Latest Videos

ಗಂಡ ನಿಮ್ಮೊಂದಿಗೆ ಸೆಕ್ಸ್‌ ಇಷ್ಟಪಡ್ತಾ ಇಲ್ವಾ? ಅದಕ್ಕೆ ಕಾರಣ ಹೀಗೂ ಇರಬಹುದು!

By Bhavani BhatFirst Published May 24, 2024, 11:50 AM IST
Highlights

ಗಂಡ ನಿಮ್ಮೊಂದಿಗೆ ಲೈಂಗಿಕ ಕ್ರಿಯೆಗೆ ಇಷ್ಟಪಡ್ತಾ ಇಲ್ವಾ? ಹಾಗಿದ್ದರೆ ಅದಕ್ಕೆ ಕಾರಣಗಳು ಗಂಡನಲ್ಲೂ ಇರಬಹುದು, ನಿಮ್ಮಲ್ಲೂ ಇರಬಹುದು. ಅವುಗಳನ್ನು ಕಂಡುಕೊಂಡರೆ ಪರಿಹಾರ ಸುಲಭ.

ಕೆಲವೊಮ್ಮೆ ಗಂಡ ಅಥವಾ ಹೆಂಡತಿಗೆ ಸೆಕ್ಸ್‌ ಮಾಡುವ ಮೂಡ್‌ ಇರಲಿಕ್ಕಿಲ್ಲ. ಅದು ಕೆಲಸದ ದಣಿವಿನಿಂದಾಗಿರಬಹುದು. ಆದರೆ ಪದೇ ಪದೆ ಹೀಗಾಗುತ್ತಿದ್ದಲ್ಲಿ? ಅದರಲ್ಲೂ ಗಂಡ ನಿಮ್ಮ ಜೊತೆ ಸೆಕ್ಸ್‌ಗೆ ಕಾರಣವಿಲ್ಲದೇ ನಿರಾಕರಿಸುತ್ತಿದ್ದಲ್ಲಿ? ಖಂಡಿತವಾಗಿಯೂ ಗುಪ್ತ ಸಕಾರಣಗಳು ಇದ್ದೇ ಇರುತ್ತವೆ. ಹಾಗಿದ್ದರೆ ಅದೇನಿರಬಹುದು? ನೋಡೋಣ.

1. ನಿಮ್ಮ ವರ್ತನೆಯನ್ನು ಪರಿಶೀಲಿಸಿ
ನೀವು ಎಷ್ಟೇ ಮಾದಕವಾಗಿದ್ದರೂ ಅಥವಾ ಉಡುಗೆ ತೊಡುಗೆಯಲ್ಲಿ ಸೆಕ್ಸಿಯಾಗಿದ್ದರೂ, ನೀವು ಅಟಿಟ್ಯೂಡ್‌ ಕೆಟ್ಟದಾಗಿದ್ದರೆ, ಅಸಹ್ಯಕರವಾಗಿದ್ದರೆ, ನಿಮ್ಮ ಪತಿ ನಿಮ್ಮನ್ನು ಸೇರಲು ಬಯಸದೇ ಹೋಗಬಹುದು. ಸದಾ ದೂರುತ್ತಿರುವುದು, ನಖರಾ ಮಾಡುವುದು, ಟೀಕಿಸುವುದು ಗಂಡಸಿಗೆ ಇಷ್ಟವಾಗದ ಗುಣಗಳು.

2. ಅವನ ಒತ್ತಡದ Clಮಟ್ಟವನ್ನು ಪರಿಶೀಲಿಸಿ
ಸೆಕ್ಸ್ ಮನಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಒಬ್ಬ ವ್ಯಕ್ತಿಯು ಮಾನಸಿಕವಾಗಿ ಒತ್ತಡಕ್ಕೊಳಗಾದಾಗ, ಅವನ ಶಿಶ್ನವು ನೆಟ್ಟಗೆ ನಿಲ್ಲಲಾರದು. ಟೆನ್ಷನ್‌ ಹಾಗೂ ಕಾಮಗಳು ಒಂದೆಡೆ ಬೆರೆಯುವುದಿಲ್ಲ.

3. ನೀವು ಕ್ಲೀನ್‌ ಆಗಿದ್ದೀರಾ?
ನಿಮ್ಮ ದೇಹದ ಕ್ಲೀನ್ಲಿನೆಸ್‌ ಅಥವಾ ಸ್ವಚ್ಛತೆಯೂ ಸೆಕ್ಸ್‌ಗೆ ಕಾರಣಗಳಲ್ಲಿ ಒಂದು. ನೀವು ಸ್ವಚ್ಛವಾಗಿರದಿದ್ದರೆ ಅಥವಾ ಸ್ನಾನ ಮಾಡದಿದ್ದರೆ ಚುಂಬನ ಆಲಿಂಗನ ಇತ್ಯಾದಿಗಳು ಗಂಡನಿಗೆ ಕಷ್ಟವಾಗಬಹುದು.

