ನನಗೆ ಗೊತ್ತಿಲ್ಲದ ಹಾಗೆ ಇವಳ ಹಿಂದೆ ಬಿದ್ದಿದ್ದೆ. ರಾತ್ರಿ ಪದೇ ಪದೇ ಅವಳ ಮುಖವೇ ಕಣ್ಮುಂದೆ ಬರುತ್ತಿತ್ತು. ಅವಳ ಮಧುರ ದನಿ, ಕೆನ್ನೆಯ ಡಿಂಪಲ್ ನನ್ನನ್ನು ಕಂಗೆಡಿಸುತ್ತಿತ್ತು. ಈಕೆ ವಿವಾಹಿತೆ, ಈಕೆಯ ಬಗ್ಗೆ ಈ ತರದ ಭಾವನೆ ತಪ್ಪು ಅನ್ನೋದು ಗೊತ್ತಿತ್ತು. ಆದರೆ ನನ್ನ ಮೇಲೇ ನನಗೆ ಕಂಟ್ರೋಲ್ ಇರಲಿಲ್ಲ.
ನಾನು ವಿನಯ್. ಸಂಬಂಧಗಳ ವಿಚಾರದಲ್ಲಿ ನಾವು ಬಹಳ ಪ್ರಾಮಾಣಿಕರಾಗಿರಬೇಕು ಅಂತ ನಂಬುವ ವ್ಯಕ್ತಿ. ಆದರೆ ಇದೀಗ ನನ್ನ ಸ್ಥಿತಿ ನೋಡಿದರೆ ಏನು ಹೇಳಲೂ ತೋಚುತ್ತಿಲ್ಲ. ನಾನು ನನ್ನ ಇಂಜಿನಿಯರಿಂಗ್ ಡಿಗ್ರಿ ಮುಗಿಸಿ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ರಾತ್ರಿ ಹಗಲು ಕಷ್ಟಪಟ್ಟೆ. ನನ್ನ ಕೈಯಲ್ಲಿ ಹಣ ಸೇರತೊಡಗಿತು. ಈ ಟೈಮ್‌ನಲ್ಲೇ ನನ್ನ ಕೊಲೀಗ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದೆ. ಸಣ್ಣಪುಟ್ಟ ವಾಗ್ವಾದಗಳನ್ನು ಬಿಟ್ಟರೆ ನಮ್ಮ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಈ ನಡುವೆ ಒತ್ತಡ ವಿಪರೀತವಾಗತೊಡಗಿತು. ಯಾವ ಲೆವೆಲ್‌ಗೆ ಅಂದರೆ ಇದೆಲ್ಲ ಬಿಟ್ಟು ಆಚೆ ಬರಬೇಕು, ಪೀಸ್‌ಫುಲ್ ಆಗಿ ಕೆಲಸ ಮಾಡ್ತಾ ಬದುಕಬೇಕು ಅಂತ ತೀವ್ರವಾಗಿ ಅನಿಸತೊಡಗಿತು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೆ.
ಅದೃಷ್ಟವಶಾತ್ ನಾನು ಓದಿದ ಕಾಲೇಜ್‌ನಿಂದಲೇ ನನಗೆ ಒಂದು ದಿನ ಕಾಲ್ ಬಂತು. ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್‌ಗೆ ಅಲ್ಲಿ ವೇಕೆನ್ಸಿ ಕ್ರಿಯೇಟ್ ಆಗಿತ್ತು. ಹಾಗಂತ ಇಷ್ಟು ದಿನ ಕಾರ್ಪೊರೇಟ್ ಕಂಪೆನಿಯಲ್ಲಿ ದುಡಿದ ನನಗೆ ಟೀಚಿಂಗ್ ಪ್ರೊಫೆಶನ್ ಅಂಥಾ ಸುಲಭದ ಹಾದಿಯಾಗಿರಲಿಲ್ಲ. ಆದರೂ ನಾನಿದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ಮನೆಯವರೂ ಖುಷಿಯಿಂದಲೇ ಒಪ್ಪಿದರು. ಮೊದಲ ಒಂದು ವಾರ ಬಹಳ ಕಷ್ಟವಾಯ್ತು. ಆಮೇಲಾಮೇಲೆ ಹುಡುಗ್ರು ಫ್ರೆಂಡ್ಸ್ ಆದ್ರು. ನನ್ನ ಓದಿಗೆ ಸಾಕಷ್ಟು ಟೈಮ್ ಸಿಗುತ್ತಿತ್ತು. ನನ್ನ ಜ್ಞಾನವನ್ನೂ ಹೆಚ್ಚಿಸಿಕೊಳ್ಳೋಕೆ ಸಾಧ್ಯವಾಗ್ತಿತ್ತು. ಈ ಪ್ರೊಫೆಶನ್‌ಗೆ ಬಂದಮೇಲೆ ಡೇಟಿಂಗ್ ಮಾಡುತ್ತಿದ್ದ ಹುಡುಗಿ ಜೊತೆಗಿನ ಸಂಪರ್ಕವೂ ಕಟ್ ಆಯ್ತು.
