Animal Behavior: ಕಾರಿನ ಟೈರ್,ಕಂಬಕ್ಕೇ ನಾಯಿ ಮೂತ್ರ ಮಾಡೋದೇಕೆ ?

By Suvarna NewsFirst Published May 26, 2022, 12:34 PM IST
Highlights

ನಾಯಿ ಕಾರಿನ ಬಳಿ ಬರ್ತಿದ್ದಂತೆ ಅದನ್ನು ಓಡಿಸ್ತೇವೆ. ಟೈರ್ ಮೇಲೆ ಮೂತ್ರ ಮಾಡಿ ಕೊಳಕು ಮಾಡ್ತು ಅಂತ ಬೈತೇವೆ. ದಿನನಿತ್ಯ ಅನೇಕ ನಾಯಿಗಳು ಕಂಬಕ್ಕೆ ಮೂತ್ರ ವಿಸರ್ಜನೆ ಮಾಡೋದನ್ನು ನೋಡಿರ್ತೇವೆ. ಆದ್ರೆ ಯಾಕೆ ಅಂತಾ ಯೋಜ್ನೇನೇ ಮಾಡೋದಿಲ್ಲ.
 

ನಮ್ಮ ಸುತ್ತ ಮುತ್ತ ಪ್ರತಿನಿತ್ಯ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ನಮ್ಮ ಜಂಜಾಟದ ಜೀವನದಲ್ಲಿ ಕೆಲವೊಂದು ಸಂಗತಿಯನ್ನು ಗಮನಿಸಿಯೂ ನಾವು ನಿರ್ಲಕ್ಷ್ಯಿಸಿರುತ್ತೇವೆ. ಮನುಷ್ಯ (Human) ರ ಮನೆ (Home) ಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನಮಗಿರುವಷ್ಟು ಕುತೂಹಲ ಪ್ರಕೃತಿ ಬಗ್ಗೆ ತಿಳಿಯಲು ಇರೋದಿಲ್ಲ.  ಗಿಡ –ಮರ, ಪ್ರಾಣಿ – ಪಕ್ಷಿಗಳ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳಿರುತ್ತವೆ. ಪ್ರತಿಯೊಂದರ ಒಳಹೊಕ್ಕಿ ನೋಡಿದಾಗ ಮಾತ್ರ ಅವರ ಜೀವನ ಶೈಲಿ (Lifestyle) ನಮಗೆ ತಿಳಿಯಲು ಸಾಧ್ಯ. ಮನುಷ್ಯನಾದವನು ಮಾತಿನ ಮೂಲಕ ಸಂವಹನ ನಡೆಸ್ತಾನೆ. ಆದ್ರೆ ಮೂಖ ಪ್ರಾಣಿಗಳ ಸಂವಹನ ವಿಧಾನ ಬೇರೆ. ಬೆಂಗಳೂರಿನಲ್ಲಂತೂ ಪ್ರತಿ ಗಲ್ಲಿಗೆ ನಾಲ್ಕೈದು ನಾಯಿಗಳಿರುತ್ತವೆ. ಈ ನಾಯಿಗಳನ್ನು ನೀವು ಗಮನಿಸಿರಬಹುದು, ಬೈಕ್ ಅಥವಾ ವಾಹನದ ಟೈರ್ ಗೆ ಮತ್ತು ಕರೆಂಟ್ ಕಂಬಕ್ಕೆ ಇಲ್ಲವೆ ಮರದ ಬಳಿ ಮೂತ್ರ ವಿಸರ್ಜನೆ ಮಾಡ್ತವೆ. ನಮ್ಮ ಕಾರಿನ ಬಳಿ ನಾಯಿ ಬರ್ತಿದ್ದಂತೆ ನಾವು ಓಡಿಸ್ತೇವೆ. ಆದ್ರೆ ಎಂದಾದ್ರೂ ನಾಯಿಗಳು ಏಕೆ, ಇಲ್ಲಿ ಮೂತ್ರ ವಿಸರ್ಜನೆ ಮಾಡ್ತವೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿದ್ದೀರಾ? ಇಲ್ಲ ಅಂದ್ರೆ ಚಿಂತೆ ಬೇಡ. ನಾವಿಂದು ಇದಕ್ಕೆ ಉತ್ತರ ನೀಡ್ತೇವೆ.

