ಮದುವೆ ಕಾರ್ಡ್‌ನ 'ಆಗಮನಾಭಿಲಾಷಿಗಳು' ಲಿಸ್ಟ್‌ನಲ್ಲಿ ಸತ್ತವರ ಹೆಸರು, ಕಾರ್ಡ್‌ ನೋಡಿದವರು ಶಾಕ್‌!

Published : Feb 08, 2025, 03:57 PM IST
ಮದುವೆ ಕಾರ್ಡ್‌ನ 'ಆಗಮನಾಭಿಲಾಷಿಗಳು' ಲಿಸ್ಟ್‌ನಲ್ಲಿ ಸತ್ತವರ ಹೆಸರು, ಕಾರ್ಡ್‌ ನೋಡಿದವರು ಶಾಕ್‌!

ಸಾರಾಂಶ

ಜೈಪುರದ ಒಂದು ಮದುವೆ ಸಖತ್‌ ಸುದ್ದಿ ಮಾಡ್ತಿದೆ. ಅದಕ್ಕೆ ಕಾರಣವೇನೆಂದರೆ, ಮದುವೆ ಕಾರ್ಡ್‌ನ ಆಗಮನಾಭಿಲಾಷಿಗಳು ಲಿಸ್ಟ್‌ನಲ್ಲಿ ಇರುವ ಹೆಸರುಗಳು.

ಜೈಪುರ (ಫೆ.8): ಈಗ ಮದುವೆ ಸೀಸನ್. ಆದರೆ,  ರಾಜಸ್ಥಾನದ ಜೈಪುರದಲ್ಲಿ ನಡೆಯೋ ಒಂದು ಮದುವೆಗೆ ಹೋಗೋಕೆ ಸಂಬಂಧಿಗಳು ಹೆಸರುತ್ತಿದ್ದಾರೆ. ಏಕೆಂದರೆ, ಈ ಮದುವೆ ಅವರನ್ನು ಸ್ವಾಗತ ಮಾಡಿರುವ ವ್ಯಕ್ತಿಗಳು ಈಗಾಗಲೇ ಸಾವು ಕಂಡಿದ್ದಾರೆ. ಸತ್ತವರ ಹೆಸರಿನಲ್ಲಿರುವ ಇರುವ ಕಾರ್ಡ್‌ಗಳನ್ನು ಕಂಡು ಸಂಬಂಧಿಗಳೇ ಅಚ್ಚರಿ ಪಟ್ಟಿದ್ದಾರೆ. ಜೈಪುರದ ಕರ್ಬಲಾ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಮದುವೆ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚರ್ಚೆಯಲ್ಲಿರುವ ಮುಸ್ಲಿಂ ಜೋಡಿಯ ಮದುವೆ ಕಾರ್ಡ್: ಇದು ಮುಸ್ಲಿಂ ಮದುವೆ ಕಾರ್ಡ್. ಜೈಪುರದ ಕರ್ಬಲಾ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ, ಈ ಕಾರ್ಡ್‌ನಲ್ಲಿ ಕುಟುಂಬದಲ್ಲಿ ಸಾವು ಕಂಡವರ ಹೆಸರಿದೆ, ಹಾಗಂತ ಇದು ವಿಶೇಷವೇನಲ್ಲ. ಸಾಮಾನ್ಯವಾಗಿ ಮದುವೆಗೆ ಆಗಮನಾಭಿಲಾಷಿಗಳು ಅನ್ನೋ ಶಬ್ದದ ಕೆಳಗೆ ಬದುಕಿರುವ ವ್ಯಕ್ತಿಗಳ ಹೆಸರು ಇರುತ್ತದೆ. ಇಂಥ ವ್ಯಕ್ತಿಗಳು ನಿಮಗೆ ಆಹ್ವಾನ ನೀಡುತ್ತಿದ್ದು, ನೀವು ಮದುವೆಗೆ ಬಂದರೆ ತಮಗೆ ಖುಷಿ ಆಗುತ್ತದೆ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಆದರೆ, ಈ ಮದುವೆ ಕಾರ್ಡ್‌ನ ಆಗಮನಾಭಿಲಾಷಿಗಳು ಪಟ್ಟಿಯ ಕೆಳಗೆ ಸತ್ತವರ ಹೆಸರಿದೆ. ಫೆ. 9ಕ್ಕೆ ಮದುವೆ ನಿಗದಿಯಾಗಿದ್ದು, ಮದುವೆ ಕಾರ್ಯಕ್ರಮಗಳು ಈಗಾಗ್ಲೇ ಶುರುವಾಗಿವೆ. ಈ ಕಾರ್ಡ್‌ನ ಬಗ್ಗೆ ಒಬ್ಬರು ಸಾವಿನ ಮದುವೆ ಅಂತಿದ್ರೆ, ಇನ್ನೊಬ್ಬರು ಸತ್ತವರಿಗೆ ಗೌರವ ಎಂದು ಹೇಳುತ್ತಿದ್ದಾರೆ. ಸತ್ತ ವ್ಯಕ್ತಿಗಳು ಆಗಮನಾಭಿಲಾಷಿಗಳಾಗಿದ್ದಾರೆ ಎಂದರೆ ನಮ್ಮ ಆಗಮನಕ್ಕೆ ಅವರು ಕಾಯುತ್ತಿದ್ದಾರೆ ಎನ್ನುವ ಅರ್ಥವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಕಾರ್ಡ್‌ನಲ್ಲಿ ಕುಟುಂಬದ ಸತ್ತವರ ಹೆಸರು: ಜೈಪುರದ ಕರ್ಬಲಾ ಮೈದಾನ ದೊಡ್ಡ ಜಾಗದಲ್ಲಿ ಮದುವೆ ನಡೆಯುತ್ತಿದೆ. ಇಲ್ಲಿ ಮೊದಲ ಬಾರಿಗೆ ಮದುವೆ ಆಗ್ತಿಲ್ಲ. ಮೊದಲೂ ಇಲ್ಲಿ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಆದ್ರೆ ಕಾರ್ಡ್‌ನಲ್ಲಿ ಸತ್ತವರ ಹೆಸರು ಬರೆದಿರೋದು ಜನರಿಗೆ ವಿಚಿತ್ರ ಅನಿಸ್ತಿದೆ. ಮದುವೆಗೆ ಬೆಳಿಗ್ಗೆ 8 ಗಂಟೆಗೆ ವರ ಬರ್ತಾರೆ. 9 ಗಂಟೆಗೆ ನಿಕಾಹ್. ಸಂಜೆ 4 ಗಂಟೆಗೆ ಭಾತ್. ರಾತ್ರಿ 10 ಗಂಟೆಗೆ ವಧುವಿನ ವಿದಾಯ ಕಾರ್ಯಕ್ರಮ ನಡೆಯಲಿದೆ.

