91ನೇ ವಯಸ್ಸಲ್ಲಿ ಡಿಎಲ್‌ಎಫ್‌ ಮುಖ್ಯಸ್ಥನಿಗೆ ಪ್ರೇಮಾಂಕುರ..!

Published : Feb 28, 2023, 11:07 AM ISTUpdated : Feb 28, 2023, 12:22 PM IST
91ನೇ ವಯಸ್ಸಲ್ಲಿ ಡಿಎಲ್‌ಎಫ್‌ ಮುಖ್ಯಸ್ಥನಿಗೆ ಪ್ರೇಮಾಂಕುರ..!

ಸಾರಾಂಶ

2 ವರ್ಷದಿಂದ ಏಕಾಂಗಿಯಾಗಿದ್ದೆ. ಈಗ ನನ್ನ ಸಂಗಾತಿಯಾಗಿರುವ ಶೀನಾ ಎಂಬ ಆಕರ್ಷಕ ವ್ಯಕ್ತಿಯನ್ನು ಭೇಟಿ ಮಾಡಿದೆ. ಅವಳು ನನ್ನ ಜೀವನದ ಅತ್ಯತ್ತಮ ವ್ಯಕ್ತಿ. ಹಾಗೂ ಅವಳು ಅದ್ಭುತ ಸ್ನೇಹಿತರ ಬಳಗ ಹೊಂದಿದ್ದಾಳೆ ಎಂದು ತಿಳಿಸಿದ್ದಾರೆ.

ನವದೆಹಲಿ (ಫೆಬ್ರವರಿ 28, 2023): ರಿಯಲ್‌ ಎಸ್ಟೇಟ್‌ ಸಮೂಹ ಡಿಎಲ್‌ಎಫ್‌ ಮುಖ್ಯಸ್ಥ ಕುಶಾಲ್‌ ಪಾಲ್‌ ಸಿಂಗ್‌ ತಮ್ಮ 91ನೇ ವಯಸ್ಸಿನಲ್ಲಿ ಪ್ರೀತಿಸಲು ಸಂಗಾತಿಯನ್ನು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ. 2018ರಲ್ಲಿ ಕುಶಾಲ್‌ ಪತ್ನಿ ತೀರಿಕೊಂಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘2 ವರ್ಷದಿಂದ ಏಕಾಂಗಿಯಾಗಿದ್ದೆ. ಈಗ ನನ್ನ ಸಂಗಾತಿಯಾಗಿರುವ ಶೀನಾ ಎಂಬ ಆಕರ್ಷಕ ವ್ಯಕ್ತಿಯನ್ನು ಭೇಟಿ ಮಾಡಿದೆ. ಅವಳು ನನ್ನ ಜೀವನದ ಅತ್ಯತ್ತಮ ವ್ಯಕ್ತಿ. ಹಾಗೂ ಅವಳು ಅದ್ಭುತ ಸ್ನೇಹಿತರ ಬಳಗ ಹೊಂದಿದ್ದಾಳೆ’ ಎಂದು ತಿಳಿಸಿದ್ದಾರೆ. ಅಲ್ಲದೇ ಪತ್ನಿ ತೀರಿ ಹೋದಾಗ ಜೀವನದಲ್ಲಿ ಧೈರ್ಯ ತುಂಬಿದ್ದಳು ಎಂದು ಶೀನಾ ಕುರಿತು ಕುಶಾಲ್‌ ಪಾಲ್‌ ಸಿಂಗ್‌ ಹೇಳಿದ್ದಾರೆ.

