ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿದ್ದಾರೆ. ಸಣ್ಣ ಪುಟ್ಟ ವಿಷ್ಯಗಳನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರೆ. ಇಲ್ಲೊಂದು ಜೋಡಿ ಕುಟುಂಬಸ್ಥರು ತಲೆತಗ್ಗಿಸುವಂತೆ ಮಾಡಿ ಹನಿಮೂನ್ ಗೆ ಹೋಗಿದೆ. ಅದ್ರ ಕಾರಣ ವಿಚಿತ್ರವಾಗಿದೆ.
ತಿಂಗಳು ಎರಡು ತಿಂಗಳು ತಯಾರಿ ನಡೆಸಿ, ಎಲ್ಲವನ್ನು ಹೊಂದಿಸಿ ಜನರು ಮದುವೆ ಆಗ್ತಾರೆ. ಹಿರಿಯರು ಹೇಳಿದಂತೆ, ಮದುವೆ ಮಾಡೋದು ಕಠಿಣ ಕೆಲಸ. ಹುಡುಗ – ಹುಡುಗಿ ಒಪ್ಪಿದ ಮೇಲೆ ಮುಂದೆ ಮತ್ತಷ್ಟು ಜವಾಬ್ದಾರಿ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಮದುವೆ ಸದಾ ನೆನಪಿನಲ್ಲಿರಬೇಕೆಂದು ಬಯಸ್ತಾರೆ. ಇದೇ ಕಾರಣಕ್ಕೆ ಈಗ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಸೇರಿ ಅನೇಕ ಕಾರ್ಯಕ್ರಮಗಳು ಸೇರಿಕೊಂಡಿವೆ. ಮದುವೆಯಲ್ಲಿ ಯಾವುದೇ ಗಡಿಬಿಡಿ ಆಗದಿರಲಿ ಎನ್ನುವ ಕಾರಣಕ್ಕೆ ಮೊದಲೇ ಕಲ್ಯಾಣ ಮಂಟಪ ಬುಕ್ ಮಾಡುವ ಜನರು ಬಟ್ಟೆ, ಸ್ನೇಹಿತರು, ನೆಂಟರಿಗೆ ಆಹ್ವಾನ ಸೇರಿ ಊಟ, ಉಪಚಾರದ ಬಗ್ಗೆ ಪ್ಲಾನ್ ಮಾಡಿರುತ್ತಾರೆ. ಮದುವೆಗೆ ಬಂದ ಯಾರೊಬ್ಬರೂ ಬೇಸರ ಮಾಡ್ಕೊಂಡು ಮನೆಗೆ ಹಿಂದಿರುಗಬಾರದು ಎನ್ನುವ ಉದ್ದೇಶದ ಜೊತೆ ಅದ್ಧೂರಿ ಮದುವೆ ಬಹುತೇಕರ ಆಸೆ. ಕೆಲವೊಮ್ಮೆ ನಾವಂದುಕೊಂಡಂತೆ ಎಲ್ಲವೂ ಸಾಧ್ಯವಿಲ್ಲ. ಮದುವೆಯಲ್ಲಿ ಸಣ್ಣಪುಟ್ಟ ಗಲಾಟೆ ಮನಸ್ತಾಪದಿಂದ ಕೊಲೆಯವರೆಗಿನ ಪ್ರಕರಣವಿದೆ. ಆದ್ರೆ ಈ ದಂಪತಿ ಮಾತ್ರ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಆರಂಭದಲ್ಲಿ ದಂಪತಿಗೆ ಬೈದ ನೆಟ್ಟಿಗರು ನಂತ್ರ ಅವರ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
ರೆಡ್ಡಿಟ್ (Reddit) ನಲ್ಲಿ ಮಹಿಳೆಯೊಬ್ಬಳು ತನ್ನ ಸಹೋದರನ ಮದುವೆ (Marriage) ಬಗ್ಗೆ ಹೇಳಿದ್ದಾಳೆ. ಆಕೆ ಮೊದಲ ಸಹೋದರ (Brother)ನಿಗೆ ಮದುವೆ ಫಿಕ್ಸ್ ಆಗಿತ್ತು. ಮದುವೆ ನಡೆಯುವ ಜಾಗಕ್ಕೆ ಸ್ನೇಹಿತರು, ಸಂಬಂಧಿಕರೆಲ್ಲ ಬಂದಿದ್ದಾರೆ. ಆದ್ರೆ ಮಧು – ವರರ ಪತ್ತೆ ಇಲ್ಲ. ಅನೇಕ ಗಂಟೆ ಅಲ್ಲಿಯೇ ಕಾದಿದ್ದ ನೆಂಟರಿಸ್ಟರು ನಂತ್ರ ಬರಿಗೈನಲ್ಲಿ ವಾಪಸ್ ಆಗಿದ್ದಾರೆ. ಮದುವೆ ಮಂಟಪಕ್ಕೆ ಮುಂಗಡ ಹಣ ನೀಡಿದ್ದ ಸಹೋದರ, ಮದುವೆಗೆ ಬರದೆ ಎಲ್ಲವನ್ನೂ ಹಾಳು ಮಾಡಿದ್ದಾನೆಂದು ಕೋಪಗೊಂಡ ಸಹೋದರಿ ಹೇಳಿದ್ದಾಳೆ. ಅಲ್ಲದೆ ಸಹೋದರ ಹೀಗೆ ಮಾಡಲು ಕಾರಣ ಏನು ಎಂಬುದನ್ನು ತಿಳಿಸಿದ್ದಾಳೆ.
