
ಪ್ರೀತಿ (Love) ಗೆ ಹಾಗೆ ಪ್ರೀತಿ ಮಾಡುವ ವ್ಯಕ್ತಿಗೆ ವಯಸ್ಸಿಲ್ಲ. ವೃದ್ಧಾಪ್ಯದಲ್ಲೂ ಪ್ರೀತಿ ಚಿಗುರಬಹುದು. ಅನೇಕ ವೃದ್ಧರು ತಮ್ಮ ಕೊನೆಗಾಲದಲ್ಲಿ ಮದುವೆ ಮಾಡಿಕೊಂಡಿದ್ದಿದೆ. ಅದಕ್ಕೆ ಅನೇಕರು ಉದಾಹರಣೆಯಾಗಿದ್ದಾರೆ. ಮದುವೆ (marriage), ಪ್ರೀತಿ ವಿಷ್ಯ ಬಂದಾಗ, ವರ, ವಧುಗಿಂತ ದೊಡ್ಡವನಿರಬೇಕು ಎಂಬ ನಂಬಿಕೆ ನಮ್ಮಲ್ಲಿದೆ. ನಾಲ್ಕೈದು ವರ್ಷ ಹಿರಿಯ ಹುಡುಗನಿಗೆ ಪಾಲಕರು ತಮ್ಮ ಮಗಳನ್ನು ಮದುವೆ ಮಾಡೋದು ವಾಡಿಕೆ ಕೂಡ. ಆದ್ರೆ ಇತ್ತೀಚಿನ ದಿನಗಳಲ್ಲಿ ಇದ್ರಲ್ಲಿ ದೊಡ್ಡ ಬದಲಾವಣೆಯಾಗಿದೆ. ಅನೇಕ ಹುಡುಗಿಯರು ತಮಗಿಂತ ಡಬಲ್ ವಯಸ್ಸಿನ ವ್ಯಕ್ತಿಯನ್ನು ಪ್ರೀತಿಸ್ತಿದ್ದಾರೆ, ಮದುವೆ ಆಗ್ತಿದ್ದಾರೆ. ಅತೀ ಹಿರಿಯ ವ್ಯಕ್ತಿಗೆ ಅವರು ಮನಸ್ಸೋಲಲು ಅನೇಕ ಕಾರಣವಿದೆ.
ಹಿರಿಯ ವ್ಯಕ್ತಿ ಜೊತೆ ಕಿರಿಯ ವಯಸ್ಸಿನ ಹುಡುಗಿ ಡೇಟಿಂಗ್ (dating) ಶುರು ಮಾಡ್ದಾಗ ಇಲ್ಲವೆ ಮದುವೆ ಮಾಡ್ಕೊಂಡಾಗ ಜನರು ಟ್ರೋಲ್ ಮಾಡ್ತಾರೆ. ಸಮಾಜದಿಂದ ಅನೇಕ ಮಾತುಗಳು ಕೇಳಿ ಬರುತ್ವೆ. ಗೋಲ್ಡ್ ಡಿಗ್ಗರ್ ಎಂದೇ ಈ ಸಂಬಂಧವನ್ನು ಜನರು ಕರೆಯುತ್ತಾರೆ. ಅದೇನೇ ಸವಾಲು ಬರಲಿ, ಹುಡುಗಿಯರು ತಲೆಕೆಡಿಸಿಕೊಳ್ಳೋದಿಲ್ಲ. ವ್ಯಕ್ತಿಯ ಹಣ ನೋಡಿ ಹುಡುಗಿ ಹಿಂದೆ ಬಿದ್ದಿದ್ದಾಳೆ ಎಂಬ ಆರೋಪಕ್ಕೆ ಅವರು ಟೆನ್ಷನ್ ಆಗೋದಿಲ್ಲ. ಸಂಗಾತಿ, ತಮ್ಮ ಜೀವನ ಮುಖ್ಯ ಎನ್ನುವ ಹುಡುಗಿಯರು ಹಿರಿಯ ವಯಸ್ಸಿನ ವ್ಯಕ್ತಿಯನ್ನು ಪ್ರೀತಿ ಮಾಡಲು ಕೆಲ ಕಾರಣಗಳನ್ನು ನೀಡ್ತಾರೆ.
ಜಗಳವಾಡಿ ತವರು ಸೇರಿದ ಪತ್ನಿಗೆ ಪಾಠ ಕಲಿಸಲು ಪತಿಯ ಸಿಗ್ನಲ್ ಜಂಪ್ ತಂತ್ರ,ಪೊಲೀಸರೇ ದಂಗು
ಹಿರಿಯ ವ್ಯಕ್ತಿ ಪ್ರೀತಿ ಮಾಡಲು ಇದು ಕಾರಣ :
ಜೀವನದ ಅನುಭವ : ಸಂಗಾತಿ ಜೊತೆ ಸುಖ ಜೀವನ ನಡೆಸಲು ಹುಡುಗಿಯರು ಬಯಸ್ತಾರೆ. ತಾವೆಷ್ಟೇ ತಪ್ಪು ಮಾಡಿದ್ರೂ ಸಂಗಾತಿ ನಮ್ಮನ್ನು ಕೇರ್ ಮಾಡ್ಬೇಕು ಎಂಬ ಆಸೆಯನ್ನು ಅವರು ಹೊಂದಿರುತ್ತಾರೆ. ಹುಡುಗಿಯರು ಏನೆಲ್ಲ ಬಯಸ್ತಾರೋ ಅದೆಲ್ಲ ಹಿರಿಯ ವ್ಯಕ್ತಿಯಿಂದ ಸಿಗುತ್ತೆ. ಜೀವನದಲ್ಲಿ ಅನುಭವ ಹೊಂದಿರುವ ವ್ಯಕ್ತಿ ತನ್ನ ಸಂಗಾತಿ ಮಾಡಿದ ತಪ್ಪುಗಳನ್ನು ಕ್ಷಮಿಸಿ ಮುಂದೆ ಹೋಗ್ತಾನೆ. ಹಾಗಾಗಿಯೇ ಹುಡುಗಿಯರು ಹೆಚ್ಚು ಹಿರಿಯ ವಯಸ್ಸಿನ ವ್ಯಕ್ತಿಗಳಿಗೆ ಆಕರ್ಷಿತರಾಗ್ತಾರೆ.