ರಾಷ್ಟ್ರೀಯ ಮಾಧ್ಯಮ ಸಿಎನ್‌ಬಿಸಿ - ಟಿವಿ 18ಗೆ ಸಂದರ್ಶನ ನೀಡಿರುವ ಕೆ.ಪಿ. ಸಿಂಗ್, ತಾನು ಕ್ರೀಡಾಪಟುವಾಗಿದ್ದ ದಿನಗಳನ್ನು ಹಾಗೂ ನಂತರ ಉತ್ಪಾದನಾ ಉದ್ಯಮಕ್ಕೆ ಕಾಲಿಟ್ಟಿದ್ದು ಹೇಗೆ ಎಂಬ ಬಗ್ಗೆಯೂ ಅವರು ಹಂಚಿಕೊಂಡಿದ್ದಾರೆ. ದೂರದೃಷ್ಟಿಯುಳ್ಳ ಡೆವಲಪರ್‌ ಎಂದು ಕರೆಯಲ್ಪಡುವ ಕುಶಾಲ್‌ ಪಾಲ್‌ ಸಿಂಗ್ ಅವರು ಗುರುಗ್ರಾಮ್ ಅನ್ನು ನಿರ್ಮಿಸಿದ ವ್ಯಕ್ತಿಯಾಗಿ ಇತ್ತೀಚಿನ ದಶಕಗಳಲ್ಲಿ ಭಾರತದ ಅತ್ಯಂತ ಪ್ರಭಾವಶಾಲಿ ಹೆಸರುಗಳಲ್ಲಿ ಒಬ್ಬರಾಗಿದ್ದಾರೆ.

ಇದನ್ನು ಓದಿ: ನಮ್‌ ಹುಡ್ಗೀನಾ ಬಿಡ್ತೀವಾ..ಮನೆಗೆ ನುಗ್ಗಿ ತಾಯಿ ಎದುರೇ ಗರ್ಲ್‌ಫ್ರೆಂಡ್‌ನ್ನು ಕರ್ಕೊಂಡು ಹೋದ ಹುಡ್ಗ!

ಪತ್ನಿಯನ್ನು ಕಳೆದುಕೊಂಡ ಮೇಲೆ ತಾನು ಒಂದು ಅಥವಾ ಎರಡು ವರ್ಷಗಳ ಕಾಲ ತುಂಬಾ ಒಂಟಿಯಾಗಿದ್ದೆ ಎಂದು ಕೆ.ಪಿ. ಸಿಂಗ್ ಹೇಳಿದ್ದಾರೆ. "ನಾನು ಈಗ ನನ್ನ ಸಂಗಾತಿಯಾಗಿರುವ ಅತ್ಯಂತ ಆಕರ್ಷಕ ವ್ಯಕ್ತಿಯನ್ನು ಭೇಟಿಯಾಗಿರುವುದು ನನ್ನ ಅದೃಷ್ಟ. ಆಕೆಯ ಹೆಸರು ಶೀನಾ. ನನ್ನ ಜೀವನದಲ್ಲಿ ನಾನು ಇತ್ತೀಚೆಗೆ ಭೇಟಿಯಾಗಿರುವ  ಅತ್ಯುತ್ತಮ ವ್ಯಕ್ತಿಗಳಲ್ಲಿ ಅವಳು ಒಬ್ಬಳು, ಆಕೆ ಶಕ್ತಿಶಾಲಿ. ಮತ್ತು ಅವಳು ಪ್ರಪಂಚದಾದ್ಯಂತ ಅದ್ಭುತ ಸ್ನೇಹಿತರನ್ನು ಹೊಂದಿದ್ದಾಳೆ" ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ತನ್ನ ಪತ್ನಿ ಸಾಯುವ ಕೆಲವೇ ತಿಂಗಳುಗಳ ಮೊದಲು ಕೂಡ, ಜೀವನದಲ್ಲಿ ಬಿಟ್ಟುಕೊಡಬೇಡ ಎಂದು ಶೀನಾ ಸ್ಪೂರ್ತಿ ತುಂಬಿದ್ದರು ಎಂದು ಕೆ.ಪಿ. ಸಿಂಗ್ ಹೇಳಿದ್ದಾರೆ. 

