
ವಿಷದಂತಹ ಕೆಟ್ಟ ಪ್ರೀತಿ ಯಾವುದೇ ರೀತಿಯಲ್ಲಿ ನಮ್ಮ ಜೀವನಕ್ಕೆ ಸುತ್ತಿಕೊಳ್ಳಬಹುದು. ವಿಷದಂತಹ ಜನರನ್ನು ಸರಿ ಮಾಡುತ್ತೇವೆ ಎಂದುಕೊಳ್ಳುತ್ತ ಜೀವನವನ್ನು ವ್ಯರ್ಥವಾಗಿ ಕಳೆಯುವುದಕ್ಕಿಂತ ಆ ಸಂಬಂಧದಿಂದ ಹೊರಬರುವುದು ಅಗತ್ಯ. ಪ್ರೀತಿಸುತ್ತಿದ್ದೇವೆ ಎಂದುಕೊಳ್ಳುತ್ತಲೇ ಗೊತ್ತಾಗದಂತೆ ವಿಷಕಾರಿ ಸಂಬಂಧದ ಸುಳಿಯಲ್ಲಿ ಹಲವರು ಸಿಲುಕಿಕೊಂಡಿರುತ್ತಾರೆ. ಪ್ರೀತಿ-ಪ್ರೇಮದ ಸಂಬಂಧಗಳು ಎಂದಿಗೂ ಅಪರಿಮಿತ ಸಂತೋಷ, ನೆಮ್ಮದಿ ನೀಡಬೇಕು. ಆದರೆ, ಪ್ರೀತಿಯೇ ನೋವನ್ನು ನೀಡುವಂತಾದರೆ ಅದು ಖಂಡಿತವಾಗಿ ವಿಷವೃತ್ತವಾಗಿ ಮಾರ್ಪಟ್ಟಿರುತ್ತದೆ. ಮೊದಲು ಪ್ರೀತಿ ಎನಿಸಿಕೊಂಡಿರುವಂಥದ್ದು, ಬಳಿಕ ಅದ್ಯಾವ ಸಮಯದಲ್ಲಿ ವಿಷಕಾರಿಯಾಗುತ್ತದೆ ಎನ್ನುವುದು ಗೊತ್ತಾಗದೇ ಸಾಕಷ್ಟು ಜನ ನಲುಗುತ್ತಾರೆ. ಮಹಿಳೆಯಾಗಲೀ ಪುರುಷನಾಗಲೀ, ಅಂಥದ್ದೊಂದು ಕೆಟ್ಟ ಪ್ರೀತಿಯಿಂದ, ಸಂಬಂಧದಿಂದ ಹೊರಗೆ ಬರಬೇಕು ಎಂದುಕೊಂಡರೂ ಕೈಲಾಗದೇ ಅದರಲ್ಲೇ ಇದ್ದುಬಿಡುವ ಪರಿಸ್ಥಿತಿಯೂ ಎದುರಾಗುತ್ತದೆ. ಆದರೆ, ವಿಷದಂತಹ ಪ್ರೀತಿಯಿಂದ ಹೊರಗೆ ಬರುವುದೇ ಉತ್ತಮ ಆಯ್ಕೆ. ಇದು ನಿಮ್ಮ ಸಂತಸದ ಜೀವನಕ್ಕೆ ಮತ್ತು ಅಭ್ಯುದಯಕ್ಕೆ ಮೊದಲ ಹೆಜ್ಜೆ ಎನ್ನುವುದನ್ನು ಮರೆಯಬಾರದು. ವಿಷದಂತಹ ಕೆಟ್ಟ ಪ್ರೀತಿ ವಿವಿಧ ರೀತಿಯಲ್ಲಿ ನಿಮಗೆ ಎದುರಾಗಬಹುದು. ಇಂತಹ ಪ್ರೀತಿ ಭಾವನಾತ್ಮಕವಾಗಿ ಮ್ಯಾನಿಪ್ಯುಲೇಟ್ ಮಾಡುವುದು, ಟೀಕೆ, ನಿಯಂತ್ರಣ, ಅಗೌರವ, ಬೈಗುಳ, ದೈಹಿಕ ಹಲ್ಲೆಯಂತಹ ಯಾವುದೇ ರೀತಿಯಲ್ಲಿರಬಹುದು.