undefined
ನಾನು ಈ ಕಾಲೇಜ್ ಗೆ ಬಂದ ಮೊದಲ ದಿನವೇ ವಿಭಾಳನ್ನ ಗಮನಿಸಿದ್ದೆ. ಆಕೆ ಮ್ಯಾತ್ಸ್ ಕಲಿಸುತ್ತಿದ್ದಳು. ವಿವಾಹಿತೆ. ನನಗಿಂತ ಏಳು ವರ್ಷ ದೊಡ್ಡವಳು, ಜೊತೆಗೆ ಎರಡು ಮಕ್ಕಳ ತಾಯಿ. ಯಾಕೋ ಗೊತ್ತಿಲ್ಲ, ಅವಳನ್ನು ಕಂಡ ತಕ್ಷಣ ನನ್ನ ಕಣ್ಣಲ್ಲಿ ಹೊಳಪು ಮೂಡುತ್ತಿತ್ತು. ಅವಳ ಕೇರಿಂಗ್ ನೇಚರ್, ಪನ್ ಮಾಡಿ ನಗುತ್ತಿದ್ದ ಸ್ವಭಾವದಿಂದಾಗಿ ಕಾಲೇಜ್ ಹುಡುಗರಿಗೂ ಅಚ್ಚುಮೆಚ್ಚಾಗಿದ್ದಳು. ಕಾಲೇಜ್ ಹುಡುಗರು ಅವರ ಗೋಳಿನ ಕತೆಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಿದ್ದರು. ಆಕೆ ಇವರಿಗೆಲ್ಲ ಫ್ರೆಂಡ್, ಗೈಡ್, ಫಿಲಾಸಫರ್ ಆಗಿದ್ದಳು.
ನನಗೆ ಗೊತ್ತಿಲ್ಲದ ಹಾಗೆ ಇವಳ ಹಿಂದೆ ಬಿದ್ದಿದ್ದೆ. ರಾತ್ರಿ ಪದೇ ಪದೇ ಅವಳ ಮುಖವೇ ಕಣ್ಮುಂದೆ ಬರುತ್ತಿತ್ತು. ಅವಳ ಮಧುರ ದನಿ, ಕೆನ್ನೆಯ ಡಿಂಪಲ್ ನನ್ನನ್ನು ಕಂಗೆಡಿಸುತ್ತಿತ್ತು. ಈಕೆ ವಿವಾಹಿತೆ, ಈಕೆಯ ಬಗ್ಗೆ ಈ ಥರದ ಭಾವನೆ ತಪ್ಪು ಅನ್ನೋದು ಗೊತ್ತಿತ್ತು. ಆದರೆ ನನ್ನ ಮೇಲೇ ನನಗೆ ಕಂಟ್ರೋಲ್ ಇರಲಿಲ್ಲ.
ಮನಸು ಆಷಾಢದ ಮಳೆ;ಕಂಡದ್ದು, ಕಲಿತಿದ್ದು, ಬೆಂಕಿಗೆ ಬಿದ್ದು ಪಾರಾಗಿದ್ದು
ಲಂಚ್ ಬ್ರೇಕ್ ನಲ್ಲಿ ಕೆಫೆಟೀರಿಯಾದಲ್ಲಿ ನಾವಿಬ್ಬರೂ ಭೇಟಿಯಾಗುತ್ತಿದ್ದೆವು. ಅವಳ ಜೊತೆಗಿನ 30 ನಿಮಿಷವನ್ನು ಬಹಳ ಎನ್‌ಜಾಯ್ ಮಾಡುತ್ತಿದ್ದೆ. ಅವಳು ಚೆನ್ನಾಗಿ ಓದಿಕೊಂಡಿದ್ದಳು. ಆ ಬಗ್ಗೆ ಚರ್ಚೆ ಮಾಡುತ್ತಿದ್ದವು. ಆಮೇಲೆ ನಾವಿಬ್ಬರೂ ಫೋನ್ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡೆವು. ಮೆಸೇಜ್ ಪಾಸ್ ಮಾಡುತ್ತಿದ್ದೆವು. ನಿಧಾನಕ್ಕೆ ನಮ್ಮಿಬ್ಬರ ಸಂಬಂಧ ಗಾಢವಾಗುತ್ತಾ ಹೋಯಿತು. ಆಕೆಯೂ ನನ್ನ ಬಗ್ಗೆ ಆಕಷಿರ್ತಳಾಗುತ್ತಿರುವುದು ನನ್ನ ಗಮನಕ್ಕೆ ಬರುತ್ತಿತ್ತು.