Viral News: ಮದುಮಗನ ಸಿಬಿಲ್‌ ಸ್ಕೋರ್‌ ಕಡಿಮೆ ಎಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ವಧುವಿನ ಕುಟುಂಬ!

ಸತ್ತವರ ಹೆಸರು ಇರಬಾರದು: ಹಿಂದೂ ಕಾರ್ಡ್‌ನಲ್ಲಿ ಸತ್ತವರ ಹೆಸರಿನ ಮುಂದೆ 'ಸ್ವರ್ಗೀಯ' ಅಂತ ಬರೆಯೋ ಹಾಗೆ ಮುಸ್ಲಿಂ ಕಾರ್ಡ್‌ನಲ್ಲಿ 'ಮರ್ಹೂಮ್' ಅಂತ ಬರೀತಾರೆ. ಆದ್ರೆ ಈ ಪದ ವಧು-ವರರ ಹೆಸರಿನ ಕೆಳಗೆ ಬರುತ್ತೆ. ಸ್ವಾಗತದ ಜಾಗದಲ್ಲಿ ಸತ್ತವರ ಹೆಸರು ಬರೆಯೋದು ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಲ್ಲೂ ಇಲ್ಲ.

ತಂಗಿಗಾಗಿ 1ಕೋಟಿ ರೂ ನಗದು 291 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, 2 ಸೈಟ್‌ ವರದಕ್ಷಿಣೆ ಕೊಟ್ಟ ಸಹೋದರರು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?