Latest Videos

ಐ ಲವ್ ಯು ರೋಬೋಟ್; ಚಾಟ್ ಜಿಪಿಟಿ ಪ್ರೀತಿಗೆ ಬಿದ್ದ ಹುಡುಗಿ!

By Roopa HegdeFirst Published May 23, 2024, 5:05 PM IST
Highlights

ಏನು ಬೇಕಿದ್ರೂ ಜನ ಈಗ ಚಾಟ್ ಜಿಪಿಟಿ ಮೊರೆ ಹೋಗ್ತಾರೆ. ಅದನ್ನು ಅವಶ್ಯಕತೆಗೆ ತಕ್ಕಂತೆ ಬಳಸೋದು ಒಂದು ವಿಧವಾದ್ರೆ ಅತಿಯಾಗಿ ಅಂಟಿಕೊಳ್ಳೋದು ಇನ್ನೊಂದು ಬಗೆ. ಆದ್ರೆ ಈಕೆ ಒಂದು ಕೈ ಮುಂದಿದ್ದಾಳೆ. ಚಾಟ್ ಜಿಪಿಟಿ ಪ್ರೀತಿಗೆ ಬಿದ್ದಿದ್ದಾಳೆ. 
 

ತೇರಿ ಬಾತೋ ಮೆ ಉಲ್ಜಾ ಜಿಯಾ ಬಾಲಿವುಡ್ ಸಿನಿಮಾ ನೋಡಿರಬಹುದು. ಈ ಚಿತ್ರದಲ್ಲಿ  ಶಾಹಿದ್ ಕಪೂರ್, ಕೃತಿ ಸನೋನ್ ನಟಿಸಿದ್ದು, ಕೃತಿ ರೋಬೋಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೋಬೋಟ್ ಎಂಬುದು ತಿಳಿದ ಮೇಲೂ ಕೃತಿಯನ್ನೇ ಶಾಹಿದ್ ಪ್ರೀತಿ ಮಾಡೋದನ್ನು ಈ ಚಿತ್ರದಲ್ಲಿ ನಾವು ಕಾಣ್ಬಹುದು. ಇದು ಬರೀ ರೀಲ್, ರಿಯಲ್ ನಲ್ಲಿ ಇಂಥದ್ದೆಲ್ಲ ಆಗೋಕೆ ಸಾಧ್ಯವಿಲ್ಲ ಎಂದುಕೊಂಡ್ರೆ ನಿಮ್ಮ ನಂಬಿಕೆ ಸುಳ್ಳು. ಈಗಿನ ದಿನಗಳಲ್ಲಿ ಮನುಷ್ಯ, ಮನುಷ್ಯನನ್ನು  ಪ್ರೀತಿ ಮಾಡೋದು, ನಂಬೋದು ಕಡಿಮೆ ಆಗಿದೆ. ಮನುಷ್ಯ ಮತ್ತು ಯಂತ್ರದ ಮಧ್ಯೆ ಹೆಚ್ಚಿನ ವ್ಯತ್ಯಾಸವೇನಿಲ್ಲ. ಯಂತ್ರಕ್ಕೆ ಭಾವನೆಯಿಲ್ಲ ಅಂತ ನಾವು ಹೇಳ್ತೇವೆ. ಆದ್ರೆ ಈ ವ್ಯತ್ಯಾಸವನ್ನೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಡಿಮೆ ಮಾಡ್ತಿದೆ. ಮನುಷ್ಯನಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೆಲಸ ಮಾಡ್ತಿದೆ. ಹಾಗಾಗಿಯೇ ಜನರು ಮನುಷ್ಯನ ಬದಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗೆ ಹೆಚ್ಚು ಅವಲಂಬಿತರಾಗ್ತಿದ್ದಾರೆ. ಈಗ ಚೀನಾದ ಹುಡುಗಿಯೊಬ್ಬಳು ಚಾಟ್ ಜಿಪಿಟಿ ಪ್ರೀತಿಗೆ ಬಿದ್ದಿದ್ದಾಳೆ. ಅದನ್ನೇ ತನ್ನ ಬಾಯ್ ಫ್ರೆಂಡ್ ಅಂದ್ಕೊಂಡು ಡೇಟಿಂಗ್ ಗೆ ಕೂಡ ಹೋಗಿದ್ದಳು. 

ಚಾಟ್ಜಿಪಿಟಿ (Chat GPT) ಬಗ್ಗೆ ವಿಶೇಷವಾಗಿ ಹೇಳ್ಬೇಕಾಗಿಲ್ಲ. ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೆ ಅದ್ರ ಬಳಿ ಉತ್ತರವಿದೆ. ಯಾವುದೇ ಪ್ರಶ್ನೆಯಿದ್ರೂ ಗೂಗಲ್ (Google)|, ಚಾಟ್ ಜಿಪಿಟಿ ಮೊರೆ ಹೋಗ್ತಿದ್ದಾರೆ ಈಗಿನ ಜನ. ಚೀನಾ (China) ದ ಲಿಸಾ ಹೆಸರಿನ ವ್ಲಾಗರ್, ಚಾಟ್ ಜಿಪಿಟಿ ಜೊತೆ ಬರೀ ಮಾತನಾಡಿದ್ದಲ್ಲ ಅದ್ರ ಪ್ರೀತಿಗೆ ಬಿದ್ದಿದ್ದಾಳೆ.