ತೋರ್ಪಡಿಕೆ ಇಷ್ಟಪಡದ ಹುಡುಗಿಯರು : ಹುಡುಗಿಯರು ತಮ್ಮ ಲೈಫ್ ಪಾರ್ಟನರ್ ಆಯ್ಕೆ ಮಾಡಿಕೊಳ್ಳುವ ವೇಳೆ ಸಾಕಷ್ಟು ಆಲೋಚನೆ ಮಾಡ್ತಾರೆ. ಐಷಾರಾಮಿ ವಾಹನ, ದುಬಾರಿ ಜೀವನಶೈಲಿ, ಬ್ರ್ಯಾಂಡ್ ಡ್ರೆಸ್, ಹಣ ನನ್ನಲ್ಲಿದೆ ಅಂತ ಯುವಕನೊಬ್ಬ ತೋರ್ಪಡಿಸಿದ್ರೆ ಅದನ್ನು ಹುಡುಗಿಯರು ಸುಲಭವಾಗಿ ನಂಬೋದಿಲ್ಲ. ಆತ ಇಷ್ಟೆಲ್ಲ ಹಣ ಮಾಡಿರಲು ಸಾಧ್ಯವಿಲ್ಲ, ತೋರ್ಪಡಿಕೆ ಎಂದು ಭಾವಿಸ್ತಾರೆ. ಅದೇ ವಯಸ್ಸಾದ ವ್ಯಕ್ತಿ ಇದನ್ನೆಲ್ಲ ಮಾಡಿದ್ರೆ ಅದನ್ನು ನಿಜವೆಂದು ಹುಡುಗಿಯರು ನಂಬ್ತಾರೆ. ಆತನ ಕಡೆ ಆಕರ್ಷಿತರಾಗ್ತಾರೆ.
Viral News: ಮದುಮಗನ ಸಿಬಿಲ್ ಸ್ಕೋರ್ ಕಡಿಮೆ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ
ಪರ ಮಹಿಳೆ ಜೊತೆ ಅಫೇರ್ : ಹಿರಿಯ ವಯಸ್ಸಿನ ವ್ಯಕ್ತಿಗೆ ಆಕರ್ಷಿತವಾಗುವ ಹುಡುಗಿಯರು ಅವರ ನಿಷ್ಠೆಗೆ ಮನಸೋಲುತ್ತಾರೆ. ವಯಸ್ಸಾದ ವ್ಯಕ್ತಿಗಳು ಮೋಸ ಮಾಡುವುದಿಲ್ಲ, ಒಬ್ಬರಿಗೇ ನಿಷ್ಠರಾಗಿರ್ತಾರೆಂದು ಹುಡುಗಿಯರು ನಂಬುತ್ತಾರೆ. ಚಿಕ್ಕ ವಯಸ್ಸಿನ ಹುಡುಗರು ಬೇರೆ ಹುಡುಗಿ ಅಥವಾ ಮಹಿಳೆ ಜೊತೆ ಅಫೇರ್ ಇಟ್ಕೊಳ್ಳುವ ಸಾಧ್ಯತೆ ಹೆಚ್ಚು, ಅದೇ ಹಿರಿಯ ವ್ಯಕ್ತಿಗಳು ಇದನ್ನು ಮಾಡೋದು ಕಡಿಮೆ ಅಂತ ಹುಡುಗಿಯರು ಭಾವಿಸ್ತಾರೆ. ತಾನು ಪ್ರೀತಿಸುವ ವ್ಯಕ್ತಿ ತನಗೆ ಮಾತ್ರ ನಿಷ್ಠಾವಂತನಾಗಿರಬೇಕೆಂದುಕೊಳ್ಳುವ ಅವರು ಆತನ ಪ್ರೀತಿಗೆ ಬೀಳ್ತಾರೆ.
ಇವೆಲ್ಲವನ್ನು ಗಮನಿಸ್ತಾರೆ ಹುಡುಗಿಯರು : ಯಾವುದೇ ವ್ಯಕ್ತಿ ಜೊತೆ ಡೇಟ್ ಅಥವಾ ಮದುವೆ ವಿಷ್ಯ ಬಂದಾಗ ಹುಡುಗಿಯರು ಇನ್ನೂ ಅನೇಕ ಸಂಗತಿಯನ್ನು ಗಮನಿಸ್ತಾರೆ. ಆರ್ಥಿಕ ಸ್ಥಿತಿ, ಭದ್ರತೆ, ಬುದ್ಧಿವಂತಿಕೆ ಸೇರಿದಂತೆ ತಮ್ಮ ಜೀವನಕ್ಕೆ ಅಗತ್ಯವಿರುವ ಎಲ್ಲವೂ ಈತನಲ್ಲಿ ಸಿಗ್ಬಹುದಾ ಎಂಬುದನ್ನು ಲೆಕ್ಕ ಹಾಕಿ ಆಕೆ ಆಯ್ಕೆ ಮಾಡಿಕೊಳ್ತಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.