ಇನ್ನು, ತನ್ನ ವೈವಾಹಿಕ ಜೀವನ ಅದ್ಭುತವಾಗಿತ್ತು ಎಂದು ಸಹ ರಿಯಲ್ ಎಸ್ಟೇಟ್ ಉದ್ಯಮಿ ಹೇಳಿಕೊಂಡಿದ್ದು, ಹಾಗೂ ತನ್ನ ತೀರಿಹೋದ ಹೆಂಡತಿ ಸ್ನೇಹಿತೆಯಾಗಿದ್ದರು ಎಂದೂ ಅವರು ಬಣ್ಣಿಸಿದ್ದಾರೆ. "ನನ್ನ ಹೆಂಡತಿ ನನ್ನ ಸಂಗಾತಿ ಮಾತ್ರವಲ್ಲದೆ ಸ್ನೇಹಿತೆಯೂ ಆಗಿದ್ದಳು. ನಮ್ಮ ಹೊಂದಾಣಿಕೆ ಚೆನ್ನಾಗಿತ್ತು. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದರೆ ಏನೂ ಮಾಡಲಾಗಲಿಲ್ಲ. ನೀವು ಒಂಟಿತನದ ಪರಿಸ್ಥಿತಿಗೆ ಇಳಿದಿದ್ದೀರಿ" ಎಂದೂ ಕುಶಾಲ್‌ ಪಾಲ್‌ ಸಿಂಗ್ ಹೇಳಿದರು.

ಇದನ್ನೂ ಓದಿ: ಹೆಂಡತಿಯನ್ನು ತುಂಬಾ ಪ್ರೀತಿಸುವ ಗಂಡ ಈ ರಾಶಿಗೆ ಸೇರಿರುತ್ತಾನೆ!

ಅವರ ಪತ್ನಿ ಕ್ಯಾನ್ಸರ್‌ನಿಂದ 2018 ರಲ್ಲಿ ನಿಧನರಾದರು, ನಂತರ ಕೆ.ಪಿ. ಸಿಂಗ್ ಸಕ್ರಿಯ ನಿರ್ವಹಣಾ ಕರ್ತವ್ಯಗಳಿಂದ ದೂರ ಸರಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉದ್ಯಮಿ,  ''ನೀವು 65 ವರ್ಷಗಳ ಸಂಗಾತಿಯನ್ನು ಕಳೆದುಕೊಂಡರೆ, ನೀವು ಅದೇ ರೀತಿ ಇರಲು ಸಾಧ್ಯವಿಲ್ಲ. ನೀವು ವಿಭಿನ್ನವಾಗಿ ಯೋಚಿಸುತ್ತಿದ್ದೀರಿ. ಹಾಗಾಗಿ ನನ್ನನ್ನು ಪುನರ್‌ ರಚಿಸಲು ಪ್ರಯತ್ನಿಸುತ್ತಿದ್ದೇನೆ,'' ಎಂದೂ ಅವರು ಸಮದರ್ಶನದಲ್ಲಿ ತಿಳಿಸಿದರು. ಕಂಪನಿಯು ಕೆಲಸ ಮಾಡಲು, ಧನಾತ್ಮಕ ಮತ್ತು ಸಕ್ರಿಯವಾಗಿರುವುದು ಮುಖ್ಯ ಎಂದೂ ಕೆ.ಪಿ. ಸಿಂಗ್ ಹೇಳಿದರು.

ಫೋರ್ಬ್ಸ್ ಪ್ರಕಾರ, ಕೆ.ಪಿ. ಸಿಂಗ್ ಅವರು 8.81 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮೊದಲು ಸೇನೆಯಲ್ಲಿದ್ದ ಕೆ.ಪಿ. ಸಿಂಗ್, 1946 ರಲ್ಲಿ ತನ್ನ ಮಾವ ಪ್ರಾರಂಭಿಸಿದ ಡಿಎಲ್ಎಫ್‌ ಕಂಪನಿಗೆ ಸೇರಲು 1961 ರಲ್ಲಿ ಸೈನ್ಯವನ್ನು ತೊರೆದಿದ್ದರು. ನಂತರ ಅವರು ಗುರ್ಗಾಂವ್‌ನಲ್ಲಿ ಡಿಎಲ್‌ಎಫ್ ಸಿಟಿಯನ್ನು ನಿರ್ಮಿಸಿದ್ದು, ಈ ಸಂಸ್ಥೆಯನ್ನು ಈಗ ಅವರ ಪುತ್ರ ರಾಜೀವ್ ಅಧ್ಯಕ್ಷರಾಗಿ ನಡೆಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?