ಒಮ್ಮೆ ವಿಭಾ ಯಾವುದೋ ಬುಕ್ ಗಾಗಿ ನನ್ನ ಪ್ಲಾಟ್‌ಗೆ ಬಂದಳು. ಒಂದು ಹಂತದಲ್ಲಿ ನನಗೆ ನನ್ನ ಬಗ್ಗೆ ನಿಯಂತ್ರಣ ತಪ್ಪಿ ಹೋಯಿತು. ಅವಳನ್ನು ಚುಂಬಿಸಿದೆ. ನಾಲಿಗೆಗಳೂ ಪರಸ್ಪರ ಬೆರೆತಾಗ ಅವಳ ಕಣ್ಣಲ್ಲಿ ಮಿಂಚು ಕಂಡೆ. ಸಡನ್ನಾಗಿ ಅವಳು ಎಚ್ಚೆತ್ತಳು. ನನ್ನಿಂದ ಬಿಡಿಸಿಕೊಂಡು ಓಡಿ ಹೋದಳು. ಇದೆಲ್ಲ ತಪ್ಪು ಅಂತ ನಮ್ಮಿಬ್ಬರಿಗೂ ಗೊತ್ತಿತ್ತು. ಆದರೆ ಪರಿಸ್ಥಿತಿ ಕೈ ಮೀರಿತ್ತು.
#Feelfree: ಮಗುವಾದ ಮೇಲೆ ಸೆಕ್ಸ್‌ನಲ್ಲಿ ಆಸಕ್ತಿ ಸೋರಿ ಹೋಗುತ್ತಾ?
ಆಮೇಲೆ ಅವಳ ಫೋನ್ ಸ್ವಿಚ್ ಆಫ್ ಆಯ್ತು. ಒಂದು ವಾರ ಕಾಲೇಜ್‌ಗೆ ಬರಲಿಲ್ಲ. ವಿಚಾರಿಸಿದಾಗ ಸಿಕ್ ಲೀವ್ ಹಾಕಿದ್ದಾಳೆ ಅಂತ ಗೊತ್ತಾಯ್ತು. ಒಟ್ಟು 2 ವಾರ ಅವಳನ್ನು ಕಾಣಲಿಲ್ಲ. ಫೋನ್‌ಗೂ ಸಿಗಲಿಲ್ಲ. ನನ್ನ ಹೃದಯ ಸೂಜಿ ಚುಚ್ಚಿದ ಬೆಲೂನ್ ನಂತೆ ವಿಲ ವಿಲ ಒದ್ದಾಡುತ್ತಿತ್ತು.
ಅದಾಗಿ ಒಂದು ದಿನ ರಾತ್ರಿ ಯಾರೋ ಬಾಗಿಲು ಬಡಿದ ಸದ್ದು. ಬಾಗಿಲು ತೆರೆದರೆ ವಿಭಾ. ಅಚ್ಚರಿಯಿಂದ ನಾನು ಕಣ್ ಕಣ್ ಬಿಡುವಾಗಲೇ ಅವಳು ನನ್ನ ಒಳಗೆ ತಳ್ಳಿ ಬಾಗಿಲು ಮುಚ್ಚಿ ತಬ್ಬಿಕೊಂಡಳು. ನಾನು ಸಂಕೋಚದಿಂದ ಏನು ಮಾಡಲೂ ತೋಚದೇ ನಿಂತಿದ್ದೆ. ಅವಳು ನನ್ನ ತುಟಿಗಳನ್ನು ಚುಂಬಿಸಿತೊಡಗಿದಳು. ನಾನೂ ಕರಗುತ್ತಾ ಬಂದೆ. ನನ್ನ ಒಂದೊಂದೇ ಬಟ್ಟೆ ಕದಲಿಸತೊಡಗಿದಳು. ಅವತ್ತು ರಾತ್ರಿ ನಾವಿಬ್ಬರೂ ಗಾಢ ಪ್ರೇಮದಲ್ಲಿ ಮುಳುಗಿ ಹೋಗಿದ್ದೆವು.
ಇದಾದ ಮೇಲೆ ಅವಳಿಗೆ ಟೈಮ್ ಸಿಕ್ಕಾಗಲೆಲ್ಲ ನನ್ನ ಪ್ಲಾಟ್‌ಗೆ ಬರುತ್ತಿದ್ದಳು. ಇಡೀ ಸಮಯವನ್ನು ಓದಿನ ಚರ್ಚೆ ಮಾಡುತ್ತಾ, ಮುದ್ದು ಮಾಡುತ್ತಾ, ಸೆಕ್ಸ್ ಆನಂದಿಸುತ್ತಾ ಕಳೆಯುತ್ತಿದ್ದೆವು. ಈಗಲೂ ಹಾಗೇ ಇದ್ದೇವೆ. ಅವಳ ಗಂಡನಿಗೆ ಇದು ಗೊತ್ತಿಲ್ಲ. ನನ್ನ ಮನೆಯವರು ಮದುವೆಗೆ ಒತ್ತಾಯಿಸಿದಾಗ ಏನೇನೋ ಕಾರಣ ಹೇಳಿ ತಪ್ಪಿಸುತ್ತಿದ್ದೇನೆ. ಮುಂದೇನಾಗುತ್ತೋ ಗೊತ್ತಿಲ್ಲ. ಈ ಕ್ಷಣವನ್ನಷ್ಟೇ ಆನಂದಿಸುತ್ತಿದ್ದೇನೆ.
#Feelfree: ಗೆಳತಿ ಜೊತೆ ತಮ್ಮನ ಸಂಬಂಧ, ಹೇಗೆ ಸಹಿಸಲಿ?