ನಾಯಿ ಕಾರಿನ ಟೈರ್ ಗೆ ಮೂತ್ರ ವಿಸರ್ಜನೆ ಮಾಡಲು ಕಾರಣ ಏನು ಗೊತ್ತಾ? :  ನಾಯಿಗಳು ಯಾವಾಗಲೂ ತೆರೆದ ಜಾಗದಲ್ಲಿ ಮೂತ್ರ ವಿಸರ್ಜಿಸಲು ಇಷ್ಟಪಡುತ್ತವೆ. ನಿಮ್ಮ ಹತ್ತಿರ ಆಡುತ್ತಿರುವ ಟಾಮಿ (ನಾಯಿ) ಇದ್ದಕ್ಕಿದ್ದಂತೆ ಹೊರಗೆ ಓಡಿಹೋದರೆ ಅದಕ್ಕೆ ಮೂತ್ರ ಬಂದಿದೆ ಎಂದು ನೀವು  ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಶ್ವಾನ ತಜ್ಞರು ಅವುಗಳ ವರ್ತನೆಯ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿದ್ದಾರೆ. ಇದರ ಹಿಂದೆ 3 ಮುಖ್ಯ ಕಾರಣಗಳಿವೆ ಎಂದು ತಜ್ಞರು ಹೇಳ್ತಾರೆ. 
• ಮೊದಲನೆಯದಾಗಿ, ಟೈರ್,ಮರ ಅಥವಾ ಕಂಬಕ್ಕೆ ಮೂತ್ರ ವಿಸರ್ಜಿಸುವ ಮೂಲಕ  ನಾಯಿಗಳು ತಮ್ಮ ಪ್ರದೇಶವನ್ನು ಗುರುತಿಸುತ್ತವೆ. ಅಲ್ಲದೆ ಇದು ಇತರ ಸಹಚರರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವಾಗಿದೆ. ಬೇರೆ ಪ್ರದೇಶದಿಂದ ಬಂದ ನಾಯಿಯನ್ನು ಈ ಏರಿಯಾದ ನಾಯಿಗಳು ಸ್ವೀಕರಿಸುವುದಿಲ್ಲ. ಅವುಗಳ ಪ್ರವೇಶ ನಿರ್ಬಂಧಿಸಲಾಗಿದೆ ಎಂಬುದು ಇದರ ಸೂಚನೆಯಾಗಿರುತ್ತದೆ. ನಾಯಿಯ ಮೂತ್ರದ ವಾಸನೆಯನ್ನು ನೋಡಿದ ನಂತರ ಹೊಸ ನಾಯಿಯು ಅಲ್ಲಿಗೆ ಬಂದರೆ, ಅದು ಮೂತ್ರದ ರೂಪದಲ್ಲಿ ತನ್ನ ಗುರುತನ್ನು ಬಿಡುತ್ತದೆ. ಬೇರೆ ಪ್ರದೇಶದ ನಾಯಿ ತನ್ನ ಪ್ರದೇಶಕ್ಕೆ ತಪ್ಪಾಗಿ ಪ್ರವೇಶಿಸಿದರೆ, ಈ ಪ್ರದೇಶದ ನಾಯಿ ಬೊಗಳಲು ಪ್ರಾರಂಭಿಸುತ್ತದೆ. ಅಗತ್ಯವೆನಿಸಿದ್ರೆ ಕಚ್ಚಾಡಿಕೊಳ್ಳುತ್ತವೆ.  

ಸಂಗಾತಿ ಮೇಲೆ ಅನುಮಾನ ಭೂತ ಇದ್ದಂತೆ, ಇಬ್ಬರನ್ನೂ ಕಾಡುತ್ತೆ

• ಟೈರ್ ಮೇಲೆ ಮೂತ್ರ ವಿಸರ್ಜನೆಯ ಹಿಂದಿನ ಇನ್ನೊಂದು ಕಾರಣವೆಂದರೆ ವಾಸನೆ. ಟೈರ್ ರಬ್ಬರ್ ವಾಸನೆಯನ್ನು ನಾಯಿಗಳು ಇಷ್ಟಪಡುತ್ತವೆ. ಈ ವಾಸನೆಯಿಂದ ಆಕರ್ಷಿತರಾದ ನಾಯಿಗಳು ಟೈರ್ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಿಂತಿರುಗುತ್ತವೆ. 

ಇಂಥ ವಿಷ್ಯವನ್ನು ಅಪ್ಪಿತಪ್ಪಿಯೂ ಗಂಡಸರು ಪತ್ನಿ ಹತ್ರ ಶೇರ್ ಮಾಡಿಕೊಳ್ಳೋಲ್ಲ

• ಮೂರನೇ ಕಾರಣವೆಂದ್ರೆ ನಾಯಿಗಳು ಲಂಬವಾದ ವಸ್ತುಗಳ ಮೇಲೆ ಮಾತ್ರ ಮೂತ್ರ ವಿಸರ್ಜಿಸಲು ಇಷ್ಟಪಡುತ್ತವೆ. ಟೈರ್ ಅಥವಾ ಕಂಬದ ಕೆಳಗಿನ ಭಾಗವು ನಾಯಿಯ ಮೂಗಿನ ವ್ಯಾಪ್ತಿಯೊಳಗೆ ಉಳಿದಿರುತ್ತದೆ. ನಾಯಿಯು ತನ್ನ ಮೂಗಿನ ಮಟ್ಟದಲ್ಲಿ ಗುರುತು ಬಿಡುತ್ತದೆ ಎನ್ನುತ್ತಾರೆ ತಜ್ಞರು. ನಾಯಿ ಟೈರ್ ಮೇಲೆ ಮೂತ್ರ ವಿಸರ್ಜನೆ ಮಾಡಲು ಮತ್ತೊಂದು ಕಾರಣವೂ ಇದೆ. ಅದೇನೆಂದ್ರೆ ಟೈರಿನಲ್ಲಿ ಮೂತ್ರದ ವಾಸನೆಯು ಹೆಚ್ಚು ಕಾಲ ಇರುತ್ತದೆ. ಆಗ ನಾಯಿಗೆ ವಾಸನೆ ಪತ್ತ ಹಚ್ಚುವುದು ಸುಲಭವಾಗುತ್ತದೆ.  ಅದೇ ನಾಯಿಯು ನೆಲದ ಮೇಲೆ ಮೂತ್ರ ವಿಸರ್ಜಿಸಿದರೆ ಅದರ ವಾಸನೆ ಬೇಗ ಹೋಗುತ್ತದೆ. ಆಗ ವಾಸನೆ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ.

click me!