ಮನೆಗೆ ಬಿಟ್ಟ ಕ್ಯಾಬ್ ಡ್ರೈವರ್ ಮೇಲೆ ಲವ್, ಆಮೇಲಾಗಿದ್ದು ಕೇಳಿ ನೆಟ್ಟಿಗರು ಶಾಕ್
ಆಕೆ ಪ್ರಕಾರ, ಆಕೆ ಸಹೋದರ ಹಾಗೂ ಅತ್ತಿಗೆ ಮದುವೆ ದಿನವೇ ಮಂಟಪಕ್ಕೆ ಬಾರದೆ ಹನಿಮೂನ್ (Honeymoon) ಗೆ ಹೋಗಿದ್ದಾರೆ. ಈ ವಿಷಯ ಆಕೆಯ ಸ್ನೇಹಿತರಿಗೆ ಮಾತ್ರ ತಿಳಿದಿದೆ. ಒಂದು ತಿಂಗಳ ನಂತ್ರ ಈ ಜೋಡಿ ಹನಿಮೂನ್‌ಗೆ ಹೋಗ್ಬೇಕಿತ್ತು. ಆದ್ರೆ ಅದನ್ನು ಬದಲಿಸಿ ಅದೇ ವಾರ ಅವರು ಹನಿಮೂನಿಗೆ ತೆರಳಿದ್ದಾರೆ. ಮದುವೆ ಬಟ್ಟೆ ಬದಲಿಸಿದ ಜೋಡಿ, ಬ್ರಿಸ್ಟಲ್ ವಿಮಾನ ನಿಲ್ದಾಣಕ್ಕೆ ಹೋಗಿದೆ ಎನ್ನಲಾಗಿದೆ.
ಆಕೆಗೆ ಇನ್ನೊಬ್ಬ ಸಹೋದರ ಇದ್ದಾನೆ. ಆತನ ಗರ್ಲ್ ಫ್ರೆಂಡ್ ಗರ್ಭಿಣಿ. ಆಕೆ ಹಾಗೂ ಸಹೋದರ ಮದುವೆ ಬಗ್ಗೆ ಇವರ ರಿಸೆಪ್ಷನ್ ನಲ್ಲಿ ಹೇಳಲು ತಂದೆ ಪ್ಲಾನ್ ಮಾಡಿದ್ದರು. ಅಲ್ಲದೆ ಅವರಿಬ್ಬರ ಮದುವೆ ಇವರ ರಿಸೆಪ್ಷನ್ ನಲ್ಲಿ ನಡೆಯುವುದಿತ್ತು. ಇದು ವರನಿಗೆ ಇಷ್ಟವಾಗಿರಲಿಲ್ಲ. ತನ್ನ ಮದುವೆಯಲ್ಲಿ ಸಹೋದರನ ಬಗ್ಗೆ ಹೇಳುವ ಅಗತ್ಯವಿಲ್ಲ ಎಂದೆಣಿಸಿದ ಆತ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬರಲಿಲ್ಲ. ವಧು ಜೊತೆ ಹನಿಮೂನ್‌ಗೆ ಪ್ರಯಾಣ ಬೆಳೆಸಿದ್ದಾನೆ.
ಮದುಮಗಳ ನಿರ್ಧಾರ ಮಾಡ್ತಿದ್ದಾರೆ ತಾತ, ಚಿಕ್ಕಮ್ಮ: ಅಡಕತ್ತರಿಯಲ್ಲಿ ಸಿಲುಕಿದ ಸೀತಾ-ರಾಮ್!
ಸಾಮಾಜಿಕ ಜಾಲತಾಣದಲ್ಲಿ ಈ ಮಹಿಳೆ ಪೋಸ್ಟ್ ವೈರಲ್ ಆಗಿದೆ. ಲಕ್ಷಾಂತರ ಮಂದಿ ಲೈಕ್ ಮಾಡಿದ್ದಲ್ಲದೆ ಕಮೆಂಟ್ ಮಾಡಿದ್ದಾರೆ. ಆರಂಭದಲ್ಲಿ ವಧು - ವರನ ಕೆಲಸವನ್ನು ಜನರು ಖಂಡಿಸಿದ್ದರು. ವಿಷ್ಯ ಪೂರ್ತಿ ಅರ್ಥವಾದ್ಮೇಲೆ ಸಹೋದರ ಹಾಗೂ ಆತನ ಗರ್ಲ್ ಫ್ರೆಂಡ್ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಮದುವೆಯಲ್ಲಿ ಸಹೋದರ ಮದುವೆಯಾಗೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಈ ಕುಟುಂಬದ ಎಲ್ಲರೂ ಹುಚ್ಚರು ಎಂದು ಕಮೆಂಟ್ ಮಾಡಿದ್ದಾರೆ.