್ತಿರಬಹುದು. ಉದಾಹರಣೆಗೆ, ಕೆಲವರು ತಪ್ಪು ಕಲ್ಪನೆಯಿಂದಲೂ ತಮಾಷೆಗಾಗಿಯೂ ತಮಗಿಂತ ಚಿಕ್ಕ ಮಕ್ಕಳನ್ನು ಹೆದರಿಸಲು ಹೇಳುವುದುಂಟು- ಯೋನಿಯ ಒಳಭಾಗದಲ್ಲಿ ಹಲ್ಲುಗಳಿವೆ, ಅವು ಶಿಶ್ನವನ್ನು ಗಟ್ಟಿಯಾಗಿ ಕಚ್ಚಿಹಿಡಿದುಕೊಳ್ಳುತ್ತವೆ ಅಂತ. ಇದನ್ನು ಕೇಳುತ್ತ ಬೆಳೆದ ಮಕ್ಕಳು ದುರ್ಬಲ ಮನಸ್ಸಿನವರಾಗಿದ್ದರೆ ಅದೇ ಭಯವನ್ನು ಮನದಲ್ಲಿ ಬೆಳೆಸಿಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಯೋನಿಗೆ ಸಂಬಂಧಿಸಿದ ಯಾವುದಾದರೂ ಅಸಹ್ಯ, ಭಯಪಡಿಸುವ ಘಟನೆ ಅವರ ಜೀವನದಲ್ಲಿ ನಡೆಯುವುದರಿಂದಲೂ ಹಾಗಾಗಬಹುದು. ಕೆಲವೊಮ್ಮೆ ತಮಗಿಂತ ದೊಡ್ಡ ಹುಡುಗಿಯರು ಅಥವಾ ಮಹಿಳೆಯರು ಸಣ್ಣ ಗಂಡುಮಕ್ಕಳನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡರೂ ನಂತರದ ದಿನಗಳಲ್ಲಿ ಹೀಗಾಗುವುದು ಉಂಟು. ಅದೇನೇ ಇದ್ದರೂ, ಈ ಸ್ಥಿತಿಗೆ ಒಂದು ವಿವರವಾದ ಕೌನ್ಸೆಲಿಂಗ್ ಮತ್ತು ಔಷಧಗಳ ಮೂಲಕ ಅದನ್ನು ನಿವಾರಿಸಿಕೊಳ್ಳುವುದು ಅಗತ್ಯ. ಇದು ಗುಣವಾಗುವ ಸಮಸ್ಯೆ. ಆತಂಕಪಡಬೇಡಿ. 

 #Feelfree: ಸ್ತನಗಳ ಶೇಪ್ ಕಾಪಾಡಿಕೊಳ್ಳುವುದು ಹೇಗೆ? 

ಪ್ರಶ್ನೆ: ನನ್ನ ಶಿಶ್ನ ಎರಡಿಂಚು ಉದ್ದವಿದೆ. ಉದ್ರೇಕಗೊಂಡಾಗ ಮೂರಿಂಚು ಆಗುತ್ತದೆ. ಸದ್ಯದಲ್ಲೇ ಮದುವೆಯಾಗುವವನಿದ್ದೇನೆ. ನನ್ನ ಈ ಶಿಶ್ನ ಸಂಗಾತಿಯನ್ನು ಸಂತೃಪ್ತಿಪಡಿಸಲು ಸಾಕಾದೀತೇ?

ಉತ್ತರ: ಸಂಗಾತಿಯನ್ನು ಖುಷಿಪಡಿಸುವುದು ನಿಮ್ಮ ಶಿಶ್ನವಲ್ಲ. ನಿಮ್ಮ ಒಟ್ಟಾರೆ ವರ್ತನೆ, ನೀವು ಆಕೆಯನ್ನು ನೋಡಿಕೊಳ್ಳುವ ರೀತಿ, ಪ್ರೀತಿ, ಸೆಕ್ಸ್‌ನಲ್ಲಿ  ಮುನ್ನಲಿವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೀರಿ ಎಂಬುದೆಲ್ಲ ಮುಖ್ಯವಾಗುತ್ತದೆ. ನಿಮ್ಮ ಶಿಶ್ನದ ಉದ್ದ ಆರೋಗ್ಯಕರ ಸೆಕ್ಸ್‌ಗೆ ಧಾರಾಳ ಸಾಕು. 

#Feelfree: ಸಾರ್ವಜನಿಕ ಜಾಗದಲ್ಲಿ ಸೆಕ್ಸ್ ಮಾಡೋ ಚಟ! 

click me!