ವಿಷಕಾರಿ ಸಂಬಂಧದಲ್ಲಿ (Toxic Relationship) ಇಬ್ಬರಿಗೂ ಉಸಿರು ಕಟ್ಟಿದ ಅನುಭವವಾಗುತ್ತದೆ. ಅಭದ್ರತೆ ಕಾಡಬಹುದು (Insecurity Feeling). ಒಬ್ಬರಲ್ಲಿ ಸಮಸ್ಯೆ ಇದ್ದು, ಮತ್ತೊಬ್ಬರು ಹೊಂದಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದರಂತೂ ಹೊಂದಿಕೊಳ್ಳುವ ಮನಸ್ಥಿತಿ ಇರುವವರ ಜೀವನ ಕಷ್ಟವಾಗುತ್ತದೆ. ಪ್ರೀತಿ (Love) ತುಂಬಿಕೊಂಡಿರಬೇಕಾದ ಮನೆಯಲ್ಲಿ ಅಗೌರವ, ಅವಿಶ್ವಾಸ, ಬೈಗುಳ, ಹಲ್ಲೆ, ನಿರಂತರವಾಗಿ ಟೀಕೆಗಳು (Criticism) ತುಂಬಿಕೊಂಡಿದ್ದರೆ ಬದುಕವುದು ಅಸಾಧ್ಯ. ಸಂಗಾತಿಗಳಲ್ಲಿ (Partners) ಪರಸ್ಪರ ಹೊಂದಾಣಿಕೆ ಇದ್ದರೂ ಹಲವಾರು ವಿಚಾರಗಳಲ್ಲಿ ಆಗಾಗ ನೋವು ಉಂಟಾಗುತ್ತಿರುತ್ತದೆ. ಇನ್ನು, ಹೊಂದಾಣಿಕೆಯೂ ಇಲ್ಲದೇ, ಬೇರೆ ಇಂತಹ ಹಲವಾರು ಸಮಸ್ಯೆಗಳು (Problems) ನಿರಂತರವಾಗಿದ್ದರೆ ಜೀವನದಲ್ಲಿ ಸೊಗಸು ಇಲ್ಲವಾಗುತ್ತದೆ. ಹೀಗಾಗಿ, ಅಲ್ಲಿಂದ ಹೊರಬರುವುದು ಉತ್ತಮ ಆಯ್ಕೆ. ಅದರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ?
ಸಂಬಂಧದಲ್ಲಿ ನೀವು ಬ್ರೆಡ್- ಕ್ರಂಬ್ ಆಗಿದೀರಾ? ಈ ಎಂಟು ಲಕ್ಷಣಗಳನ್ನು ಗಮನಿಸಿ!
ಆ ಪ್ರೀತಿಯಲ್ಲಿದ್ರೆ ಹೀಗೆಲ್ಲ ಆಗುತ್ತೆ
ವಿಷದಂತಹ ಪ್ರೀತಿಯಲ್ಲಿ ಹೆಚ್ಚು ಸಮಯ ಇದ್ದರೆ ಅದು ಮಾನಸಿಕವಾಗಿ, ಭಾವನಾತ್ಮಕವಾಗಿ (Emotions) ಹಾಗೂ ದೈಹಿಕ (Physical) ಆರೋಗ್ಯದ (Health) ಮೇಲೆ ಪರಿಣಾಮ ಉಂಟಾಗುತ್ತದೆ. ನಿರಂತರವಾದ ಒತ್ತಡ (Stress) ಮತ್ತು ಆತಂಕ ಕೊನೆಗೊಮ್ಮೆ ಖಿನ್ನತೆಗೆ (Depression) ಕಾರಣವಾಗಬಹುದು. ಆತ್ಮಗೌರವ ನಾಶವಾಗುತ್ತದೆ. ಸ್ವಂತಿಕೆ ಕಳೆದುಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ವಿಷಕಾರಿ ಸಂಬಂಧ ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಬೆಳೆಯಲು ಅವಕಾಶ ನೀಡುವುದಿಲ್ಲ. ಹೀಗಾಗಿ, ಇವೆಲ್ಲವನ್ನೂ ಬಲಿಕೊಟ್ಟು ಸಂಬಂಧ ಉಳಿಸಿಕೊಳ್ಳುತ್ತೇನೆ ಎನ್ನುವುದು ಮೂರ್ಖತನ.