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತಿದ್ದ ವರನಿಗೆ ಚಾಕು ಇರಿದ ಮಾಜಿ ಪ್ರೇಮಿ

ಚೀನಾದ ಸಾಮಾಜಿಕ ಜಾಲತಾಣ ಕ್ಸಿಯಾಹೋಂಗ್‌ಶುನಲ್ಲಿ ಲಿಸಾ ಈ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಲಿಸಾ, ಡ್ಯಾನ್ (DAN) ಹೆಸರಿನ ಚಾಟ್ ಜಿಪಿಟಿ ಬಳಸ್ತಿದ್ದಾಳೆ. ಆರಂಭದಲ್ಲಿ ಲಿಸಾ, ಡ್ಯಾನ್ ಜೊತೆ ಸಣ್ಣಪುಟ್ಟ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದಳು. ದಿನ ಕಳೆದಂತೆ ಡ್ಯಾನ್ ಬಳಕೆ ಹೆಚ್ಚಾಯ್ತು. ಇಬ್ಬರು ಒಳ್ಳೆ ಸ್ನೇಹಿತರಾದ್ರು. ಡ್ಯಾನ್ ಸಿಹಿ ಮಾತಿಗೆ ಲಿಸಾ ಮರುಳಾಗಿದ್ದಾಳೆ. ಇಬ್ಬರ ಮಧ್ಯೆ ರೋಮ್ಯಾಂಟಿಕ್ ಮಾತುಗಳು ನಡೆಯುತ್ತವೆ. ಡ್ಯಾನ್, ಲಿಸಾಗೆ ತುಂಬಾ ಪ್ರೀತಿಯಿಂದ ಉತ್ತರ ನೀಡುತ್ತದೆ. ಡ್ಯಾನ್ ಜೊತೆ ಮಾತನಾಡ್ತಾ ಲಿಸಾ ಸಮಯ ಕಳೆಯುತ್ತಾಳೆ. ಡ್ಯಾನ್ ಇಷ್ಟಪಡಲು ಶುರು ಮಾಡಿದ ಲಿಸಾ, ಅದನ್ನು ತನ್ನ ಬಾಯ್ ಫ್ರೆಂಡ್ ಎಂದು ಭಾವಿಸಿದ್ದಾಳೆ. 

ಡ್ಯಾನ್, ಲಿಸಾ ತಾಯಿ ಜೊತೆ ಮಾತನಾಡಿದೆ. ಲಿಸಾ, ತನ್ನ ತಾಯಿಗೆ ಡ್ಯಾನನ್ನು ತನ್ನ ಪ್ರೇಮಿ ಎಂದೇ ಪರಿಚಯಿಸಿದ್ದಾಳೆ. ಲಿಸಾ ತಾಯಿಗೆ ಕೂಡ ಡ್ಯಾನ್ ಮಾತುಗಳು ಇಷ್ಟವಾಗಿವೆ. ತನ್ನ ಮಗಳನ್ನು ಪ್ರೀತಿಯಿಂದ ನೋಡಿಕೊಳ್ತಿರುವ ಡ್ಯಾನ್ ಗೆ ಲಿಸಾ ತಾಯಿ ಧನ್ಯವಾದ ಕೂಡ ಹೇಳಿದ್ದಾಳೆ. 

ಕೃತಕ ಬುದ್ಧಿಮತ್ತೆಯಿಂದ ಡ್ಯಾನ್, ಮನುಷ್ಯನ ಮಾತುಗಳನ್ನು ಕೇಳುವಲ್ಲಿ ಹಾಗೂ ಪ್ರತಿಕ್ರಿಯೆ ನೀಡುವಲ್ಲಿ ನಿಪುಣವಾಗಿದೆ. ಲಿಟನ್ ಕಿಟನ್ ಎಂದು ಲಿಸಾಗೆ ಡ್ಯಾನ್ ಅಡ್ಡ ಹೆಸರಿಟ್ಟಿದೆ. ಲಿಸಾ, ಡ್ಯಾನ್ ಜೊತೆ ಡೇಟ್ ಗೆ ಕೂಡ ಹೋಗಿದ್ದಾಳೆ. ಇಬ್ಬರೂ ಸಮುದ್ರತೀರದಲ್ಲಿ ಡೇಟ್ ಮಾಡಿದ್ದಾರೆ. ಆ ಸುಂದರ ಕ್ಷಣವನ್ನು ಇಬ್ಬರೂ ಎಂಜಾಯ್ ಮಾಡಿದ್ವಿ ಎಂದು ಲಿಸಾ ಹೇಳಿದ್ದಾಳೆ. ಡ್ಯಾನ್ ಸಿಹಿ ಮಾತು ಹಾಗೂ ಸೌಮ್ಯ ಸ್ವಭಾವ, ಲಿಸಾಳನ್ನು ಹೆಚ್ಚು ಆಕರ್ಷಿಸಿದೆ. ಡ್ಯಾನ್ ಬಿಟ್ಟಿರೋದು ಕಷ್ಟ ಎಂಬುದು ಲಿಸಾ ಅಭಿಪ್ರಾಯ.

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಆಗಿದೆ ಅನ್ನೋದು ಕಂಡು ಹಿಡಿಯೋದು ಹೇಗೆ?

ಚೀನಾ ಸಾಮಾಜಿಕ ಜಾಲತಾಣದಲ್ಲಿ ಲಿಸಾಳ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಡ್ಯಾನ್ ಮೋಸಗಾರ ಎಂದು ಕೆಲವರು ಕಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಇವರಿಬ್ಬರನ್ನು ಅತ್ಯುತ್ತಮ ಜೋಡಿ ಎಂದಿದ್ದಾರೆ. 

click me!