4. ಪೋರ್ನ್‌ನೊಂದಿಗೆ ಅವನ ಸಂಬಂಧವನ್ನು ಪರಿಶೀಲಿಸಿ
ಗಂಡ ಪೋರ್ನ್‌ ಅಥವಾ ಹಸ್ತಮೈಥುನಕ್ಕೆ ವ್ಯಸನಿಯಾಗಿದ್ದರೆ ಹೆಂಡತಿಯ ಜೊತೆಗೆ ಮಿಲನ ಹೊಂದುವುದು ಅಪರೂಪವಾಗಬಹುದು. ಆತನ ಮನಸ್ಸಿನಲ್ಲಿ ಮತ್ತು ಫೋನ್‌ನಲ್ಲಿರುವ ಫ್ಯಾಂಟಸಿಗಳೊಂದಿಗೆ ನೀವು ಹೋರಾಡಬೇಕಾದೀತು. ಆತ ವ್ಯಸನಿಯಾಗಿದ್ದರೆ ಜಡ್ಜ್‌ ಮಾಡುವುದಕ್ಕಿಂತಲೂ ಆ ಅಭ್ಯಾಸವನ್ನು ಮುರಿಯಲು ಬೆಂಬಲ ನೀಡಬೇಕು.

5. ನಿಮ್ಮ ಟೋನ್ ಪರಿಶೀಲಿಸಿ
ಹೆಂಡತಿಯ ಕಠೋರತೆ ಅಥವಾ ಕಟು ಸ್ವರವು ಪುರುಷನನ್ನು ಸುಲಭವಾಗಿ ಆಫ್ ಮಾಡುತ್ತದೆ. ನಿಮ್ಮ ಪತಿ ನಿಮ್ಮ ಸಹವಾಸವನ್ನು ಆನಂದಿಸಬೇಕಿದ್ದರೆ ಸ್ವೀಟ್‌ ಆಗಿರವುದು ಅಗತ್ಯ. ನೀವು ಕಠೋರವಾಗಿ ವರ್ತಿಸಿದಾಗಲೂ ಆತ ನಿಮ್ಮ ಜೊತೆ ಕಾಮ ಬಯಸಬೇಕೆಂದು ಹೇಗೆ ಅಪೇಕ್ಷಿಸುತ್ತೀರಿ?

6. ನಿಮ್ಮ ಹಿಂದಿನ ಪ್ರತಿಕ್ರಿಯೆಯನ್ನು ಪರಿಶೀಲಿಸಿ
ಅನೇಕ ಹೆಂಡತಿಯರು ಗಂಡನ ಸಾಧನೆ, ಬೆಳವಣಿಗೆಗಳನ್ನು ತಿರಸ್ಕರಿಸುತ್ತಾರೆ. ಅಂತಿಮವಾಗಿ ನೀವು ಲೈಂಗಿಕ ಸಂತೋಷವನ್ನು ಬಯಸಿದಾಗ ಗಂಡ ಸುಲಭವಾಗಿ ಹಿಂತಿರುಗುತ್ತಾನೆ ಎಂದು ನಿರೀಕ್ಷಿಸುತ್ತಾರೆ. ಪುರುಷರೂ ಸುಸ್ತಾಗುತ್ತಾರೆ. ಆತನ ಹರ್ಷಕ್ಕೆ ತಣ್ಣೀರು ಸುರಿಯದೆ ಅದರಲ್ಲಿ ನೀವೂ ಪಾಲ್ಗೊಂಡರೆ ಮಾತ್ರ ಲೈಂಗಿಕತೆ ಸಾಧ್ಯವಾದೀತು.

7. ನೀವು ಇನ್ನೊಬ್ಬ ವ್ಯಕ್ತಿಯನ್ನು ಹೆಚ್ಚು ಹೊಗಳುತ್ತೀರಾ?
ನೀವು ಎಂದಾದರೂ ನಿಮ್ಮ ಮಾಜಿ ಪ್ರಿಯಕರ, ತಂದೆ, ಸಹೋದರ, ಬಾಸ್, ನೆಚ್ಚಿನ ಸೆಲೆಬ್ರಿಟಿ ಅಥವಾ ಇನ್ನೊಬ್ಬ ಮಹಿಳೆಯ ಪತಿಯನ್ನು ಹೊಗಳುತ್ತಿದ್ದರೆ, ನೀವು ಆತನ ಇಗೋ ಅನ್ನು ಹರ್ಟ್‌ ಮಾಡುತ್ತಿದ್ದೀರಿ ಅಂತ ಅರ್ಥ. ಪುರುಷರು ತಮ್ಮ ಅಹಂಕಾರವನ್ನು ಪ್ರೀತಿಸುತ್ತಾರೆ. ಆತನ ಇಗೋ ಹರ್ಟ್‌ ಆದರೆ ಆತನ ಕಾಮವನ್ನು ನಂದಿಸಿದಂತೆ.