ಹೊರಡುವುದರಿಂದಲೇ ಲಾಭ
ವಿಷಕಾರಿ ಸಂಬಂಧಕ್ಕೆ ಅಂತ್ಯ ಹಾಡುವುದೆಂದರೆ ಸ್ವತಂತ್ರಗೊಳ್ಳುವುದು ಎಂದರ್ಥ. ಇದೊಂದು ರೀತಿಯಲ್ಲಿ ನಿಮ್ಮ ಭುಜಗಳ ಮೇಲಿರುವ ಅತಿಯಾದ ಭಾರವನ್ನು ಕೆಳಗಿಟ್ಟು ಹಗುರವಾದಂತೆ. ನಿಮ್ಮಷ್ಟಕ್ಕೆ ನೀವು ಸ್ವತಂತ್ರವಾಗಿ ಉಸಿರಾಡಬಹುದು. ಹೀಲಿಂಗ್, ಸ್ವ ಅನ್ವೇಷಣೆ ಹಾಗೂ ಬೆಳವಣಿಗೆಯತ್ತ (Development) ಸಾಗಬಹುದು. ಹೊಸ ಸಾಧ್ಯತೆಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ನೀವು ಸ್ವಯಂ ಕಾಳಜಿ ತೆಗೆದುಕೊಂಡು, ನಿಮ್ಮ ಜೀವನ (Life) ರೂಪಿಸಿಕೊಳ್ಳಬಹುದು. ನಿಮ್ಮ ಆಸೆ-ಆಕಾಂಕ್ಷೆಗಳಿಗೆ ಅನುಗುಣವಾಗಿ ನಡೆಯಬಹುದು. ನಿಮ್ಮದೇ ಖುಷಿಗಾಗಿ ಬದುಕಬಹುದು.
ಬ್ಯಾಚುಲರ್ ಲೈಫ್ ಓಕೆ.. ಇಂತಹ ಹುಡುಗಿಯನ್ನು ಮದುವೆಯಾಗಬೇಡಿ
ಹೀಲಿಂಗ್ (Healing)
ಯಾವುದೇ ಸಂಬಂಧದಿಂದ ಹೊರಬರುವುದು ಎಂದರೆ ಅದು ಹೃದಯವನ್ನು ಹಿಂಡುವಂಥದ್ದೇ. ಆದರೆ, ಈ ಪ್ರಕ್ರಿಯೆಯಲ್ಲಿ ಅದಿದ್ದರೂ ಜತೆಗೇ ಹೀಲಿಂಗ್ ಕೂಡ ಇರುತ್ತದೆ. ಏಕೆಂದರೆ, ಇದು ನೋವಿನ ಅಂತ್ಯವಾಗಿರುತ್ತದೆ. ನಿಮಗೆ ಬೆಂಬಲ ನೀಡುವ ಸ್ನೇಹಿತರು, ಕುಟುಂಬಸ್ಥರ ನೆರವಿನ (Help) ಮೂಲಕ ನೋವಿನಿಂದ ಹೊರಬರಲು ಸಾಧ್ಯವಾಗುತ್ತದೆ. ಅಗತ್ಯವಿದ್ದರೆ, ಮಾನಸಿಕವಾಗಿ ಸಬಲರಾಗಲು ಚಿಕಿತ್ಸೆಯನ್ನೂ ಪಡೆದುಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.