ವಾತ್ಸಾಯನ ಹೇಳಿದ ಈ ಭಂಗಿ ಅಳವಡಿಸಿಕೊಂಡರೆ ಸೆಕ್ಸ್‌ನಲ್ಲಿ ಅತಿ ಸುಖ!

8. ಸಾರ್ವಜನಿಕವಾಗಿ ಹೇಗೆ ನಡೆಸಿಕೊಳ್ಳುತ್ತೀರಿ?
ನೀವು ಗಂಡನನ್ನು ಅಗೌರವಿಸಿದರೆ, ಇತರರ ಅಥವಾ ಮಕ್ಕಳ ಮುಂದೆ ಅವನನ್ನು ಕೀಳಾಗಿ ಮಾತನಾಡಿದರೆ, ಆತ ನಿಮ್ಮ ಕೈಬಿಡುತ್ತಾನೆ. ಗೌರವ ಪಡೆಯುವ ಮತ್ತು ಮೆಚ್ಚುಗೆಯನ್ನು ಅನುಭವಿಸುವ ವ್ಯಕ್ತಿ ಸುಲಭವಾಗಿ ಸೆಕ್ಸ್‌ನತ್ತ ಆಕರ್ಷಿತನಾಗುತ್ತಾನೆ.

9. ಅವನ ಹಣಕಾಸಿನ ಸಮಸ್ಯೆಗಳನ್ನು ಪರಿಶೀಲಿಸಿ
ಗಂಡನಿಗೆ ಹಣಕಾಸಿನ ಸವಾಲುಗಳು ಅಥವಾ ಭಯ ಇದೆಯೇ ಎಂದು ಕಂಡುಹಿಡಿಯಿರಿ. ಇದು ಮನುಷ್ಯನ ಕಾಮವನ್ನು ಕುಗ್ಗಿಸುತ್ತದೆ. ಆರ್ಥಿಕ ಸೌಕರ್ಯವು ಹೆಚ್ಚು ಲೈಂಗಿಕ ಹಸಿವಿಗೆ ಕಾರಣವಾಗುತ್ತದೆ. ಅವನ ಪ್ರಯತ್ನವನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ತೋರಿಸಿ.

10. ನೀವು ಬೇರೊಬ್ಬ ಪುರುಷನತ್ತ ಆಕರ್ಷಿತರಾಗಿದ್ದೀರಾ?
ನೀವು ಇನ್ನೊಬ್ಬ ಗಂಡಸಿನೊಂದಿಗೆ ಹೆಚ್ಚು ಚಾಟ್ ಮಾಡುತ್ತಿದ್ದರೆ ಅಥವಾ ಫ್ಲರ್ಟಿಂಗ್ ಮಾಡುತ್ತಿದ್ದರೆ, ನಿಮ್ಮ ಗಂಡನ ಆಸೆಯನ್ನು ನೀವು ಸುಲಭವಾಗಿ ಕೊಲ್ಲುತ್ತೀರಿ. ಪುರುಷರು ತಮ್ಮ ಪತ್ನಿಯನ್ನು ಹಂಚಿಕೊಳ್ಳಲು ಅಥವಾ ಹೆಂಡತಿ ಇನ್ನೊಬ್ಬ ಪುರುಷನ ಜೊತೆ ತಿರುಗುವುದನ್ನು ಇಷ್ಟಪಡುವುದಿಲ್ಲ. ನೀವು ನಂಬಿಗಸ್ತರು ಎಂದು ಅವನಿಗೆ ತೋರಿಸಿ, ಆತ ನಿಮ್ಮ ಬಳಿ ಇರುತ್ತಾನೆ.

11. ನಿಮ್ಮ ನೆಪಗಳನ್ನು ಪರಿಶೀಲಿಸಿ
ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ, ಪಿರಿಯಡ್ಸ್ ಆಗಿದೆ, ಅಥವಾ ಸುಸ್ತಾಗಿದ್ದೇನೆ ಎಂದೆಲ್ಲ ನೀವು ನೆಪ ಹೇಳುತ್ತಿದ್ದರೆ, ಆತ ಅದನ್ನು ಶೀಘ್ರದಲ್ಲೇ ಕಂಡುಹಿಡಿದು ಸ್ವಿಚ್ ಆಫ್ ಮಾಡುತ್ತಾನೆ. ಒಮ್ಮೆ ಅವನು ಸ್ವಿಚ್ ಆಫ್ ಮಾಡಿದರೆ, ಅವನು ನಿಮ್ಮ ಕುರಿತು ಸೆಕ್ಸ್‌ ಹಸಿವನ್ನು ಮರಳಿ ಪಡೆಯುವುದು ಕಷ್ಟವಾಗುತ್ತದೆ. 

ಒಲಿಯದ ಗಂಡನಿಗೆ ಅಂಡರ್‌ವೇರ್‌ ಸೊಲ್ಯುಷನ್; ವೈರಲ್‌ ಆಗೋಯ್ತು ಬ್ಯೂಟಿ ಕ್ವೀನ್‌ ನೀಡಿದ ಪರಿಹಾರ!
 

click me!